58ರ ಮಹಿಳೆಯ ಮೇಲೆ ಅತ್ಯಾಚಾರ: ಸಹೋದರಿಯ ಪತಿ ವಿರುದ್ಧ ಕೇಸು

ಕಾಸರಗೋಡು: ೫೮ರ ಹರೆಯದ ಮಹಿಳೆ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ ಆರೋಪದಂತೆ ಪೊಲೀ ಸರು ಕೇಸು ದಾಖಲಿಸಿಕೊಂ ಡಿದ್ದಾರೆ. ದೂರುದಾತೆಯ ತಂಗಿಯ ಪತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಮಹಿಳೆ ದೂರು ನೀಡಿದ್ದಾಳೆ. 2022 ಎಪ್ರಿಲ್ 15ರಿಂದ 2023 ಅಕ್ಟೋಬರ್ವರೆಗೆ ಹಲವು ಬಾರಿ ಕಿರುಕುಳ ನೀಡಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಭಯದಿಂದ ಘಟನೆ ಕುರಿತು ಇದುವರೆಗೆ ಯಾರಲ್ಲೂ ತಿಳಿಸಿರ ಲಿಲ್ಲವೆನ್ನಲಾಗಿದೆ. ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದುವರಿಯುತ್ತಿರುವ ಅಬಕಾರಿ ಕಾರ್ಯಾಚರಣೆ: ಗಾಂಜಾ, ಅಕ್ರಮ ಮದ್ಯ ವಶ: ವಲಸೆ ಕಾರ್ಮಿಕ ಸೇರಿ ಮೂವರ ಸೆರೆ

ಕಾಸರಗೋಡು: ಅಬಕಾರಿ ತಂಡ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದ್ದು ಇದರಂತೆ ನಿನ್ನೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಲಾದ ಕಾರ್ಯಾಚರಣೆಯಲ್ಲಿ ಗಾಂಜಾ ಮತ್ತು ಅಕ್ರಮ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂ ಧಿಸಿ ವಲಸೆ ಕಾರ್ಮಿಕ ಸೇರದಂತೆ ಮೂವರನ್ನು ಸೆರೆಹಿಡಿಯಲಾಗಿದೆ. ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ  ಎಕ್ಸೈಸ್ ಇನ್‌ಸ್ಪೆಕ್ಟರ್ ಆದರ್ಶ್.ಜಿ  ನೇತೃತ್ವದ ಅಬಕಾರಿ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ಸೊಂದರಲ್ಲಿ 10 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ವಲಸೆ ಕಾರ್ಮಿಕ ಉತ್ತರ ಪ್ರದೇಶ ಗೊಂಡಾ ಜಿಲ್ಲೆಯ ಡೌರಿಯಾ …

ಪೂವಡ್ಕ- ಅಡ್ಕತ್ತೊಟ್ಟಿ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಹಲವು ದಿನಗಳಿಂದ ಬೀಡು ಬಿಟ್ಟಿರುವುದಾಗಿ ಸ್ಥಳೀಯರು

