ಗಂಭೀರ ಸ್ಥಿತಿಯಲ್ಲಿ ಮುಂದುವರಿಯುತ್ತಿರುವ ವಿ.ಎಸ್.ರ ಆರೋಗ್ಯ

ತಿರುವನಂತಪುರ: ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದರ ಆರೋಗ್ಯ ಸ್ಥಿತಿ ಗಂಭೀರವಾಗಿ ಮುಂದುವರಿಯುತ್ತಿದೆ. ವೆಂಟಿಲೇಟರ್‌ನ ಸಹಾಯದೊಂದಿಗೆ ಈಗ ಜೀವ ಉಳಿಸಲಾಗಿದೆ. ಸತತವಾಗಿ ಡಯಾಲಿಸಿಸ್ ನಡೆಸಲು ಮೆಡಿಕಲ್ ಬೋರ್ಡ್ ಸೂಚಿಸಿದೆ. ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾದ ಹಿನ್ನೆಲೆಯಲ್ಲಿ ನಿನ್ನೆ ಎರಡು ಬಾರಿ ಡಯಾಲಿಸಿಸ್ ಮೊಟಕುಗೊಂಡಿದೆ. ರಕ್ತದೊತ್ತಡ ಹಾಗೂ ಮೂತ್ರಕೋಶಗಳ ಚಟುವಟಿಕೆಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಚಿಕಿತ್ಸೆ ಮುಂದುವರಿಯುತ್ತಿದೆ. ಜೂನ್ ೨೩ರಂದು ಹೃದಯಾ ಘಾತದ ಹಿನ್ನೆಲೆಯಲ್ಲಿ ವಿ.ಎಸ್.ರನ್ನು ತಿರುವನಂತಪುರ ಎಸ್‌ಯುಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಐ.ಎಂ.ಎ ಯಿಂದ ವೈದ್ಯರ ದಿನಾಚರಣೆ, ಪುರಸ್ಕಾರ ಪ್ರದಾನ

ಕಾಸರಗೋಡು: ಇಂಡ್ಯನ್ ಮೆಡಿಕಲ್ ಅಸೋಸಿಯೇಶನ್ ಬ್ರಾಂಚ್ ಕಮಿಟಿ  ನೇತೃತ್ವದಲ್ಲಿ ವೈದ್ಯರ ದಿನ ಆಚರಿಸಲಾಯಿತು. ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜ್ ಡೀನ್ ಡಾ| ಸಂದೀಪ್ ರೈ ಉದ್ಘಾಟಿಸಿದರು. ಐಎಂಎ ಅಧ್ಯಕ್ಷ ಡಾ| ಹರಿಕಿರಣ್ ಟಿ ಬಂಗೇರ ಅಧ್ಯಕ್ಷತೆ ವಹಿಸಿದರು.  ಹಿರಿಯ ವೈದ್ಯರುಗಳಾದ  ಡಾ| ನಾರಾಯಣ ನಾಯ್ಕ್ ವೈ.ಎ, ಡಾ| ರಾಫಿ ಎ ಅಹಮ್ಮದ್ ಎಂಬಿವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾ ಯಿತು. ಪಾರಾ ಮೆಡಿಕಲ್ ವಲಯದಲ್ಲಿ ಉತ್ತಮ ಸೇವೆಗೈದ ಜನರಲ್ ಆಸ್ಪತ್ರೆಯ ನಿವೃತ್ತ ನರ್ಸಿಂಗ್ ಸುಪರಿನ್‌ಟೆಂಡೆಂಟ್  ಕೆ. ಕಮಲಾಕ್ಷಿ ಯವರಿಗೆ  ಕ್ಯಾ| …

ಕುತ್ತಿಗೆಗೆ ಹಗ್ಗ ಸಿಲುಕಿ ಒದ್ದಾಡುತ್ತಿದ್ದ ದನವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಿದ ಅಗ್ನಿಶಾಮಕ ದಳ

