ಹಿರಿಯ ಕಾಂಗ್ರೆಸ್ ನಾಯಕಿ ನಿಧನ

ಪೈವಳಿಕೆ: ಪೈವಳಿಕೆ ಮಂಡಲ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದ ದಿ| ಗಣಪತಿ ರಾವ್ ಕುರುಡಪದವು ಇವರ ಪತ್ನಿ ಭಾಗೀರಥಿ ಅಮ್ಮ (89) ನಿಧನ ಹೊಂದಿದರು. ಮಹಿಳಾ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷೆಯಾಗಿ ಹಾಗೂ ಪೈವಳಿಕೆ ಸಹಕಾರಿ ಬ್ಯಾಂಕ್‌ನ ನಿರ್ದೇಶಕಿಯಾಗಿದ್ದರು. ಮಹಿಳೆಯರು ಸಾರ್ವಜನಿಕ ಹಾಗೂ ಉದ್ಯೋಗ ರಂಗದಲ್ಲಿ ತೊಡಗಿಸಿ ಕೊಳ್ಳದ 60ರ ದಶಕದಲ್ಲಿಯೇ ಪೋಸ್ಟ್ ಮಾಸ್ತರ್ ಆಗಿ ಕೆಲಸಕ್ಕೆ ಸೇರಿದ ಇವರು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ನೀಡಿದ್ದರು. ಮಹಿಳಾ ಸಂಘ, ವಾಚನಾಲಯ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ …

ಆಟಿ ತಿಂಗಳು ಆರಂಭ: ಮಲೆಯಾಳಿಗರಿಗೆ ರಾಮಾಯಣ ಮಾಸಾಚರಣೆ

ಕಾಸರಗೋಡು: ಇಂದಿನಿಂದ ಆಟಿ ತಿಂ ಗಳು ಆರಂಭಗೊಂಡಿತು. ನಿನ್ನೆ ಸಂಪ್ರ ದಾಯಿಕವಾಗಿ ಸಂಕ್ರಮಣವನ್ನು ಆರಂ ಭಿಸಿ ನಾಡಿನಲ್ಲಿ ದೈವಸ್ಥಾನಗಳ ಬಾಗಿಲು ಮುಚ್ಚಲಾಯಿತು. ಇನ್ನು ಒಂದು ತಿಂಗಳ ಕಾಲ ಕಲ್ಲುರ್ಟಿ, ಗುಳಿಗ ದೈವ ಗಳ ಸೇವೆ ಮಾತ್ರವೇ ನಡೆಯುತ್ತದೆ. ಈ ತಿಂಗಳಲ್ಲಿ ಬೇರೆಯಾವ ದೈವಗಳಿಗೂ ಆರಾಧನೆ ನಡೆಯುವುದಿಲ್ಲ. ಇದರಿಂದಾಗಿ ಹೆಚ್ಚಿನ ದೈವಸ್ಥಾನಗಳ ಬಾಗಿಲು ಮುಚ್ಚಿ ಮುಂದಿನ ಸೋಣ ಸಂಕ್ರಾಂತಿ ದಿನದಂದು ಬಾಗಿಲು ತೆರೆಯಲಾಗುತ್ತದೆ. ಆಟಿಗೆ ಕಳೆಯೇರಿಸಲು ಮಾಂತ್ರಿಕ ಶಕ್ತಿಯಾದ ಆಟಿಕಳೆಂಜನು ತುಳುನಾಡಿನ ಮನೆಗಳಿಗೆ ಭೇಟಿ ನೀಡುವ ಕ್ರಮವಿದೆ. ಇದೇ …