ಮುಳ್ಳೇರಿಯ: ಇಲ್ಲಿಗೆ ಸಮೀಪದ ಪೂವಡ್ಕದಿಂದ ಅಡ್ಕತ್ತೊಟ್ಟಿಗೆ ತೆರಳುವ ರಸ್ತೆಯಲ್ಲಿ ಕಾಡುಕೋಣಗಳು ಗುಂಪಾಗಿ ವಿಹರಿಸುತ್ತಿರುವುದು ಕಂಡು ಬಂದಿದೆ. ೮ ಕಾಡುಕೋಣಗಳು ನಿನ್ನೆ ಸಂಜೆ ಇಲ್ಲಿ ರಸ್ತೆಗಿಳಿದಿವೆ. ಈ ಸಮಯದಲ್ಲಿ ಈ ದಾರಿಯಾಗಿ ತೆರಳುತ್ತಿದ್ದವರು ಇದರ ವೀಡಿಯೋ ಚಿತ್ರೀಕರಿಸಿದ್ದಾರೆ. ಜನರನ್ನು ಹಾಗೂ ವಾಹನಗಳನ್ನು ಕಂಡರೂ ರಸ್ತೆಯಿಂದ ಕದಲದೇ ಅತ್ತಿತ್ತ ನೋಡುತ್ತಾ ಕಾಡುಕೋಣಗಳು ನಿಂತಿವೆ ಎಂದಿದ್ದಾರೆ. ಬಳಿಕ ಕಾಡಿನೊಳಗೆ ತೆರಳಿವೆ ಎಂದು ಈ ದಾರಿಯಾಗಿ ಸಂಚರಿಸುತ್ತಿದ್ದವರು ತಿಳಿಸಿದ್ದು, ಕಳೆದ ಕೆಲವು ದಿನಗಳಿಂದ ಇಲ್ಲಿ ಗುಂಪಾಗಿ ಕಾಡುಕೋಣಗಳು ಕಂಡು ಬರುತ್ತಿವೆ ಎಂದು ಸ್ಥಳೀಯರು …

ಎಲ್‌ಐಸಿ ಏಜೆಂಟ್ ಹೃದಯಾಘಾತದಿಂದ ನಿಧನ

ಮಂಜೇಶ್ವರ: ಎಲ್‌ಐಸಿ ಏಜೆಂಟ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಬಡಾಜೆ ಚೌಕಿ ಸಮೃದ್ಧಿ ನಿಲಯದ ಸೋಮಶೇಖರ ಬಿ (43) ಮೃತಪಟ್ಟ ವ್ಯಕ್ತಿ. ಇವರಿಗೆ ನಿನ್ನೆ ರಾತ್ರಿ ಮನೆಯಲ್ಲಿ ಹೃದಯಾಘಾತ ವುಂಟಾಗಿತ್ತು. ಕೂಡಲೇ ಹೊಸಂ ಗಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ದಿವಂಗತರಾದ ದೇರ ಮೂಲ್ಯ-ರಾಧಾ ದಂಪತಿಯ ಪುತ್ರನಾದ ಮೃತರು ಪತ್ನಿ ಚಂದ್ರಿಕಾ, ಮಕ್ಕಳಾದ ಸಮರ್ಥ್, ಸಮೃದ್ಧಿ, ಸಹೋದರ-ಸಹೋದರಿಯರಾದ ಭೋಜರಾಜ್, ರಮಣಿ, ಶೋಭಾ, ಚಂದ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ನಾರಾಯಣ ಈ ಹಿಂದೆ …

ಕಾಸರಗೋಡು ನಗರಸಭೆ ವಾರ್ಡ್ ವಿಭಜನೆಯಲ್ಲಿ ವಂಚನೆ: ವಾರ್ಡ್ ವಿಭಜನೆ ವಿಜ್ಞಾಪನೆಗೆ ಹೈಕೋರ್ಟ್ ತಡೆ

ಕಾಸರಗೋಡು: ಕಾಸರಗೋಡು ನಗರಸಭೆ ವಾರ್ಡ್ ವಿಭಜನೆ ವಿಜ್ಞಾಪನೆಯನ್ನು ಹೈಕೋರ್ಟ್ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ವಾರ್ಡ್ ವಿಭಜನೆಯಲ್ಲಿ ಅವೈಜ್ಞಾನಿಕ ಹಾಗೂ ವಂಚನೆ ನಡೆದಿದೆ ಎಂದು ಮುಸ್ಲಿಂ ಲೀಗ್ ಮುನ್ಸಿಪಲ್ ಕಮಿಟಿ ಅಧ್ಯಕ್ಷ ಕೆ.ಎಂ. ಬಶೀರ್ ನೀಡಿದ ದೂರಿನಂತೆ ನ್ಯಾಯಾಲಯ ಈ ನಿರ್ದೇಶ ನೀಡಿದೆ. ತೆರುವತ್ ವಾರ್ಡ್‌ನ ಸ್ವಾಭಾವಿಕ ಗಡಿಯಾದ ಹಾಶಿಂ ಸ್ಟ್ರೀಟ್ ರಸ್ತೆಯ ಎರಡು ಭಾಗವನ್ನು  ಆ ವಾರ್ಡ್‌ನಲ್ಲಿ ಸೇರಿಸಲಾಗಿದೆ ಎಂದೂ, ಹಲವು ವಾರ್ಡ್‌ಗಳಲ್ಲೂ ಸ್ವಾಭಾವಿಕ ಗಡಿ ಇಲ್ಲದಾಗಿದೆ ಎಂದೂ, ಫಿಶ್ ಮಾರ್ಕೆಟ್ ವಾರ್ಡ್‌ನ ಒಂದು ಫ್ಲೋಟ್ ಸಮುಚ್ಚಯ …

