ಹೃದಯಾಘಾತ: ಟೈಲರ್ ನಿಧನ

ಮಂಜೇಶ್ವರ: ಪೊಸೋಟು ಬಳಿಯ ಚಾದಿಪಡ್ಪು ನಿವಾಸಿ ಹಿರಿಯ ಟೈಲರ್ ನಾರಾಯಣ (70) ನಿಧನರಾದರು. ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದÄ, ನಿನ್ನೆ ಬೆಳಿಗ್ಗೆ ಎದ್ದೇಳಲಿಲ್ಲ. ಮನೆಯವರು ನೋಡಿದಾಗ ನಿಧನಹೊಂದಿದ್ದರು. ಹೊಸಂಗಡಿ ಪೇಟೆಯಲ್ಲಿ ಹಾಗೂ ಮನೆ ಸಮೀಪದಲ್ಲಿ ಟೈಲರಿಂಗ್ ನಡೆಸುತ್ತಿದ್ದರು. ಮೃತರು ಪತ್ನಿ ಭಾರತಿ, ಸಹೋದರಿಯರಾದ ಕಲ್ಯಾಣಿ, ಯಶೋದ, ಭವಾನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬಂಗ್ರಮಂಜೇಶ್ವರ ರಸ್ತೆ ತಿರುವಿನಲ್ಲಿ ಅಪಾಯ ಆಹ್ವಾನಿಸಿ ವಿದ್ಯುತ್ ಕಂಬದ ಆಧಾರ ತಂತಿ

ಮಂಜೇಶ್ವರ: ಬಂಗ್ರಮಂಜೇಶ್ವರ ರಸ್ತೆಯ ತಿರುವೊಂದರಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರತಂತಿ ವಾಹನ ಸವಾರರಿಗೆ ಆತಂಕ ಉಂಟುಮಾಡುತ್ತಿದೆ. ರಸ್ತೆ ಬದಿಯಲ್ಲಿ ರುವ ಈ ತಂತಿ ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಎದುರು ಭಾಗದಿಂದ ಬರುವ ವಾಹನಗಳಿಗೆ ಸರಿದುಹೋಗಲು ಸ್ಥಳ ನೀಡುವ ಮಧ್ಯೆ ತಂತಿಗೆ ಬಡಿದು ಅಪಾಯ ಉಂಟಾಗುವ ಭೀತಿ ಇದೆ. ಬಂಗ್ರಮಂಜೇಶ್ವರದ ಈ ದಾರಿಯಾಗಿ ಕಟ್ಟೆಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಗೆ ಹೊಸಂಗಡಿ  ಪೇಟೆಯಿಂದ ದಿನನಿತ್ಯ ನೂರಾರು ವಾಹನಗಳು ಸಂಚರಿ ಸುತ್ತಿವೆ. ಅಪಾಯಕ್ಕೆ ಆಹ್ವಾನ …

ಮತ್ತೆ ಮಳೆ ತೀವ್ರ: ಮುನ್ನೆಚ್ಚರಿಕೆ

ತಿರುವನಂತಪುರ: ರಾಜ್ಯದಲ್ಲಿ ಮತ್ತೆ ಮಳೆ ತೀವ್ರಗೊಳ್ಳುತ್ತಿದೆ. ಇಂದಿನಿಂದ ಮತ್ತೆ ಕೆಲವೆಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕಲ್ಲಿಕೋಟೆ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ನಾಳೆ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಹಾಗೂ ಶುಕ್ರವಾರ ಎರ್ನಾಕುಳಂ, ಕಲ್ಲಿಕೋಟೆ, ವಯನಾಡು, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಝಾರ್ಖಂಡ್‌ನ ಮೇಲ್ಭಾಗ ದಲ್ಲಿ ವಾಯುಭಾರ ಕುಸಿತ ನೆಲೆಗೊಂಡ ಕಾರಣ ಮಳೆ ತೀವ್ರ ವಾಗಿ …

