ಸೇವಾ ಭಾರತಿ ಮಂಗಲ್ಪಾಡಿ ಕಾರ್ಯಕರ್ತರಿಂದ ಅಪರಿಚಿತ ಮೃತದೇಹದ ಅಂತ್ಯಸಂಸ್ಕಾರ

ಉಪ್ಪಳ: ಅಪರಿಚಿತ ಮೃತ ದೇಹದ ಅಂತ್ಯಸAಸ್ಕಾರವನ್ನು ಸೇವಾ ಭಾರತಿ ಮಂಗಲ್ಪಾಡಿ ಕಾರ್ಯಕರ್ತರು ನೆರವೇರಿಸಿದರು. ಬಂದ್ಯೋಡು ಬಳಿ ಯ ಹಳೆಯ ಸರ್ವೀಸ್ ಸ್ಟೇಷನ್ ಕಟ್ಟಡದಲ್ಲಿ ಜೀರ್ಣಾವಸ್ಥೆಯಲ್ಲಿ ನಿನ್ನೆ ಬೆಳಿಗ್ಗೆ ಸುಮಾರು 50 ವರ್ಷ ಪ್ರಾಯ ದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತÄ. ಕುಂಬಳೆ ಪೊಲೀಸರ ನೇತೄತ್ವದಲ್ಲಿ ಮರಣೋತ್ತರ ಪರೀಕ್ಷೆ ಪೆರಿಯಾರಂನಲ್ಲಿ ನಡೆಸಿ ಬಳಿಕ ಪೊಲೀಸರ ಉಪಸ್ಥಿತಿಯಲ್ಲಿ ನಿನ್ನೆ ಸಂಜೆ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಸೆವಾಭಾರತಿ ಮಂಗಲ್ಪಾಡಿ ಇದರ ಕಾರ್ಯರ್ತರು ಅಂತ್ಯಸAಸ್ಕಾರ ನಡೆಸಿದರು.

ಜ್ವರ ಬಾಧಿಸಿ ಯುವತಿ ಮೃತ್ಯು

ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು. ಪೆರುಂಬಳ ಪಾಲಿಚ್ಚಿಯಡ್ಕದ ಸುಕು ಮಾರನ್- ಲತಾ ದಂಪತಿಯ ಪುತ್ರಿ ಆರತಿ (24) ಮೃತಪಟ್ಟ ಯುವತಿ. ಜ್ವರ ಬಾಧಿಸಿದ್ದ ಈಕೆಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಮೃತರು  ಸಹೋದರಿಯರಾದ ಆದಿರಾ, ಸುಕನ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಿಎಂಎಸ್ ಕುಂಬಳೆ ವಲಯ ಸಮಾವೇಶ

ಉಪ್ಪಳ: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಕುಂಬಳೆ ವಲಯ ಸಮಿತಿ ಸಭೆ ಕುಂಬಳೆ ಕಾರ್ಯಾಲಯದಲ್ಲಿ ಜರಗಿತು. ವಲಯಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮುಂಬರುವ ಬಿಎಂಎಸ್ ಸ್ಥಾಪನಾ ದಿನದಂಗವಾಗಿ ಎಲ್ಲಾ ಯೂನಿಟ್ ಗಳಲ್ಲಿ ಈ ತಿಂಗಳ 23ರಂದು  ಧ್ವಜಾರೋಹಣ, ೩೦ರ ಮುಂಚಿತವಾಗಿ  ಯೂನಿಟ್‌ಗಳಲ್ಲಿ ಕುಟುಂಬ ಸಮಾವೇಶಗಳನ್ನು ನಡೆಸಲು  ತೀರ್ಮಾನಿಸಲಾಗಿದೆ. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ವಿವರಿಸಿದರು. ಹರೀಶ್ ಸಿದ್ದಿಬೈಲು ಮಾತನಾಡಿದರು. ವರದರಾಜ್ ಸ್ವಾಗತಿಸಿ, ಐತ್ತಪ್ಪ ನಾರಾಯಣಮಂಗಲ ವಂದಿಸಿದರು.

