ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಫಂಡ್‌ನಿಂದ 35 ಲಕ್ಷ ರೂ. ಹಿಂಪಡೆದ ಘಟನೆ: ಮಾಜಿ ಪ್ರಾಂಶುಪಾಲ ಇನ್‌ಚಾರ್ಜ್ ವಿರುದ್ಧ ಎಸ್‌ಎಂಸಿ ಚೆಯರ್‌ಮೆನ್‌ರಿಂದ ಪೊಲೀಸರಿಗೆ ದೂರು

ಕಾಸರಗೋಡು: ಮೊಗ್ರಾಲ್ ಶಾಲೆ ಅಭಿವೃದ್ಧಿ ಫಂಡ್‌ನಿಂದ ೩೫ ಲಕ್ಷ ರೂ. ಹಿಂಪಡೆದ ಮಾಜಿ ವಿಎಚ್‌ಎಸಿ ಪ್ರಾಂಶುಪಾಲ ಇನ್‌ಚಾರ್ಜ್  ಕೆ. ಅನಿಲ್ ವಿರುದ್ಧ ಮಾಜಿ ಎಸ್‌ಎಂಸಿ ಚೆಯರ್ ಮೆನ್ ಸಯ್ಯಿದ್ ಹಾದಿ ತಂಙಳ್, ಎಸ್‌ಎಂಸಿ ಚೆಯರ್‌ಮೆನ್ ಆರಿಫ್ ಎಂಬಿವರು ಕುಂಬಳೆ ಪೊಲೀ ರಿಗೆ ದೂರು ನೀಡಿದ್ದಾರೆ. ಶಾಲೆಯಲ್ಲಿ ನಡೆದ ಹಣಕಾಸು ವಂಚನೆ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪಿಟಿಎ ವಿಜಿಲೆನ್ಸ್, ಡಿಡಿಗೆ ಹಾಗೂ ಪೊಲೀಸರಿಗೆ ದೂರು ನೀಡಿದೆ.  ಶಾಲಾ ಪಿಟಿಎ ಸಭೆಯಲ್ಲಿ ಬೆಚ್ಚಿ ಬೀಳಿಸುವ ಈ ಹಣಕಾಸು ವಂಚನೆ …

ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಘೋಷಣೆ: . ನಾಲ್ವರು ಪ್ರಧಾನ ಕಾರ್ಯದರ್ಶಿಗಳು, 10 ಉಪಾಧ್ಯಕ್ಷರು

ತಿರುವನಂತಪುರ: ಬಿಜೆಪಿ  ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಹೆಸರನ್ನು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಘೋಷಿಸಿದ್ದಾರೆ. ಇದರಂತೆ ಪಕ್ಷದ ರಾಜ್ಯ ಘಟಕಕ್ಕೆ ನಾಲ್ವರು ಪ್ರಧಾನ ಕಾರ್ಯದರ್ಶಿಗಳು ಮತ್ತು 10 ಉಪಾಧ್ಯಕ್ಷರು ಸೇರಿದಂತೆ ಇತರ ಹಲವು ಪದಾಧಿಕಾರಿಗಳ ಘೋಷಣೆ ನಡೆಸಲಾಗಿದೆ. ಶೋಭಾ ಸುರೇಂದ್ರನ್ (ತೃಶೂರು), ಎಂ.ಟಿ. ರಮೇಶ್ (ಕಲ್ಲಿಕೋಟೆ), ನ್ಯಾಯವಾದಿ ಎಸ್. ಸುರೇಶ್ (ತಿರುವನಂತಪುರ), ಅನೂಪ್ ಆಂಟನಿ ಜೋಸೆಫ್ (ಪತ್ತನಂತಿಟ್ಟ) ಎಂಬವರನ್ನು   ನೂತನ  ಪ್ರಧಾನ ಕಾರ್ಯದರ್ಶಿ ಗಳನ್ನಾಗಿ ನೇಮಿಸಲಾಗಿದೆ. ಡಾ. ಎಸ್. ರಾಧಾಕೃಷ್ಣನ್, ಸಿ. ಸದಾನಂದನ್ ಮಾಸ್ತರ್,ನ್ಯಾಯವಾದಿ ಪಿ. …

ಪೆರ್ಮುದೆಯಲ್ಲಿ ಬಸ್ ತಂಗುದಾಣವಿಲ್ಲ: ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಜನಪ್ರತಿನಿಧಿ ಮನವಿ