ಬೆದ್ರಡ್ಕ: ಭಾರತೀಯ ಸೇನೆಗೆ ಆಯ್ಕೆಗೊಂಡ ಆಟೋ ಚಾಲಕನಿಗೆ ಸನ್ಮಾನ

ಬೆದ್ರಡ್ಕ: ಭಾರತೀಯ ಸೇನೆಗೆ ಆಯ್ಕೆಗೊಂಡ ಬೆದ್ರಡ್ಕ ನಿವಾಸಿ ರಂಜಿತ್‌ರನ್ನು ಬೆದ್ರಡ್ಕದ ಯುವ ತೇಜಸ್ ತಂಡದ ನೇತೃತ್ವದಲ್ಲಿ ಆಟೋಚಾಲಕರು ಸನ್ಮಾನಿಸಿ ಗೌರವಿಸಿದರು. ಈ ಹಿಂದೆ ಬೆದ್ರಡ್ಕದಲ್ಲಿ ಆಟೋಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ರಂಜಿತ್ ಇತ್ತೀಚೆಗೆ ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದಾರೆ. ಈ ಮಧ್ಯೆ ಊರಿಗೆ ಬಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಂಜಿತ್ ಭಾರತೀಯ ಸೇನೆಗೆ ಆಯ್ಕೆಗೊಂಡಿ ರುವುದು ನಾಡಿಗೆ ಹೆಮ್ಮೆ ತಂದಿದೆ. ಅವರ ಪ್ರಯತ್ನ, ನಿಷ್ಠೆ, ಸಾಧನೆ ಪ್ರೇರಣಾದಾಯಕ. ಅವರ ಸಾಧನೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ರೈತಸಂಘ ಕುಡಾಲು ಮೇರ್ಕಳ ವಿಲ್ಲೇಜ್ ಸಮ್ಮೇಳನ

ಉಪ್ಪಳ: ಭಾರತದ ಕೃಷಿ ಪರಂಪರೆಯನ್ನು ಮರೆತು ಕೇಂದ್ರ ಸರಕಾರ ಆಡಳಿತ ಮಾಡುತ್ತಿದೆ. ಇದರಿಂದ ಕೃಷಿಕರು ಕಷ್ಟ ಅನುಭ ವಿಸುತ್ತಿದ್ದಾರೆ ಎಂದು ಕುಡಾಲ್ ಮೇರ್ಕಳ ರೈತ ಸಂಘದ ವಿಲೇಜ್ ಸಮ್ಮೇಳನ ವನ್ನು ಸುಬ್ಬಯ್ಯಕಟ್ಟೆಯಲ್ಲಿ ಉದ್ಘಾಟಿಸಿದ ರಾಜ್ಯ ಸಮಿತಿ ಸದಸ್ಯ ಕೆ. ಆರ್. ಜಯಾನಂದ ನುಡಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ, ಬಿ ಸೀತಾರಾಮ ಶೆಟ್ಟಿ, ಎಸ್ ಬಾಲಕೃಷ್ಣ ಶೆಟ್ಟಿ, ಬಿ.ಎ ಖಾದರ್,  ಬಿ.ಎ ಲತೀಫ್,  ಪುಷ್ಪ ಭಾಗವಹಿ ಸಿದರು. ಪ್ರತಿನಿಧಿ ಸಮ್ಮೇಳನದಲ್ಲಿ ಹಿರಿಯ ಕೃಷಿಕರಾದ ತಿಮ್ಮಣ್ಣ ಶೆಟ್ಟಿ ಎಸ್, ಜೋಸೆಫ್ ಕ್ರಾಸ್ತ, …

