ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಮುಖ್ಯ ಆರೋಪಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸೆರೆ

ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ನಿವಾಸಿ ಬಿಜೆಪಿ ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಅವರನ್ನು ಕೊಲೆಗೈದ ಪ್ರಕರಣದ ಮುಖ್ಯ ಆರೋಪಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದಾನೆ. ಪೋಪುಲರ್ ಫ್ರಂಟ್ ಆಫ್ ಇಂ ಡಿಯಾ (ಪಿಎಫ್‌ಐ) ಕಾರ್ಯ ಕರ್ತ ಅಬ್ದುಲ್ ರಹ್‌ಮಾನ್ ಎಂಬಾತನನ್ನು ಎನ್‌ಐಎ ಸೆರೆ ಹಿಡಿದಿದೆ. ನಿನ್ನೆ ಸಂಜೆ 3.10ಕ್ಕೆ ದೋಹಾದಿಂದ ಬಂದ ವಿಮಾನದಲ್ಲಿ ಈತ ಕಣ್ಣೂರಿಗೆ ತಲುಪಿದ್ದನು. ಈ ವೇಳೆ ಈತನನ್ನು ಬಂಧಿಸಲಾಗಿದೆ. ಎರಡು ವರ್ಷಗಳಿಂದ ಈತ ಖತ್ತರ್‌ನಲ್ಲಿ ತಲೆಮರೆಸಿಕೊಂಡಿದ್ದನು. ಅಬ್ದುಲ್ ರಹ್‌ಮಾನ್ ಸಹಿತ …

ಎಡನೀರು ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ

ಎಡನೀರು: ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸಪ್ಟಂಬರ್ 7ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 10ರಂದು ಬೆಳಗ್ಗೆ 8ರಿಂದ ವ್ಯಾಸಪೂಜೆ, ಚಾತುರ್ಮಾಸ್ಯ ವ್ರತ ಸಂಕಲ್ಪ, ಹೋಮ ಗಳ ಪೂರ್ಣಾಹುತಿ ನಡೆಯಲಿದೆ. 9 ಗಂಟೆಯಿAದ 60 ದಿನಗಳ ಭಜನಾ ಕಾರ್ಯಕ್ರಮಕ್ಕೆ ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿ ಎಡನೀರು ಇವರಿಂದ ಭಜನೆಗೆ ಚಾಲನೆ, 11ರಿಂದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿ …

ನಿಧನ

ಉಪ್ಪಳ: ಮೂಲತಃ ಐಲ ರಾಗಿಹಿತ್ತಿಲು ನಿವಾಸಿ ಪ್ರಸ್ತುತ ಕರ್ನಾಟಕ ಸಜಿಪದಲ್ಲಿ ವಾಸವಾಗಿದ್ದ ನಾರಾಯಣ ಬೆಳ್ಚಾಡ ಕುಡೂರು (80) ನಿಧನ ಹೊಂದಿದರು. ಇವರು 30 ವರ್ಷಗಳ ಹಿಂದೆ ಉಪ್ಪಳ ಪರಿಸರದಲ್ಲಿ ನವರಾತ್ರಿ ವೇಷ ಹಾಕಿ ಎಲ್ಲರಿಗೂ ಪರಿಚಿತರಾಗಿದ್ದರು. ಮೃತರು ಪತ್ನಿ ಯಶೋಧ, ಮಕ್ಕಳಾದ ರಾಜೇಶ್, ರೇಶ್ಮಾ, ಸೊಸೆ ವಾಣಿಶ್ರೀ, ಅಳಿಯ ಮೋಹನ, ಸಹೋದರಿ ಜಾನಕಿ, ಸಹೋದರ ಐತ್ತಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಐಲ ಮಲಯಾಳಿ ಬಿಲ್ಲವ ಸಂಘ ಸಂತಾಪ ಸೂಚಿಸಿದೆ.

ಉಪ್ಪಳ, ಶಿರಿಯ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆ: ಎಲ್ಲೋ ಅಲರ್ಟ್ ಜ್ಯಾರಿ

ಉಪ್ಪಳ: ಧಾರಾಕಾರ ಮಳೆಯಿಂದಾಗಿ ಉಪ್ಪಳ ಮತ್ತು ಶಿರಿಯ ಹೊಳೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯತೊಡಗಿದ್ದು ಇದರಿಂದಾಗಿ ಜಲಮಟ್ಟ ಅಪಾಯಕಾರಿ ಸ್ಥಿತಿಯಲ್ಲಿ ಏರತೊಡಗಿದ್ದು, ಅದರಿಂದಾಗಿ ಪ್ರವಾಹದ ಭೀತಿ ಎದುರಾಗಿದೆ ಎಂದು ರಾಜ್ಯ ಕೃಷಿ ಇಲಾಖೆ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಈ ಎರಡು ಪ್ರದೇಶಗಳಲ್ಲಿ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ. ಹೊಳೆಗಳ ತೀರ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಗರಿಷ್ಠ ಜಾಗ್ರತೆ ಪಾಲಿಸಬೇಕು. ಹೊಳೆಗಳಿಗೆ ಇಳಿಯುವುದಾಗಲೀ, ಅದನ್ನು ದಾಟುವುದಾಗಲೀ ಮಾಡಬಾರ ದೆಂದು ಇಲಾಖೆ ಸ್ಪಷ್ಟಪಡಿಸಿದೆ.

