ಬಿದ್ದು ಸಿಕ್ಕಿದ ಚಿನ್ನಾಭರಣ ಮರಳಿಸಿದ ರೋಟರಿ ಸದಸ್ಯನಿಗೆ ಅಭಿನಂದನೆ

ಬದಿಯಡ್ಕ: ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ವಾರೀಸುದಾರರಿಗೆ ಮರಳಿಸಿದ ರೋಟರಿ ಬದಿಯಡ್ಕ ಘಟಕದ ಸದಸ್ಯ ಕೊರೆಕ್ಕಾನ ಜಗನ್ನಾಥ ರೈಯವರನ್ನು ರೋಟರಿ ಇಂಟರ್ ನ್ಯಾಶನಲ್ ಬದಿಯಡ್ಕ ಘಟಕದ ವತಿಯಿಂದ ಅಭಿನಂದಿಸಲಾಯಿತು. ಅಧ್ಯಕ್ಷ ಕೇಶವ ಪಾಟಾಳಿ ಬಿ, ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಉಪಾಧ್ಯಕ್ಷ ಗುರುಪ್ರಸಾದ್ ಶೆಣೈ, ಸದಸ್ಯರಾದ ರಾಘವೇಂದ್ರ ಅಮ್ಮಣ್ಣಾಯ, ಕೃಷ್ಣ ಪ್ರತೀಕ್ ಬೆಳ್ಳಿಗೆ, ತಾರನಾಥ ರೈ ಕಡಾರು, ನಿರಂಜನ ರೈ ಪೆರಡಾಲ, ಜಗನ್ನಾಥ ಕುಂಟಾಲುಮೂಲೆ ಜೊತೆಗಿದ್ದರು.

ಹಿರಣ್ಯದಲ್ಲಿ ರಾಶಿ ಹಾಕಿದ ತ್ಯಾಜ್ಯದಿಂದ ಸ್ಥಳೀಯರಿಗೆ ಸಮಸ್ಯೆ: ಕಾಂಗ್ರೆಸ್‌ನಿಂದ ಪಂ. ಕಚೇರಿ ಧರಣಿ

ಪೈವಳಿಕೆ: ಪೈವಳಿಕೆ ಪಂ.ನ ವಿವಿಧ ಭಾಗಗಳಿಂದ ಹಸಿರು ಕ್ರಿಯÁಸೇನೆ ಕಾರ್ಯಕತೆðಯರು ಸಂಗ್ರಹಿಸುವ ತ್ಯಾಜ್ಯಗಳನ್ನು ಬಾಯಾರು ಮುಳಿಗದ್ದೆಯ ಹಿರಣ್ಯದಲ್ಲಿನ ಎತ್ತರದ ಪ್ರದೇಶದಲ್ಲಿ ರ‍್ಕಾ ್ಝ್ತಔ್ಣÅ್ತWದ್ದು ಮಳೆಗಾಲದಲ್ಲಿ ಇದು ಪರಿಸರಕ್ಕೆ ದೋಷವಾಗಲಿದೆ. ಪಂಚಾಯತ್ ಆಡಳಿತದ ಈ ಅನಾಸ್ಥೆಗೆ ಎದುರಾಗಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪಂಚಾಯತು ಕಚೇರಿ ಮುಂದೆ ಧರಣಿ ಮುಷ್ಕರ ನಡೆಸಲಾಯಿತು. ಕುಂಬಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಪ್ರಭು ಉದ್ಘಾಟಿಸಿ, ಮಾತನಾಡಿ ವಾರದೊಳ ಗಾಗಿ ಈ ತ್ಯಾಜ್ಯ È್ಣವ್ಣ್ನಿ­ ಃÆÇಒ¥್ಣ ಸ್ಥಳಾಂತರಿಸದಿದ್ದರೆ ಹೋರಾಟಕ್ಕೆ ಪಕ್ಷ …