ಮಂಜೇಶ್ವರ: ದನವೊಂದರ ಕುತ್ತಿಗೆಯಲ್ಲಿ ಹಗ್ಗ ಬಿಗಿದು ಜೀವನ್ಮರಣ ಹೋರಾಟದಲ್ಲಿದ್ದಾಗ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ದನವನ್ನು ಪಾರು ಮಾಡಿದ್ದಾರೆ. ಮಂಜೇಶ್ವರ ಬಳಿಯ ಚೌಕಿಯಲ್ಲಿ ಮಂಗಳವಾರ ರಾತ್ರಿ ದನವೊಂದರ ಕುತ್ತಿಗೆಯಲ್ಲಿ ಹಗ್ಗ ಬಿಗಿದುಕೊಂಡು ಒದ್ದಾಡುತ್ತಿರುವ ದೃಶ್ಯ ಊರವರು ಕಂಡಿದ್ದರು. ಆದರೆ ಹತ್ತಿರ ಹೋಗಲು ಬಿಡದ ಕಾರಣ ಉಪ್ಪಳ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅವರು ತಲುಪಿ ಊರವರ ಸಹಾಯದಿಂದ ಸಾಹಸಿಕವಾಗಿ ದನವನ್ನು ಹಿಡಿದು ಹಗ್ಗವನ್ನು ತೆರವುಗೊಳಿಸಿದ್ದಾರೆ. ಬಳಿಕ ಗಾಯಕ್ಕೆ ಔಷಧಿ ಹಚ್ಚಲಾಗಿದೆ. ಆದರೆ ಇದು ಯಾರ ದನವೆಂದು ಮಾಹಿತಿ ಲಭಿಸಿಲ್ಲ. …

ಪುತ್ರಿಯ ರಾತ್ರಿ ಸಂಚಾರ: ವಾಗ್ವಾದದಲ್ಲಿ ತಂದೆಯಿಂದ ಕೊಲೆ

ಆಲಪ್ಪುಳ: ಓಮನಪ್ಪುಳ ಕೊಲೆ ಕೃತ್ಯದಲ್ಲಿ ಭಯಗೊಳಿಸುವ ಮಾಹಿತಿ ಗಳು ಬಹಿರಂಗಗೊಂಡಿದೆ. ಮನೆಮಂ ದಿಯ ಮುಂದೆ ಆರೋಪಿ ಜೋಮೋನ್ ಪುತ್ರಿ ಜಾಸ್ಮಿನ್‌ರನ್ನು ಕುತ್ತಿಗೆ ಬಿಗಿದು ಕೊಲೆಗೈದಿರುವುದಾಗಿ ಮಾಹಿತಿ ಬಹಿರಂಗಗೊಂಡಿದೆ. ಜಾಸ್ಮಿನ್ ಅರೆಪ್ರಜ್ಞೆಯಲ್ಲಿ ಆದ ಬಳಿಕ ಈತ ಮನೆಮಂದಿಯಲ್ಲಿ ಅಲ್ಲಿಂದ ತೆರಳಲು ಆಗ್ರಹಿಸಿದ್ದು, ಬಳಿಕ ಕುತ್ತಿಗೆಗೆ ಬೈರಾಸು ಬಿಗಿದು ಸಾವು ಖಚಿತಪಡಿಸಿದ್ದನೆನ್ನ ಲಾಗಿದೆ. ಪುತ್ರಿ ಏಂಜಲ್ ಸಾಮಾನ್ಯವಾಗಿ ರಾತ್ರಿ ಪ್ರಯಾಣ ನಡೆಸುತ್ತಿರುವುದರ ಬಗ್ಗೆ ಸ್ಥಳೀಯರು ಜೋಸ್‌ಮೋನ್‌ಗೆ ತಿಳಿಸಿದ್ದರು. ಮಂಗಳವಾರ ರಾತ್ರಿ ಸ್ಕೂಟರ್‌ನಲ್ಲಿ ಹೊರಹೋದ ಯುವತಿ ಮತ್ತೆ ರಾತ್ರಿ ಹತ್ತೂವರೆ ಗಂಟೆಗೆ …

