ಮನೆಗೆ ಗುಂಡು ಹಾರಾಟ: ತನಿಖೆ ತೀವ್ರ

ಮಂಜೇಶ್ವರ: ವರ್ಕಾಡಿ ಬಳಿ ಮನೆಯೊಂದರ ಮೇಲೆ ನಡೆದ ಗುಂಡು ಹಾರಾಟ ಪ್ರಕರಣದ ಬಗ್ಗೆ ತನಿಖೆ ತೀವ್ರಗೊಳಿಸಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಮನೆ ಯೊಳಗೆ ಪತ್ತೆಯಾದ ಮದ್ದುಗುಂಡನ್ನು ಫಾರೆನ್ಸಿಕ್ ತನಿಖೆಗಾಗಿ ಕೊಂಡೊ ಯ್ಯಲಾಗಿದೆ. ಗುಂಡು ಹಾರಿಸಿದ ವ್ಯಕ್ತಿಗಳ ಪತ್ತೆಗಾಗಿ ತನಿಖೆ ನಡೆಸಲಾ ಗುತ್ತಿದೆ. ಘಟನೆ ಬಳಿಕ ಆರೋಪಿಗಳು ಕಾರು ಹಾಗೂ ಸ್ಕೂಟರ್‌ಗಳಲ್ಲಿ ಪರಾರಿಯಾಗಿರುವುದಾಗಿ ಖಚಿತಪಡಿಸಲಾಗಿದೆ. ಅವುಗಳನ್ನು ಪತ್ತೆಹಚ್ಚಲು ವಿವಿಧ ಪ್ರದೇಶಗಳಲ್ಲಿರುವ ಸಿಸಿ ಕ್ಯಾಮರಾಗಳನ್ನೂ ಪರಿಶೀಲಿ ಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರ್ಕಾಡಿ ಜಂಕ್ಷನ್‌ಬಳಿಯ ನಲ್ಲೆಂಗಿಪದವು ನಿವಾಸಿ ಹರೀಶ ಬಿ.ಎಂ. …

ರಾಷ್ಟ್ರೀಯ ಹೆದ್ದಾರಿಯಿಂದ ಜನರೇಟರ್, ಡ್ರಿಲ್ಲಿಂಗ್ ಯಂತ್ರ ಕಳವು

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತಂದಿರಿಸಿದ್ದ ಜನರೇಟರ್ ಹಾಗೂ ಡ್ರಿಲ್ಲಿಂಗ್ ಯಂತ್ರವನ್ನು ಹಾಡಹಗಲೇ ಕಳವುನಡೆಸಲಾಗಿದೆ. ಬಂದ್ಯೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಿದ್ದ ಇವುಗಳನ್ನು ನಿನ್ನೆ ಮಧ್ಯಾಹ್ನ 2.15ರಿಂದ ಸಂಜೆ 5 ಗಂಟೆ ಮಧ್ಯೆ ಕಳವು ನಡೆಸಿರುವುದಾಗಿ ದೂರಲಾ ಗಿದೆ.  ಇದರಿಂದ ಸುಮಾರು 1.40 ಲಕ್ಷ ರೂಪಾಯಿ ನಷ್ಟಗೊಂಡಿರು ವುದಾಗಿ ತಿಳಿಸಲಾಗಿದೆ. ಕಳವುಬಗ್ಗೆ ಯುಎಲ್‌ಸಿಸಿಯ ಇಲೆಕ್ಟ್ರೀಶನ್ ರಜಿತ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತ್ತಿದ್ದಾರೆ.

14ರ ಬಾಲಕಿಗೆ ಕಿರುಕುಳ ನೀಡಿದ ಯುವಕ ಸೆರೆ: ಸಹಪಾಠಿ ವಿರುದ್ಧವೂ ಪೋಕ್ಸೋ ಕೇಸು

ಕಾಸರಗೋಡು: 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಹೊಸದರ್ಗ  ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಕಲ್ಲೂರಾವಿ ನಿವಾಸಿ ಮಶೂಕ್ (25) ಹಾಗೂ ಬಾಲಕಿಯ ಸಹಪಾಠಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮಶೂಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ 9ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಕೌನ್ಸಿಲಿಂಗ್‌ನಲ್ಲಿ ಕಿರುಕುಳ ನಡೆದಿರುವ ಬಗ್ಗೆ ಬಾಲಕಿ ಬಹಿರಂಗಪಡಿಸಿದ್ದಾಳೆ. ಇದರಂತೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಕಾರಡ್ಕ ಸಹಕಾರಿ ಸಂಘದಲ್ಲಿ ವಂಚನೆ: ನ್ಯಾಯಾಲಯದಲ್ಲಿ ಶರಣಾದ ಬಿಜೆಪಿ ನೇತಾರ