ಕಾಡುಹಂದಿ ದಾಳಿ: ಕಾರ್ಮಿಕನಿಗೆ ಗಾಯ

ಕಾಸರಗೋಡು: ಕಾಡುಹಂದಿಯ ದಾಳಿಯಿಂದ ಕಾರ್ಮಿಕನೋರ್ವ ಗಾಯಗೊಂಡ ಘಟನೆ ನಡೆದಿದೆ. ರಾಜಪುರಂ ಸಮೀಪದ ಎಣ್ಣಪ್ಪಾರ ಮೋದಿರಕಾಟ್‌ನ ಮಧುಸೂದನನ್ (42) ಗಾಯಗೊಂಡ ಕಾರ್ಮಿಕ. ಇವರನ್ನು ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ  ನೀಡಿದ ನಂತರ  ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಮಧುಸೂದನನ್ ನಿನ್ನೆ ಬೆಳಿಗ್ಗೆ 11.30ಕ್ಕೆ ಮೋದಿರಕಾಟ್ ಕೋಯಿಪುರತ್ತ್‌ನ  ವ್ಯಕ್ತಿಯೋರ್ವರ ಹಿತ್ತಿಲಿನಿಂದ ತೆಂಗಿನಕಾಯಿ ಕೊಯ್ಯಲೆಂದು ಹೋದಾಗ ಅಲ್ಲಿಗೆ ಕಾಡುಹಂದಿ ದಿಢೀರ್ ನುಗ್ಗಿ ಬಂದು  ಮಧುಸೂ ದನನ್‌ರಿಗೆ  ತಿವಿದಿದೆ. ಆ ವೇಳೆ ಅಲ್ಲಿದ್ದ ಇತರರು ತಪ್ಪಿಸಿಕೊಂಡರು. ಈ ಪ್ರದೇಶದಲ್ಲಿ …

ಯುವಕನನ್ನು ಕಾರಿನಲ್ಲಿ ಅಪಹರಣ: ಪೊಲೀಸರು ಬೆನ್ನಟ್ಟಿದಾಗ ಯುವಕ, ಕಾರನ್ನು ಉಪೇಕ್ಷಿಸಿ ತಂಡ ಪರಾರಿ

ಮಂಜೇಶ್ವರ: ಗೆಳೆಯರ ಜೊತೆ ಮಾತನಾಡುತ್ತಿದ್ದ ಯುವಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಲಾಗಿದೆ. ಪೊಲೀಸರು ಬೆನ್ನಟ್ಟುತ್ತಿದ್ದಾರೆ ಎಂದು ತಿಳಿದ ತಂಡ ಯುವಕನನ್ನು ಹಾಗೂ ಕಾರನ್ನು ಉಪೇಕ್ಷಿಸಿ ಪರಾರಿಯಾಗಿದೆ. ಘಟನೆಯಲ್ಲಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ, ಕುಂಜತ್ತೂರು ಗೇರುಕಟ್ಟೆಯ ಅಬೂಬಕ್ಕರ್ ಸಿದ್ದಿಕ್ ಅಲಿಯಾಸ್ ಸದ್ದಾಂ (32)ನನ್ನು ಅಪಹರಿಸಲಾಗಿದೆ. ನಿನ್ನೆ ರಾತ್ರಿ 8.30ರ ವೇಳೆ ಮಂಜೇಶ್ವರ ಗೋವಿಂದ ಪೈ ಕಾಲೇಜಿಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಇಲ್ಲಿ ಗೆಳೆಯರೊಂದಿಗೆ ಸದ್ದಾಂ ಮಾತನಾಡುತ್ತಾ ನಿಂತಿದ್ದರು. ಈ ಮಧ್ಯೆ ಬಿಳಿ …

