ಎಣ್ಣೆ ಗಿರಣಿಯಿಂದ ಗೆರಟೆ ಕಳವು: ಇಬ್ಬರ ಸೆರೆ

ಬದಿಯಡ್ಕ: ಮುಂಡ್ಯತ್ತಡ್ಕ ಪಳ್ಳದಲ್ಲಿರುವ ಖಾಸಗಿ ಎಣ್ಣೆ ಗಿರಣಿಯಿಂದ 25ರಷ್ಟು ಗೋಣಿ ಚೀಲ ಗೆರಟೆ ಕಳವುಗೀಡಾದ ಪ್ರಕರಣದ್ಲಲಿ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಲ್ಲಿಕೋಟೆ ಕಾವಿಲಂಬಾರ ಅರುಣಿತ್ತರ ನಿವಾಸಿ ಎ.ಟಿ. ಅರುಣ್ (28), ಚಾತಂಗೋಡ್ ನಡ ನಿವಾಸಿ ಅಲ್ತಾಫ್ (25) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಪಚ್ಚಂಬಳ ನಿವಾಸಿ ಸಕರಿಯಾದ ಮಾಲಕತ್ವದಲ್ಲಿರುವ ಪಳ್ಳದಲ್ಲಿರುವ ಎಣ್ಣೆ ಗಿರಣಿಯಿಂದ ಜೂನ್ 1ರಂದು ಗೆರಟೆ ಕಳವು ನಡೆಸಲಾಗಿದೆ. ಗಿರಣಿ ಸಮೀಪ 25 ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಗೆರಟೆ ಕಳವಿಗೀಡಾಗಿತ್ತು. ಇದಕ್ಕೆ ಸುಮಾರು 15,000 ರೂ. …

ನಾಳೆ ಖಾಸಗಿ ಬಸ್ ಮುಷ್ಕರ

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ರಾಜ್ಯದಲ್ಲಿ ನಾಳೆ ಖಾಸಗಿ ಬಸ್ ಮುಷ್ಕರ ನಡೆಯಲಿರುವುದು. ದೀರ್ಘ ಕಾಲದಿಂದ ಸಂಚಾರ ನಡೆಸುವ ಲಿಮಿಟೆಡ್ ಸ್ಟಾಪ್ ಬಸ್‌ಗಳು ಮತ್ತು  ದೀರ್ಘದೂರ ಬಸ್‌ಗಳ ಪರ್ಮಿಟ್‌ಗಳನ್ನು ಸಕಾಲದಲ್ಲಿ ನವೀಕರಿಸಿ ನೀಡಬೇಕು, ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕು, ವಿದ್ಯಾರ್ಥಿಗಳ ಪ್ರಯಾಣ ದರವನ್ನು ಸಕಾಲದಲ್ಲಿ ಪರಿಷ್ಕರಿಸಬೇಕು, ಬಸ್ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಿದ ಕ್ರಮವನ್ನು ಹಿಂತೆಗೆಯಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಾಳೆ ಬಸ್ ಸೂಚನಾ ಮುಷ್ಕರ  ನಡೆಸುವುದಾಗಿ ಕೇರಳ …

ಬೆಂಗಳೂರಿನಲ್ಲಿ ಚಿಟ್ ಫಂಡ್ ಹೆಸರಲ್ಲಿ ಕೋಟ್ಯಂತರ ರೂ.ಗಳ ವಂಚನೆ: ಕೇರಳದ ದಂಪತಿ ವಿರುದ್ಧ ಎಫ್‌ಐಆರ್; ರಾಜ್ಯಕ್ಕೂ ತನಿಖೆ ವಿಸ್ತರಣೆ

ತಿರುವನಂತಪುರ: ಚಿಟ್ ಫಂಡ್  ಹೆಸರಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ಬಳಿಕ ವಂಚಿಸಿದ  ದೂರಿನಂತೆ ಕೇರಳದ ದಂಪತಿ ವಿರುದ್ಧ ಬೆಂಗಳೂರು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಲಪ್ಪುಳ ರಾರಮಂಕೇರಿ ನಿವಾಸಿಗಳಾದ  ಎ.ವಿ. ಟೋಮಿ ಮತ್ತು ಅವರ ಪತ್ನಿ ಶೈನಿ ಟೋಮಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರು 2005ರಿಂದ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಎ ಆಂಡ್ ಎ ಚಿಟ್ ಫಂಡ್ ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದರು. ಇವರು ಸಾರ್ವಜನಿಕರಿಂದ ಚಿಟ್ ಫಂಡ್ ಹೆಸರಲ್ಲಿ ಅಧಿಕ ಬಡ್ಡಿ ತೋರಿಸಿ …

ಹಲವೆಡೆಗಳಲ್ಲಿ ಅಬಕಾರಿ ದಾಳಿ: ಭಾರೀ ಪ್ರಮಾಣದ ಗಾಂಜಾ, ಕರ್ನಾಟಕ ಮದ್ಯ ವಶ; ಇಬ್ಬರ ಸೆರೆ, ಓರ್ವ ಪರಾರಿ