ವೈದ್ಯಕೀಯ ಕಾಲೇಜು ಆಸ್ಪತ್ರೆ ಕುಸಿದು ಬಿದ್ದು ಕಾವನ್ನಪ್ಪಿದ ಮಹಿಳೆಯ ಕುಟುಂಬದ 4 ಬೇಡಿಕೆಗಳಿಗೆ ಅಂಗೀಕಾರ

ಕೋಟ್ಟಯಂ: ಕೋಟ್ಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಟ್ಟಡ ಕುಸಿದು ಬಿದ್ದು ಬಿಂದು ಎಂಬವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಅವರ ಕುಟುಂಬದವರು ಮುಂದಿರಿಸಿದ ೪ ಬೇಡಿಕೆಗಳನ್ನು ರಾಜ್ಯ ಸರಕಾರ ಅಂಗೀಕರಿಸಿದೆ. ಇದರಂತೆ ಆ ಕುಟುಂಬಕ್ಕೆ ತುರ್ತು ನೆರವಾಗಿ 50,000  ರೂ.ವನ್ನು ಸಚಿವ ವಾಸವನ್ ಬಿಂದುರ ಮನೆಗೆ ಆಗಮಿಸಿ ನೀಡಿದರು. ಬಿಂದುರ ಪುತ್ರಿ ನವಮಿಯ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರ ವಹಿಸುವುದಾಗಿ ಸಚಿವರು ತಿಳಿಸಿದರು. ಮಾತ್ರವಲ್ಲ ಅವರ ಪುತ್ರನಿಗೆ ವೈದ್ಯಕೀಯ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗ ನೀಡಲಾಗುವುದು. ಬಳಿಕ ಅದನ್ನು ಖಾಯಂಗೊಳಿಸಲಾಗುವುದು …

ಟಿಪ್ಪರ್ ಚಾಲಕ ಆಸಿಫ್ನ ಮರಣ ತನಿಖೆ ಸಿಬಿಐಗೆ ಒಪ್ಪಿಸಲು ಕಾಂಗ್ರೆಸ್ ಒತ್ತಾಯ

ಪೈವಳಿಕೆ: ಬಾಯಾರು ಗಾಳಿಯಡ್ಕದ ಟಿಪ್ಪರ್ ಚಾಲಕ ಮೊಹಮ್ಮದ್ ಆಸಿಫ್‌ನ ಅಸಹಜ ಸಾವು ಕೊಲೆ ಎಂದು ಸಂಶಯÁ ತೀತ ಸಾಬೀತಾಗಿದ್ದರೂ ತನಿಖೆ ಯನ್ನು ಪೂರ್ಣಗೊಳಿಸಿ ಆರೋಪಿ ಗಳನ್ನು ನೀತಿ ಪೀಠದ ಮುಂದೆ ತರುವಲ್ಲಿ ಕೇರಳದ ಪೊಲೀಸ್ ಇಲಾಖೆ ಸಂಪೂರ್ಣ ಪರಾಜಯಗೊಂಡಿದೆ ಎಂದು ಕುಂಬಳೆ ಲಕ್ಷ್ಮಣ ಪ್ರಭು ದೂರಿದರು. ಘಟನೆ ನಡೆದು ಆರು ತಿಂಗಳಾದರೂ ಯಾವುದೇ ಪುರಾವೆ ಕಂಡುಕೊಳ್ಳಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಕೇರಳ ಪೊಲೀಸರ ಬಗೆಗಿನ ವಿಶ್ವಾಸ ನಷ್ಟವಾಗಿದ್ದು ಈ ಪ್ರಕರಣವನ್ನು ಸಿಬಿಐಗೆ ಕೂಡಲೇ ನೀಡಬೇಕೆಂದು ಅವರು ಒತ್ತಾಯಿಸಿ …