ಮುಷ್ಕರ: ವಾಹನಗಳಿಗೆ ತಡೆಯೊಡ್ಡಿ, ಪೊಲೀಸರಿಗೆ ಹಲ್ಲೆ: ಸಿಪಿಎಂ ನೇತಾರ ಸಹಿತ ಮೂವರ ಬಂಧನ

ಕುಂಬಳೆ: ನಿನ್ನೆ ನಡೆದ ಮುಷ್ಕರದ ಸಂದರ್ಭದಲ್ಲಿ ಸೀತಾಂಗೋಳಿಯಲ್ಲಿ  ವಾಹನಗಳಿಗೆ ತಡೆಯೊಡ್ಡಿ ಬಳಿಕ ಪೊಲೀಸರಿಗೆ ಹಲ್ಲೆಗೈದು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಸಿಪಿಎಂ ನೇತಾರನ ಸಹಿತ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಸಿಪಿಎಂ ಲೋಕಲ್ ಸೆಕ್ರೆಟರಿ ಹಾಗೂ ಏರಿಯಾ ಕಮಿಟಿ ಸದಸ್ಯನಾದ ಅರಿಯಪ್ಪಾಡಿ ಕೂಡ್ಲುವಿನ ಸಂತೋಷ್ ಕುಮಾರ್ ಕೆ.ಎ.(44), ಬಾಡೂರು ಶೇಣಿಯ ಬಿನೀಶ್ ಪಿ.ಎಂ.(35), ಮುಗು ಪಳ್ಳತ್ತಡ್ಕದ ಮಧು ಸೂದನ ಪಿ. (37) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ …

ಹಾಡಹಗಲೇ ಮನೆಗೆ ಕಳ್ಳರ ದಾಳಿ: ಕಿಟಿಕಿ ಮೂಲಕ ಒಳನುಗ್ಗಿ ಚಿನ್ನಾಭರಣ ಕಳವು

ಉಪ್ಪಳ: ಹಾಡಹಗಲೇ ಕಿಟಿಕಿ ತೆಗೆದು ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಚಿನ್ನಾಭರಣವನ್ನು ದೋಚಿದ ಘಟನೆ ಕುಂಜತ್ತೂರು ಬಳಿಯ ಕಣ್ವತೀರ್ಥದಲ್ಲಿ ನಡೆದಿದೆ. ಉತ್ತರಪ್ರದೇಶ ನಿವಾಸಿ ಯೋಗೀಶ್ ಎಂಬವರು ವಾಸಿಸುವ ಬಾಡಿಗೆ ಮನೆಗೆ ನಿನ್ನೆ ಹಾಡಹಗಲೇ ಕಳ್ಳರು ನುಗ್ಗಿ ಎರಡೂವರೆ ಪವನ್ ಚಿನ್ನಾಭರಣ ಕಳವು ನಡೆಸಿದ್ದಾರೆ. ಯೋಗೀಶ್ ಇಲ್ಲಿ ಕುಟುಂಬ ಸಮೇತ ವಾಸಿಸಿ ಕೂಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆ 9.30ಕ್ಕೆ ಇವರು ಕುಟುಂಬ ಸಮೇತ ಹೊರಗೆ ತೆರಳಿ ಮಧ್ಯಾಹ್ನ 2 ಗಂಟೆಗೆ ಮರಳಿ ಬಂದಿದ್ದಾರೆ. ಮನೆಯೊಳಗೆ ತೆರಳಿ ನೋಡಿದಾಗ …

ಬೇಳದಲ್ಲಿ ಬೀಗ ಜಡಿದ ಮನೆಯಿಂದ ನಗ-ನಗದು ಕಳವು

ನೀರ್ಚಾಲು: ಇಲ್ಲಿನ ಬೇಳದಲ್ಲಿ ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು 5 ಪವನ್ ಚಿನ್ನಾಭಾರಣ ಹಾಗೂ 80 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ. ಬೇಳದ ಜಯಪ್ರಸಾದ್ ಆಳ್ವ ಎಂಬವರ ಮನೆಯಿಂದ ಈ ಕಳವು ನಡೆದಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ ಐದು ಕಪಾಟುಗಳನ್ನು ಮುರಿದು  ನಗ-ನಗದು ದೋಚಿದ್ದಾರೆ.  ಜಯಪ್ರಸಾದ್ ಆಳ್ವ ಹಾಗೂ ಪತ್ನಿ ಮನೆಗೆ ಬೀಗ ಜಡಿದು ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಮಕ್ಕಳ ಮನೆಗೆ  ತೆರಳಿದ್ದರು. ಇಂದು ಮುಂಜಾನೆ ಮರಳಿ ಬಂದಾಗಲೇ ಮನೆಗೆ ಕಳ್ಳರು …