ಕಾಸರಗೋಡು: ಕಾರಡ್ಕ ಕೃಷಿ ಕ್ಷೇಮ ಸಹಕಾರಿ ಸಂಘದಲ್ಲಿ ನಡೆದ ವಂಚನೆ ಪ್ರಕರಣದಲ್ಲಿ 8ನೇ ಆರೋಪಿಯಾದ ಬಿಜೆಪಿ ನೇತಾರ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ. ಬಿಜೆಪಿ ಮಾಜಿ ಜಿಲ್ಲಾ ಸಮಿತಿ ಸದಸ್ಯನೂ, ಕಾಞಂಗಾಡ್ ನಗರಸಭೆಯ ಮಾಜಿ ಕೌನ್ಸಿಲರ್ ಆಗಿರುವ ಅಜಯ ಕುಮಾರ್ ನೆಲ್ಲಿಕಾಡ್ ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ದಲ್ಲಿ ಶರಣಾಗಿದ್ದಾನೆ. ನ್ಯಾಯಾಲಯ ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಸಹಕಾರಿ ಸಂಘದಿಂದ ಸೆಕ್ರಟರಿಯಾದ ಮಾಜಿ ಸಿಪಿಎಂ ಲೋಕಲ್ ಕಮಿಟಿ ಸದಸ್ಯ ಕರ್ಮಂ ತೋಡಿಯ ರತೀಶನ್ ಲಪಟಾಯಿಸಿದ ಚಿನ್ನಾಭರಣಗಳನ್ನು …

ಬ್ಯೂಟಿ ಪಾರ್ಲರ್‌ಗೆ ಹೋದ ಯುವತಿ ನಾಪತ್ತೆ

ಕಾಸರಗೋಡು: ಬ್ಯೂಟಿ ಪಾರ್ಲರ್‌ಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕಾಞಂಗಾಡ್ ಸೌತ್ ಕಲ್ಲಂಚಿರದ ಶಮ್ನ (18) ಎಂಬಾಕೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಮ್ನ ಕಾಞಂಗಾಡ್ ಸೌತ್‌ನಲ್ಲಿರುವ ಬ್ಯೂಟಿ ಪಾರ್ಲ ರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗುರುವಾರ ಬೆಳಿಗ್ಗೆ 10 ಗಂಟೆಗೆ ಬ್ಯೂಟಿ ಪಾರ್ಲರ್‌ಗೆಂದು ತಿಳಿಸಿ ಹೋದ ಆಕೆ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ಅಬಕಾರಿ ದಾಳಿ: ಗಾಂಜಾ, ಮದ್ಯ ಪತ್ತೆ; ಓರ್ವ ಸೆರೆ

ಕುಂಬಳೆ: ಕುಂಬಳೆ ರೇಂಜ್‌ನ ಅಬಕಾರಿ ತಂಡ ನಿನ್ನೆ ಎರಡೆಡೆಗಳಲ್ಲಾಗಿ ದಾಳಿ ನಡೆಸಿ ಗಾಂಜಾ ಮತ್ತು ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ಕಯ್ಯಾರು ಗ್ರಾಮದ ಪಚ್ಚಂಬಳದಲ್ಲಿ ಕುಂಬಳೆ ರೇಂಜ್‌ನ ಅಬಕಾರಿ  ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಶ್ರವಣ್ ಕೆ.ವಿ.ಯವರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 25 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ಪಚ್ಚಂಬಳದ ಅಬ್ದುಲ್ ರಹೀಂ (35) ಎಂಬಾತನನ್ನು ಬಂಧಿಸಲಾಗಿದೆ. ಗಾಂಜಾವನ್ನು ವಶಕ್ಕೆ ತೆಗೆದುಕೊಂಡು  ಕೇಸು ದಾಖಲಿಸ ಲಾಗಿದೆ. ಈ ಕಾರ್ಯಾಚರಣೆ ನಡೆ …

ಹಾರ್ಡ್‌ವೇರ್ ಅಂಗಡಿಗಳಿಂದ ಕಳವು ನಡೆಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ಕಳವು ಆರೋಪಿ ಸೆರೆ

ಕಾಸರಗೋಡು: ಕಾಸರಗೋಡು ಸಹಿತ ಐದು ಜಿಲ್ಲೆಗಳ ಹಾರ್ಡ್‌ವೇರ್ ವ್ಯಾಪಾರಿಗಳಿಗೆ ಬೆದರಿಕೆಯಾಗಿ ಪರಿಣಮಿಸಿದ್ದ ಕುಖ್ಯಾತ ಕಳವು ಆರೋಪಿಯನ್ನು ಬಂಧಿಸಲಾಗಿದೆ. ಇಡುಕ್ಕಿ ತೊಡುಪುಳ ಕರಿಂಕುನ್ನಂ ತೋಣಿಕತ್ತಡ ನಿವಾಸಿ ಜೋಮೋನ್ ಜೋಸೆಫ್ (50) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಪೇರಾವೂರ್ ಡಿವೈಎಸ್‌ಪಿ ಎಂ. ಅಜಾದ್‌ರ ಮೇಲ್ನೋಟದಲ್ಲಿ ಇನ್‌ಸ್ಪೆಕ್ಟರ್ ಪಿ.ಬಿ. ಸಜೀವನ್ ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಜೋಮೋನ್ ಜೋಸೆಫ್ ವಿರುದ್ಧ ಒಟ್ಟು 30ರಷ್ಟು ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. 2021ರಲ್ಲಿ ಪೇರಾವೂರ್ ಪೊಲೀಸರು ಈತನ ವಿರುದ್ಧ …