ಪೆರ್ಮುದೆ: ಮಲೆನಾಡು ಹೆದ್ದಾರಿ ಅಭಿವೃದ್ಧಿಗೊಂಡ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ದಿನಂಪ್ರತಿ ಸಂಚರಿಸುವ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಗಿದೆ. ಬಸ್‌ಗಳು ಕೂಡಾ ವಿವಿಧ ಕಡೆಗಳಿಗೆ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಧರ್ಮತ್ತಡ್ಕ, ಸೀತಾಂಗೋಳಿ, ಬಂದ್ಯೋಡು ಮೊದಲಾದ ಭಾಗಗಳಿಗೆ ತೆರಳುವ ರಸ್ತೆಗಳು ಸಂಗಮಿಸುವ ಪೆರ್ಮುದೆ ಪೇಟೆ ಈ ರಸ್ತೆಯಲ್ಲಿ ಸಿಗುವ ಪ್ರಮುಖ ಪೇಟೆಗಳಲ್ಲೊಂದಾಗಿದೆ. ಆದರೆ ಇಲ್ಲಿ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಸಹಿತ ನಿತ್ಯದ ಪ್ರಯಾಣಿಕರು ಬಸ್ ತಂಗುದಾಣವಿಲ್ಲದೆ ಅಂಗಡಿಗಳ ವರಾಂಡದಲ್ಲಿ ಅಥವಾ ಇತರ ಕಡೆಗಳಲ್ಲಿ …

ಜನರಲ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ: 400 ಕೆವಿಎ ಜನರೇಟರ್ ಕಾರ್ಯಾರಂಭ

ಕಾಸರಗೋಡು: ವಿದ್ಯುತ್ ಮೊಟಕುಗೊಂಡರೂ ಇನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಚಟುವಟಿಕೆಗಳು ಮೊಟಕಾಗದು. ತೆಕ್ಕಿಲ್ ಟಾಟಾ ಆಸ್ಪತ್ರೆಯಿಂದ ತಂದ 400 ಕೆವಿಎ ಜನರೇಟರ್ ಜನರಲ್ ಆಸ್ಪತ್ರೆಯಲ್ಲಿ ಕಾರ್ಯಾರಂಭಗೊಳಿಸಲಾಗಿದೆ. ಇದರ ಉದ್ಘಾಟನೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ತೆಕ್ಕಿಲ್ ಟಾಟಾ ಆಸ್ಪತ್ರೆಯಲ್ಲಿ ಉಪಯೋಗಶೂನ್ಯವಾಗಿದ್ದ ಈ ಜನರೇಟರನ್ನು ಜನರಲ್ ಆಸ್ಪತ್ರೆಗೆ ತಲುಪಿಸಿ ಸ್ಥಾಪಿಸಲಾಗಿತ್ತು. ಜನರಲ್ ಆಸ್ಪತ್ರೆಯಲ್ಲಿ ವಿದ್ಯುತ್ ಮೊಟಕುಗೊಂಡರೆ ಸಿಟಿ ಸ್ಕ್ಯಾನ್ ಸಹಿತ ವಿವಿಧ ಸೇವೆಗಳು ಮೊಟಕಾಗುವ ಸ್ಥಿತಿಯಿತ್ತು. ಆದರೆ ಇನ್ನು ಮುಂದೆ …

ಸಿಪಿಎಂ ಕಾರ್ಯಕರ್ತ ನಿಧನ

ಮೊಗ್ರಾಲ್ ಪುತ್ತೂರು: ಸಿಪಿಎಂ ಚೌಕಿ ಬ್ರಾಂಚ್ ಸದಸ್ಯ ಕಲ್ಲಂಗೈ ನಿವಾಸಿ ರಾಮಚಂದ್ರ ಗಟ್ಟಿ (68) ನಿಧನ ಹೊಂದಿದರು.   ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಟೈಲರ್ ಆಗಿರುವ ಇವರು ಮನೆ ಬಳಿಯಲ್ಲಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಲ್ಲೇ ಕುಸಿದುಬಿದ್ದಿದ್ದಾರೆ. ಮೃತರು ಪತ್ನಿ ಶಾಲಿನಿ, ಮಕ್ಕಳಾದ ರೇಶ್ಮಾ, ರೇಖಾ, ಶೈಲೇಶ್,ಸಹೋದರ ಕೃಷ್ಣಪ್ಪ, ಸಹೋದರಿ ವೇದಾವತಿ  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಓರ್ವ ಸಹೋದರ ಚಂದ್ರಶೇಖರ ಈ ಹಿಂದೆ ನಿಧನಹೊಂದಿದ್ದಾರೆ.