ಕಾಸರಗೋಡು ಜಿಲ್ಲೆ ಪ್ರವಾಹ ಭೀತಿಯಲ್ಲಿತಗ್ಗು ಪ್ರದೇಶಗಳು ಜಲಾವೃತ: ವ್ಯಾಪಕ ನಾಶ

ಕಾಸರಗೋಡು: ಧಾರಾಕಾರ ಮಳೆಯಿಂದಾಗಿ ಕಾಸರಗೋಡು ಜಿಲ್ಲೆ ಪ್ರವಾಹ ಭೀತಿಯನ್ನು ಎದುರಿಸುತ್ತಿದೆ. ಜಿಲ್ಲೆಯ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ  ವ್ಯಾಪಕ ಕಡಲ್ಕೊರೆತ ಉಂಟಾಗಿದೆ.  ಇದರಿಂದ ಕರಾವಳಿ ಪ್ರದೇಶದ ಜನರು ಆತಂಕದಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ಪೆರಿಂಗಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮುಟ್ಟಂಗೇಟ್‌ನಿಂದ ಪೆರಿಂಗಡಿಗೆ  ತೆರಳುವ ಬೀಚ್ ರಸ್ತೆ ಕಡಲ್ಕೊರೆತದಿಂದ ನಾಶಗೊಂಡಿದೆ. ಈ ಪ್ರದೇಶದಲ್ಲಿ ಹೈ ಟೆನ್ಶನ್ ವಿದ್ಯುತ್ ಕಂಬಗಳು ಯಾವುದೇ  ಸಮಯದಲ್ಲಿ …

ಮಂತ್ರವಾದ ಚಿಕಿತ್ಸೆ ಹೆಸರಲ್ಲಿ 16ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳಕ್ಕೆತ್ನ: 72ರ ಮಂತ್ರವಾದಿ ಸೆರೆ

ಕಾಸರಗೋಡು: ಅಸೌಖ್ಯದಿಂದ ಬಳಲುತ್ತಿದ್ದ ೧೬ರ ಹರೆಯದ ಬಾಲಕಿಗೆ ಮಂತ್ರವಾದ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ   ಲೈಂಗಿಕ  ಕಿರುಕುಳ ನೀಡಲೆತ್ನಿಸಿದ ದೂರಿನಂತೆ ಆಕೆಯ ನಿಕಟ ಸಂಬಂಧಿಕನಾಗಿರುವ 72ರ ಹರೆಯದ ಮಂತ್ರವಾದಿ ವಿರುದ್ಧ ವಿದ್ಯಾನಗರ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.  ಆದೂರು ಪೊಲೀಸ್ ಠಾಣೆ ವ್ಯಾಪ್ತಿಗೊಳ ಪಟ್ಟ ಪ್ರದೇಶದ ಬಾಲಕಿ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಸೌಖ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಆರೋಪಿ ಮಂತ್ರವಾದ ಚಿಕಿತ್ಸೆ ಹೆಸರಲ್ಲಿ …

ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಬಂಧನ

ಕಾಸರಗೋಡು: ಶಾಲೆಗೆ ತೆರಳುತ್ತಿದ್ದ 17ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ಮಾಹಿತಿಯಂತೆ ಮನೆಯವರು ಹಾಗೂ ನಾಗರಿಕರು ಸೇರಿ ನಡೆಸಿದ ಶೋಧ ವೇಳೆ ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕದ ಗದಗ ಹಳೆ ಹುಸೂರು ನಿವಾಸಿ ಹಾಲಪ್ಪ ಸುಬ್ಬಣ್ಣ ಇರಕ್ಕಾಲ್ (36) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತನನ್ನು ಮೇಲ್ಪರಂಬ ಠಾಣೆ ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್ ನೇತೃತ್ವದಲ್ಲಿ ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 8.30ರ ವೇಳೆ ಮೇಲ್ಪರಂಬ …

