ತಲೆಹೊರೆ ಕಾರ್ಮಿಕ ಹೃದಯಾಘಾತದಿಂದ ನಿಧನ

ಬದಿಯಡ್ಕ: ಬದಿಯಡ್ಕ ಪೇಟೆಯ ತಲೆಹೊರೆ ಕಾರ್ಮಿಕ ರೊಬ್ಬರು ಹೃದಯಾಘಾತದಿಂದ ನಿಧನಹೊಂ ದಿದರು. ಕಾಡಮನೆ ಮಾಡತ್ತಡ್ಕ ಬಳಿಯ ಮುಚ್ಚಿರ್‌ಕವೆ ನಿವಾಸಿ ಶಂಕರ ಎಂ (56) ಎಂಬ ವರು ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಇವರಿಗೆ ಮನೆಯಲ್ಲಿ ಹೃದಯಾ ಘಾತವುಂಟಾಗಿತ್ತು. ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ ಸಂಭವಿಸಿದೆ. ಕಳೆದ 25 ವರ್ಷಗಳಿಂದ ಬದಿ ಯಡ್ಕ ಪೇಟೆಯಲ್ಲಿ ತಲೆಹೊರೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ಶಂಕರ ಅವರು ತಲೆಹೊರೆ ಕಾರ್ಮಿಕರ ಯೂನಿಯನ್ …

ಕಾವುಗೋಳಿ ಕಡಪ್ಪುರದಲ್ಲಿ ಕಡಲ್ಕೊರೆತ: ಸೂಕ್ತ ಕ್ರಮ ಕೈಗೊಳ್ಳಬೇಕು-ಬಿಜೆಪಿ ಒತ್ತಾಯ

ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ನ ಕಾವುಗೋಳಿ ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಇದರ  ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ. 200ರಷ್ಟು ಮೀನು ಕಾರ್ಮಿಕರ ಕುಟುಂಬಗಳು ವಾಸಿಸುವ ಈ ಪ್ರದೇಶದ ಜನರಿಗೆ ಮುಖ್ಯ ರಸ್ತೆಗೆ ತಲುಪಲು ಸರಿಯಾದ ದಾರಿಯಿಲ್ಲ. ಯಾರಿಗಾ ದರೂ ಆರೋಗ್ಯ ಸಮಸ್ಯೆಉಂಟಾದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಚೇರಂಗೈ ರಸ್ತೆಯನ್ನು ಆಶ್ರಯಿಸಬೇಕಾ ಗುತ್ತಿದೆ. ಆದರೆ ಕಡಲ್ಕೊರೆತದಿಂದ ಈ ಏಕೈಕ ರಸ್ತೆಯೂ ಬೆದರಿಕೆ ಎದುರಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರದೇಶದ ಜನತೆ ಎದುರಿಸುವ ಈ …

ಪೊಲೀಸ್ ಸ್ಪೆಷಲ್ ಡ್ರೈವ್: ಹಲವು ಪ್ರಕರಣ ದಾಖಲು

ಕಾಸರಗೋಡು: ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ ಹಲವು ಕೇಸುಗಳನ್ನು ದಾಖಲಿಸ ಲಾಗಿದೆ. ಈ ಸಂಬಂಧ 1646 ವಾಹನಗಳನ್ನು ತಪಾಸಣೆಗೊಳಪಡಿಸ ಲಾಯಿತು. 115 ವಾರಂಟ್‌ಗಳನ್ನು ಜ್ಯಾರಿಗೊಳಿಸಲಾಗಿದೆ. ಗೂಂಡಾ ಯಾದಿಯಲ್ಲಿ ಒಳಪಟ್ಟ 61 ಮಂದಿಯನ್ನು ಮತ್ತೆ ಪರಿಶೀಲನೆ ಗೊಳಪಡಿಸಲಾಯಿತು. ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ 67 ಮಂದಿ, ಮದ್ಯದಮಲಿನಲ್ಲಿ ವಾಹನ ಚಲಾಯಿಸಿದ ಬಗ್ಗೆ 31 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರ ಹೊರತಾಗಿ ಮಾದಕ ದ್ರವ್ಯ …

