ವರ್ಕಾಡಿ ಬಿಜೆಪಿ ನೂತನ ಕಾರ್ಯಾಲಯ ಉದ್ಘಾಟನೆ

ವರ್ಕಾಡಿ:  ಸುಂಕದಕಟ್ಟೆಯಲ್ಲಿ  ನೂತನವಾಗಿ ಆರಂಭಗೊಂಡ ಬಿಜೆಪಿ ಕಾರ್ಯಾಲಯವನ್ನು  ಜಿಲ್ಲಾ ಮಾಜಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಅವರು ಮಾತನಾಡಿ ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕು. ಸಂಘಟನೆ, ಕಾರ್ಯ ಕರ್ತರಿಗೆ ಪಕ್ಷದ ಕಾರ್ಯಾಲಯ ದೇವಾಲಯದಂತೆ ಪವಿತ್ರವಾದದ್ದು ಎಂದು ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಧ್ವಜಾರೋಹಣ ಗೈದರು.  ಅವರು ಮಾತನಾಡಿ ಕಾರ್ಯ ಕರ್ತರ ಕನಸು ಈಗ ಸಾಕ್ಷಾತ್ಕಾರ ಗೊಳಿಸಲಾಗಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ವರ್ಕಾಡಿ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತಕ್ಕೇರಲಿದೆಯೆಂದರು.    ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ ಪೊಯ್ಯೆ ಅಧ್ಯಕ್ಷತೆ ವಹಿಸಿದರು. …

ಕೊಚ್ಚಿಯಲ್ಲಿ ಪೀಠೋಪಕರಣ ಅಂಗಡಿ ಬೆಂಕಿಗಾಹುತಿ

ಕೊಚ್ಚಿ: ಕೊಚ್ಚಿ ಟೌನ್ ಹಾಲ್ ಸಮೀಪದ ಪೀಠೋಪಕರಣ ಮಾರಾಟದಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ.  ಇಂದು ಮುಂಜಾನೆ ೩ ಗಂಟೆಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳ ತಲುಪಿ ಗಂಟೆಗಳ ಕಾಲ ನಡೆಸಿದ ಪ್ರಯತ್ನದಲ್ಲಿ ಬೆಂಕಿಯನ್ನು ನಿಯಂತ್ರಣ ವಿಧೇಯಗೊಳಿಸಲಾಗಿದೆ. ಹಳೆಯ ಕುರ್ಚಿಗಳನ್ನು ದುರಸ್ತಿಪಡಿಸಿ ಮಾರಾಟಮಾಡುವ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.  ಮುಂಜಾನೆ ಪತ್ರಿಕೆ ವಿತರಿಸುವ ವ್ಯಕ್ತಿ ಬೆಂಕಿ ತಗಲಿದ ವಿಷಯವನ್ನು ಅಗ್ನಿಶಾಮಕದಳಕ್ಕೆ ತಿಳಿಸಿದ್ದಾರೆ. ಸಮೀಪದಲ್ಲೇ ಪೆಟ್ರೋಲ್ ಬಂಕ್ ಇದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಆದರೆ ಅಗ್ನಿಶಾಮಕದಳದ ೫ರಷ್ಟು  ತಂಡ ನಡೆಸಿದ ಸತತ …

ಯುವಮೋರ್ಛಾ ಮುಖಂಡ ರಾಜೇಶ್ ಕುಟ್ಟ ಬಂಬ್ರಾಣ ಸಂಸ್ಮರಣೆ

ಉಪ್ಪಳ: ಬಿಜೆಪಿ, ಯುವ ಮೋರ್ಛಾ ಉಪಾಧ್ಯಕ್ಷರಾಗಿದ್ದ ರಾಜೇಶ್ ಕುಟ್ಟ ಬಂಬ್ರಾಣ ಅವರ ದ್ವಿತೀಯ ಪುಣ್ಯ ಸ್ಮರಣೆ ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಪಕ್ಷದ ಕುಂಬಳೆ ಕಚೇರಿಯಲ್ಲಿ  ನಡೆಸಲಾಯಿತು.  ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಉಪಾಧ್ಯಕ್ಷೆ ಪ್ರೇಮಾವತಿ, ಕಾರ್ಯದರ್ಶಿ ಪ್ರದೀಪ್ ಕುಮಾರ್, ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಪಂಚಾಯತ್ ಸದಸ್ಯ, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.

ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಪದಗ್ರಹಣ

ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಜೇಶ್ವರ ಇದರ ವಾರ್ಷಿಕ ಮಹಾಸಭೆ ಹೊಸಂ ಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆ ಯಿತು. ಸಮಿತಿಯ ಅಧ್ಯಕ್ಷ ನ್ಯಾಯ ವಾದಿ ನವೀನ್‌ರಾಜ್ ಕೆ.ಜೆ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಗಾಣಿಂಜಾಲ್ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಗೌರವಾಧ್ಯಕ್ಷರಾಗಿ ಹೈಮೇಶ್ ಬಿ.ಎಂ. ಕಟ್ಟೆಬಜಾರ್, ಅಧ್ಯಕ್ಷರಾಗಿ ಪದ್ಮನಾಭ ಕಡಪ್ಪುರ, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಹೆಗ್ಡೆ, ಕೋಶಾಧಿಕಾರಿಯಾಗಿ ನವೀನ್ ಅಡಪ್ಪ ಹೊಸಬೆಟ್ಟು, ಪ್ರಧಾನ ಸಂಚಾಲಕರಾಗಿ ನವೀನ್‌ರಾಜ್ ಕೆ.ಜೆ, …

256 ಗ್ರಾಂ ಎಂಡಿಎಂಎ ಸಹಿತ ಪೊವ್ವಲ್, ಆಲಂಪಾಡಿ ನಿವಾಸಿಗಳು ಸೆರೆಗೀಡಾದ ಪ್ರಕರಣ: ಮಾದಕವಸ್ತು ಹಸ್ತಾಂತರಿಸಿದ ಮತ್ತೆ ಮೂವರ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸು ತ್ತಿದ್ದ ವೇಳೆ ಪೆರಿಯ ಮುತ್ತನಡ್ಕದಿಂದ 256.02 ಗ್ರಾಂ ಎಂಡಿಎಂಎ ವಶಪಡಿ ಸಿದ ಪ್ರಕರಣದಲ್ಲಿ ಇನ್ನೂ ಮೂವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ ಆರಕ್ಕೇರಿದೆ.  ಕಣ್ಣೂರು ಕೂತುಪರಂಬ ಅಡಿಯ ರಪಾರ ರಹ್ನಾ ಮಂಜಿಲ್‌ನ ಕೆ.ಪಿ. ಮುಹಮ್ಮದ್ ಅಜ್ಮಲ್ ಕರೀಂ (20), ಪಾಲಕ್ಕಾಡ್ ಮಣ್ಣಾರ್ ಕಾಡ್ ಕೋಲ್‌ಪಾಡಂ ತೆಂಗರ ವೆಳ್ಳಾಪುಳ್ಳಿ ವೀಟಿಲ್‌ನ  ವಿ.ಪಿ. ಜಂಶಾದ್ (31), ಕುಂಜಕ್ಕೋಡ್ ತೆಂಗರಪಾಲತ್ ವೀಟಿಲ್‌ನ ಫಾಯಿಸ್ (26) ಎಂಬಿವರನ್ನು ಬೇಕಲ ಪೊಲೀಸರು ಬೆಂಗಳೂರಿನಿಂದ ಸೆರೆಹಿಡಿದಿದ್ದಾರೆ. …

ಯುವಕನನ್ನು ಅಪಹರಿಸಿ 18.46 ಲಕ್ಷ ರೂ. ಲಪಟಾವಣೆ: ಸೂತ್ರಧಾರನ ಬಂಧನ

ಕುಂಬಳೆ: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ಕಾರಿನಲ್ಲ್ಲಿ ಅಪಹರಿಸಿ ಕೊಂಡೊಯ್ದು 18.46 ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಕುಂಬಳೆ ಎಸ್.ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದ್ದಾರೆ. ಧರ್ಮತ್ತಡ್ಕ ಚಳ್ಳಂಗಯ ನಿವಾಸಿ  ಯೂಸಫ್ ಇರ್ಶಾದ್ (24) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಕುಂಬಳೆ ಮುಳಿಯಡ್ಕ ರಹ್ಮಾನಿಯ ಮಂಜಿಲ್‌ನ ಅಬ್ದುಲ್ ರಶೀದ್ (32) ಎಂಬವರನ್ನು ಕಳೆದ ಮೇ೬ರಂದು ಕುಂಬಳೆ ಪೇಟೆಯಿಂದ ಅಪಹರಿಸಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಇದೀಗ ಯೂಸಫ್ ಇರ್ಶಾದ್‌ನನ್ನು ಬಂಧಿಸಲಾಗಿದೆ. ಮೇ 6ರಂದು ಮಧ್ಯಾಹ್ನ …

ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ: ಅಹಮ್ಮದಾಬಾದ್ ವಿಮಾನ ಪತನಕ್ಕೆ ಇಂಧನ ಎಂಜಿನ್ ಆಫ್ ಕಾರಣ