ರಾಷ್ಟ್ರೀಯ ಹೆದ್ದಾರಿಯಲ್ಲಿ ದನಗಳ ಹಿಂಡು: ವಾಹನ ಚಾಲಕರಲ್ಲಿ ಭೀತಿ

ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ  ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುಲಭ ಹಾಗೂ ವೇಗದ ಸಾರಿಗೆಗಾಗಿ ನಿರ್ಮಿತವಾಗಿದ್ದರೂ, ರಸ್ತೆಯ ಮೇಲೆ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟದಿಂದಾಗಿ ವಾಹನ ಸವಾರರು ಅಪಾಯ ಭೀತಿ ಎದುರಿಸುವಂತಾಗಿದೆ. ದಿನವೂ ಸಮೀಪ ಪ್ರದೇಶದಿಂದ ಹತ್ತಾರು ದನಗಳು ರಸ್ತೆಗೆ ಪ್ರವೇಶಿಸುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ದನ ಸಾಕುವವರು ದನಗಳನ್ನು ಮೇಯಲು ಬೇಕಾಬಿಟ್ಟಿಯಾಗಿ ಬಿಡುತ್ತಿರುವ ಹಿನ್ನೆಲೆಯಲ್ಲಿ ಇವು ನೇರವಾಗಿ ಹೆದ್ದಾರಿಗೆ ಬರುತ್ತಿವೆ. ರಸ್ತೆ ಬದಿಯಲ್ಲಿ ಇನ್ನೂ ದೀಪ ಸ್ಥಾಪಿಸದೇ ಇರುವ ಹಿನ್ನೆಲೆಯಲ್ಲಿ ರಾತ್ರಿ …

ಜನರಲ್ ಆಸ್ಪತ್ರೆಗೆ ಮಾರ್ಚ್: 85 ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು: ಆರೋಗ್ಯ ಸಚಿವೆ ವೀಣಾ ಜೋರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ  ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ನಡೆಸಿದ ಮಾರ್ಚ್‌ಗೆ ಸಂಬಂಧಿಸಿ 85 ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಸಂಘಟಿತರಾಗಿ ಬಂದು ರಸ್ತೆ ತಡೆ, ಸಾರಿಗೆ ಅಡಚಣೆ, ಸಾರ್ವಜನಿಕ ಸಂಚಾರಕ್ಕೆ ತಡೆಯೊಡ್ಡುವಿಕೆ ಇತ್ಯಾದಿ ಆರೋಪದಂತೆ ಕೇಸು ದಾಖಲಿ ಸಲಾಗಿದೆ. ಪಿ.ಆರ್. ಸುನಿಲ್, ಲೋಕೇಶ್ ನೋಂಡಾ, ಗುರುಪ್ರ ಸಾದ್, ಸಜೀವನ್, ಮನುಲಾಲ್ ಮೇಲತ್ತ್, ಸಾಗರ್ ಚಾತಮತ್ತ್, ಶ್ರೀಧರನ್, ಪ್ರದೀಪ್ ಕುಟ್ಟಕಣಿ, ಪ್ರಮೀಳಾ ಮಜಲ್, ರಮೇಶನ್, …

