ಬ್ಯಾಂಕ್ ಸೇರಿದಂತೆ ಹಲವು ಕಳವು ಪ್ರಕರಣಗಳ ಆರೋಪಿಯಾಗಿರುವ 17ರ ಬಾಲಕ ಕೊನೆಗೂ ಸೆರೆ
ಕಾಸರಗೋಡು: ಬ್ಯಾಂಕ್ ಕಳವು ಸೇರಿದಂತೆ ಹಲವು ಕಳವು ಪ್ರಕರಣಗಳ ಆರೋಪಿಯಾಗಿರುವ ೧೭ರ ಹರೆಯದ ಬಾಲಕನನ್ನು ಪತ್ತೆಹಚ್ಚಿ ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಈತ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ವ್ಯಕ್ತಿಯಾಗಿದ್ದಾನೆ. ಮೊನ್ನೆ ರಾತ್ರಿ ಪೆರಿಯ ಬಜಾರ್‌ನಲ್ಲಿರುವ ಭಾಸ್ಕರನ್ ಎಂಬವರ ಸುರಭಿ ಸ್ಟೋರ್ಸ್‌ನ ಮುಂದೆ ಸ್ಥಾಪಿಸಿದ್ದ ಸಿಸಿ ಟಿವಿ ಕ್ಯಾಮರಾವನ್ನು ಹಾನಿಗೆಡಹಿದ ಬಳಿಕ ಆ ಅಂಗಡಿಯ ಬೀಗ ಒಡೆದು ಒಳನುಗ್ಗಿ 1000 ರೂ. ನಗದು ಹಾಗೂ ಸುಮಾರು 2000 ರೂ.ಗಳ ಜೀನಸು ಸಾಮಗ್ರಿಗಳನ್ನು ಕಳವುಗೈಯ್ಯಲಾಗಿತ್ತು. ಆ ಬಗ್ಗೆ ಅಂಗಡಿ …
Read more “ಬ್ಯಾಂಕ್ ಸೇರಿದಂತೆ ಹಲವು ಕಳವು ಪ್ರಕರಣಗಳ ಆರೋಪಿಯಾಗಿರುವ 17ರ ಬಾಲಕ ಕೊನೆಗೂ ಸೆರೆ”