ಪ್ರಹಸನವಾಗುತ್ತಿದೆ ಶುಚಿತ್ವ ಕೇರಳ, ಸುಂದರ ಕೇರಳ: ತ್ಯಾಜ್ಯ ತುಂಬಿ ತುಳುಕುತ್ತಿರುವ ಆದೂರು ಬಳಿಯ ತೋಡು

ಮುಳ್ಳೇರಿಯ: ಶುಚಿತ್ವ ಕೇರಳ, ಸುಂದರ ಕೇರಳವನ್ನಾಗಿ ಮಾಡಲು ಹೆಣಗಾಡುತ್ತಿರುವ ಮಧ್ಯೆ ಇನ್ನು ಕೂಡಾ ತ್ಯಾಜ್ಯಗಳ ಬಗ್ಗೆ ಗಂಭೀರವಾಗಿ ಚಿಂತಿಸದವರು ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ಕಾನಕ್ಕೋಡು ಕೋಳಿಕ್ಕಾಲು ಬಳಿಯಿಂದ ಆರಂಭಗೊಳ್ಳುವ ತೋಡು ಪೂತಪ್ಪಲ, ನಾವುಂಗಾಲ್, ಮೇಗಿನಮನೆ, ಮಲ್ಲಾವರ ಮೂಲಕ ಸಾಗಿ ಆದೂರು ಮಸೀದಿ ಬಳಿಯಲ್ಲಿ ಪಯಸ್ವಿನಿ ಹೊಳೆಯನ್ನು ಸೇರುತ್ತಿದೆ. ಈ ತೋಡಿನ ಬದಿಗಳಲ್ಲಾಗಿ ಹಲವು ಮನೆಗಳಿವೆ, ಆದರೆ ಈ ಮನೆಗಳ ಮುಂಭಾಗ ತೋಡಿನ ಬದಿಯಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದು, ಮನೆಮಂದಿಗೆ ಸಮಸ್ಯೆಯಾಗುತ್ತಿದೆ. ಎಲ್ಲೆಂದರಲ್ಲಿ ಬಿಸಾಡುವ ಜಾಯಮಾನ ಇನ್ನೂ …

9 ವರ್ಷದ ಎಡರಂಗ ಆಡಳಿತ ರಾಜ್ಯದ ಸಮಸ್ತ ವಲಯಗಳಲ್ಲೂ ಪರಾಜಯ- ಕೆಪಿಸಿಸಿ ಅಧ್ಯಕ್ಷ

ಕಾಸರಗೋಡು: ಐಕ್ಯ ಪ್ರಜಾಪ್ರಭುತ್ವ ಒಕ್ಕೂಟ ಕೇರಳದಲ್ಲಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕಾಸರಗೋಡು ಜಿಲ್ಲೆಯ ಸರ್ವತೋಮುಖವಾದ ಅಭಿವೃದ್ಧಿಗೆ ಆದ್ಯತೆ ನೀಡಿ ಯೋಜನೆಗಳನ್ನು ಜ್ಯಾರಿಗೊಳಿಸಲಾಗಿತ್ತು. ಜಿಲ್ಲೆಯ ರೂಪೀಕರಣದಿಂದ ಆರಂಭಿಸಿ ಹೊಸ ತಾಲೂಕುಗಳನ್ನು ಮಂಜೂರುಗೊಳಿಸಿರುವುದು, ಉನ್ನತ ಶಿಕ್ಷಣ ರಂಗದಲ್ಲಿ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿ ಇಂಜಿನಿಯರಿಂಗ್ ಕಾಲೇಜು, ಸರಕಾರಿ ಕಾಲೇಜುಗಳನ್ನು ಆರಂಭಿಸಿರುವುದು ಯುಡಿಎಫ್‌ನ ಆಡಳಿತಕಾಲದಲ್ಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ನುಡಿದರು. ಕೆಪಿಸಿಸಿ ನಡೆಸುವ ಮುಷ್ಕರ ಸಂಗಮದಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಪುರಭವನದಲ್ಲಿ ನಡೆದ ಸಮರ ಸಂಗಮ ಉದ್ಘಾಟಿಸಿ ಅವರು …

