ವಿದ್ಯುತ್ ಕಂಬಕ್ಕೆ ಬಳಿದ ಹಸಿರು ಬಣ್ಣವನ್ನು ಅಳಿಸಿದ ಪೊಲೀಸರು

ಕಾಸರಗೋಡು: ಮೊಗ್ರಾಲ್ ಪುತ್ತೂರು ಕುನ್ನಿಲ್‌ನಲ್ಲಿ ವಿದ್ಯುತ್ ಕಂಬಗಳಿಗೆ ವ್ಯಾಪಕವಾಗಿ ಹಸಿರು ಬಣ್ಣ ಬಳಸಲಾಗಿದ್ದು, ಇದನ್ನು ಗಮನಿಸಿದ ಪೊಲೀಸರು  ಅಂತಹ ಕಂಬಗಳಿಗೆ ಅದನ್ನು ಅಳಿಸಿ ಬಿಳಿ ಬಣ್ಣ ಬಳಿಯಲಾಗಿದೆ.  ರಾಜಕೀಯ ಪಕ್ಷವೊಂದು ಈ ಬಣ್ಣ ಬಳಿದಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮಾಲಿಯಲ್ಲಿ ಅಲ್‌ಖೈದಾ ಭಯೋತ್ಪಾದಕರ ದಾಳಿ: ಮೂವರು ಭಾರತೀಯರ ಅಪಹರಣ

ನವದೆಹಲಿ: ಮಾಲಿ ಗಣರಾಜ್ಯದ ಕೇಯ್ಸ್ನನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆ ಯಲ್ಲಿ ದುಡಿಯುತ್ತಿರುವ ಮೂವರು ಭಾರತೀಯ ಪ್ರಜೆಗಳನ್ನು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್‌ಖೈದಾ ಭಯೋತ್ಪಾದಕರ ಗುಂಪು ಅಪಹರಿಸಿದೆಯೆಂದು ವಿದೇಶಾಂಗ ಸಚಿವಾಲಯಕ್ಕೆ ನಿನ್ನೆ ತಡರಾತ್ರಿ ಮಾಹಿತಿ ಲಭಿಸಿದ್ದು ಇದು ಅತ್ಯಂತ ಗಂಭೀರ ವಿಷಯವಾಗಿದೆ ಯೆಂದು   ಹೇಳಿದೆ. ಕೇಯ್ಸ್ನನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಗೆ ಜುಲೈ 1ರಂದು  ಅಲ್‌ಖೈದಾ ಭಯೋತ್ಪಾ ದಕರು ಸಶಸ್ತ್ರದಾರಿಗಳಾಗಿ ನುಗ್ಗಿ  ದಾಳಿ ನಡೆಸಿ ಆ ಕಾರ್ಖಾನೆಯಲ್ಲಿ ದುಡಿ ಯುತ್ತಿರುವ ಮೂವರು ಭಾರತೀಯ ಪ್ರಜೆಗಳನ್ನು ಅಪಹರಿಸಿ ದ್ದಾರೆ. ಅವರನ್ನು ಈ …

ಬಳಾಲ್‌ನಲ್ಲಿ ಕಾರು ಮಗುಚಿದಾಗ ರಕ್ಷಿಸಲು ತಲುಪಿದ ಪೊಲೀಸ್ ತಂಡಕ್ಕೆ ಆಕ್ರಮಿಸಿದ ಯುವಕ ಸೆರೆ

ಹೊಸದುರ್ಗ: ಚರಂಡಿಗೆ ಮಗುಚಿದ ಕಾರಿನ ಪ್ರಯಾಣಿಕನನ್ನು ರಕ್ಷಿಸಲೆಂದು ತಲುಪಿದ ಪೊಲೀಸ್ ತಂಡವನ್ನು ಆಕ್ರಮಿಸಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಬಳಾಲ್ ಮಂಗಯ ನಡುತ್ತೋಡಿ ಹೌಸ್ ನಿವಾಸಿ ಅರ್ಜುನ್ ತಿಲಕ್ (30)ನನ್ನು ವೆಳ್ಳರಿಕುಂಡ್ ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ 1.10ರ ವೇಳೆ ಘಟನೆ ನಡೆದಿದೆ. ಈತ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮಂಗಯದಲ್ಲಿ ರಸ್ತೆ ಬದಿಯ ಚರಂಡಿಗೆ ಬಿದ್ದು ಅಪಘಾತ ಸಂಭವಿಸಿತ್ತು. ಈ ಮಧ್ಯೆ ಎಎಸ್‌ಐಟಿ ಮಧುರ ವರ ನೇತೃತ್ವದಲ್ಲಿ ನೈಟ್ ಪಟ್ರೋ ಲಿಂಗ್ ನಡೆಸುತ್ತಿದ್ದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿತು. …

