ನಾಪತ್ತೆಯಾದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಕಸಬಾ ಕಡಪ್ಪುರ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ರಮೇಶನ್- ಮಿನಿ ದಂಪತಿ ಪುತ್ರ ಆದಿತ್ಯನ್ (22) ಸಾವನ್ನಪ್ಪಿದ ಯುವಕ. ಮಂಗಳವಾರ ಮಧ್ಯಾಹ್ನ ಬಳಿಕ ಆದಿತ್ಯನ್ ನಾಪತ್ತೆಯಾಗಿ ದ್ದನು. ಆತನಿಗಾಗಿ ಮನೆಯವರು ಮತ್ತು ಸ್ನೇಹಿತರು ವ್ಯಾಪಕ ಶೋಧ ಆರಂಭಿಸಿದ್ದರು. ಆತನನ್ನು ಮೊಬೈ ಲ್ ಫೋನ್‌ನಲ್ಲಿ ಸಂಪರ್ಕಿಸಲೆತ್ನಿ ಸಿದಾಗ ಅದರ ಲೊಕೇಷನ್ ಕಾಸರಗೋಡು ಹಾರ್ಬರ್ ಬಳಿಯ  ಹೊಳೆ ಬದಿ ತೋರಿಸಿದೆ. ಅದರಂತೆ ಅಲ್ಲಿಗೆ ಹೋಗಿ ನೋಡಿದಾಗ ಅಲ್ಲಿ ಆದಿತ್ಯನ …

ಗಾಂಜಾ ವಶ: ಓರ್ವ ಸೆರೆ

ಕಾಸರಗೋಡು: ಕೂಡ್ಲು ಕಲ್ಲಂಗೈಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಎಕ್ಸೈಸ್ ಆಫೀಸರ್ ಸೂರಜ್ ಎನ್.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 2.525  ಗ್ರಾಂ ಮೆಥಾಫಿಟಮಿನ್ ಮತ್ತು 6.570 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ಕೊಪಾಡಿ ನಡುವಳ್ಳಂ ನಿವಾಸಿ ಮುಸಾಮ್ಮಿಲ್ ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ವಿನೋದನ್ ಕೆ.ವಿ, ಇತರ ಸಿಬ್ಬಂದಿಗಳಾದ ಉಣ್ಣಿಕೃಷ್ಣನ್, ಸಾಜನ್ ಅಪ್ಸಲ್ (ಐ.ಒ) ಪ್ರಶಾಂತ್ ಕುಮಾರ್ ಎ.ವಿ. …

256.02 ಗ್ರಾಂ ಎಂಡಿಎಂಎ ಪತ್ತೆ: ಇಬ್ಬರ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 256.02 ಗ್ರಾಂ ಎಂಡಿಎಂಎಯನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಮುಳಿಯಾರು ಪೊವ್ವಲ್ ಸಮೀದ್ ಮಹಲ್‌ನ ಮೊಹಮ್ಮದ್ ಡಾನೀಶ್ (30) ಮತ್ತು ಚೆಂಗಳ ಆಲಂಪಾಡಿಯ ಅಬ್ದುಲ್ ಖಾದರ್ (40) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ಮೂನಾಂಕಡವಿನಲ್ಲಿ ಬೇಕಲ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರ ಹಿಂದುಗಡೆ ಸೀಟಿನಲ್ಲಿ ಎಂಡಿಎಂಎ ಪತ್ತೆಯಾಗಿದೆ.  ತಕ್ಷಣ ಅದರಲ್ಲಿದ್ದ ಆರೋಪಿಗಳು ಮತ್ತು ಕಾರನ್ನು ಪೊಲೀಸರು ವಶಕ್ಕೆ …

ಮಸೀದಿಯಲ್ಲಿ ಕಳವು: ಆರೋಪಿ ಬಂಧನ

ಕಾಸರಗೋಡು: ಜೂನ್ 24ರಂದು ಕಾಸರಗೋಡು ಸೂರ್ಲಿನ ಸಲಫಿ ಮಸೀದಿಗೆ ನುಗ್ಗಿ  3.10 ಲಕ್ಷ ರೂ. ನಗದು ಮತ್ತು  ಎರಡು ಪವನ್ ಚಿನ್ನ ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವೆಸ್ಟ್ ಗೋದಾವರಿ ಅಕಿವೀಡು, ಉರ್ದು ಶಾಲೆ ಬಳಿಯ ನಿವಾಸಿ ಮೊಹಮ್ಮದ್ ಸಲ್ಮಾನ್ ಅಹಮ್ಮದ್ (34) ಬಂಧಿತ ಆರೋಪಿ. ಕಳವು ನಡೆದ ಮಸೀದಿ ಮತ್ತು ಪರಿಸರ ಪ್ರದೇಶಗಳ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಗುರುತು ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ತನಿಖೆಯಲ್ಲಿ …

