ಲೀಗ್‌ಗೆ ಮತ್ತೆ ಕಷ್ಟಕಾಲ: ಪೈವಳಿಕೆ ಪಂ. ಸ್ಥಾಯೀ ಸಮಿತಿ ಚೆಯರ್ ಪರ್ಸನ್ ಸದಸ್ಯತ್ವ ರದ್ದು ಸಾಧ್ಯತೆ

ಪೈವಳಿಕೆ: ಕುಂಬಳೆ ಪಂಚಾಯ ತ್‌ನಲ್ಲಿ ವಿವಿಧ ರೀತಿಯ ಭ್ರಷ್ಟಾಚಾರ ಆರೋಪಗಳು ಕೇಳಿಬಂದು  ಆಡಳಿತ ಪಕ್ಷವಾದ ಮುಸ್ಲಿಂ ಲೀಗ್ ಸಂದಿಗ್ಧತೆ ಯಲ್ಲಿ ಸಿಲುಕಿರುವಂತೆಯೇ ಪೈವಳಿಕೆ ಪಂಚಾಯತ್‌ನಲ್ಲಿ ಲೀಗ್ ಸದಸ್ಯೆ ಯೊಬ್ಬರ ಸದಸ್ಯತ್ವ ರದ್ದುಗೊಳ್ಳುವ  ಸಾಧ್ಯತೆ ಇದ್ದು, ಇದು ಲೀಗ್‌ಗೆ ಮತ್ತಷ್ಟು ಹೊಡೆತ ನೀಡಿದೆ. ಪೈವಳಿಕೆ ಪಂಚಾಯತ್ ಕ್ಷೇಮ ಕಾರ್ಯ  ಸ್ಥಾಯೀ ಸಮಿತಿ ಚೆಯರ್ ಪರ್ಸನ್ ಸಿಯಾಸುನ್ನೀಸರ ಸದಸ್ಯತ್ವ ನಷ್ಟಗೊಳ್ಳುವ ಸಾಧ್ಯತೆ ಇದೆಯೆನ್ನ ಲಾಗಿದೆ. ಪಂಚಾಯತ್‌ನ ಎರಡನೇ ವಾರ್ಡ್ ಸದಸ್ಯೆಯಾದ ಇವರು  ಕಳೆದ ಫೆಬ್ರವರಿ ಬಳಿಕ ನಿರಂತರವಾಗಿ ಮೂರಕ್ಕಿಂತ ಹೆಚ್ಚು …

ಬಾಲಕನ ದೇಹದ ಗುಪ್ತ ಭಾಗ ಸ್ಪರ್ಶಿಸಿದ ಚಿಕನ್ ಸ್ಟಾಲ್ ಮಾಲಕ ಸೆರೆ

ಕುಂಬಳೆ: ಮಾಂಸ ಖರೀದಿಸಲು ಬಂದ ಬಾಲಕನ ದೇಹದ ಗುಪ್ತ ಭಾಗದಲ್ಲಿ ಸ್ಪರ್ಶಿಸಿದ ಚಿಕನ್ ಸ್ಟಾಲ್ ಮಾಲಕನನ್ನು ಬಂಧಿಸಲಾಗಿದೆ. ಕಳತ್ತೂರು ಚೆಕ್ ಪೋಸ್ಟ್ ಬಳಿಯ ಚಿಕನ್ ಸ್ಟಾಲ್ ಮಾಲಕನಾದ ಮೊಯ್ದೀನ್ (65) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಇತ್ತೀಚೆಗೆ ಮೊಯ್ದೀನ್‌ನ ಚಿಕನ್ ಸ್ಟಾಲ್‌ನಿಂದ ಕೋಳಿ ಮಾಂಸ ಖರೀದಿಸಲು ಬಾಲಕನೋರ್ವ ಅಲ್ಲಿಗೆ ಬಂದಿದ್ದನೆನ್ನಲಾಗಿದೆ.ಈ ವೇಳೆ ಮೊಯ್ದೀನ್ ಬಾಲಕನ ಗುಪ್ತ ಭಾಗದಲ್ಲಿ ಸ್ಪರ್ಶಿಸಿರುವುದಾಗಿ ದೂರ ಲಾಗಿದೆ.  ಸೆರೆಗೀಡಾದ ಮೊಯ್ದೀ ನ್‌ಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ನಿರ್ಮಾಣಕ್ಕೆ ಸ್ಥಾಪಿಸಿದ ಕಬ್ಬಿಣದ ಸರಳಿಗೆ ಕಾರು ಢಿಕ್ಕಿ: ಮೂವರು ಯುವಕರಿಗೆ ಗಾಯ

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ನಿರ್ಮಾಣ ಕ್ಕಾಗಿ ಸ್ಥಾಪಿಸಿದ ಕಬ್ಬಿಣದ ಸರಳುಗಳು ದೇಹಕ್ಕೆ  ನುಸುಳಿ ಕಾರು ಪ್ರಯಾಣಿಕ ರಾದ ಮೂವರು ಯುವಕರು ಗಾಯ ಗೊಂಡಿದ್ದಾರೆ. ಬೇಕಲ ಮೌವ್ವಲ್ ನಿವಾಸಿಗಳಾದ ಫಹದ್, ಶಬೀಬ್, ಅಮೀನ್ ಎಂಬಿವರು ಗಾಯಗೊಂಡವ ರಾ ಗಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಫಹದ್ ೪ ದಿನಗಳ  ಹಿಂದೆ ಗಲ್ಫ್‌ನಿಂದ ಊರಿಗೆ ಬಂದಿದ್ದರು. ಇವರು ಇಂದು ಬೆಳಿಗ್ಗೆ  ಸ್ನೇಹಿತರಾದ  ಶಬೀಬ್ ಹಾಗೂ ಅಮೀನ್‌ರೊಂದಿಗೆ ಮಂಗಳೂರಿನತ್ತ ತೆರಳುತ್ತಿದ್ದಾಗ ೭.೩೦ರ ವೇಳೆ ಕುಂಬಳೆ ಪೇಟೆ ಸಮೀಪ ಅಪಘಾತವುಂಟಾಗಿದೆ.    …