ಕಾಸರಗೋಡು: ಕಾಸರಗೋಡು ಅಬಕಾರಿ ತಂಡ ಮೂರು ಕಡೆ ಮಿಂಚಿನ ದಾಳಿ ನಡೆಸಿ ಒಟ್ಟು 2.110 ಕಿಲೋ ಗಾಂಜಾ ಮತ್ತು 25.92 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾ ಗಿದೆ. ಓರ್ವ ಪರಾರಿಯಾಗಿದ್ದಾನೆ. ಪೊಯಿನಾಚಿ ಸಮೀಪದ ಮೈಲಾಟಿಯಲ್ಲಿ ಹೊಸದುರ್ಗ ಎಕ್ಸೈಸ್  ಸರ್ಕಲ್ ಕಚೇರಿಯ ಇನ್‌ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ನೇತೃತ್ವದ ಅಬಕಾರಿ ಅಧಿಕಾರಿಗಳ ತಂಡ  ಮೊನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 2.010 ಕಿಲೋಗ್ರಾಂ ಗಾಂಜಾ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ  ಮೈಲಾಟಿ ಚೆರುಗರದ …

ಗಾಂಜಾ ಸಹಿತ ಓರ್ವ ಸೆರೆ

ಉಪ್ಪಳ: ಮಂಗಲ್ಪಾಡಿ ಬಳಿಯ ಬಂದ್ಯೋಡ್ ಅಡ್ಕದಲ್ಲಿ ನೂರು ಗ್ರಾಂ ಗಾಂಜಾ ಸಹಿತ ಓರ್ವನನ್ನು ಬಂಧಿಸ ಲಾಗಿದೆ. ಎಚ್.ಕೆ. ಅಬ್ದುಲ್ಲ (63) ಎಂಬಾತನನ್ನು ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ಇನ್ಸ್ ಪೆಕ್ಟರ್ ವಿಷ್ಣುಪ್ರಕಾಶ್ ಹಾಗೂ ತಂಡ ಬಂಧಿಸಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಶ್ರೀನಿವಾಸನ್ ಪತ್ತಿಲ್, ಪ್ರಿವೆಂಟಿವ್ ಆಫೀಸರ್‌ಗಳಾದ ಕೆ. ನೌಶಾದ್, ಅಜೀಶ್, ಪ್ರಜಿತ್, ಸಿಇಒಗಳಾದ ಮಂಜುನಾಥನ್, ರಾಜೇಶ್, ಸ್ವಾತಿ ಮೊದಲಾದವರು ತಂಡಲ್ಲಿದ್ದರು.

ಬಾಲಕನಿಗೆ ಸಲಿಂಗರತಿ ಕಿರುಕುಳ : ಓರ್ವ ಆರೋಪಿ ಸೆರೆ

ಕಾಸರಗೋಡು: 14ರ ಹರೆಯ ದ ಬಾಲಕನನ್ನು ಬೈಕ್‌ನಲ್ಲಿ ಕರೆದು ಕೊಂಡು ಹೋಗಿ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರ ಣದ  ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕುಂಟಿಕಾನ ನಿವಾಸಿ ಸಲ್ಮಾನ್ ಫಾರಿಸಿ ಅಬ್ದುಲ್ಲ (23) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಿದ್ದು ಆತನ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಬಾಲಕನನ್ನು ಬೈಕ್‌ನಲ್ಲಿ ಆಲಂಪಾಡಿ ಪರಿಸರದ  ಪೊದೆಯೊಂ ದಕ್ಕೆ ಕರೆದೊಯ್ದು ಆಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ವಿದ್ಯಾ ನಗರ ಪೊಲೀಸರು ಇಬ್ಬರ ವಿರುದ್ಧ …

ಕಟ್ಟೆಯಲ್ಲಿ ಕುಳಿತಿದ್ದ ಆಟೋ ಚಾಲಕ ಬಾವಿಗೆ ಬಿದ್ದು  ಸಾವು

ತಿರುವನಂತಪುರ: ಬಾವಿ ಕಟ್ಟೆಯಲ್ಲಿ ಕುಳಿತು ಮನೆಯವ ರೊಂದಿಗೆ ಮಾತನಾಡುತ್ತಿದ್ದ ಆಟೋ ಚಾಲಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತಿರುವನಂತಪುರ ಬಳಿಯ ರಲ್ಲಿಯೂರು ವಾರುವಿಳ ನಿವಾಸಿ ಸತೀಶನ್ (56) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 5.30ರ ವೇಳೆ ಇವರು ಕಟ್ಟೆಯಲ್ಲಿ ಕುಳಿತ ಮಾತನಾಡುತ್ತಿದ್ದಾಗ ೫೦ ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಕೂಡಲೇ ಅಗ್ನಿ ಶಾಮಕದಳ ತಲುಪಿ ಮೇಲಕ್ಕೆತ್ತಿ ದರೂ ಜೀವ ರಕ್ಷಿಸಲಾಗಲಿಲ್ಲ.

