ಶೋಚನೀಯಗೊಂಡ ಬೀರಂತಬೈಲು ರಸ್ತೆ: ಸಂಚಾರ ಸಮಸ್ಯೆಯಿಂದ ಬಳಲುತ್ತಿರುವ ಸ್ಥಳೀಯರು

ಕಾಸರಗೋಡು: ನಗರಸಭೆಯ ೩೩ನೇ ವಾರ್ಡ್‌ನ ಬೀರಂತಬೈಲು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಈ ರಸ್ತೆಯ ದುಸ್ಥಿತಿಯ ಬಗ್ಗೆ ವಾರ್ಡ್ ಕೌನ್ಸಿಲರ್ ವೀಣಾ ಅರುಣ್ ಶೆಟ್ಟಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ರಸ್ತೆ ಡಾಮರು ಕಿತ್ತು ಹೋಗಿ ಒಂದು ಸಮಸ್ಯೆಯಾದರೆ ಬದಿಯಲ್ಲಿ ಚರಂಡಿ ಇಲ್ಲದಿರುವುದು ಇನ್ನೊಂದು ಸಮಸ್ಯೆ. ಇದರ ಜೊತೆಯಲ್ಲಿ ಬೀರಂತಬೈಲಿಗೆ ಅಮೃತ್ ೨.೦ ಯೋಜನೆಯ ಕುಡಿಯುವ ನೀರು ವಿತರಣೆಗಾಗಿ ಪೈಪ್ ಹಾಕಲು ತೆಗೆದ ಹೊಂಡಗಳನ್ನು ಸರಿಯಾಗಿ ಮುಚ್ಚದಿರುವುದು ಇನ್ನೊಂದು ಸಮಸ್ಯೆ. ಇದೆಲ್ಲವುಗಳಿಂದಾಗಿ ಈ ರಸ್ತೆಯಲ್ಲಿ ಸಂಚಾರ ಸಮಸ್ಯೆ …

ಆರೋಗ್ಯ ವಲಯ ಐಸಿಯುವಿನಲ್ಲಿದೆ- ಕಾಂಗ್ರೆಸ್ ಆರೋಪ

ಮಂಜೇಶ್ವರ: ಕೇರಳದ ಎಡರಂಗ ಸರಕಾರದ ಆಡಳಿತದಿಂದ ಆರೋಗ್ಯ ಇಲಾಖೆಯು ಐಸಿಯುವಿನಲ್ಲಿ ಚಡಪಡಿಸುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳಿಲ್ಲ, ವೈದ್ಯರಿದ್ದರೆ ಸಹಾಯಕ ಸಿಬ್ಬಂದಿಗಳಿಲ್ಲ, ಎಲ್ಲವೂ ಇದ್ದರೆ ಔಷಧಿಯಿಲ್ಲ. ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಆರೋಪಿಸಿದ್ದಾರೆ. ಇವೆಲ್ಲಾ ಕೊರತೆಗಳ ನಡುವೆಯೂ ಎಡರಂಗ ಸರಕಾರ ಆರೋಗ್ಯ ವಲಯದಲ್ಲಿ ಕೇರಳ ನಂಬರ್ ವನ್ ಎಂದು ಎಗ್ಗಿಲ್ಲದೆ ಹೇಳಿ ನಡೆಯುತ್ತಿದೆ. ಆದರೆ ಮುಖ್ಯಮಂತ್ರಿಗಳೂ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಈ ನಂಬರ್‌ವನ್‌ನಲ್ಲಿ ನಂಬಿಕೆ ಕಳೆದುಕೊಂಡು ವಿದೇಶಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಚಿಕಿತ್ಸೆ …

ಸಿಪಿಎಂನಿಂದ ಕಾಂಗ್ರೆಸ್‌ಗೆ: ಪ್ರಚಾರ ಸತ್ಯಕ್ಕೆ ದೂರ- ಸಿಪಿಎಂ

ಪೈವಳಿಕೆ: ಬಾಯಾರು ನಿವಾಸಿ ಮುಸ್ತಫ ಎಂಬ ವ್ಯಕ್ತಿ ಸಿಪಿಎಂನಿಂದ ಕಾಂಗ್ರೆಸ್‌ಗೆ ಸೇರಿದ್ದಾರೆ ಎಂಬ ಪ್ರಚಾರ ಸತ್ಯಕ್ಕೆ ದೂರವಾಗಿದೆ ಎಂದು ಸಿಪಿಎಂ ತಿಳಿಸಿದೆ. ಈ ವ್ಯಕ್ತಿ ಸಕ್ರಿಯ ಮುಸ್ಲಿಂ ಲೀಗ್ ಕಾರ್ಯಕರ್ತ ನಾಗಿದ್ದು, ಸಿಪಿಎಂಗೂ ಇವರಿಗೂ ಯಾವುದೇ ಸಂಬಂಧವಿಲ್ಲವೆಂದು ಸಿಪಿಎಂ ಬಾಯಾರು ಲೋಕಲ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಕಾಂಗ್ರೆಸ್ ನಡೆಸುವ ಈ ಅಪ ಪ್ರಚಾರ ವನ್ನು ಜನರು ತಿಳಿದುಕೊಳ್ಳಬೇಕೆಂದು ಸಮಿತಿ ಕರೆ ನೀಡಿದೆ.

ಬದಿಯಡ್ಕ ಮಂಡಲ ಬಿಜೆಪಿ ವಿಕಸಿತ ಭಾರತ ಸಂಕಲ್ಪ ಸಭೆ

ಮುಳ್ಳೇರಿಯ: ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸದೇ  ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಿಂದೇಟು ಹಾಕುತ್ತಿರುವ ರಾಜ್ಯದ ಎಡರಂಗ ಸರಕಾರ ಹಾಗೂ ಐಕ್ಯರಂಗ ರಾಜ್ಯಕ್ಕೆ ಶಾಪವಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ನುಡಿದರು.  ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಜರಗಿದ ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಪಕ್ಷವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಪ್ರಭಾರಿ ವಿ.ಕೆ. ಸಜೀವನ್ ಮುಖ್ಯ …

ಹೃದಯಾಘಾತ: ವಿಮೆಕಂಪೆನಿ ಉದ್ಯೋಗಿ ನಿಧನ

ಕಾಸರಗೋಡು: ಹೃದಯಾಘಾತದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ನೇಶನಲ್ ಇನ್ಶೂರೆನ್ಸ್ ಕಂಪೆನಿ ಉದ್ಯೋಗಿ ಮೃತಪಟ್ಟರು. ಕೋಟಪ್ಪಾರದ ಬಿ. ನಾರಾಯಣನ್ (59) ಮೃತಪಟ್ಟವರು. ಕಾಸರಗೋಡು ಕಚೇರಿಯ ಸೀನಿಯರ್ ಅಸಿಸ್ಟೆಂಟ್ ಆಗಿದ್ದರು. ಬುಧವಾರ ಹೃದಯಾಘಾತವುಂಟಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ಉಲ್ಲಾಸ್, ಸ್ನೇಹ, ಸೊಸೆ ಶರಣ್ಯ, ಅಳಿಯ ಶ್ರೀನಾಥ್, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೊಲೀಸರ ಮೇಲೆ ಕೈಮಾಡಲೆತ್ನಿಸಿದ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಪೊಲೀಸರ ಮೇಲೆ ಕೈಮಾಡಲೆತ್ನಿಸಿದ ಪ್ರಕರಣದ ಆರೋಪಿ ಯನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ಬಂಧಿಸಿದ್ದಾರೆ. ಮೇಲ್ಪರಂಬ ಮಮ್ಮುಂಞಿ ಹಾಜಿ ಹೌಸ್‌ನ ಎಂ. ಎಚ್. ಮನಾಫ್ (34) ಬಂಧಿತ ಆರೋಪಿ. ಮೇಲ್ಪರಂಬ ದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕರು ಮತ್ತು ಕಾರಿನಲ್ಲಿ ಹೋಗುತ್ತಿದ್ದ ಮನಾಫ್ ಮಧ್ಯೆ ಪರಸ್ಪರ ವಾಗ್ವಾದ ನಡೆದಿತ್ತು. ಆಗ ಅದನ್ನು ನಿಯಂತ್ರಿಸಲು ಬಂದ ಪೊಲೀಸ್ ವಿಭಾಗದ ಪ್ಲೈಯಿಂಗ್ ಸ್ಕ್ವಾಡ್‌ನ ಪೊಲೀಸರ ಮೇಲೆ ಕೈಮಾಡಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟು ಮಾಡಿದ ಆರೋಪದಂತೆ …

