ಚೆರ್ಕಳ-ಕಲ್ಲಡ್ಕ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು: ಹೊಂಡ ಮುಚ್ಚುವ ಕೆಲಸ ಆರಂಭ

ಬದಿಯಡ್ಕ: ಹೊಂಡಗಳು ಸೃಷ್ಟಿಯಾಗಿ ಶೋಚನೀಯಾವಸ್ಥೆ ಯಲ್ಲಿರುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ದುರಸ್ತಿಗೆ ಸರಕಾರ ಹಣ ಮಂಜೂರು ಮಾಡಿದೆ. ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಲು ೬ ಲಕ್ಷ ರೂಪಾಯಿ ಹಾಗೂ ಪುನರ್ ನಿರ್ಮಾಣಕ್ಕೆ ೩೫ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇದೀಗ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿ ರುವ ಹೊಂಡಗಳನ್ನು ಶೀಘ್ರ ಮುಚ್ಚಲು ತೀರ್ಮಾನಿಸಲಾಗಿದೆ. ಮಳೆಗಾಲ ಕೊನೆಗೊಂಡ ಬಳಿಕ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿ ಆರಂಭಿಸಲಾ ಗುವುದು. ಇದರಂತೆ ರಸ್ತೆಯ ಹೊಂಡ ಮುಚ್ಚುವ ಕೆಲಸ ಇಂದು ಆರಂಭಗೊಂಡಿದೆ. ಚೆರ್ಕಳ-ಕಲ್ಲಡ್ಕ ರಾಜ್ಯ …

ಗಾಂಜಾ ಸಹಿತ ಓರ್ವ ಸೆರೆ

ಮಂಜೇಶ್ವರ: ಗಾಂಜಾ ಕೈವಶವಿರಿಸಿಕೊಂಡಿದ್ದ ಅನ್ಯರಾಜ್ಯ ಕಾರ್ಮಿಕನನ್ನು ಮಂಜೇಶ್ವರ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ನಿವಾಸಿಯೂ ಕಡಂಬಾರ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ರಬೇಂದರ್ ಸಿಂಗ್ (25) ಎಂಬಾತ ಬಂಧಿತ ಆರೋಪಿ. ಈತನ ಕೈಯಿಂದ 12.49 ಗ್ರಾಂ ಗಾಂಜಾ ವಶಪಡಿಸಲಾಗಿದೆ. ನಿನ್ನೆ ಸಂಜೆ ಕಡಂಬಾರ್ ಒಳರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ರಬೇಂದರ್ ಸಿಂಗ್‌ನನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀ ಸರು ತಿಳಿಸಿದ್ದಾರೆ.

14 ಲೀಟರ್ ಗೋವಾ ಮದ್ಯ ಸಾಗಾಟ: ಸ್ಕೂಟರ್ ಸಹಿತ ಯುವಕ ಸೆರೆ

ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 14.04 ಲೀಟರ್ ಗೋವಾ ಮದ್ಯವನ್ನು ಅಬಕಾರಿ ದಳ ವಶಪಡಿಸಿ ಓರ್ವನನ್ನು ಬಂಧಿಸಿದೆ. ಚೆಂಗಳ ಪನ್ನಿಪ್ಪಾರೆ ನಿವಾಸಿ ಶಾಜಹಾನ್ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಚೆರ್ಕಳದಲ್ಲಿ ನಿನ್ನೆ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಶಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ ಪತ್ತೆಯಾಗಿದೆ. ಶಾಜಹಾನ್ ಸಂಚರಿಸುತ್ತಿದ್ದ ಸ್ಕೂಟರ್‌ನಿಂದ 180 ಮಿಲ್ಲಿ ಲೀಟರ್‌ನ 78 ಬಾಟ್ಲಿ ಮದ್ಯ ವಶಪಡಿಸಲಾಗಿದೆ. ಈತ ಹಲವು ಅಬಕಾರಿ ಪ್ರಕರಣದಲ್ಲಿ ಆರೋಪಿಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದಲ್ಲಿ ನಡೆದ …

ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಅಧಿಸೂಚನೆ ಅಕ್ಟೋಬರ್‌ನಲ್ಲಿ ಜ್ಯಾರಿ

ಕರಡು ಮತದಾರ ಯಾದಿ ಜುಲೈ 21ರಂದು ಪ್ರಕಟ ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ಅಧಿಸೂಚನೆಯನ್ನು ರಾಜ್ಯ ಚುನಾವಣಾ ಆಯೋಗ ಅಕ್ಟೋಬರ್‌ನಲ್ಲಿ ಹೊರಡಿಸುವ ಅಗತ್ಯದ ಸಿದ್ಧತೆಯಲ್ಲಿ ತೊಡಗಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ವಾರ್ಡ್ ವಿಭಜನೆ ಪ್ರಕ್ರಿಯೆಗಳು ಬಹುತೇಕ ಈಗಾಗಲೇ ಪೂರ್ಣಗೊಂಡಿವೆ. ಇದರ ಪೂರ್ವಭಾವಿಯಾಗಿ ಹೊಸ ವಾರ್ಡ್‌ಗಳ ಆಧಾರದಲ್ಲಿ ಮನೆಗಳನ್ನು ಕ್ರಮೀಕರಿಸಿ ಕರಡು ಮತದಾರ ಯಾದಿಯನ್ನು ಜುಲೈ 21ರಂದು ಚುನಾವಣಾ ಆಯೋಗ ಪ್ರಕಟಿಸಲಿದೆ. ರಾಜ್ಯದಲ್ಲಿ ಈಗಿರುವ ಸ್ಥಳೀಯಾಡಳಿತ ಸಂಸ್ಥೆಗಳ ಐದು ವರ್ಷಗಳ ಆಡಳಿತಾವಧಿ ಡಿಸೆಂಬರ್ 20ರೊಳಗಾಗಿ ಪೂರ್ಣಗೊಳ್ಳಲಿದೆ. ಇದರಿಂದಾಗಿ …