ಹಿರಣ್ಯದ ಆಯುರ್ವೇದ ಆಸ್ಪತ್ರೆ ಕಟ್ಟಡ ಬಳಿ ತ್ಯಾಜ್ಯ ರಾಶಿ: ಸ್ಥಳೀಯರಿಗೆ ರೋಗ ಭೀತಿ

ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬಾಯಾರು ಹಿರಣ್ಯ ಎಂಬಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಆಯುರ್ವೇದ ಆಸ್ಪತ್ರೆ ಕಟ್ಟಡ ಪರಿಸರದಲ್ಲಿ ವಿವಿಧ ಕಡೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ರ‍್ಕಾ ಹಾಕಲಾಗಿದೆ. ಇದು ಮಳೆಗೆ ಕೊಳೆತು ಅಸುಪಾಸಿನ ಮನೆಗಳಲ್ಲಿ ವಾಸಿಸುವವರು ರೋಗಗಳಿಗೆ ತುತ್ತಾಗಿ ಅಸಹನೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ದೂರಲಾಗಿದೆ. ಇದರ ವಿರುದ್ದ ಊರವರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಪಂಚಾಯತ್ ಅಧೀನದ ಈ ಕಟ್ಟಡಲ್ಲಿ ಕಾರ್ಯಚರಿಸುತ್ತಿದ್ದ ಆಯುರ್ವೇದ ಆಸ್ಪತ್ರೆ ಹಲವು ವರ್ಷಗಳ ಹಿಂದೆ ಪೈವಳಿಕೆ ಪಂಚಾಯತ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹಿರಣ್ಯದಲ್ಲಿರುವ ಕಟ್ಟಡ ಪಾಳು …

ಶಾಲೆ ವಿದ್ಯಾರ್ಥಿಗಳಿಂದ ಅಧ್ಯಾಪಕರ ಪಾದಪೂಜೆ: ಬಂದಡ್ಕದಲ್ಲಿ ವಿವಾದ ಕಾರ್ಯಕ್ರಮ

ಬಂದಡ್ಕ: ಬಂದಡ್ಕದಲ್ಲಿ ವಿದ್ಯಾರ್ಥಿಗಳಿಂದ ಅಧ್ಯಾಪಕರ ಪಾದಪೂಜೆ ಮಾಡಿಸಿದ ಘಟನೆ ವಿವಾದವಾಗುತ್ತಿದೆ. ಬಂದಡ್ಕ ಕಕ್ಕೆಚ್ಚಾಲ್ ಸರಸ್ವತಿ ವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆದಿತ್ತು. ಗುರುಪೂರ್ಣಿಮೆ ಎಂಬ ಹೆಸರಲ್ಲಿ ಈ ಕಾರ್ಯಕ್ರಮ ನಡೆದಿರುವುದಾಗಿ ಹೇಳಲಾಗುತ್ತಿದೆ. ಗುರುವಾರ ಬೆಳಿಗ್ಗೆ ವ್ಯಾಸಜಯಂತಿ ದಿನದಂಗವಾಗಿ ನಿವೃತ್ತರಾದ ಅಧ್ಯಾಪಕರನ್ನು ವಿದ್ಯಾಲಯ ಸಮಿತಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳನ್ನು ನೆಲದಲ್ಲಿ ಕುಳ್ಳಿರಿಸಿ ಕುರ್ಚಿಯಲ್ಲಿ ಕುಳಿತ ಅಧ್ಯಾಪಕರ ಪಾದ ತೊಳೆದು ಹೂಗಳನ್ನು ಸಮರ್ಪಿಸಿ ಪೂಜೆ ಮಾಡಿ ವಂದಿಸುವುದು ಕಾರ್ಯಕ್ರಮವಾಗಿತ್ತು. ವಿದ್ಯಾಲಯದ ವ್ಯಾಪ್ತಿಯ ನಿವೃತ್ತ 30 ಅಧ್ಯಾಪಕರ ಪಾದಪೂಜೆ ಈ ವೇಳೆ ನಡೆಸಲಾಗಿದೆ. …

ಬ್ಯಾಂಕ್ ಸೆಕ್ರೆಟರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೊಲ್ಲಂ: ಬ್ಯಾಂಕ್ ಸೆಕ್ರೆಟರಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೇರಳಪುರಂ ಪುನೈಕನ್ನೂರ್ ಆಯಿರತ್ತಿಲ್ ಮನೆಯಲ್ಲಿ ರಜಿತಾ ಮೋಳ್ (48) ಮೃತಪಟ್ಟ ಯುವತಿ. ಪುನೈಕನ್ನೂರ್ ಸೇವಾ ಸಹಕಾರಿ ಬ್ಯಾಂಕ್ ಕಾರ್ಯ ದರ್ಶಿಯಾಗಿದ್ದಾರೆ ರಜಿತಾ ಮೋಳ್. ನಿನ್ನೆ ರಾತ್ರಿ ಇವರನ್ನು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದೆ. ಆದರೆ ಮರಣಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಪತಿ ವಿದೇಶದಲ್ಲಿದ್ದು, ಪುತ್ರ ಕಲ್ಲಿಕೋಟೆಯಲ್ಲಿ ವಿದ್ಯಾರ್ಥಿ ಯಾಗಿ ದ್ದಾನೆ. ಏಕಾಂಗಿಯಾಗಿ ಇವರು ಮನೆಯಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ. ಕುಂಡರ ಪೊಲೀಸರು ಸ್ಥಳಕ್ಕೆ ತಲುಪಿ ಮುಂದಿನ ಕ್ರಮ …