ಬಸ್‌ನ ಹಿಂದೆ ಬೈಕ್ ಢಿಕ್ಕಿ ಗಾಯಗೊಂಡ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಬಟ್ಟತ್ತೂರು ಪೊಯಿನಾಚಿಯಲ್ಲಿ ನಿಲ್ಲಿಸಿದ್ದ ಬಸ್‌ನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಗಾಯಗೊಂಡ ವಿದ್ಯಾರ್ಥಿ ಮೃತಪಟ್ಟನು. ಕುಣಿಯದ ಕೆ.ವಿ. ಅಬ್ದುಲ್ಲರ ಪುತ್ರ ಅಬ್ದುಲ್ ರಹ್ಮಾನ್ ಫಾಯಿಸ್ (19) ಮೃತಪಟ್ಟ ವಿದ್ಯಾರ್ಥಿ. ಎಸ್‌ಎಸ್‌ಎಫ್ ಮಾಜಿ ಕುಣಿಯ ಯೂನಿಟ್ ಕಾರ್ಯದರ್ಶಿಯಾದ ಫಾಯಿಸ್ ಮಂಗಳೂರಿನ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಬಟ್ಟತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡ ಫಾಯಿಸ್ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮುಂದುವರಿಯುತ್ತಿರುವ ಕಡಲ್ಕೊರೆತ: ಪೆರಿಂಗಡಿ ಸಹಿತ ವಿವಿಧ ಪ್ರದೇಶದಲ್ಲಿ ರಸ್ತೆ ಸಮುದ್ರಪಾಲು

ಉಪ್ಪಳ: ಕಳೆದ ಹಲವು ದಿನ ಗಳಿಂದ ಮಳೆ, ಗಾಳಿ ಬಿರುಸು ಗೊಂಡಿರುವAತೆ ಕಡಲ್ಕೊರೆತ ಮುಂದುವರಿಯುದ್ದು, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬೀಚ್ ರಸ್ತೆ ಸಮುದ್ರ ಪಾಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಯಿಂದ ವ್ಯಾಪಕಗೊಂಡ ಕಡಲ್ಕೊರೆತದಿಂದ ಪೆರಿಂಗಡಿಯಲ್ಲಿ ರಸ್ತೆ, ಹಲವಾರು ಮರಗಳು ಸಮುದ್ರ ಪಾಲಾಗುತ್ತಿದೆ. ವಿದ್ಯುತ್ ಕಂಬಗಳು ಧರಾಶಾಯಿಯಾಗುವ ಭೀತಿಯಿದೆ. ಹಲವು ಮನೆಗಳು ಅಪÁಯದಂಚಿನಲ್ಲಿದೆ. ಈಗಾಗಲೇ ಹನುಮಾನ್ ನಗರದಲ್ಲಿ ರಸ್ತೆ ಸಮುದ್ರಪಾಲಾಗಿದ್ದು, ಮಣಿಮುಂಡ, ಮೂಸೋಡಿಯಲ್ಲಿ ಮನೆಗಳು ಅಪಾಯದಂಚಿನಲ್ಲಿದೆ. ಐಲ ಶಿವಾಜಿನಗರದಲ್ಲಿ ಫಿಶರೀಸ್ ಶೆಡ್ಡ್, ಶ್ರೀ ಶಾರದೋತ್ಸವ, ಶ್ರೀ ಗಣೇಶೋತ್ಸವದ ಕಟ್ಟೆ, ಮರಗಳು …

ಮಜಿಬೈಲ್ ತಿರುವಿನಲ್ಲಿ ಆವರಿಸಿದ ಕಾಡುಪೊದೆ: ಅಪಘಾತ ಭೀತಿ

ಮಂಜೇಶ್ವರ: ಮೀಂಜ ಪಂಜಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲು ಸೇತುವೆ ಸಮೀಪದ ತಿರುವಿನಲ್ಲಿ ಕಾಡು ಪೊದೆಗಳು  ಆವರಿಸಿಕೊಂ ಡಿದ್ದು, ವಾಹನ ಸವಾರರಲ್ಲಿ ಅಪಘಾತ ಭೀತ ಉಂಟಾಗಿದೆ. ಈ ರಸ್ತೆ ಉದ್ದಕ್ಕೂ ಅಲ್ಲಲ್ಲ್ಲಿ ತಿರುವುಗಳಿ ದ್ದು ಇಕ್ಕಡೆಗಳಲ್ಲಿ ಕಾಡುಪೊದೆಗಳು ತುಂಬಿಕೊಂಡಿದೆ. ಸೇತುವೆ ಸಮೀಪ ದೊಡ್ಡ ತಿರುವು ಇದ್ದು ಪೊದೆಗಳು ಆರಿಸಿದ ಕಾರಣ ಮೀಯಪದವು ಭಾಗದಿಂದ ಹೊಸಂಗಡಿಗೂ, ಹೊಸಂಗಡಿ ಭಾಗದಿಂದ ಮೀಯಪದವಿಗೆ ತೆರಳುವ ವಾಹನ ಗಳು ಸವಾರರ ಗಮನಕ್ಕೆ ಬಾರದಿರುವುದು ಅಪಘಾತಕ್ಕೆ ಸಾಧ್ಯತೆ ಹೆಚ್ಚಿಸಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಪಟ್ಟ ಪಂಚಾಯತ್ …