ದೈವ ಪಾತ್ರಿ ನಿಧನ

ವರ್ಕಾಡಿ: ಬೋರ್ಕಳ ಬಳಿಯ ಲೆಂಕ್ರಿಕ್ಕಾಡ್ ನಿವಾಸಿ ಲೆಂಕ್ರಿಕ್ಕಾಡು ಮಲರಾಯ ದೈವದ ಪಾತ್ರಿ ಪದ್ಮನಾಭ (48) ಅಸೌಖ್ಯದಿಂದ ನಿಧನ ಹೊಂದಿ ದರು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ಮೃತರು ಪತ್ನಿ ಶಶಿಕಲಾ, ಮಕ್ಕಳಾದ ಲೋಹಿತ್, ಯಶ್ವಿನಿ, ಅಳಿಯ ಯತೀಶ್, ಸಹೋದರ ಆನಂದ, ಸಹೋದರಿ ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಲೆಂಕ್ರಿಕ್ಕಾಡ್ ಮಲರಾಯ ಕಲ್ಲುರ್ಟಿ ದೈವಸ್ಥಾನ ಸಮಿತಿ, ಬೋರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ನಾಗಬ್ರಹ್ಮ …

ಆರೋಗ್ಯ ಸಚಿವೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಜನರಲ್ ಆಸ್ಪತ್ರೆಗೆ ಮಾರ್ಚ್

ಕಾಸರಗೋಡು: ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕಟ್ಟಡ ಕುಸಿದು ಓರ್ವೆ ಮಹಿಳೆ ಮೃತಪಟ್ಟ  ಘಟನೆಗೆ ಸಂಬಂಧಿಸಿ ರಾಜ್ಯ ಆರೋಗ್ಯ ಸಚಿವೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ  ನೇತೃತ್ವದಲ್ಲಿ ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಮಾರ್ಚ್ ನಡೆಸಲಾಯಿತು. ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಿಸಿದ ಮಾರ್ಚ್‌ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್, ಹಿರಿಯ ನೇತಾರರಾದ ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ, ಪಿ. ರಮೇಶ್, ವಿ. ರವೀಂದ್ರನ್, ಪದಾಧಿಕಾರಿಗ ಳಾದ ಪುಷ್ಪಾ ಗೋಪಾಲ, …

ವಿವಿಧ ಬೇಡಿಕೆ ಮುಂದಿಟ್ಟು ಪುತ್ತಿಗೆ ಕೃಷಿಭವನಕ್ಕೆ ಕಿಸಾನ್ ಸೇನೆ ಮಾರ್ಚ್ 10ರಂದು

ಕುಂಬಳೆ: ಹೊಳೆಯಿಂದ ಕೃಷಿ ಅಗತ್ಯಕ್ಕೆ ನೀರು ಉಪಯೋಗಿಸುವುದಕ್ಕೆ ನಿಯಂತ್ರಣ ಏರ್ಪಡಿಸಿ ಕೃಷಿ ಅಗತ್ಯಕ್ಕಿರುವ ಉಚಿತ ವಿದ್ಯುತ್ ವಿತರಣೆ ನಿಲ್ಲಿಸುವ ಯತ್ನ ಕೃಷಿಕರಿಗೆ  ಒಡ್ಡುವ ಸವಾಲು ಎಂದು, ಈ ರೀತಿಯ ರೈತದ್ರೋಹ ನಿಲುವುಗಳನ್ನು ಮುಂದುವರಿಸಿದರೆ ತೀವ್ರ ಮುಷ್ಕರಕ್ಕೆ ನೇತೃತ್ವ ನೀಡುವುದಾಗಿ ಕಿಸಾನ್ ಸೇನೆ ಪುತ್ತಿಗೆ ಪಂಚಾಯತ್ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 200ಕ್ಕೂ ಅಧಿಕ ಕೃಷಿಕರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿರುವು ದನ್ನು ಹೊರತುಪಡಿಸಿದ ಪುತ್ತಿಗೆ ಕೃಷಿಭವನ ಕ್ರಮದ ವಿರುದ್ಧ ಕಿಸಾನ್ ಸೇನೆ ಪುತ್ತಿಗೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ …