ಕಡಲ್ಕೊರೆತದಿಂದ ಮೀನುಗಾರರ ಶೆಡ್ ಸಮುದ್ರಪಾಲು ಸ್ಥಳಕ್ಕೆ ಅಧಿಕಾರಿಗಳ ಸಹಿತ ಬಿಜೆಪಿ ಮುಖಂಡರ ಭೇಟಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ಐಲ ಶಿವಾಜಿನಗರ ದಲ್ಲಿ ಮೀನುಗಾರರ ಶೆಡ್ಡ್ ಹಾಗೂ ಹನು ಮಾನ್‌ನಗರದಲ್ಲಿ ರಸ್ತೆ ಕಡಲ್ಕೊರೆತ ದಿಂದ ಸಮುದ್ರ ಪಾಲಾಗಿದ್ದು, ಈ ಪ್ರದೇಶಕ್ಕೆ ಮಂಜೇಶ್ವರ ತಾಲೂಕು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಬಿಜೆಪಿ ನೇತಾರ ಮಂಗಲ್ಪಾಡಿ ಪಂಚಾಯತ್ ಸದಸ್ಯ ವಿಜಯಕುಮಾರ್ ರೈ, ವಸಂತ ಕುಮಾರ್ ಮಯ್ಯ, ಭರತ್ ರೈ, ಅನಿಲ್ ಕುಮಾರ್ ಐಲ ಉಪಸ್ಥಿತರಿದ್ದರು.

ಬಿದ್ದು ಸಿಕ್ಕಿದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರ: ಯುವಕರಿಗೆ ಅಭಿನಂದನೆ

ಬದಿಯಡ್ಕ: ಬಿದ್ದು ಸಿಕ್ಕಿದ ಒಂದೂವರೆ ಪವನ್ ಚಿನ್ನಾಭರಣವನ್ನು ಪೊಲೀಸ್ ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಯುವಕರನ್ನು ಪೊಲೀಸರು ಹಾಗೂ ನಾಗರಿಕರು ಅಭಿನಂದಿಸಿದ್ದಾರೆ. ಬದಿಯಡ್ಕದಲ್ಲಿ  ಹಣಕಾಸು ಸಂಸ್ಥೆ ನಡೆಸುವ ಬೋಳುಕಟ್ಟೆಯ ಜಗನ್ನಾಥ ರೈ,  ನೀರ್ಚಾಲ್‌ನ ನವೀನ್ ಎಂಬಿವರು  ಪ್ರಾಮಾಣಿಕತೆ ಮೆರೆದಿದ್ದಾರೆ. ಪೇಟೆಯ ಶಾಪಿಂಗ್ ಕಾಂಪ್ಲೆಕ್ಸ್‌ವೊಂದರ ಸಮೀಪ ಇವರಿಗೆ ಚಿನ್ನಾಭರಣ ಬಿದ್ದು ಸಿಕ್ಕಿತ್ತು. ಕೂಡಲೇ ಅವರು ಅದನ್ನು ಬದಿಯಡ್ಕ ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಪೊಲೀಸರ ಸಲಹೆಯಂತೆ ಸಾಮಾಜಿಕ ಕಾರ್ಯಕರ್ತನಾದ ಹಾರಿಸ್ ಬಿಡಿಕೆ  ನೇತೃತ್ವದಲ್ಲಿ ಈ ಮಾಹಿತಿ ಯನ್ನು ಸಾಮಾಜಿಕ ಜಾಲತಾಣದಲ್ಲಿ …