ಜಿಲ್ಲೆಯಲ್ಲಿ ಕಾಸರಗೋಡು ಅತ್ಯುತ್ತಮ ಪೊಲೀಸ್ ಠಾಣೆ ಅಂಗೀಕಾರ

ಕಾಸರಗೋಡು: ಜಿಲ್ಲೆಯಲ್ಲಿ ಅತ್ಯುತ್ತಮ ಪೊಲೀಸ್ ಠಾಣೆಗಿರುವ ಅಂಗೀಕಾರ ಕಾಸರಗೋಡು ಪೊಲೀಸ್ ಠಾಣೆಗೆ ಲಭಿಸಿದೆ. ೨೦೨೫ ಜೂನ್ ತಿಂಗಳಲ್ಲಿ ವಿವಿಧ ವಲಯಗಳಲ್ಲಾಗಿ ಅತ್ಯುತ್ತಮ ನಿರ್ವಹಣೆ ತೋರಿದ ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರು ಸ್ಮರಣಿಕೆ ಮತ್ತು ಸರ್ಟಿ ಫಿಕೆಟ್‌ಗಳನ್ನು ನೀಡಿ ಗೌರವಿಸಿದರು. ಜಿಲ್ಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ದ್ವಿತೀಯ ಪೊಲೀಸ್ ಠಾಣೆಯಾಗಿ ಬೇಕಲ ಪೊಲೀಸ್ ಠಾಣೆಗೆ ಅಂಗೀಕಾರ ನೀಡಲಾಗಿದೆ. ಕೋಂ ಬಿಂಗ್ ಕಾರ್ಯಾಚರಣೆಯಲ್ಲಿ ಉತ್ತಮ ನಿರ್ವಹಣೆ …

 ದೈವ ನರ್ತಕ ನಿಧನ

ಮಂಜೇಶ್ವರ: ವರ್ಕಾಡಿ ಮರಿಕಾಪು ನಿವಾಸಿ ಹಿರಿಯ ದೈವ ನರ್ತಕ ಕಿಟ್ಟು (66) ನಿಧನರಾದರು. ಅರಿಬೈಲು ಶ್ರೀ ನಾಗಬ್ರಹ್ಮ ದೇವರ ಬೆಮ್ಮೆರೆ ಮುಡಿ ದೈವದ ನಿಷ್ಠೆಯ ದೈವನರ್ತಕರಾಗಿದ್ದರು. ಮೃತರು ಪತ್ನಿ ಲಕ್ಷ್ಮೀ, ಮಕ್ಕಳಾದ ಪ್ರಶಾಂತ್, ಪ್ರವೀಣ್, ಪ್ರಮೀಳಾ, ಅಳಿಯ ಅಶೋಕ ಮಧೂರು, ಸೊಸೆಯಂದಿರಾದ ದಿವ್ಯ, ಗಾಯತ್ರಿ, ಸಹೋದರ ಐತ್ತಪ್ಪ ಮರಿಕಾಪು, ಸಹೋದರಿ ಪುಷ್ಪ ಸುರುಳಿಮೂಲೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದೆಂಬಳ ಸಡಕ್ ರಸ್ತೆಯಲ್ಲಿ ಗುಡ್ಡೆ ಕುಸಿದು ಸಂಚಾರಕ್ಕೆ ಅಡಚಣೆ

ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಲ್ಲಗದ್ದೆ-ಸುದೆಂಬಳ ಸಡಕ್ ರಸ್ತೆಯ ಪೆಲ್ತಡ್ಕದಲ್ಲಿ ಗುಡ್ಡೆ ಜರಿದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿ ರುವುದಾಗಿ ದೂರಲಾಗಿದೆ. ಕಳೆದ ಎರಡೂ ದಿನಗಳ ಹಿಂದೆ ಸುರಿದ ಮಳೆಗೆ ಗುಡ್ಡೆ ಜರಿದು ಬಿದ್ದಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಶಾಲಾ ಬಸ್ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಈ ಪರಿಸರದಲ್ಲಿ ಇನ್ನಷ್ಟು ಗುಡ್ಡೆ ಜರಿದು ಬೀಳುವ ಸಾಧ್ಯತೆಯಿದ್ದು ಆತಂಕ ಉಂಟಾಗಿದೆ. ಜರಿದು …