ಚೇರಂಗೈ ಸಮುದ್ರ ಕಿನಾರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ: ಹೊಯ್ಗೆ ತುಂಬಿಸಿದ ಗೋಣಿ ಗೋಡೆ ನಿರ್ಮಿಸಿ ತಾತ್ಕಾಲಿಕ ಪರಿಹಾರ

ಕಾಸರಗೋಡು: ನಗರದ ಚೇರಂಗೈ ಸಮುದ್ರ ಕಿನಾರೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಅದನ್ನು ತಡೆಗಟ್ಟಲು ಗೋಣಿ ಚೀಲಗಳಲ್ಲಿ  ಹೊಯ್ಗೆ ತುಂಬಿಸಿದ  ಗೋಡೆ ನಿರ್ಮಿಸಿ ಈಗ ತಾತ್ಕಾಲಿಕ ಪರಿಹಾರ ಕಂಡುಕೊ ಳ್ಳಲಾಗಿದೆ.  ಈ ಪ್ರದೇಶದಲ್ಲಿ ಕಡಲ್ಕೊರೆತ ಪ್ರತೀ ಮಳೆಗಾಲದ ವೇಳೆ ಉಂಟಾಗುತ್ತಿದೆ.  ಇದರಿಂದಾಗಿ ಅಲ್ಲಿನ ಸುತ್ತಮುತ್ತಲ ಹಲವು ಮನೆಗಳಿಗೆ ಬೆದರಿಕೆ ಎದುರಾಗಿದೆ. ಈ ಹಿಂದಿನ ವರ್ಷಗಳಲ್ಲಿ ಹಲವು ಮನೆಗಳು ಹಾನಿಗೊಂಡಿದ್ದವು. ಇದಕ್ಕೆ ಈತನಕ ಶಾಶ್ವತ ಪರಿಹಾರ ಕಂಡುಕೊಳ್ಳ ಲಾಗಿಲ್ಲ. ಕಾಸರಗೋಡು ಲೈಟ್ ಹೌಸ್‌ನ ಬಳಿಯಲ್ಲಿ ಇಂತಹ ಬೆದರಿಕೆ ಉಂಟಾಗಿದ್ದು, ಅದನ್ನು ತಡೆಗಟ್ಟಲು …

ಕರಂದಕ್ಕಾಡಿನಲ್ಲಿ ಪೊಲೀಸರ ವಿರುದ್ಧ ಆಕ್ರಮಣ: 5 ಮಂದಿ ಸೆರೆ; ಉಳಿದವರಿಗಾಗಿ ಶೋಧ

ಕಾಸರಗೋಡು: ಬಹಿರಂಗ ಮದ್ಯಪಾನ ತಡೆಯಲು ಯತ್ನಿಸಿದ ಎಸ್‌ಐ ಹಾಗೂ ತಂಡವನ್ನು ತಡೆದು ನಿಲ್ಲಿಸಿರುವುದಾಗಿ ದೂರಲಾಗಿದೆ. ಕಾಸರಗೋಡು ನಗರಠಾಣೆ ಎಸ್‌ಐ ಎನ್. ಅನ್ಸಾರ್‌ರ ದೂರಿನಂತೆ ೧೨ ಮಂದಿ ವಿರುದ್ಧ ಕೇಸು ದಾಖಲಿಸ ಲಾಗಿದೆ. ಈಗಾಗಲೇ 5 ಮಂದಿ ಯನ್ನು ಬಂಧಿಸಲಾಗಿದೆ. ಉಳಿದವರಿ ಗಾಗಿ ಹುಡುಕಾಟ ಮುಂದುವರಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕರಂದಕ್ಕಾಡ್‌ನ ಸನತ್ (45), ಚಂದ್ರಹಾಸ (38), ಶಿವಾಜಿನಗರದ ಸಂದೀಪ್ (29), ಕೂಡ್ಲುವಿನ ಸೂರ್ಯದಾಸ್ (36), ರಾಮ್ ದಾಸ್ ನಗರದ ದೀಪಕ್ (34) ಬಂಧಿತರು. ಆದಿತ್ಯವಾರ ಮಧ್ಯಾಹ್ನ 1 …