ಜಿಲ್ಲೆಯ ಆರು ಕಡೆಗಳಲ್ಲಿ ಉಚಿತ ಡಯಾಲಿಸಿಸ್ ಸೌಕರ್ಯ

ಕಾಸರಗೋಡು: ಕಿಡ್ನಿ ರೋಗಿ ಗಳಿಗೆ ಡಯಾಲಿಸಿಸ್ ನಡೆಸಲು ಜಿಲ್ಲೆಯ ವಿವಿಧ ಬ್ಲೋಕ್, ನಗರಸಭೆಗಳಲ್ಲಾಗಿ ಆರು ಡಯಾಲಿಸಿಸ್ ಸೆಂಟರ್ ಕಾರ್ಯಾ ಚರಿಸುತ್ತಿದೆ. ಕಾಞಂಗಾಡ್ ಬ್ಲೋಕ್‌ನ ಪೆರಿಯ ಸಾಮಾಜಿಕ ಆರೋಗ್ಯ  ಕೇಂದ್ರ ದಲ್ಲೂ, ನೀಲೇಶ್ವರ ನಗರಸಭೆಯಲ್ಲಿ ನೀಲೇಶ್ವರ ತಾಲೂಕು ಆಸ್ಪತ್ರೆಯಲ್ಲೂ, ಪರಪ್ಪ ಬ್ಲೋಕ್‌ನ ಪುಡಂಗಲ್ಲು ತಾಲೂಕು ಆಸ್ಪತ್ರೆಯಲ್ಲೂ, ಮಂಜೇಶ್ವರ ಬ್ಲೋಕ್‌ನ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲೂ, ಕಾರಡ್ಕ ಬ್ಲೋಕ್‌ನಲ್ಲಿ ಮುಳಿಯಾರು ಕುಟುಂಬಾರೋಗ್ಯ ಕೇಂದ್ರದಲ್ಲೂ, ಕಾಸರಗೋಡು ನಗರ ಸಭೆಯ ಜನರಲ್ ಆಸ್ಪತ್ರೆಯಲ್ಲೂ ಡಯಾಲಿಸೀಸ್ ಕೇಂದ್ರ ಕಾರ್ಯಾಚರಿಸುತ್ತಿದೆ. ಜಿಲ್ಲಾ  ಪಂಚಾಯತ್, ಬ್ಲೋಕ್ ಪಂಚಾಯತ್, ನಗರಸಭೆ, …

ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ

ಮಾಯಿಪ್ಪಾಡಿ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಭವನದಲ್ಲಿ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಜರಗಿತು. ಯಕ್ಷಕವಿ ಶಿರೂರು ಪಣಿಯಪ್ಪಯ್ಯರ 108ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಗಡಿನಾಡು ಯಕ್ಷಗಾನ ಕವಿ ಶೇಡಿಗುಮ್ಮೆ ವಾಸುದೇವ ಭಟ್‌ರಿಗೆ ಫಣಿಗಿರಿ ಪ್ರತಿಷ್ಠಾನ ಶಿರೂರು ಇವರು  ಫಣಿಗಿರಿ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಉಮೇಶ ಶಿರೂರು ಉಪಸ್ಥಿತರಿದ್ದರು. ಹಳೆಯ ಯಕ್ಷಗಾನ ಧ್ವನಿ ಸುರುಳಿಗಳ ಸಂರಕ್ಷಕ ಎಂ.ಎಲ್. ಭಟ್ ಮರವಂತೆ ಇವರನ್ನು ಸಿರಿಬಾಗಿಲು ಪ್ರತಿಷ್ಠಾನದ …