ಅಮಾನತಿಗೆ ತಡೆಯಾಜ್ಞೆ ಇಲ್ಲ: ರಿಜಿಸ್ಟ್ರಾರ್‌ಗೆ ಹಿನ್ನಡೆ; ಭಾರತಾಂಬೆಯನ್ನು ಧ್ವಜ ಹಿಡಿದ ಸ್ತ್ರೀ ಎಂಬ  ರೀತಿಯ ವಿಶ್ಲೇಷಣೆ ದೌರ್ಭಾಗ್ಯಕರ- ಹೈಕೋರ್ಟ್

ಕೊಚ್ಚಿ: ಕೇರಳ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ. ಕೆ.ಎಸ್. ಅನಿಲ್ ಕುಮಾರ್‌ರನ್ನು ಆ ಸ್ಥಾನದಿಂದ ಅಮಾನತುಗೊಳಿಸಿ ಪ್ರಸ್ತುತ ವಿ.ವಿಯ ಉಪ ಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ ಕೈಗೊಂಡ ಕ್ರಮಕ್ಕೆ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿ ಎನ್. ನಗರೇಶ್ ಒಳಗೊಂಡ ಹೈಕೋರ್ಟ್‌ನ ಏಕ ಸದಸ್ಯ ಪೀಠ ನಿರಾಕರಿಸಿದೆ. ತನ್ನನ್ನು ಅಮಾನತುಗೊಳಿಸಿದ ಉಪ ಕುಲಪತಿಯವರ ಕ್ರಮಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ    ಡಾ. ಕೆ.ಎಸ್. ಅನಿಲ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಬೇಡಿಕೆಯನ್ನು ಹೈಕೋರ್ಟ್ ಸದ್ಯ ಅಂಗೀಕರಿಸಿಲ್ಲ. ವಿಶ್ವ ವಿದ್ಯಾಲಯದ ಕಾಯ್ದೆಗಳ …

 ಹೊಳೆಯಲ್ಲಿ ಕಾಡಾನೆ ಮರಿಯ ಮೃತದೇಹ  ಪತ್ತೆ

ಕಾಸರಗೋಡು: ಕಾರ್ಯಂ ಗೋಡು ಹೊಳೆಯಲ್ಲಿ ಕಾಡಾನೆ ಮರಿಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ 5ಗಂಟೆ ವೇಳೆ ಚೆರುಪುಳ ಮೀನ್ ತುಳ್ಳಿ ಎಂಬಲ್ಲಿಗೆ ಸಮೀಪ ಹೊಳೆಯಲ್ಲಿ ಕಾಡಾನೆ ಮರಿಯ ಮೃತದೇಹ ನೀರಿನಲ್ಲಿ ತೇಲಿ ಬಂದಿದೆ.  ಇದನ್ನು ಕಂಡ ನಾಗರಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಇತ್ತೀಚೆಗಿನಿಂದ ಕರ್ನಾಟಕ ವನಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ವೇಳೆ ಹೊಳೆಗಿಳಿದ ಕಾಡಾನೆ ಮರಿ ಆಯತಪ್ಪಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಬಂದಿರುವುದಾಗಿ ಅಂದಾಜಿಸಲಾಗಿದೆ.

ಜುಲೈ 8ರಂದು ಖಾಸಗಿ ಬಸ್ ಸೂಚನಾ ಮುಷ್ಕರ

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಈ ತಿಂಗಳ 8ರಂದು ಖಾಸಗಿ  ಬಸ್ ಸೇವೆಗಳನ್ನು ನಿಲ್ಲಿಸಿ ಸೂಚನಾ ಮುಷ್ಕರ ಹೂಡಲಾಗುವುದೆಂದು ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್‌ನ ಕಾಸರಗೋಡು ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೀರ್ಘ ಕಾಲದಿಂದ ಸೇವೆ ನಡೆಸುತ್ತಿದ್ದ ಲಿಮಿಟೆಡ್ ಸ್ಟಾಪ್ ಬಸ್‌ಗಳು ಮತ್ತು ದೀರ್ಘದೂರ ಬಸ್‌ಗಳ ಪರ್ಮಿಟ್‌ಗಳನ್ನು ಸಕಾಲದಲ್ಲಿ ನವೀಕರಿಸಿ ನೀಡಬೇಕು, ಅರ್ಹತೆ ಹೊಂದಿರುವ ವಿದ್ಯಾರ್ಥಿ ಗಳಿಗೆ ಮಾತ್ರ ಯಾತ್ರಾ ದರದಲ್ಲಿ ರಿಯಾಯಿತಿ  ನೀಡಬೇಕು ಮತ್ತು ವಿದ್ಯಾರ್ಥಿಗಳ ಯಾತ್ರಾದರವನ್ನು  …