ನವದೆಹಲಿ: ಜೂನ್ 12ರಂದು ಅಹಮ್ಮ ದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಪ್ರಾಥಮಿಕ ತನಿಖೆಯಲ್ಲಿ 15 ಪುಟಗಳ ವರದಿ ಬಿಡುಗಡೆ ಮಾಡಿದೆ. ಇಂಧನ ಎಂಜಿನ್ ಆಫ್ ಆಗಿರುವುದು ಪನತಕ್ಕೆ ಕಾರಣಗಳಲ್ಲೊಂದಾಗಿದೆಯೆಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಲಂಡನ್‌ನ ಗ್ವಾಟಿಕ್  ಏರ್ ಇಂಡಿಯಾ ವಿಮಾನ ಎಐ 171 ಆಗಿ ಕಾರ್ಯನಿರ್ವಹಿ ಸುತ್ತಿರುವ ಬೋಯಿಂಗ್ 787-8 ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ  ವಿಮಾನದ ಎರಡೂ ಇಂಧನ ಎಂಜಿನ್‌ಗಳು  ಸ್ಥಗಿತಗೊಂಡವು. …

ಹಾಡಹಗಲೇ ಮನೆಯಿಂದ ಚಿನ್ನಾಭರಣ ಕಳವು: ಆರೋಪಿ ಬಂಧನ

ಮಂಜೇಶ್ವರ: ಹಾಡಹಗಲೇ ಬಾಡಿಗೆ ಮನೆಯ ಕಿಟಿಕಿ ತೆರವುಗೊಳಿಸಿ ಒಳಗೆ ನುಗ್ಗಿ ಚಿನ್ನಾಭರಣ ಕಳವು ನಡೆಸಿದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ನಿವಾಸಿಯೂ ಕುಂಜತ್ತೂರಿನಲ್ಲಿ ವಾಸಿಸುವ ಗಣಪತ್ (22) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ. ಕಳವುಗೈದ ಚಿನ್ನವನ್ನು ಆರೋಪಿ ಕೈಯಿಂದ ಪತ್ತೆಹಚ್ಚಿ ವಶಪಡಿಸಲಾಗಿದೆ. ಉತ್ತರಪ್ರದೇಶ ನಿವಾಸಿ ಯೋಗೀಶ್ ಹಾಗೂ ಕುಟುಂಬ ವಾಸಿಸುವ ಕುಂಜತ್ತೂರು ಕಣ್ವತೀರ್ಥದಲ್ಲಿರುವ ಬಾಡಿಗೆ ಮನೆಯಿಂದ  ಕಳೆದ ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ ೨.೩೦ರ …

ಅಪಘಾತದಲ್ಲಿ ಗಾಯಗೊಂಡಿದ್ದ ಗೃಹಿಣಿ ಮೃತ್ಯು

ಕಾಸರಗೋಡು: ಆರು ತಿಂಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ ಹೊಂದಿದರು. ಪೊವ್ವಲ್ ಬಾಡಿಗೆ ಮನೆಯಲ್ಲಿ ವಾಸಿ ಸುತ್ತಿದ್ದ ಸಾರಾ (50) ಮೃತಪಟ್ಟವರು. ಜನವರಿ ೧೭ರಂದು ಮೊಮ್ಮಗನೊಂ ದಿಗೆ ಪ್ರಯಾಣಿಸುತ್ತಿದ್ದ ವೇಳೆ ಮಾಸ್ತಿ ಕುಂಡ್‌ನಲ್ಲಿ ಇವರಿಬ್ಬರಿಗೂ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಸಾರಾ ಹಾಗೂ ಮಗು ಗಾಯಗೊಂಡಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಸಾರಾ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಾಸ ರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ  ಚೆಡೇಕ್ಕಲ್ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೃತರು …

ಅಕ್ರಮ ನಾಡಕೋವಿ ನಿರ್ಮಾಣ: ಮತ್ತೆ ಇಬ್ಬರ ಸೆರೆ

ಕಾಸರಗೋಡು: ರಾಜಪುರಂ ಕೋಟೆಕುನ್ನು ಕೈಕುಳನ್ ಕಲ್‌ನಲ್ಲಿ  ನಾಡಕೋವಿ ನಿರ್ಮಾಣ ಕೇಂದ್ರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ರಾಜ ಪುರಂ ಪಾಲಂಗಲ್‌ನ ಸಂತೋಷ್ ವಿಜಯನ್ (36) ಮತ್ತು ಪರಪ್ಪ ಮುಂಡತ್ತಡ್ಕ ತಾಳೇತ್ತ್ ವೀಟಿಲ್ ಶಾಜಿ (55) ಬಂಧಿತ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜಪುರಂ, ಆಲಂಕೋಡ್ ಅಲಂಙ ಕಾರ್ತಿಪುರಂನ ಎಂ.ಕೆ. ಅಜಿತ್ ಕುಮಾರ್ (55)ನನ್ನು ಜುಲೈ 9ರಂದು ಬಂಧಿಸಲಾಗಿತ್ತು.