ಪಂಚಾಯತ್ ಸದಸ್ಯ, ತಾಯಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ತಿರುವನಂತಪುರ: ರಾಜಧಾನಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ವೊಂದರ ಸದಸ್ಯ ಹಾಗೂ ತಾಯಿ ನೇಣುಬಿಗಿದು ಮೃತಪಟ್ಟ ಘಟನೆ ನಡೆದಿದೆ. ವಕ್ಕಂ ಗ್ರಾಮ ಪಂಚಾ ಯತ್ ಸದಸ್ಯ ತನ್ನ ತಾಯಿಯೊಂದಿಗೆ ಮನೆಯ ಹಿಂಬದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ವಕ್ಕಂ ನೆಡಿಯವಿಳ ವೀಟಿಲ್ ವತ್ಸಲ (71), ಪುತ್ರ ಪಂ. ಸದಸ್ಯ ಅರುಣ್ (42) ಎಂಬವರು ಮೃತಪಟ್ಟವರು.

ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ನಿಧನ

ಬೆಂಗಳೂರು: ಕನ್ನಡ, ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು ಬೆಳಿಗ್ಗೆ ನಿಧನಹೊಂದಿದರು. ಇವರು ಕಳೆದ ಕೆಲವು  ವರ್ಷಗಳಿಂದ  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.  ಆರೂವರೆ ದಶಕಗಳ ಕಾಲ  ಚಿತ್ರರಂಗದಲ್ಲಿ ನಟಿಯಾಗಿ ಮಿಂಚಿದ್ದರು. 2019ರಲ್ಲಿ  ಬಿಡುಗಡೆ ಗೊಂಡ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಅಭಿನಯಿಸಿದ  ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ. 1938 ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದ ಸರೋಜಾ ದೇವಿ ದಕ್ಷಿಣ ಭಾರತದ ಹಲವು ಮೇರು ನಟರೊಂದಿಗೆ ನೂರಾರು ಚಿತ್ರಗಳಲ್ಲಿ ನಾಯಕಿಯಾಗಿ  …

ಜಿಲ್ಲಾ ಕನ್ನಡ ಪತ್ರಕರ್ತರ ಸಂಘದಿಂದ ಪತ್ರಿಕಾದಿನಾಚರಣೆ, ಕುಟುಂಬ ಮಿಲನ

ಕಾಸರಗೋಡು:  ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಿನ್ನೆ ನೀಲೇಶ್ವರ ಹೌಸ್ ಬೋಟ್‌ನಲ್ಲಿ  ಕನ್ನಡ ಪತ್ರಿಕಾ ದಿನಾಚ ರಣೆ ಹಾಗೂ ಕನ್ನಡ ಪತ್ರಕರ್ತರ ಕುಟುಂಬ ಮಿಲನ ಕಾರ್ಯಕ್ರಮ ಜರಗಿತು. ಕರ್ನಾಟಕ ಸರಕಾರದ ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ. ಮಾಣಿ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ವೇಳೆ ಕೆ.ಯು. ಡಬ್ಲ್ಯು.ಜೆ ರಾಜ್ಯ ಘಟಕ ಅಧ್ಯಕ್ಷ ಶಿವಾನಂದ ತಗಡೂರು ಪತ್ರಿಕಾ ದಿನ ಸಂದೇಶ ನೀಡಿದರು. ಹಿರಿಯ …