ಖಾಸಗಿ ಬಸ್ ಮುಷ್ಕರದಿಂದ ಹಿಂದಕ್ಕೆ ಸರಿದ ಒಂದು ವಿಭಾಗ

ತಿರುವನಂತಪುರ: ಜುಲೈ 22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವ ತೀರ್ಮಾನದಿಂದ ಖಾಸಗಿ ಬಸ್ ಮಾಲಕ ಸಂಘಟನೆಗಳ ಒಂದು ವಿಭಾಗ ಹಿಂದಕ್ಕೆ ಸರಿದಿವೆ. ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಖಾಸಗಿ ಬಸ್ ಮಾಲಕರ ಸಂಘಟನೆಗಳೊಂದಿಗೆ ನಿನ್ನೆ ನಡೆಸಿದ ಚರ್ಚೆಯಲ್ಲಿ ಮುಷ್ಕರದಿಂದ ಹಿಂದಕ್ಕೆ ಸರಿಯಲು ಖಾಸಗಿ ಬಸ್ ಮಾಲಕರ ಸಂಘಟನೆಗಳ ಒಂದು ವಿಭಾಗವಾದ ಬಸ್ ಆಪರೇಟರ್ಸ್ ಫಾರಂ ತೀರ್ಮಾನಿಸಿದೆ. ಖಾಸಗಿ ಬಸ್ ಮಾಲಕರ ಸಂಘ ಟನೆಗಳು ಮುಂದಿರಿಸಿರುವ ಬೇಡಿಕೆಗಳು  ಶೇ. 99 ನ್ಯಾಯಯುತವೇ ಆಗಿದೆ ಎಂದು ಚರ್ಚೆಯಲ್ಲಿ ಸಚಿವರು ತಿಳಿಸಿದ್ದಾರೆ. …

ಎಡ-ಬಲ ರಾಜಕೀಯ ಒಪ್ಪಂದದಿಂದ ಪೈವಳಿಕೆ ಆಡಳಿತ ನಿಷ್ಕ್ರಿಯ- ಬಿಜೆಪಿ

ಪೈವಳಿಕೆ: ಪಂಚಾಯತ್‌ನಲ್ಲಿ ಎಡ-ಬಲ ಒಪ್ಪಂದ ರಾಜಕೀಯದಿಂದಾಗಿ ಆಡಳಿತ ನಿಷ್ಕ್ರಿಯವಾಗಿದೆ ಎಂದು ಬಿಜೆಪಿ ದೂರಿದ್ದು, ಈ ಆಡಳಿತ ನಾಡಿಗೆ ಶಾಪವೆಂದು ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ್ ಬಿ.ಎಂ. ಆರೋಪಿಸಿದ್ದಾರೆ. ಪೈವಳಿಕೆ ಪಂ. ಬಿಜೆಪಿ ವಾರ್ಡ್ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯಾವುದೇ ಜನಪರ ಯೋಜನೆಗಳು ಜ್ಯಾರಿಯಾಗುತ್ತಿಲ್ಲ. ಅಧಿಕಾರಿಗಳ ಅಭಾವದಿಂದ ಯೋಜನೆಗಳು ಜನರಿಗೆ  ಲಭಿಸುತ್ತಿಲ್ಲ. ತ್ಯಾಜ್ಯ ವಿಲೇವಾರಿಯೂ ಸರಿಯಾಗಿ ನಡೆಯುತ್ತಿಲ್ಲವೆಂದು ಅವರು ದೂರಿದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ- ಲೋಕೇಶ್, ಸುಬ್ರಹ್ಮಣ್ಯ ಭಟ್, ಪ್ರಸಾದ್ ರೈ, …