ಆರಿಕ್ಕಾಡಿಯಲ್ಲಿ ಮನೆಯಿಂದ ಬೆಲೆಬಾಳುವ ವಾಚ್ ಕಳವು

ಕುಂಬಳೆ: ಆರಿಕ್ಕಾಡಿಯಲ್ಲಿ ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು ಬೆಲೆಬಾಳುವ ವಾಚ್‌ವೊಂದನ್ನು ದೋಚಿದ ಘಟನೆ ನಡೆದಿದೆ. ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಸಮೀಪದ ದಿ| ಅಬ್ದುಲ್ ರಹಿಮಾನ್ ಎಂಬವರ ಪತ್ನಿ ನಫೀಸರ  ಮನೆಗೆ ಕಳ್ಳರು ನುಗ್ಗಿದ್ದಾರೆ.  ಎರಡು ದಿನಗಳ ಹಿಂದೆ ನಫೀಸ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದರು. ಇಂದು ಮುಂಜಾನೆ ಮನೆಗೆ ಮರಳಿ ಬಂದಾಗಲೇ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಬೆಡ್‌ರೂಂ ಕಪಾಟಿನಲ್ಲಿದ್ದ ಟಿಸೋಟ್ ವಾಚ್ ಕಳವಿಗೀಡಾದ ಬಗ್ಗೆ ತಿಳಿದುಬಂದಿದೆ. ಮನೆಯ ಅಡುಗೆ ಕೋಣೆ …

ಅಕ್ರಮ ನಾಡಕೋವಿ ನಿರ್ಮಾಣ ಕೇಂದ್ರಕ್ಕೆ ಪೊಲೀಸ್ ದಾಳಿ: ಬಂದೂಕುಗಳ ಸಹಿತ ಓರ್ವ ಸೆರೆ

ಕಾಸರಗೋಡು: ಅಕ್ರಮವಾಗಿ ನಾಡಕೋವಿ ನಿರ್ಮಿಸುತ್ತಿದ್ದ ಕೇಂದ್ರವೊಂದಕ್ಕೆ ಪೊಲೀಸರು ದಾಳಿ ನಡೆಸಿ ಮೂರು ನಾಡನಿರ್ಮಿತ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ರಾಜಪುರಕ್ಕೆ ಸಮೀಪದ ಆಲಂಕೋಡು ಅರಂಙಂ ಕಾರ್ತಿಕಪುರಂ ನಿವಾಸಿ ಎಂ.ಕೆ. ಅಜಿತ್ ಕುಮಾರ್ (55) ಎಂಬಾತನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿ ಕೊಂಡಿದ್ದಾರೆ. ರಾಜಪುರಂ ಕೋಟೆಕುನ್ನು ಕೈಕುಳನ್‌ಕಲ್ಲು ಎಂಬಲ್ಲಿ ಈ ಅಕ್ರಮ ನಾಡಕೋವಿ ನಿರ್ಮಾಣ ಕೇಂದ್ರ ಕಾರ್ಯವೆಸಗುತ್ತಿತ್ತು.  ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ …

ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣ ಮದ್ಯ ವಶ: ಇಬ್ಬರಸೆರೆ

ಕಾಸರಗೋಡು:  ಕಳನಾಡು ಮೇಲ್ಪರಂಬದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದ ಅಬಕಾರಿ ತಂಡ  ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ನೋಂದಾಯಿತ ಕಾರಿನಲ್ಲಿ ಸಾಗಿಸುತ್ತಿದ್ದ 181.44 ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಚಾವಕ್ಕಾಡ್ ವಡಗರ ಪುನ್ನಯಾರು ನಿವಾಸಿ ಅನ್‌ಸೀಫ್ ಎ.ಎಚ್ (38) ಮತ್ತು ಕಾಸರಗೋಡಿನ ಚಂದ್ರಶೇಖರ  (39) ಎಂಬಿವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.  ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್‌ಗಳಾದ ಶ್ರೀನಿವಾಸನ್ ಪತ್ತಿಲ್, ಪ್ರಮೋದ್ ಕುಮಾರ್ ವಿ ಪ್ರಿವೆಂಟೀವ್ ಆಫೀಸರ್ ಅಜೀಶ್ …