10ನೇ ತರಗತಿ ಪಠ್ಯದಲ್ಲಿ ಶ್ರೀಕೃಷ್ಣಯ್ಯ ಅನಂತಪುರರ ಕವಿತೆ

ಕಾಸರಗೋಡು: ಕೇರಳ ರಾಜ್ಯದ 10ನೇ ತರಗತಿಯ ಕನ್ನಡ ಮೂಲ ಪಠ್ಯ ಪುಸ್ತಕಕ್ಕೆ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರ ‘ಬೇರುಗಳು ಅಮ್ಮನ ಹಾಗೆ’ ಎಂಬ ಕವಿತೆ ಸ್ವೀಕೃತಗೊಂಡಿದೆ. ಭೂಮಿ ಪ್ರತಿಷ್ಠಾನ ಧಾರವಾಡ ಮತ್ತು ಅರವಳದ ಪ್ರತಿಷ್ಠಾನ ಸತ್ತೂರು ದಿ| ಯಲ್ಲಪ್ಪ ಅರವಳರ ಸ್ಮರಣಾರ್ಥ ಜಂಟಿಯಾಗಿ ನೀಡುವ ಟಾಪ್ ಟೆನ್ ಕೃತಿ ಪುರಸ್ಕಾರ ಪಡೆದ ಕವನ ಸಂಕಲನದಿಂದ ಈ ಕವಿತೆಯನ್ನು ಆರಿಸಲಾಗಿದೆ.

ಮದ್ಯದಮಲಿನಲ್ಲಿ ತಾಯಿಯನ್ನು ಹೊಡೆದು ಕೊಂದ ಪುತ್ರ

ಆಲಪ್ಪುಳ: ಮದ್ಯದ ಅಮಲಿನಲ್ಲಿ ಯುವಕನೋರ್ವ ತನ್ನ ತಾಯಿಗೆ ಗಂಭೀರ ಹಲ್ಲೆ ನಡೆಸಿ ಕೊಲೆಗೈದ ಘಟನೆ ಅಂಬಲಪುಳದಲ್ಲಿ ನಡೆದಿದೆ. ಕುಂಞಿಪ್ಪಾಡಂ ಆಶಾರಿಪರಂಬಿಲ್ ನಿವಾಸಿ ಆನಿ ಎಂಬವರು ಕೊಲೆಗೈಯ್ಯಲ್ಪಟ್ಟ ಮಹಿಳೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಈಕೆಯ ಪುತ್ರ ಜೋನ್ಸನ್ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಳೆದ ಆದಿತ್ಯವಾರ ಮದ್ಯದಮಲಿನಲ್ಲಿ ಮನೆಗೆ ತಲುಪಿದ ಜೋನ್ಸನ್ ತಾಯಿಗೆ ಹಲ್ಲೆಗೈದು ಗಾಯಗೊಳಿಸಿದ್ದನು. ತಡೆಯಲೆತ್ನಿಸಿದ ತಂದೆ ಜೋಯಿಗೂ ಹಲ್ಲೆಗೈ ಯ್ಯಲಾಗಿತ್ತು. ಹಲ್ಲೆಯಿಂದ ಗಂಭೀರಗಾಯ ಗೊಂಡ ಆನಿಯನ್ನು ವಂಡಾನಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ …

ನಾಳೆಯ ಕೆಲಸ ಸ್ಥಗಿತ ಮುಷ್ಕರ: ಕುಂಬಳೆಯಲ್ಲಿ ಮೆರವಣಿಗೆ

ಕುಂಬಳೆ: ಕೇಂದ್ರ ಸರಕಾರದ ಜನವಿರುದ್ಧ ನೀತಿ, ಕಾರ್ಮಿಕ ವಿರುದ್ಧ ನೀತಿ ಎಂದು ಆರೋಪಿಸಿ ನಾಳೆ ನಡೆಸುವ ಅಖಿಲಭಾರತ ಕೆಲಸ ಸ್ಥಗಿತ ಮುಷ್ಕರದಂಗವಾಗಿ ಆಕ್ಷನ್ ಕೌನ್ಸಿಲ್ ಆಫ್ ಸ್ಟೇಟ್ ಎಂಪ್ಲೋಯೀಸ್ ಆಂಡ್ ಟೀಚರ್ಸ್‌ನ ನೇತೃತ್ವದಲ್ಲಿ ರಾಜ್ಯ ಸರಕಾರಿ ನೌಕರರು, ಅಧ್ಯಾಪಕರು ಕುಂಬಳೆ ಪೇಟೆಯಲ್ಲಿ ರ‍್ಯಾಲಿ ನಡೆಸಿದರು. ಎನ್‌ಜಿಒ ಯೂನಿಯನ್ ಜಿಲ್ಲಾ ಜೊತೆ ಕಾರ್ಯದರ್ಶಿ ವೇಣುಗೋಪಾಲ್, ಕೆಎಸ್‌ಟಿಎ ಜಿಲ್ಲಾ ಕೋಶಾಧಿಕಾರಿ ರಾಜೇಶ್ ಕೆ.ವಿ, ಎಫ್‌ಎಸ್‌ಇಟಿಒ ವಲಯ ಕಾರ್ಯದರ್ಶಿ ಎಂ.ಎಸ್. ಜೋಸ್, ಎನ್‌ಜಿಒ ಯೂನಿಯನ್ ಏರಿಯಾ ಸೆಕ್ರೆಟರಿ ಶರೀಫ್ ಪಿ. ನೇತೃತ್ವ …

ಬ್ಯಾಂಕ್ ನೌಕರೆ ಅಸೌಖ್ಯದಿಂದ ಮೃತ್ಯು

ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬ್ಯಾಂಕ್ ನೌಕರೆ ಮೃತಪಟ್ಟರು. ಪುಲ್ಲೂರು ಕೊಡವಲಂ ಪಡಂಗೋಟ್‌ನ ಪಿ. ಶೀನ (43) ಮೃತಪಟ್ಟ ದುರ್ದೈವಿ. ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿದ್ದ ಇವರನ್ನು  ಮಂ ಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು.  ಎಸ್‌ಬಿಐ ಕಾಞಂ ಗಾಡ್ ಶಾಖೆಯ ನೌಕರೆ ಯಾಗಿದ್ದರು.  ಪಿ. ದಾಮೋದರನ್-ಸರೋಜಿನಿ ದಂಪತಿಯ ಪುತ್ರಿಯಾದ ಮೃತರು ಸಹೋದರರಾದ ಶಿಜಿ, ಶಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಂಬಳೆಯಲ್ಲಿ ಬಿಜೆಪಿಯಿಂದ ವಿಕಸಿತ ಭಾರತ ಸಂಕಲ್ಪ ಸಭೆ

ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸಮಿತಿ ನೇತೃತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆ ನಡೆಸಲಾಯಿತು. ಕುಂಬಳೆ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾ ಚುನಾವಣಾ ಪ್ರಭಾರಿ ನ್ಯಾಯವಾದಿ ವಿ.ಕೆ.ಸಜೀವನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಮತ್ತು ಮಂಡಲ ಪ್ರಭಾರಿ ಮಹೇಶ್ ಗೋಪಾಲ್, ವಿ. ರವೀಂದ್ರನ್, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ …

ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಸೀತಾಂಗೋಳಿ: ಸಂತೋಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೀತಾಂಗೋಳಿ ಇದರ ವಾರ್ಷಿಕ ಮಹಾಸಭೆ ಕ್ಲಬ್ ಕಚೇರಿಯಲ್ಲಿ ಜರಗಿತು. ಅಧ್ಯಕ್ಷ ಕೆ. ಮಹಾಲಿಂಗ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ವಾರ್ಷಿಕ ವರದಿ, ಕೋಶಾಧಿಕಾರಿ ಪ್ರಸಾದ್ ಲೆಕ್ಕ ಪತ್ರ ಮಂಡಿಸಿದರು. ಗಣೇಶ್ ಪ್ರಾರ್ಥನೆ ಹಾಡಿದರು. ನೂತನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನ್ಯಾಯವಾದಿ ಥೋಮಸ್ ಡಿಸೋಜಾ, ಉಪಾಧ್ಯಕ್ಷರಾಗಿ ಅಪ್ಪಣ್ಣ ಪಾಟಾಳಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್‌ರಾಜ್, ಕ್ರೀಡಾ ಕಾರ್ಯದರ್ಶಿಯಾಗಿ ಅಭಿಜಿತ್, ಕಲಾ ಕಾರ್ಯದರ್ಶಿಯಾಗಿ ಶೋಭಿತ್, ಜೊತೆ …