ಆನ್‌ಲೈನ್‌ನಲ್ಲಿ ಮಾದಕ ಪದಾರ್ಥ ಖರೀದಿಸಿ ಮಾರಾಟ ಮಾಡುತ್ತಿದ್ದ ಯುವತಿ, ಯುವಕ ಸೆರೆ

ಕೊಚ್ಚಿ: ಆನ್‌ಲೈನ್‌ನಲ್ಲಿ ಮಾದಕ ಪದಾರ್ಥ ಖರೀದಿಸಿ ಮಾರಾಟ ನಡೆಸುತ್ತಿದ್ದ ಯುವತಿ ಹಾಗೂ ಯುವಕನನ್ನು ಅಬಕಾರಿ ತಂಡ ಸೆರೆ ಹಿಡಿದಿದೆ. ಲಕ್ಷದ್ವೀಪ ನಿವಾಸಿ ಫರೀದ (27), ಎರ್ನಾಕುಳಂ ನಿವಾಸಿ ಶಿವದಾಸನ್ (25) ಎಂಬಿವರನ್ನು ಕೊಚ್ಚಿ ಯ ವಸತಿಗೃಹದಿಂದ ಸೆರೆ ಹಿಡಿಯಲಾಗಿದೆ. 3.7 ಗ್ರಾಂ ಎಂಡಿಎಂಎ ಹಾಗೂ 30 ಎಲ್‌ಎಸ್‌ಡಿ ಸ್ಟಾಂಪ್‌ಗಳನ್ನು ಇವರಿಂದ ವಶಪಡಿಸ ಲಾಗಿದೆ. ಈ ಮಧ್ಯೆ ಆಪರೇಷನ್ ಡಿ-ಹಂಟ್‌ನಂಗವಾಗಿ ಇತ್ತೀಚೆಗೆ ನಡೆಸಿದ ವ್ಯಾಪಕ ತಪಾಸಣೆಯಲ್ಲಿ ಮಾದಕ ಪದಾರ್ಥ ಸಹಿತ 123 ಮಂದಿ ಸೆರೆಯಾಗಿದ್ದಾರೆ. 107 ಪ್ರಕರಣಗಳನ್ನು ದಾಖಲಿಸಲಾ …

ಸಿಪಿಎಂಗೆ ಸೇರಿದ ಮಾಜಿ ಮಂಡಲ ಅಧ್ಯಕ್ಷನ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ: ಕಚೇರಿ ಹಕ್ಕು ಕಾಂಗ್ರೆಸ್‌ಗೆಂದು ತೀರ್ಪು

ಪಾಲಕ್ಕಾಡ್: ಕೋಟಾಯಿಯ ಕಾಂಗ್ರೆಸ್ ಮಂಡಲ ಸಮಿತಿ ಕಚೇರಿಯಲ್ಲಿ ಹಕ್ಕು ಕಾಂಗ್ರೆಸ್ ಪಕ್ಷಕ್ಕೆಂದು ಆಲತ್ತೂರು ಮುನ್ಸಿಫ್ ನ್ಯಾಯಾಲಯ ತೀರ್ಪು ನೀಡಿದೆ. ಕಚೇರಿಯಲ್ಲಿ ಹಕ್ಕು ಮುಂದಿಟ್ಟು ಸಿಪಿಎಂನಲ್ಲಿ ಸೇರಿದ ಮಾಜಿ ಮಂಡಲ ಅಧ್ಯಕ್ಷನ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಕಟ್ಟಡ ಕಾಂಗ್ರೆಸ್‌ಗೆ ಬಾಡಿಗೆಗೆ ನೀಡಿರುವುದಾಗಿ ಮಾಲಕ ನೀಡಿದ ಹೇಳಿಕೆಯನ್ನು ನ್ಯಾಯಾಲಯ ಅಂಗೀಕರಿಸಿದೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಕಚೇರಿ ಪ್ರವೇಶಿಸು ವುದನ್ನು ತಡೆದುಕೊಂಡಿರುವ ಸ್ಟೇ ಆದೇಶವನ್ನು ರದ್ದುಪಡಿಸಲಾಯಿತು. ಮೋಹನ್ ಕುಮಾರ್ ಕಾಂಗ್ರೆಸ್ ತ್ಯಜಿಸಿ ಸಿಪಿಎಂಗೆ ಸೇರಿದ ಬೆನ್ನಲ್ಲೇ ಸಿಪಿಎಂನ …