ಸ್ವಾಮೀಜಿಯವರ ನೇತೃತ್ವದಲ್ಲಿ ಧರ್ಮಸಂದೇಶ ಯಾತ್ರೆ: ಸ್ವಾಗತಸಮಿತಿ ರೂಪೀಕರಣ ನಾಳೆ

ಕಾಸರಗೋಡು: ಸನಾತನ ಧರ್ಮದ ಮೌಲ್ಯ ಎತ್ತಿ ಹಿಡಿಯಲು, ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ತೊಡೆದುಹಾಕಲು ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಧರ್ಮಸಂದೇಶ ಯಾತ್ರೆ ಇದರ ಜಿಲ್ಲಾ ಸ್ವಾಗತ ಸಮಿತಿ ರೂಪೀಕರಣ ಸಭೆ ನಾಳೆ ಬೆಳಿಗ್ಗೆ ೯.೩೦ಕ್ಕೆ ವಿದ್ಯಾನಗರ ಚಿನ್ಮಯ ವಿದ್ಯಾಲಯದ ಸಿಬಿಸಿ ಸಭಾಂಗಣದಲ್ಲಿ ನಡೆಯಲಿದೆ. ಕೇರಳದ ವಿವಿಧ ಆಶ್ರಮಗಳ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಧರ್ಮಸಂದೇಶ ಯಾತ್ರೆ ಇಂದಿನಿಂದ ೨೧ರವರೆಗೆ ಕಾಸರಗೋಡಿ ನಿಂದ ತಿರುವನಂತಪುರವರೆಗೆ ನಡೆ ಯಲಿದೆ. ರಾಜ್ಯ ಮಟ್ಟದ ಸಮಿತಿಯಲ್ಲಿ ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಮುಖ್ಯ ಗೌರವಾಧ್ಯಕ್ಷೆಯಾಗಿ ಹಾಗೂ …

ಮನೆಯಿಂದ ಕಳವಿಗೆತ್ನ: ಮಗುವಿನ ಅಳು ಕೇಳಿ ಮನೆಯವರು ಎಚ್ಚೆತ್ತಾಗ ಪರಾರಿಯಾದ ಆರೋಪಿ ಗಂಟೆಗಳೊಳಗೆ ಸೆರೆ

ಕುಂಬಳೆ: ಮುಂಜಾನೆ ಹೊತ್ತಿನಲ್ಲಿ ಮನೆಗೆ ನುಗ್ಗಿ ಕಳವು ನಡೆಸಲೆತ್ನಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಗಂಟೆಗಳೊಳಗೆ ಬಂಧಿಸಿದ್ದಾರೆ. ಜೋಡುಕಲ್ಲು ಬಳಿಯ ಶಾಂತಿಯೋಡು ಕೆ.ಕೆ ನಗರ ನಿವಾಸಿಯೂ, ಈಗ ಕುಬಣೂರು ಸಫಾ ನಗರದ ಫ್ಲಾಟ್‌ನಲ್ಲಿ ವಾಸಿಸುವ ಕಲಂದರ್ ಶಾಫಿ (34) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮುಂಜಾನೆ 3 ಗಂಟೆ ವೇಳೆ ಜೋಡುಕಲ್ಲು ನಿವಾಸಿ  ಕೆ. ಹರೀಶ ಎಂಬವರ ಮನೆಗೆ ನುಗ್ಗಿ ಈತ ಕಳವಿಗೆ ಯತ್ನಿಸಿದ್ದನು. ಬಾಗಿಲು ತೆರೆದು ಒಳನುಗ್ಗಿದ ಆರೋಪಿ  ಕಳವಿಗೆತ್ನಿಸುತ್ತಿದ್ದ …