ಮಾದಕ ವಿರುದ್ಧ ರ‍್ಯಾಲಿಯ ಸಂಘಟಕನಾಗಿದ್ದ ಸಿಪಿಎಂ ನೇತಾರ ಎಂಡಿಎಂಎ ಸಹಿತ ಸೆರೆ

ಕಣ್ಣೂರು: ಸಿಪಿಎಂ ಲೋಕಲ್ ಕಮಿಟಿ ಸದಸ್ಯನನ್ನು ಎಂಡಿಎಂಎ ಸಹಿತ ಪೊಲೀಸರು ಸೆರೆ ಹಿಡಿದಿ ದ್ದಾರೆ. ವಳಪಟ್ಟಣಂ ಲೋಕಲ್ ಕಮಿಟಿ ಸದಸ್ಯ ವಿ.ಕೆ. ಶಮೀರ್ ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ 18 ಗ್ರಾಂ ಎಂಡಿಎಂಎ ವಶಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಸ್ನೇಹಿತನೊಂದಿಗೆ ಶಮೀರ್ ಕಾರಿನಲ್ಲಿ ಬರುತ್ತಿದ್ದಾಗ ಇರಿಟ್ಟಿ ಕೂಟುಪುಳದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಡಿವೈಎಫ್‌ಐ ಪ್ರಾದೇಶಿಕ ನೇತಾರ ನಾದ ಈತ ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ವಳಪಟ್ಟಣಂ ಗ್ರಾಮ ಪಂಚಾ ಯತ್‌ನ ೫ನೇ ವಾರ್ಡ್‌ನಲ್ಲಿ …

ತೂಮಿನಾಡಿನಲ್ಲಿ ಲಾರಿ ಅಪಘಾತ: ಚಾಲಕನ ಕಾಲು ತುಂಡರಿಸಲ್ಪಟ್ಟು ಆಸ್ಪತ್ರೆಗೆ

ಮಂಜೇಶ್ವರ: ತೂಮಿನಾಡಿನಲ್ಲಿ ಶನಿವಾರ ರಾತ್ರಿ 11 ಗಂಟೆಗೆ  ಲಾರಿ ಗಳೆರಡು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಚಾಲಕನ ಎರಡು ಕಾಲುಗಳು ತುಂಡರಿಸಲ್ಪಟ್ಟು ಲಾರಿಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಚಾಲಕನನ್ನು ಅಗ್ನಿಶಾಮಕದಳ ಹಾಗೂ ಊರವರ ಸಹಾಯದಿಂದ ಹೊರ ತೆಗೆಯಲಾಗಿದೆ. ಕಾಸರ ಗೋಡು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದ ಎರಡು ಲಾರಿಗಳು ತೂಮಿನಾಡು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಕರ್ನಾಟಕ ಅಂಕೋಲ ಬಾಳೆಗುರಿ ನಿವಾಸಿ ಅಕ್ಷಯ್ (30)ರನ್ನು ಕಾಲು ತುಂಡಾಗಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ …

ಶಿವಾಜಿನಗರದಲ್ಲಿ ಕಡಲ್ಕೊರೆತಕ್ಕೆ ಕಟ್ಟೆ, ಶೆಡ್ ಸಮುದ್ರಪಾಲು: ರಸ್ತೆ ಅಪಾಯದಂಚಿನಲ್ಲಿ

ಉಪ್ಪಳ: ಮಳೆ ಹೆಚ್ಚಾಗುತ್ತಿದ್ದಂತೆ ತೀರ ಪ್ರದೇಶದಲ್ಲಿ ಕಡಲ್ಕೊರೆತ ಮುಂದುವರಿಯುತ್ತಿದೆ. ಐಲ ಶಿವಾಜಿನಗರ ಶ್ರೀ ಶಾರದೋತ್ಸವ, ಗಣೇಶೋತ್ಸವ ಜಲಸ್ತಂಭನಾ ಕಟ್ಟೆ ಪೂರ್ತಿ ಸಮುದ್ರಪಾಲಾಗಿದ್ದು, ಇದರ ಪರಿಸರದಲ್ಲಿರುವ ಮೀನು ಕಾರ್ಮಿಕರ ಬಲೆ ಹಾಗೂ ಇತರ ಸಾಮಗ್ರಿಗಳನ್ನಿಡುವ ಕಾಂಕ್ರೀಟ್ ಶೆಡ್ ನೀರುಪಾಲಾಗುವ ಭೀತಿಯಲ್ಲಿದೆ. ಸಮೀಪದ ಕುದುಪುಳು, ಬಂಗ್ಲ ಎಂಬಲ್ಲಿ ಹಲವಾರು ಮರಗಳು ನೀರುಪಾಲಾಗಿವೆ. ಇಲ್ಲಿನ ರಸ್ತೆ ಅಪಾಯದಂಚಿನಲ್ಲಿದೆ. ಮಣಿಮುಂಡ, ಹನುಮಾನ್ ನಗರ, ಮುಸೋಡಿ, ಕುಂಡುಕೊಳಕೆ, ಕಣ್ವತೀರ್ಥ ಮೊದಲಾದ ಕಡೆಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಈ ಪರಿಸರ ನಿವಾಸಿಗಳು ಆತಂಕಿತರಾಗಿದ್ದಾರೆ.