ಗ್ಯಾಸ್ ಸಿಲಿಂಡರ್ ಸಾಗಾಟ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮನೆಗೆ ಹಾನಿ: ಅಪಾಯದಿಂದ ಪಾರಾದ ಕುಟುಂಬ

ಉಪ್ಪಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮನೆಗೆ ಹಾನಿಯುಂಟಾದ ಘಟನೆ ನಡೆದಿದೆ. ಉಪ್ಪಳ ಬಳಿಯ ಪತ್ವಾಡಿ ನಿವಾಸಿ ಹರೀಶ್ ಕುಮಾರ್ ಎಂಬವರ ಮನೆ ಹಿಂಭಾಗಕ್ಕೆ ವಾಹನ ಮಗುಚಿ ಬಿದ್ದು ಮನೆ ಹಾನಿಗೊಂಡಿದೆ. ನಿನ್ನೆ ಬೆಳಿಗ್ಗೆ ಸುಮಾರು 10 ಗಂಟೆ ವೇಳ ಅಪಘಾತ ಸಂಭವಿಸಿದೆ. ವಾಹನ ಈ ಪ್ರದೇಶದ ಎತ್ತರದ ರಸ್ತೆಯಿಂದ ಸಂಚರಿಸುತ್ತಿರುವ ವೇಳೆ ಮುಂದೆ ಹೋಗಲು ಸಾಧ್ಯವಾಗದೆ ಹಿಂದಕ್ಕೆ  ಚಲಿಸಿ ನಿಯಂತ್ರಣ ತಪ್ಪಿ ಕೆಳಭಾಗದಲ್ಲಿದ್ದ ಹರೀಶ್ ಕುಮಾರ್ ಎಂಬವರ ಮನೆಯ …

ಕಾಸರಗೋಡಿನಲ್ಲಿ ರಕ್ತದಾನ ಶಿಬಿರ

ಕಾಸರಗೋಡು: ಕೇರಳ ಸ್ಟೇಟ್ ಬ್ಲಡ್ ಟ್ರಾನ್ಸ್‌ಲೇಷನ್ ಕಾಸರಗೋಡು ಜಿಲ್ಲಾ ಕೌನ್ಸಿಲ್ ಹಾಗೂ ಕಿಮ್ಸ್ ಆಸ್ಪತ್ರೆ ಸಂಯುಕ್ತವಾಗಿ ರಕ್ತದಾನ ಶಿಬಿರ ನಡೆಸಿತು. ಕರಂದಕ್ಕಾಡ್ ಅಶ್ವಿನಿನಗರದಲ್ಲಿರುವ ಕಾಸರಗೋಡು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಹಾಸ್ಪಿಟಲ್‌ನಲ್ಲಿ ನಡೆದ ಶಿಬಿರವನ್ನು  ಕಾಸರಗೋಡು ಸರ್ಕಲ್ ಇನ್ಸ್‌ಪೆಕ್ಟರ್ ನಳಿನಾಕ್ಷನ್ ಉದ್ಘಾಟಿಸಿದರು. ೫೦ರಷ್ಟು ಮಂದಿ ರಕ್ತದಾನ ಮಾಡಿದರು. ಕಾಸರಗೋಡು ಜಿಲ್ಲಾ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ| ಸೌಮ್ಯ ರಕ್ತದಾನದ ಪ್ರಾಧಾನ್ಯತೆ ಕುರಿತು ವಿವರಿಸಿದರು. ಕಿಮ್ಸ್ ಎಡ್ಮಿನಿಸ್ಟ್ರೇಟಿವ್ ರಾಜೇಶ್ವರಿ ಅಧ್ಯಕ್ಷತೆ ವಹಿಸಿದರು. ಡಾ| ನವಾಸ್, ಆಪರೇಶನ್ ಮೆನೇಜರ್ …