ಬದಿಯಡ್ಕ- ಚೆರ್ಕಳ ರಸ್ತೆಯಲ್ಲಿ ಹೊಂಡಬಾಳೆ ನೆಟ್ಟು ಬಿಜೆಪಿ ಪ್ರತಿಭಟನೆ

ಬದಿಯಡ್ಕ: ಬದಿಯಡ್ಕ- ಚೆರ್ಕಳ ರಸ್ತೆಯಲ್ಲಿರುವ ಹೊಂಡಗಳಲ್ಲಿ ಬಿಜೆಪಿ ಬಾಳೆ ನೆಟ್ಟು ಪ್ರತಿಭಟನೆ ವ್ಯಕ್ತಪಡಿಸಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ನೇತೃತ್ವ ನೀಡಿದರು. ರಸ್ತೆಯ ಶೋಚನೀಯ ಸ್ಥಿತಿಯ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಭಾರೀ ಆಳದ ಹೊಂಡಗಳು ಸೃಷ್ಟಿಯಾಗಿದ್ದು ಇದು ಅಪಾಯಭೀತಿ ಹುಟ್ಟಿಸುತ್ತಿದೆ. ಹಾಗಿದ್ದರೂ ಅದರ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ಜನರೊಂದಿಗೆ ಸರಕಾರ ತೋರಿಸುವ ಸವಾಲಾಗಿದೆ ಎಂದು ಅವರು ಆರೋಪಿಸಿದರು. ಸ್ಥಳೀಯ ಜನತೆ ಹಾಗೂ ಪ್ರಯಾಣಿಕರು ಪ್ರತಿಭಟನೆಗೆ ಬೆಂಬಲ ನೀಡಿದರು.

ಗುರುಪೂಜೆಯನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿರುವುದು ರಾಜಕೀಯ ಪ್ರೇರಿತ-ಎಂ.ಎಲ್. ಅಶ್ವಿನಿ

ಕಾಸರಗೋಡು: ಗುರುಪೂಜೆ ಕಾರ್ಯಕ್ರಮವನ್ನು ಅಪಾರ್ಥವಾಗಿ ವ್ಯಾಖ್ಯಾನಿಸಿ ಸಮಾಜದಲ್ಲಿ ತಪ್ಪು ಧೋರಣೆ ಸೃಷ್ಟಿಸಲು ಹಾಗೂ ರಾಜಕೀಯ ಲಾಭಗಳಿಸಲು ಯತ್ನ ನಡೆಯುತ್ತಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಅಭಿಪ್ರಾಯಪಟ್ಟರು. ಬಂದಡ್ಕ ಸರಸ್ವತಿ ವಿದ್ಯಾಲಯ ಸಹಿತದ ರಾಜ್ಯದೆಲ್ಲೆಡೆಯ ವಿವಿಧ ವಿದ್ಯಾಲಯಗಳಲ್ಲಿ ನಡೆದ ಗುರುಪೂಜೆ ಕಾರ್ಯಕ್ರಮವನ್ನು ವಿವಾದಗೊಳಿ ಸಲು ಎಡ-ಬಲ ಒಕ್ಕೂಟಗಳ ಯತ್ನದ ಬಗ್ಗೆ ಅವರು ಪ್ರತಿಕ್ರಿಯಿಸಿದರು ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ಕಾರ್ಯಾಚರಿಸುವ ವಿದ್ಯಾಲಯಗಳಲ್ಲಿ ಪ್ರತೀ ವರ್ಷ ಗುರುಪೂಜೆ ನಡೆಯುತ್ತದೆ. ಅಧ್ಯಾಪಕರು ಸಹಿತದ ಹಿರಿಯರನ್ನು ಗೌರವಿಸುವುದಕ್ಕಿರುವ ತರಬೇತಿಯಾಗಿದೆ ಇದು. ಯಾವುದೇ ಮಗುವನ್ನು ಒತ್ತಾಯಪೂರ್ವಕವಾಗಿ …

ಸಿಪಿಐ ಮುಖಂಡ ಸಿ.ಕೆ. ಚಿಪ್ಪಾರು 14ನೇ ವಾರ್ಷಿಕ ಸಂಸ್ಮರಣೆ

ಪೈವಳಿಕೆ: ಸಿಪಿಐಯ ಹಿರಿಯ ಮುಖಂಡ ಸಿ.ಕೆ.ಚಿಪ್ಪಾರ್‌ರವರ 14ನೇ ವಾರ್ಷಿಕ ಸಂಸ್ಮರಣೆ ಇಂದು ಬೆಳಿಗ್ಗೆ ಲಾಲ್‌ಬಾಗ್‌ನಲ್ಲಿರುವ ಸ್ಮೃತಿ ಮಂಟಪದಲ್ಲಿ ಜರಗಿತು. ಪುಷ್ಪಾರ್ಚನೆ ಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ  ಸಂಜೀವ ಶೆಟ್ಟಿ ಚಿಪ್ಪಾರು ಧ್ವಜಾರೋಹಗೈದರು. ಮಂಜೇಶ್ವರ ಮಂಡಲ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರು ಉದ್ಘಾಟಿಸಿದರು. ಸಿ.ಕೆ. ಚಿಪ್ಪಾರುರವರ ಪತ್ನಿ ಮೀನಾಕ್ಷಿ, ಮಾಜಿ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಲೋರೆನ್ಸ್ ಡಿ’ ಸೋಜಾ, ರೇಖಾ ಚಿಪ್ಪಾರು, ಚನಿಯ ಕೊಮ್ಮಂಗಳ, ಕೇಶವ  ಬಾಯಿಕಟ್ಟೆ, ಸುನಿತಾ ವಲ್ಟಿ, ಅಶೋಕ್ ಎಂ.ಸಿ., ಅಜಿತ್ ಎಂ.ಸಿ, ಅಶ್ವತ್ಥ್ ಪೂಜಾರಿ ಉಪಸ್ಥಿತರಿದ್ದರು. …