ಆರೋಗ್ಯ ಸಚಿವೆ ರಾಜೀನಾಮೆಗೆ ಒತ್ತಾಯಿಸಿ ಬದಿಯಡ್ಕದಲ್ಲಿ ಕಾಂಗ್ರೆಸ್‌ನಿಂದ ಮೆರವಣಿಗೆ

ಬದಿಯಡ್ಕ: ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ರಾಜೀನಾಮೆ ನೀಡಬೇ ಕೆಂದು ಒತ್ತಾಯಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕರ್ಷಕ ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ತಿರುಪತಿ ಕುಮಾರ್ ಭಟ್ ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ …

ಆರೋಗ್ಯ ಸಚಿವೆ ವೀಣಾ ಜೋರ್ಜ್‌ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

ಪೈವಳಿಕೆ: ಕೇರಳದ ಆರೋಗ್ಯ ರಂಗ ಸಂಪೂರ್ಣ ಹದಗೆಟ್ಟಿದ್ದು ಕೋಟ್ಟಯಂ ಮೆಡಿಕಲ್ ಕಾಲೇಜಿನ ಕಟ್ಟಡ ಕುಸಿದು ಮಹಿಳೆ ಸಾವಿಗೀಡಾಗಿದ್ದ ಘಟನೆ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಕೇರಳದ ಆರೋಗ್ಯ ಸಚಿವೆ ವೀಣಾ ಜೋರ್ಜ್ ಕೂಡಲೇ ರಾಜೀನಾಮೆ ನೀಡಬೇಕೆಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಒತ್ತಾಯಿಸಿದರು. ಕೆಪಿಸಿಸಿ  ಸೂಚನೆ ಪ್ರಕಾರ ರಾಜ್ಯದಾದ್ಯಂತ ಸಚಿವರ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯಂಗವಾಗಿ  ಪೈವಳಿಕೆ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಪೈವಳಿಕೆ ನಗರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. …

ಚಿಕಿತ್ಸೆಗಾಗಿ ಮುಖ್ಯಮಂತ್ರಿ ಅಮೆರಿಕಕ್ಕೆ

ತಿರುವನಂತಪುರ: ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಮುಂಜಾನೆ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಿಕಿತ್ಸೆ ಕಳೆದು ಜುಲೈ 18ರ ಮೊದಲು ಮುಖ್ಯಮಂತ್ರಿ ಹಿಂತಿರುಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಯಾಗಲೀ, ಸಚಿವರಾಗಲೀ ವಿದೇಶಕ್ಕೆ ಹೋಗಲು ಕೇಂದ್ರ ಸರಕಾರದ ಅನುಮತಿ ಪಡೆಯಬೇಕಾಗಿದೆ. ಆದರೆ ಚಿಕಿತ್ಸೆಗೆ ಹೋಗುವುದಾದಲ್ಲಿ ಕೇಂದ್ರ ಸರಕಾರದ ಅನುಮತಿ ಕಡ್ಡಾಯವಲ್ಲ. ಅಮೆರಿಕಾಕ್ಕೆ ಹೋಗುವ ವಿಷಯವನ್ನು ಮುಖ್ಯಮಂತ್ರಿ ರಾಜ್ಯಪಾಲರಿಗೂ ತಿಳಿಸಿದ್ದಾರೆ.

ರೈಲು ನಿಲ್ದಾಣಗಳಲ್ಲಿ ಕನ್ನಡ ನಾಮಫಲಕ: ಗಡಿ ಅಭಿವೃದ್ಧಿ ಪ್ರಾಧಿಕಾರದ ಮನವಿಗೆ ಸ್ಪಂದನೆ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಜಿಲ್ಲೆಯ ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಸ್ಥಾಪಿಸಬೇಕೆಂದು ನೀಡಿದ ಮನವಿಗೆ ಫಲಪ್ರಾಪ್ತಿ ಲಭಿಸಿದೆ. ಭಾಷಾ ಅಲ್ಪಸಂಖ್ಯಾತ ಕಾರ್ಯಾಲಯ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಲಕ್ಕಾಡ್ ರೈಲ್ವೇ ವಿಭಾಗೀಯ ವ್ಯವಸ್ಥಾಪಕರಿಗೆ ನಿರ್ದೇಶ ನೀಡಿರುವುದಾಗಿ ಗಡಿ ಪ್ರಾಧಿಕಾರ ತಿಳಿಸಿದೆ. ಮಲಯಾಳ, ಆಂಗ್ಲ ಭಾಷೆಯೊಂದಿಗೆ ಕನ್ನಡದಲ್ಲೂ ರೈಲು ನಿಲ್ದಾಣಗಳಲ್ಲಿ ನಾಮಫಲಕ ಸ್ಥಾಪಿಸಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ  ಕಾಸರಗೋಡು ಜಿಲ್ಲಾಧಿಕಾರಿ, ರೈಲ್ವೇ ಇಲಾಖೆ ಹಾಗೂ ಕೇಂದ್ರ ಸರಕಾರದ ಭಾಷಾ …