ನೆಕ್ರಾಜೆ ಕ್ಷೇತ್ರ ಪುಣ್ಯಕೋಟಿ ಗೋಶಾಲೆ: ನೂತನ ಸಮಿತಿ ರಚನೆ

ನೆಕ್ರಾಜೆ: ಇಲ್ಲಿನ ಶ್ರೀ ಸಂತಾನ ಗೋಪಾಲಕೃಷ್ಣ ಕ್ಷೇತ್ರದಲ್ಲಿ ನಿರ್ಮಾಣ ಗೊಳ್ಳಲಿರುವ ಗೋವಿಂದ ಪುಣ್ಯಕೋಟಿ ಗೋಶಾಲೆಯ ನಿರ್ಮಾಣಕ್ಕೆ ಹೊಸ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ರಾಮಚಂದ್ರ ಬಲ್ಲಾಳ್ ನೆಕ್ರಾಜೆ, ವಿಶ್ವನಾಥ ಶೆಟ್ಟಿ ನೆಕ್ರಾಜೆ, ಅಧ್ಯಕ್ಷರಾಗಿ ಗೋಪಾಲ ಮಣಿಯಾಣಿ ಸಾಲೆತ್ತಡ್ಕ, ಉಪಾಧ್ಯಕ್ಷರಾಗಿ ಗಣೇಶ ವತ್ಸ ನೆಕ್ರಾಜೆ, ಸದಾಶಿವ ಶರ್ಮ ಕೋಲಾರಿಯಡ್ಕ, ಚಿತ್ರಕಲಾ ಕೋಲಾರಿಯಡ್ಕ, ಬಾಬು ಸುವರ್ಣ ಆರಾಟ್‌ಕಡವು,  ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಸುವರ್ ಆರಾಟ್‌ಕಡವು, ಜೊತೆ ಕಾರ್ಯದರ್ಶಿಗಳಾಗಿ ಜಯಪ್ರಕಾಶ ಕೆ.ಕೆ ಅಡ್ಕ, ಗಿರೀಶ್ ನಾಯಕ್ ಕೋಳಾರಿ, ಕೋಶಾಧಿಕಾರಿಯಾಗಿ ರಮೇಶ ಮಾವಿನಕಟ್ಟೆ ಆಯ್ಕೆಯಾದರು. …

ಸಂಚರಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ಬಿದ್ದು ಹೋಟೆಲ್ ಮಾಲಕನಿಗೆ ಗಾಯ

ಮುಳ್ಳೇರಿಯ: ಸಂಚರಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ವೊಂದು ಬುಡಸಮೇತ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಆಟೋರಿಕ್ಷಾ ಪೂರ್ಣವಾಗಿ ಹಾನಿಗೊಂಡಿದೆ. ಚೆರ್ಕಳ- ಜಾಲ್ಸೂರು ರಸ್ತೆಯ ಮುಳ್ಳೇರಿಯ ಆಲಂತಡ್ಕ ಇಳಿಜಾರಿನಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಆದೂರು ಸಿಎ ನಗರ ನಿವಾಸಿಯೂ, ಮುಳ್ಳೇರಿಯದಲ್ಲಿ ಹೋಟೆಲ್ ಮಾಲಕನಾದ ಅಬ್ದುಲ್ಲ ಕುಂಞಿ ಎಂಬವರು ಗಾಯಗೊಂಡಿದ್ದಾರೆ. ಅಬ್ದುಲ್ಲ ಕುಂಞಿಯ ಕೈಯ ಎಲುಬು ಮುರಿದಿರುವುದಾಗಿಯೂ, ಒಂದು ಬೆರಳು ನಷ್ಟಗೊಂಡಿರು ವುದಾಗಿ ಹೇಳಲಾಗುತ್ತಿದೆ. ಅವರನ್ನು ಮುಳ್ಳೇರಿಯದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಿಎ ನಗರದ ಮನೆಯಿಂದ  …

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತಿದ್ದ ಇಬ್ಬರು ಲಾರಿ ಢಿಕ್ಕಿ ಹೊಡೆದು ಮೃತ್ಯು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿ ಕ್ಯಾಮರಾ ಸ್ಥಾಪಿಸುವ ಕಾಮಗಾರಿ ನಿರತರಾದ ಇಬ್ಬರು ಕಾರ್ಮಿಕರು ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಿನ್ನೆ ಸಂಜೆ ಉದ್ಯಾವರ ಮಾಡ ಸಮೀಪ ಸಂಭವಿಸಿದೆ. ಇನ್ನೋರ್ವ ಗಾಯಗೊಂಡಿದ್ದಾರೆ. ಬಿಹಾರದ ದಾಮೋರ್‌ಪುರ್  ನಿವಾಸಿ ರಾಜ್ ಕುಮಾರ್ (27), ರಾಜಸ್ತಾನದ  ದಾಮೋದ್ ಅಮಿತ್ ಗಣಪಾಲ್ ಭಾ (25) ಎಂಬಿವರು  ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಉತ್ತರಪ್ರದೇಶ ನಿವಾಸಿ ಮಹೇಂದರ್ ಪ್ರತಾಪ್ ಸಿಂಗ್ (30) ಎಂಬವರು ಗಾಯಗೊಂಡಿದ್ದಾರೆ. ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಿನ್ನೆ ಸಂಜೆ 4.30ರ ವೇಳ …