ಹಿಂದೂ ಐಕ್ಯವೇದಿ ಕುಂಬಳೆ, ಪುತ್ತಿಗೆ ಪಂಚಾಯತ್ ಸಮಿತಿ ರೂಪೀಕರಣ

ಕುಂಬಳೆ: ಹಿಂದು ಐಕ್ಯ ವೇದಿ ಮಂಜೇಶ್ವರ ತಾಲೂಕು ಸಮಿತಿ ನೇತೃತÀ್ವ ದಲ್ಲಿ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಭಾರತಮಾತೆಗೆ ಪುಷ್ಪಾರ್ಚನೆ ನಡೆಸುವ ಮೂಲಕ ಐಕ್ಯ ವೇದಿ ಕುಂಬಳೆ ಮತ್ತು ಪುತ್ತಿಗೆ ಪಂಚಾಯತ್ ನೂತನ ಸಮಿತಿ ರೂಪೀಕರಣ ಸಭೆ ತಾಲೂಕು ಅಧ್ಯಕ್ಷ ಸುರೇಶ್ ಶಾಂತಿಪಳ್ಳ ಇವರ ಅಧ್ಯ ಕ್ಷತೆಯಲ್ಲಿ ಜರಗಿತು. ಕಾಸರಗೋಡು ಜಿಲ್ಲಾಧ್ಯಕ್ಷ ಎಸ್ ಪಿ ಶಾಜಿ ಉದ್ಘಾಟಿಸಿ, ಕೇರಳದ ಹಿಂದೂ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಂ ಜೇಶ್ವರ ತಾಲೂಕಿನ ಪುರಾತನವಾದ ಹಿಂದೂ ಸ್ಥಳದ ಹೆಸರುಗ ಳನ್ನು ಬದಲಾಯಿಸಲು …

ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಸಿ.ಪಿ. ಬಾಬು ಆಯ್ಕೆ

ಕಾಸರಗೋಡು: ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಸಿ.ಪಿ. ಬಾಬುರನ್ನು ವೆಳ್ಳರಿಕುಂಡ್‌ನಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ದ್ವಿತೀಯ ಬಾರಿಗೆ ಆಯ್ಕೆ ಮಾಡಲಾಗಿದೆ. 1975ರಲ್ಲಿ ಬಾಲವೇದಿ ಘಟಕ ಕಾರ್ಯದರ್ಶಿಯಾಗಿ ಸಂಘಟನಾ ಚಟುವಟಿಕೆಗೆ ಇಳಿದ ಇವರು 1984ರಲ್ಲಿ ಎಐಎಸ್‌ಎಫ್ ಜಿಲ್ಲಾ ಕಾರ್ಯದರ್ಶಿಯಾಗಿಯೂ, 1992ರಲ್ಲಿ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಳೇರಿತಟ್ ನಿವಾಸಿಯಾದ ಇವರು ಪಕ್ಷದ ವಿವಿಧ ಹುದ್ದೆಗಳಲ್ಲಿ ಸಕ್ರಿಯರಾಗಿದ್ದರು. ಕಯ್ಯೂರು ಹುತಾತ್ಮ ಪೊಡೋರ ಕುಂಞಂಬು ನಾಯರ್‌ರ ಸಹೋದರಿಯ ಮಗನಾಗಿದ್ದಾರೆ. ಇವರು ಪತ್ನಿ ಎನ್. ಗೀತ, ಮಕ್ಕಳಾದ ಸ್ನೇಹಬಾಬು, ಅರ್ದೇಂದು ಭೂಷಣ್ ಬಾಬು, ಅಳಿಯ …