ಬದಿಯಡ್ಕ, ಮಂಜೇಶ್ವರ, ಬೇಕಲ ಠಾಣೆ ವ್ಯಾಪ್ತಿಯಿಂದ ಮೂವರು ಯುವತಿಯರು, ಒಂದು ಮಗು ನಾಪತ್ತೆ

ಕಾಸರಗೋಡು: ಕಾಸರಗೋಡು, ಬೇಕಲ ಪೊಲೀಸ್ ಸಬ್ ಡಿವಿಶನ್ ವ್ಯಾಪ್ತಿಯಿಂದ ಮೂವರು ಯುವತಿಯರು ಹಾಗೂ ಮೂರರ ಹರೆಯದ ಮಗು ನಾಪತ್ತೆಯಾದ ಘಟನೆ ನಡೆದಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶೇಣಿ ಬಲ್ತಕಲ್ಲು ನಿವಾಸಿ ಚಿತ್ರಕಲಾ (37) ಹಾಗೂ ಮೂರರ ಹರೆಯದ ಪುತ್ರಿ ಜುಲೈ ೧ರಂದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪತಿ ಬಿ. ಗಂಗಾಧರ  ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬೇಕಲ ಪುದಿಯ ಭಗವತಿ ಕ್ಷೇತ್ರ ಸಮೀಪದ ಸಂಗೀತ (21) ಶನಿವಾರ ನಾಪತ್ತೆಯಾಗಿದ್ದಾಳೆ.  ಅಂದು …

ನೆಕ್ರಾಜೆಯಲ್ಲಿ ತೆಂಗಿನ ಕಾಯಿ ಕಳವುಗೈದ ಇಬ್ಬರ ಬಂಧನ

ಬದಿಯಡ್ಕ: ನೆಕ್ರಾಜೆಯಲ್ಲಿ ಕೊಠಡಿಯ ಬಾಗಿಲು ಮುರಿದು 250 ತೆಂಗಿನ ಕಾಯಿಗಳನ್ನು ಕಳವು ನಡೆಸಿದ ಆರೋಪಿಗಳನ್ನು ಬದಿಯಡ್ಕ ಪೊಲೀಸರು ಸೆರೆಹಿಡಿದಿದ್ದಾರೆ. ನೆಕ್ರಾಜೆ ಬಳಿಯ ಪುಂಡೂರಿನ ರಾಮನ್ ಹಾಗೂ ಅರ್ಲಡ್ಕದ ರವಿ ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನೆಕ್ರಾಜೆ ಬಳಿಯ ಅರ್ಲಡ್ಕ ಅಲಂ ಕೋಲ್ ನಿವಾಸಿ ಕುದಿರತ್ತಾಯರ್ ಎಂಬವರ ಮಾಲಕತ್ವದಲ್ಲಿರುವ ಕಟ್ಟಡದ ಕೊಠಡಿಯಲ್ಲಿ ತೆಂಗಿನ ಕಾಯಿ ಇರಿಸಲಾಗಿತ್ತು. ಈ ಕೊಠಡಿಯ ಬಾಗಿಲು ಮುರಿದು 250 ತೆಂಗಿನ ಕಾಯಿಗಳನ್ನು ಕಳ್ಳರು ದೋಚಿದ್ದರು. ಶುಕ್ರವಾರ ಹಾಡಹಗಲೇ ಈ ಕಳವು ನಡೆದಿದ್ದು, …