ಎ.ಕೆ. ಬ್ರದರ್ಸ್ ಸಂಸ್ಥೆಗಳ ಮಾಲಕ ನಿಧನ

ಕಾಸರಗೋಡು: ಖ್ಯಾತ ಉದ್ಯಮಿ, ಎ.ಕೆ. ಬ್ರದರ್ಸ್ ಸಂಸ್ಥೆಗಳ ಮಾಲಕ ಎ.ಕೆ. ಮುಹಮ್ಮದ್ ಅನ್ವರ್ (65) ನಿಧನ ಹೊಂದಿದರು. ಕೇರಳ ಸ್ಟೇಟ್ ಕಿರು ಕೈಗಾರಿಕೆ ಫೆಡರೇಶನ್ ಜಿಲ್ಲಾ ಉಪಾಧ್ಯ ಕ್ಷರಾಗಿದ್ದರು.  ಇಂದು ಮುಂಜಾನೆ ನಿಧನ ಸಂಭವಿಸಿದ್ದು, ಹೃದಯಾ ಘಾತ ಮರಣಕ್ಕೆ ಕಾರಣವೆನ್ನ ಲಾಗಿದೆ. ನಿಧನಕ್ಕೆ ಕೆಎಸ್‌ಎಸ್ ಐಎಫ್ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಕಾಸರಗೋಡು ನಗರಸಭೆಯಲ್ಲಿ 37 ಲಕ್ಷ ರೂ.ಗಳ ಅವ್ಯವಹಾರ ವಿಜಿಲೆನ್ಸ್‌ನಿಂದ ಪತ್ತೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಕಾಸರಗೋಡು ನಗರಸಭೆಯಲ್ಲಿ ವಿಜಿಲೆನ್ಸ್ 37 ಲಕ್ಷ ರೂ.ಗಳ ಅವ್ಯವಹಾರ ಪತ್ತೆಹಚ್ಚಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. 25 ವರ್ಷದಿಂದ ಆಡಳಿತದಲ್ಲಿರುವ ಮುಸ್ಲಿಂ ಲೀಗ್ ನಗರಸಭೆಯ ತೆರಿಗೆದಾರರ ಹಣವನ್ನು ಅವ್ಯವಹಾರಕ್ಕೆ ಉಪಯೋಗಿಸಲಿರುವ ‘ಮನಿಸೆಂಟರ್’ ಆಗಿ ನಗರಸಭೆಯನ್ನು ಬದಲಿಸಿದೆ ಎಂದು ಅವರು ಆರೋಪಿಸಿದರು. ಅಭಿವೃದ್ಧಿ ರಹಿತ ಭ್ರಷ್ಟಾಚಾರ ಆಡಳಿತವೆಂದು ಆರೋಪಿಸಿ ಬಿಜೆಪಿ ನಗರಸಮಿತಿಯ ನೇತೃತ್ವದಲ್ಲಿ ನಗರಸಭಾ ಕಚೇರಿಗೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಗರದ ಹೆಚ್ಚಿನ ರಸ್ತೆಗಳು ಸಂಚಾರಯೋಗ್ಯವಲ್ಲದಂತಾಗಿದೆ. ಪ್ರವಾಸಿ ವಲಯದಲ್ಲೂ, ನಗರ ಸೌಂದರ್ಯಗೊಳಿಸುವುದಕ್ಕೂ ಕೇಂದ್ರ …

ರಾಷ್ಟ್ರೀಯ ಮುಷ್ಕರ: ಉಪ್ಪಳದಲ್ಲಿ ಪ್ರತಿಭಟನೆ

ಉಪ್ಪಳ: ರಾಷ್ಟ್ರೀಯ ಮುಷ್ಕರ ದಂಗವಾಗಿ ನಡೆದ ಯುಡಿಟಿಎಫ್ ಪ್ರತಿಭಟನಾ ಒಕ್ಕೂಟವನ್ನು ಉಪ್ಪಳದಲ್ಲಿ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಪಿಣರಾಯಿ ವಿಜಯನ್ ಹಕ್ಕಿಯ ಎರಡು ರೆಕ್ಕೆಗಳಂತೆ ಎಂದು ಅವರು ಆರೋಪಿಸಿದರು. ಸತ್ಯನ್ ಸಿ. ಉಪ್ಪಳ ಅಧ್ಯಕ್ಷತೆ ವಹಿಸಿದರು. ಕೆ.ಪಿ. ಮುನೀರ್ ಸ್ವಾಗತಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಉಮ್ಮರ್, ಶಾಜಿ ಎನ್.ಸಿ, ಮೊಯ್ದೀನ್ ಹೊಸಂಗಡಿ, ಖಮರುದ್ದೀನ್ ಪಾಡಲಡ್ಕ, ಜೆಸ್ಸಿ ಅನಿಲ್ ಕಣ್ವತೀರ್ಥ, ಶಿವರಾಮ್ ಶೆಟ್ಟಿ, ಇಸ್ಸಾಕ್ ಉಪ್ಪಳ, ಹಾರಿಸ್ ಬಂದ್ಯೋಡು, ಅಸೀಸ್ ಕಡಪ್ಪು, …

ಬಸ್ ಕಾರ್ಮಿಕರಿಗೆ, ಮಾಲಕರಿಗೆ ತಿಳುವಳಿಕಾ ತರಗತಿ

ಕಾಸರಗೋಡು: ಕಾಸರಗೋಡು ತಾಲೂಕಿನ ಬಸ್ ಕಾರ್ಮಿಕರಿಗೆ, ಮಾಲಕರಿಗೆ ಮಾಹಿತಿ ತಿಳುವಳಿಕಾ ತರಗತಿ ನಡೆಸಲಾಯಿತು. ಬಸ್ ಮುಷ್ಕರದ ದಿನದಂದು ಮಾಲಕರು ಹಾಗೂ ಕಾರ್ಮಿಕರನ್ನು ಒಟ್ಟುಗೂಡಿಸಿ ಮೋಟಾರು ವಾಹನ ಇಲಾಖೆ, ಪೊಲೀಸ್, ಟ್ರೋಮಾ ಕೇರ್‌ಸೊಸೈಟಿ, ಬಸ್ ಮಾಲಕರ ಸಂಘಟನೆ ಮುಖಂಡರು, ಕಾರ್ಮಿಕ ಸಂಘಟನೆಗಳ ಮುಖಂಡರು ಮೊದಲಾದವರು ಭಾಗವಹಿಸಿದರು. ಹೊಸ ಬಸ್ ನಿಲ್ದಾಣದ ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ತರಗತಿ ನಡೆದಿದ್ದು, ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್ ರೋಷನ್, ಲಯನ್ಸ್ ಕ್ಲಬ್ ಅಧ್ಯಕ್ಷ ವಿ. ವೇಣುಗೋಪಾಲ್ ತರಗತಿ ನಡೆಸಿದರು. ಪೊಲೀಸ್ ಎಡಿಶನಲ್ ಎಸ್‌ಪಿ …

ಮಾಪಿಳಪ್ಪಾಟು ಕಲಾವಿದ ನಿಧನ

ಹೊಸದುರ್ಗ: ಗಾಯಕ ಹಾಗೂ ಮಾಪಿಳಪ್ಪಾಟು ಕಲಾವಿದ ಕಾಞಂಗಾಡ್ ನಿವಾಸಿ ಎಂ.ಕೆ. ಮನ್ಸೂರ್ (44) ನಿಧನ ಹೊಂದಿದರು.  ಅಸೌಖ್ಯ ಹಿನ್ನೆಲೆಯಲ್ಲಿ 20 ದಿನದ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಸ್ಥಳೀಯ ಕಲೆ- ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಮಾಪಿಳ ಕಲಾವಿದರ ಸಂಘಟನೆಯಾದ ಉಮ್ಮಾಸ್‌ನ ಕಾರ್ಯದರ್ಶಿಯಾಗಿದ್ದಾರೆ. ಮೃತರು ತಾಯಿ ಖದೀಜ, ಸಹೋದರಿಯರಾದ ನಸೀಮ, ಖೈರುನ್ನೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ವಡಕ್ಕರಮುಖ್ ಆವಿಕ್ಕೆರೆ ನಿವಾಸಿ ಹಸೈನಾರ್ ಈ ಹಿಂದೆ ನಿಧನ ಹೊಂದಿದ್ದಾರೆ.

ಅಸೌಖ್ಯ: ಯುವಕ ನಿಧನ

ಪೆರ್ಲ: ಇಲ್ಲಿಗೆ ಸಮೀಪದ ಪರ್ಪಕರಿಯದಲ್ಲಿ ವಾಸವಾಗಿರುವ ಪರಮೇಶ್ವರ ನಾಯ್ಕ್ (50) ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ತಂದೆ ಐತ್ತಪ್ಪ ನಾಯ್ಕ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ತಾಯಿ ಸರಸ್ವತಿ, ಪತ್ನಿ ಶೋಭಾ, ಪುತ್ರಿಯರಾದ ವರ್ಷಿತ, ಸುದೀಕ್ಷಾ, ಸಹೋದರ ಉದಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಏಕದಂತ ಬಳಗ ಪೆರ್ಲ ಇದರ ಸದಸ್ಯರಾಗಿದ್ದು, ನಿಧನಕ್ಕೆ ಏಕದಂತ ಬಳಗ ಸಂತಾಪ ಸೂಚಿಸಿದೆ.