ಬಂದ್ಯೋಡಿನಲ್ಲಿ ಅಪರಿಚಿತ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ; ಪೊಲೀಸ್ ತನಿಖೆ ಆರಂಭ

ಕುಂಬಳೆ: ಬಂದ್ಯೋಡಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ವ್ಯಕ್ತಿ ಯಾರೆಂದು ತಿಳಿಯಲು ಪ್ರಯತ್ನ ನಡೆಯುತ್ತಿದೆ. ಬಂದ್ಯೋಡಿನ ಹಳಯ ಸರ್ವೀಸ್ ಸ್ಟೇಶನ ಕಟ್ಟಡದಲ್ಲಿ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ ಇಲ್ಲಿಂದ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಅತ್ತ ತೆರಳಿ ನೋಡಿದಾಗ ಮೃತದೇಹ ಕಂಡು ಬಂದಿದೆ. ಮೃತವ್ಯಕ್ತಿಗೆ ಸುಮಾರು 50 ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತದೇಹ ಜೀರ್ಣಿಸಿದ ಸ್ಥಿತಿಯ ಲ್ಲಿದ್ದು, ಮೂರು ದಿನಗಳ ಹಿಂದೆ ಸಾವಿ ಗೀಡಾಗಿರಬಹುದೆಂದು ಅಂದಾಜಿಸ ಲಾಗಿದೆ.  ಕರ್ನಾಟಕ ನಿವಾಸಿಯಾಗಿ ರಬಹುದೆಂದು ಸಂಶಯಿಸಲಾಗುತ್ತಿದೆ. ಇಂದು …

ಕ್ಷಮೆ ನೀಡುವ ಪ್ರಶ್ನೆಂ ಇಲ್ಲ : ಕೊಲೆಗೈಯ್ಯಲ್ಪಟ್ಟ ತಲಾಲ್‌ನ ಸಹೋದರ; ಗಲ್ಲು ಶಿಕ್ಷೆಯಿಂದ ನಿಮಿಷಪ್ರಿಯಳನ್ನು ಪಾರುಮಾಡಲು ಮುಂದುವರಿದ ಯತ್ನ

ತಿರುವನಂತಪುರ: 2017ರಲ್ಲಿ ಯೆಮನ್‌ನಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ಡೋ ಮುಹ್ದಿ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ಪಾಲಕ್ಕಾಡ್ ಕೊಲ್ಲಂ ಗೋಡು ನಿವಾಸಿಯೂ ಯೆಮನ್‌ನಲ್ಲಿ ನರ್ಸ್‌ಆಗಿ ದುಡಿಯುತ್ತಿದ್ದ ನಿಮಿಷಪ್ರಿಯಾ ರನ್ನು ಶಿಕ್ಷೆಯಿಂದ ಪಾರು ಮಾಡುವ ಪ್ರಯತ್ನ     ಮುಂದುವರಿಯುತ್ತಿದೆ. ನಿಮಿಷರನ್ನು ಶಿಕ್ಷೆಯಿಂದ ಪಾರು ಮಾಡಲು ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಮುಖಂಡ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮೊದಲು ಮಧ್ಯಪ್ರವೇಶ ನಡೆಸಿದ್ದರು. ಅವರು ಯೆಮನ್‌ನಲ್ಲ್ಲಿರುವ ಧಾರ್ಮಿಕ ಮುಖಂಡ ಶೇಖ್ ಹಬೀರ್ ಉಮರ್ ಜೊತೆ  ಮಾತುಕತೆ ನಡೆಸಿ  …