ಸೀಮೆ ಎಣ್ಣೆ ಬೆಲೆ ಲೀಟರ್‌ಗೆ 4 ರೂ. ಹೆಚ್ಚಳ

ಕಾಸರಗೋಡು: ರಾಜ್ಯದಲ್ಲಿ ರೇಶನ್ ಸೀಮೆ ಎಣ್ಣೆ ಬೆಲೆಯಲ್ಲಿ ಲೀಟರ್‌ಗೆ 4 ರೂ. ಹೆಚ್ಚಿಸಲಾಗಿದೆ. ಪ್ರಸ್ತುತ ಲೀಟರ್‌ಗೆ 61 ರೂಪಾಯಿ ಆಗಿದ್ದು, ಅದನ್ನು  65 ರೂ.ಗೇರಲಿದೆ. ಬೆಲೆಯೇರಿಕೆಯನ್ನು ಆಹಾರ ಸಾರ್ವಜನಿಕ ವಿತರಣೆ ಇಲಾಖೆ ಶೀಘ್ರ ಜ್ಯಾರಿಗೆ ತರಲಿದೆ.  ಬೆಲೆ ಹೆಚ್ಚಿಸುವಾಗ  ಹೆಚ್ಚುವರಿಯಾಗಿ ಲಭಿಸುವ ಮೊತ್ತ ಕೇಂದ್ರ, ರಾಜ್ಯ ಸರಕಾರಗಳಿಗೆ ಲಭಿಸಲಿದೆ. ಇದೇ ವೇಳೆ ರಾಜ್ಯದಲ್ಲಿ ರೇಶನ್ ಅಂಗಡಿಗಳಲ್ಲಿ  ಸೀಮೆ ಎಣ್ಣೆ ವಿತರಣೆ ಮಂದಗತಿಯಲ್ಲಿದೆ. ಕೇಂದ್ರ ಮಂಜೂರು ಮಾಡಿದ 56.76 ಲಕ್ಷ ಲೀಟರ್ ಸೀಮೆ ಎಣ್ಣೆಯಲ್ಲಿ 20 ಶೇ. ಮಾತ್ರಕೇರಳ …

12ನೇ ವೇತನ ಪರಿಷ್ಕರಣೆ ಕೂಡಲೇ ಜ್ಯಾರಿಗೊಳಿಸಬೇಕೆಂದು ಆಗ್ರಹಿಸಿ ಎನ್‌ಜಿಒ ಸಂಘ್ ಉಪವಾಸ ಮುಷ್ಕರ

ಕಾಸರಗೋಡು: 12ನೇ ವೇತನ ಪರಿಷ್ಕರಣೆ ಕೂಡಲೇ ಜ್ಯಾರಿ ಗೊಳಿಸಬೇಕೆಂದು ಆಗ್ರಹಿಸಿ ಕೇರಳ ಎನ್‌ಜಿಒ ಸಂಘ್ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ಸಿವಿಲ್ ಸ್ಟೇಷನ್‌ನಲ್ಲಿ ಉಪವಾಸ ಮುಷ್ಕರ ನಡೆಸಲಾಯಿತು. 2024 ಜುಲೈ 1ರಿಂದ ನೌಕರರಿಗೆ ಲಭಿಸಬೇಕಾಗಿದ್ದ ವೇತನ ಪರಿಷ್ಕರಣೆ ಮೊಟಕುಗೊಂಡು ಒಂದು ವರ್ಷ ಪೂರ್ತಿಯಾಗುವ ನಿನ್ನೆ ನಡೆಸಿದ ಉಪವಾಸ ಮುಷ್ಕರವನ್ನು ಎನ್‌ಜಿಒ ಸಂಘ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಪೀತಾಂಭರನ್ ಉದ್ಘಾಟಿಸಿ ದರು. ಜಿಲ್ಲಾಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಸುನಿಲ್ ಪಿ.ಸಿ. ಪುಳುವಿಂಜಿ ಸ್ವಾಗತಿಸಿ, …

ಪಾನ್‌ಕಾರ್ಡ್‌ಗೆ ಆಧಾರ್ ಇಂದಿನಿಂದ ಕಡ್ಡಾಯ: ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 58.50 ರೂ. ಇಳಿಕೆ

ನವದೆಹಲಿ: ಈ ತಿಂಗಳ ಮೊದಲ ದಿನವಾದ ಇಂದಿನಿಂದ ತೈಲ ಕಂಪೆನಿಗಳು ೧೯ ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 58.50 ರೂ. ಇಳಿಕೆ ಮಾಡಿದೆ. ಇದನ್ನು ಇಂದಿನಿಂದಲೇ ಜ್ಯಾರಿಗೊಳಿಸಲಾಗಿದೆ. ೧೯ ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂ ಡರ್‌ಗೆ ಬೆಲೆ ಈಗ 1665 ರೂ. ಇದೆ. ತೈಲ ಮಾರುಕಟ್ಟೆ ಕಂಪೆನಿಗಳು ಹೊಸ ದರಗಳನ್ನು ಬಿಡುಗಡೆಮಾಡಿದ್ದು, ಅದರಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಳಿಸಿದ್ದರೂ, ಗೃಹ ಬಳಕೆಗಾಗಿರುವ ದೇಶೀಯ ಅನಿಲ ಸಿಲಿಂಡರ್ ಅಂದರೆ, 14 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ …

ಅಂಗಡಿಗೆ ಬಂದ ಬಾಲಕಿ ಮೇಲೆ ಕಿರುಕುಳ ಯತ್ನ ಮುಸ್ಲಿಂಲೀಗ್ ಪ್ರಾದೇಶಿಕ ನೇತಾರ ವ್ಯಾಪಾರಿ ಸೆರೆ

ಮಂಜೇಶ್ವರ: ಸಾಮಗ್ರಿ ಖರೀದಿಸಲೆಂದು ಅಂಗಡಿಗೆ ಬಂದ ಬಾಲಕಿ ಮೇಲೆ ಕಿರುಕುಳ ನೀಡಲೆ ತ್ನಿಸಿದ ಪ್ರಕರಣದಲ್ಲಿ ಆರೋಪಿಯಾದ ವ್ಯಾಪಾರಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಕಣ್ವತೀರ್ಥ ನಿವಾಸಿಯೂ, ಮುಸ್ಲಿಂ ಲೀಗ್‌ನ ಪ್ರಾದೇಶಿಕ ನೇತಾರನಾದ ಇಬ್ರಾಹಿಂ ಶೇಕ್ ಅಬ್ಬ (60) ಎಂಬಾತ ಬಂಧಿತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತನ ಅಂಗಡಿಯಿಂದ ಸಾಮಗ್ರಿ ಖರೀದಿಸಲೆಂದು 11ರ ಹರೆಯದ ಬಾಲಕಿಯೋರ್ವೆ ಶನಿವಾರ ಬೆಳಿಗ್ಗೆ ತಲುಪಿದ್ದಳೆನ್ನಲಾಗಿದೆ. ಈ ವೇಳೆ ಬಾಲಕಿ ಮೇಲೆ ಆರೋಪಿ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ.  ಆದರೆ ಭಯದಿಂದ ಬಾಲಕಿ ವಿಷಯ ವನ್ನು …

ಕೊಡಂಗೆಯಲ್ಲಿ ಕೋಳಿ ಅಂಕ: ಮೂವರ ಬಂಧನ; 98,010 ರೂ. ವಶ

ಉಪ್ಪಳ: ಸೋಂಕಾಲು ಬಳಿಯ ಕೊಡಂಗೆಯಲ್ಲಿ ನಡೆಯುತ್ತಿದ್ದ ಬೃಹತ್ ಕೋಳಿ ಅಂಕಕ್ಕೆ ಮಂಜೇಶ್ವರ ಪೊಲೀ ಸರು ದಾಳಿ ನಡೆಸಿ ಮೂರು ಮಂದಿ ಯನ್ನು ಬಂಧಿಸಿದ್ದಾರೆ. ಈ ವೇಳೆ ಸ್ಥಳದ ಲ್ಲಿದ್ದ ನೂರಾರು ಮಂದಿ  ಓಡಿ ಪರಾರಿ ಯಾಗಿದ್ದಾರೆ.  ಸ್ಥಳದಿಂದ 98,010 ರೂ ಪಾಯಿಗಳನ್ನು ಹಾಗೂ 8 ಕೋಳಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ.  ಪುತ್ತೂರು ಕಾವು ನಿವಾಸಿ ಭವಾನಿಶಂಕರ ಕೆ (30), ಮಜಿಬೈಲು ಮಟ್ಟುಮಾರ್‌ಕಟ್ಟೆಯ ಸಂತೋಷ್ ಕುಮಾರ್ (42), ಮುಂಬೈ ಅಂಧೇ ರಿಯ ಗಣೇಶ್ ಸುಂದರ್ ಕೆ (53) …