ಸಂಸ್ಕೃತ ಅಧ್ಯಾಪಕರಿಂದ ಉಪಜಿಲ್ಲಾ ವಿದ್ಯಾಧಿಕಾರಿಗೆ ಪ್ರತಿಭಟನಾ ಮನವಿ ಸಲ್ಲಿಕೆ

ಉಪ್ಪಳ: ಸಂಸ್ಕೃತದ ಅಭಿವೃದ್ಧಿಗೆ, ಪ್ರಚಾರಕ್ಕೆ ಹಾಗೂ ಪ್ರೋತ್ಸಾಹಕ್ಕಾಗಿ ಕೊಡಲ್ಪಡುವ ಎಲ್‌ಪಿ, ಯುಪಿ ವಿಭಾಗದ ಸಂಸ್ಕೃತ ಸ್ಕಾಲರ್‌ಶಿಪ್ ಇದುವರೆಗೂ ವಿತರಿಸಲಿಲ್ಲವೆಂದು ಕೇರಳ ಸಂಸ್ಕೃತ ಅಧ್ಯಾಪಕ ಫೆಡರೇಶನ್ ರಾಜ್ಯ ಸಮಿತಿ ದೂರಿದೆ. ಕೇರಳ ಸರಕಾರದ ಈ ಧೋರಣೆಯನ್ನು ಸಂಘಟನೆಯ ಮಂಜೇಶ್ವರ ಉಪಜಿಲ್ಲಾ ಘಟಕ ಖಂಡಿಸಿದ್ದು, ಸಂಘಟನೆಯ ವತಿಯಿಂದ ಉಪಜಿಲ್ಲಾ ವಿದ್ಯಾಧಿಕಾರಿಗೆ ಪ್ರತಿಭಟನಾ ಮನವಿ ಸಲ್ಲಿಸಲಾಯಿತು. ತಂಡದಲ್ಲಿ  ರಾಜ್ಯ ಸಮಿತಿ ಸದಸ್ಯ ಮಧು ಮಾಸ್ತರ್, ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣ ಪ್ರಸಾದ್, ಪ್ರಸೀದ, ಉಪಜಿಲ್ಲಾ ಪದಾಧಿಕಾರಿಗಳಾದ ಮಹೇಶ್ ಕೃಷ್ಣ ತೇಜಸ್ವಿ, ಶ್ರೀಲಕ್ಷ್ಮಿ, …

ಪೋಕ್ಸೋ ಪ್ರಕರಣ ಆರೋಪಿಗೆ ಎಂಟು ವರ್ಷ ಸಜೆ, ದಂಡ

ಕಾಸರಗೋಡು: 13ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ ಎಂಟು ವರ್ಷ ಕಠಿಣ ಸಜೆ ಹಾಗೂ 21,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಕುತ್ತಿಕ್ಕೋಲ್ ವಳವಿಲ್ ವಳ್ಳಿವಳಪ್ಪಿಲ್ ಹೌಸ್‌ನ ಪಿ. ಬಾಬು (61) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಮತ್ತು ಒಂದು ತಿಂಗಳು ಹೆಚ್ಚುವರಿ ಸಜೆ  ಅನುಭವಿಸ ಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2023 ಮಾರ್ಚ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ …

ಒಂದು ವರ್ಷ ಹಿಂದೆ ಕಳವು ನಡೆದ ಮನೆಗೆ ಮತ್ತೆ ನುಗ್ಗಿದ ಕಳ್ಳರು

ಮಂಜೇಶ್ವರ: ಒಂದು ವರ್ಷದ ಹಿಂದೆ ಕಳವು ನಡೆದ ಮನೆಗೆ ಕಳ್ಳರು ಮತ್ತೆ ನುಗ್ಗಿದ ಘಟನೆ ನಡೆದಿದೆ. ಮಂಜೇಶ್ವರ ಮಚ್ಚಂಪಾಡಿಯ ಅನಿವಾಸಿ ಇಬ್ರಾಹಿಂ ಖಲೀಲ್‌ರ ಮನೆಗೆ ಕಳೆದ ಸೋಮವಾರ ರಾತ್ರಿ ಕಳ್ಳರು ನುಗ್ಗಿದ್ದಾರೆ.  ಮನೆಯ ಮೇಲಿನ ಮಹಡಿಗೆ ಹತ್ತಿದ ಕಳ್ಳರು ಅಲ್ಲಿನ ಬಾಗಿಲು ಮುರಿದು  ಮನೆಯೊಳಗೆ ಪ್ರವೇಶಿಸಿದ್ದಾರೆ. ಆದರೆ ಮನೆಯಲ್ಲಿ ಬೆಲೆಬಾಳುವ  ಸೊತ್ತುಗಳು ಲಭಿಸದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಸಹಿತ  ಇಲೆಕ್ಟ್ರಾನಿಕ್ ಉಪಕರಣಗಳನ್ನು ಕಳ್ಳರು ದೋಚಿದ್ದಾರೆ. ಇದೇ ವೇಳೆ ಗಲ್ಫ್‌ನಿಂದ ಊರಿಗೆ ಬರುತ್ತಿದ್ದ ಇಬ್ರಾಹಿಂ ಖಲೀಲ್ ಹಾಗೂ ಕುಟುಂಬ …