ಆರು ತಿಂಗಳ ಹಿಂದೆ ಎರ್ನಾಕುಳಂಗೆ ತೆರಳಿದ ವ್ಯಕ್ತಿ ನಾಪತ್ತೆ: ಮಾಹಿತಿ ಲಭಿಸಿದವರು ಪೊಲೀಸರಿಗೆ ತಿಳಿಸುವಂತೆ ವಿನಂತಿ

ಬದಿಯಡ್ಕ: ಆರು ತಿಂಗಳ ಹಿಂದೆ  ಎರ್ನಾಕುಳಂಗೆಂದು ತಿಳಿಸಿ ಹೋದ ವ್ಯಕ್ತಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಬದಿಯಡ್ಕ ಬಳಿಯ ಬಾಂಜತ್ತಡ್ಕ ನಿವಾಸಿ ಸುರೇಂದ್ರನ್ (60) ಎಂಬವರು ನಾಪತ್ತೆಯಾಗಿ ರುವುದಾಗಿ ಬದಿಯಡ್ಕ ಪೊಲೀಸರಿಗೆ ಸಂಬಂಧಿಕರು ದೂರು ನೀಡಿದ್ದಾರೆ.  ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರು ತಿಂಗಳ ಹಿಂದೆ ಸುರೇಂದ್ರನ್‌ರಿಗೆ ಎರ್ನಾಕುಳಂನಿಂದ ಫೋನ್ ಕರೆಯೊಂದು  ಬಂದಿತ್ತೆನ್ನಲಾಗಿದೆ. ಅನಂತರ ಎರ್ನಾಕುಳಂಗೆ ಹೋಗುವುದಾಗಿ ತಿಳಿಸಿ ಸುರೇಂದ್ರನ್ ತೆರಳಿದ್ದರು. ಬಳಿಕ ಅವರ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ …

ಜನವಾಸ ಕೇಂದ್ರ ಬಳಿ ಅನಧಿಕೃತವಾಗಿ ಕಾರ್ಯಾಚರಿಸುವ ಹಂದಿ ಫಾರ್ಮ್ ವಿರುದ್ಧ ಎನ್‌ಫೋರ್ಸ್‌ಮೆಂಟ್ ಕ್ರಮ

ವರ್ಕಾಡಿ: ಪಂಚಾಯತ್‌ನ ಬೇಕರಿ ತೌಡುಗೋಳಿ ಮುಖ್ಯರಸ್ತೆಯ ಬಳಿ ಪರವಾನಗಿ ರಹಿತವಾಗಿ ಕಾರ್ಯಾಚರಿಸುವ ಖಾಸಗಿ ಹಂದಿ ಫಾರ್ಮ್‌ಗೆ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಪರಿಶೀಲನೆ ಯಲ್ಲಿ ಗಂಭೀರ ಕಾನೂನು ಉಲ್ಲಂಘನೆ ನಡೆದಿರುವುದಾಗಿ ಪತ್ತೆಹಚ್ಚಲಾಗಿದೆ. ೫೦೦ಕ್ಕೂ ಅಧಿಕ ಹಂದಿಗಳನ್ನು ಸಾಕುವ ಫಾರ್ಮ್‌ನಿಂ ದಿರುವ ಮಲಿನ ಜಲ ಫಾರ್ಮ್ ಮಾಲಕನ ಸ್ಥಳದಲ್ಲಿಯೇ ಬಹಿರಂಗ ವಾಗಿ ಹೊಂಡಕ್ಕೆ ಹರಿಯಬಿಡುವು ದನ್ನು ಪತ್ತೆಹಚ್ಚಲಾಗಿದೆ. ಇದರಿಂದ ಕೆಳಗಿನ ಸ್ಥಳಗಳಲ್ಲಿ ಹರಿಯುವ ಜಲಮೂಲಗಳಿಗೆ ಫಾರ್ಮ್‌ನ ಮಲಿನ ಜಲ ಹರಿದು …

ವ್ಯಾಪಕ ಅವ್ಯವಹಾರ ಆರೋಪಿಸಿ ಕುಂಬಳೆ ಪಂಚಾಯತ್‌ಗೆ ಬಿಜೆಪಿ ಮಾರ್ಚ್

ಕುಂಬಳೆ: ಪಂಚಾಯತ್‌ನಲ್ಲಿ ಮುಸ್ಲಿಂಲೀಗ್, ಕಾಂಗ್ರೆಸ್, ಎಸ್‌ಡಿಪಿಐ ನೇತೃತ್ವದ ಆಡಳಿತ ಸಮಿತಿ  ವ್ಯಾಪಕ ಭ್ರಷ್ಟಾಚಾರ ನಡೆಸಿರುವುದಾಗಿ ಆರೋಪಿಸಿ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಪಂ. ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸ ಲಾಯಿತು.  ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣದ ವಿಚಾರದಲ್ಲಿ ೪೦ ಲಕ್ಷ ರೂ. ಮೊತ್ತ ವಿನಿಯೋಗಿಸಿ ಅವ್ಯವಹಾರ ನಡೆದಿದ್ದು, ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾ ಮಾರ್ಚ್ ಉದ್ಘಾಟಿಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಆಗ್ರಹಿಸಿದರು. ಬಿಜೆಪಿ ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ ಅಧ್ಯಕ್ಷತೆ ವಹಿಸಿದರು. …

ಶಾಲಾ ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಶಾಲಾ ಕಟ್ಟಡ ನಿರ್ಮಾಣ ವೇಳೆ  ಕುಸಿದು ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.  ಬೇಕಲ ಮವ್ವಲ್‌ನ ಬಿ.ಎಂ. ಬಶೀರ್ (52) ಮೃತಪಟ್ಟ ವ್ಯಕ್ತಿ. ಪಿಲಿಕ್ಕೋಡ್ ಸರಕಾರಿ ಯುಪಿ ಶಾಲೆ ಕಟ್ಟಡದ ನಿರ್ಮಾಣ ಕೆಲಸದಲ್ಲಿ ಬಶೀರ್ ನಿರತರಾಗಿದ್ದರು.  ನಿನ್ನೆ ಸಂಜೆ ಕೆಲಸದ ವೇಳೆ ಕುಸಿದುಬಿದ್ದ ಇವರನ್ನು ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೂ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಚಂದೇರ ಪೊಲೀಸರು ಅಸಹಜ ಸಾವು ಪ್ರಕರಣ ದಾಲಿಸಿಕೊಂಡಿದ್ದಾರೆ. ದಿ| ವಿ.ಎಂ. ಮುಹಮ್ಮದ್-ಆಯಿಷಾ ದಂಪತಿಯ ಪುತ್ರನಾದ …

ಡೆಪ್ಯುಟಿ ತಹಶೀಲ್ದಾರ್ ಹಲ್ಲೆ ಪ್ರಕರಣ: ಶಾಸಕ ಅಶ್ರಫ್ ಸಹಿತ 3 ಮಂದಿಗೆ ಸಜೆ, ದಂಡ

ಮಂಜೇಶ್ವರ: 15 ವರ್ಷಗಳ ಹಿಂದೆ ಮಂಜೇಶ್ವರದಲ್ಲಿ ಡೆಪ್ಯುಟಿ ತಹಶೀಲ್ದಾರ್‌ರನ್ನು ತಡೆದು ಹಲ್ಲೆಗೈದ ಪ್ರಕರಣದಲ್ಲಿ ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್ ಮತ್ತು ಐಯುಎಂಎಲ್ ಕಾರ್ಯಕರ್ತರಾಗಿರುವ ಬಷೀರ್ ಅಬ್ದುಲ್ಲ ಖಾಜಿ, ಕಾಯಿಂಞಿ ಯಾನೆ ಅಬ್ದುಲ್ ಖಾದರ್‌ರಿಗೆ ಕಾಸರಗೋಡು ನ್ಯಾಯಾಲಯ ಸಜೆ ಹಾಗೂ ದಂಡ ವಿಧಿಸಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಶಾಸಕ ಅಶ್ರಫ್ ತಿಳಿಸಿದ್ದಾರೆ. 3 ತಿಂಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ಪಾವತಿಸಲು ನ್ಯಾಯಾಲಯ ಆರೋಪಿಗಳಿಗೆ ಆದೇಶಿಸಿದ್ದು, ದಂಡ ಪಾವತಿಸದಿದ್ದರೆ ಒಂದು ತಿಂಗಳು …