ಮಸೀದಿಯಿಂದ 3.10 ಲಕ್ಷ ರೂ, ಚಿನ್ನ ಕಳವು

ಕಾಸರಗೋಡು: ಮಸೀದಿಗೆ ಕಳ್ಳರು ನುಗ್ಗಿ 3,10,000 ರೂ. ನಗದು ಮತ್ತು ಎರಡು ಪವನ್ ಚಿನ್ನ ಕಳವುಗೈದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೂಡ್ಲಿನ ಚೂರಿ ಸಲಫಿ ಮಸೀದಿಯಲ್ಲಿ ಈ ಕಳವು ನಡೆದಿದೆ. ಈ ಬಗ್ಗೆ ಮಸೀದಿಯ ಅಡ್ಮಿನಿಸ್ಟ್ರೇಟರ್ ಮುಹಮ್ಮದ್ ಮಶೂದ್ ದೂರು ನೀಡಿದ್ದು, ಜೂನ್ 24ರಂದು ಬೆಳಿಗ್ಗೆ 8ರಿಂದ 8.30ರ ನಡುವಿನ ಅಂತರದಲ್ಲಿ  ಮಸೀದಿಯ ಕಚೇರಿಯೊಳಗೆ ಕಳ್ಳರು ನುಗ್ಗಿ ಅಲ್ಲಿದ್ದ ಮೇಜಿನ ಒಳಗೆ ಇರಿಸಲಾಗಿದ್ದ ನಗನಗದನ್ನು ಕಳವುಗೈದಿರುವುದಾಗಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ …

ಮಂಜೇಶ್ವರದಲ್ಲಿ ಕಿರುಕುಳಕ್ಕೊಳಗಾದ 16ರ ಬಾಲಕಿ ಗರ್ಭಿಣಿ: ಯುವಕನ ವಿರುದ್ಧ ಪೋಕ್ಸೋ ಕೇಸು

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 16ರ ಹರೆಯದ ಬಾಲಕಿಗೆ  ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇದರಿಂದ ಬಾಲಕಿ ಇದೀಗ ಗರ್ಭಿಣಿಯಾಗಿದ್ದಾಳೆ. ಘಟನೆಗೆ ಸಂಬಂಧಿಸಿ ಮುಹಮ್ಮದ್ ಶನೋಜ್ (21) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂ ಡಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕಿ ಗರ್ಭಿಣಿಯಾದ ಬಳಿಕವೇ ಕಿರುಕುಳ ವಿಷಯ ಬೆಳಕಿಗೆ ಬಂದಿದೆ

ಬದಿಯಡ್ಕದಲ್ಲಿ 17ರ ಬಾಲಕಿಗೆ ಕಿರುಕುಳ ನೀಡಿದ ಯುವಕ: ಪೋಕ್ಸೋ ಪ್ರಕಾರ ಕಸ್ಟಡಿಯಲ್ಲಿ

ಬದಿಯಡ್ಕ:  ಪೋಕ್ಸೋ,  ಮಾನಭಂಗ ಎಂಬೀ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಯಾದ ಯುವಕನನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಉಳ್ಳೋಡಿಯ ಶಶಿಧರ(38) ಎಂಬಾತ ಕಸ್ಟಡಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 25ರ ಹರೆಯದ ಯುವತಿಯ ದೂರಿನಂತೆ ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಯುವತಿಗೆ 17 ವರ್ಷ ಪ್ರಾಯವಿದ್ದಾಗ ಮದುವೆಯಾಗುವುದಾಗಿ ಭರವಸೆಯೊಡ್ಡಿ ಆರೋಪಿ ಕಿರುಕುಳ ನೀಡಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಇದೀಗ 25ರ ಹರೆಯದ ದೂರುದಾತೆಗೆ 18 ವರ್ಷ ಕಳೆದ ಬಳಿಕ ಕಿರುಕುಳ ನೀಡಿದ ಆರೋಪದಂತೆ ಮಾನಭಂಗ …