ಬಿಎಂಎಸ್ ಮಾಜಿ ಕೋಶಾಧಿಕಾರಿ ನಿಧನ

ಕಾಸರಗೋಡು: ಬಿಎಂಎಸ್ ಜಿಲ್ಲಾ ಮಾಜಿ ಕೋಶಾಧಿಕಾರಿ, ಕೇರಳ ಸ್ಟೇಟ್ ಟ್ರಾನ್ಸ್‌ಪೋರ್ಟ್ ಎಂಪ್ಲೋ ಯೀಸ್ ಸಂಘ್ ರಾಜ್ಯ ಸಮಿತಿ ಸದಸ್ಯನಾಗಿದ್ದ ಎಂ. ಬಾಬು (74) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಪಿಲಿಕುಂಜೆಯಲ್ಲಿರುವ ಸ್ವ-ಗೃಹದಲ್ಲಿ ವಿಶ್ರಾಂತಿಯಲ್ಲಿದ್ದರು. ಮೃತರು ಪತ್ನಿ ಶಿವಕಲಾ ದೇವಿ, ಮಕ್ಕಳಾದ ಅಶ್ವಿನಿದೇವಿ, ಶಿವವಿನಾ ಯಕ, ಅಳಿಯ ಲೆನಿನ್ ಅಶೋಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪತ್ವಾಡಿ ಮುತ್ತಲೀಬ್ ಕೊಲೆ: 5ನೇ ಆರೋಪಿ ಖುಲಾಸೆ

ಕಾಸರಗೋಡು: ಭೂಗತ ಲೋಕದ ತಂಡಗಳ ಮಧ್ಯೆ ಉಂಟಾದ ಗ್ಯಾಂಗ್‌ವಾರ್ ಹಿನ್ನೆಲೆ ಯಲ್ಲಿ ಕೊಲೆಗೀಡಾದ ಉಪ್ಪಳ ಪತ್ವಾಡಿ ನಿವಾಸಿ ಹಾಗೂ ಮಣ್ಣಂಗುಳಿ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಅಬ್ದುಲ್ ಮುತ್ತಲೀಬ್ ಅಲಿಯಾಸ್ ಮುತ್ತಲೀಬ್‌ನನ್ನು ಕೊಲೆಗೈದ ಪ್ರಕರಣದ 5ನೇ ಆರೋಪಿಯನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(3) ತಪ್ಪಿತಸ್ಥನಲ್ಲವೆಂದು ಪತ್ತೆಹಚ್ಚಿ ಖುಲಾಸೆಗೊಳಿಸಿದೆ. ಕರ್ನಾಟಕ ಭದ್ರಾವತಿ ನಿವಾಸಿ ಸಯ್ಯಿದ್ ಆಸಿ ಫ್‌ನನ್ನು ಖುಲಾಸೆಗೊಳಿಸಲಾಗಿದೆ. 2013 ಅಕ್ಟೋಬರ್ 24ರಂದು ರಾತ್ರಿ 11 ಗಂಟೆಗೆ ಉಪ್ಪಳ ಮಣ್ಣಂಗುಳಿಯ ಮುತ್ತಲಿಬ್‌ನ ಫ್ಲ್ಯಾಟ್‌ನ ಸಮೀಪದಲ್ಲಿ ಕೊಲೆ ಕೃತ್ಯ ನಡೆದಿತ್ತು.  ಮುಖಂಡ …

ಹನುಮಾನ್ ನಗರದಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋದ ಕಾಂಕ್ರೀಟ್ ರಸ್ತೆ :ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಉಪ್ಪಳ: ಹನುಮಾನ್ ನಗರದಲ್ಲಿ ಹಲವು ವರ್ಷಗಳಿಂದ ಕಾಂಕ್ರೀಟ್ ರಸ್ತೆ ಸಮುದ್ರಪಾಲಾಗುತ್ತಿದ್ದರೂ ಸೂಕ್ತ ರೀತಿಯ ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಇಲ್ಲಿನ ಮೀನುಕಾರ್ಮಿಕರು ಆರೋಪಿಸುತ್ತಾರೆ. ಕಳೆದ ವರ್ಷ ರಸ್ತೆ ಸಮುದ್ರಪಾಲಾಗಿದ್ದು, ಮೂರು ತಿಂಗಳ ಹಿಂದೆ 30 ಮೀಟರ್ ಉದ್ದದಲ್ಲಿ ರಸ್ತೆ ಪುನರ್‌ನಿರ್ಮಿಸಲಾಗಿತ್ತು. ಕಾಂಕ್ರೀಟ್ ಹಾಕಿ ನಿರ್ಮಿಸಿದ ಈ ರಸ್ತೆ ಕೂಡಾ ಕಳೆದ ಹಲವು ದಿನಗಳಿಂದ ಉಂಟಾಗಿದ್ದ ಕಡಲ್ಕೊರೆತಕ್ಕೆ ಕುಸಿದು ಬಿದ್ದಿದೆ. ಇದರಿಂದಾಗಿ ಈ ರಸ್ತೆ ಮೂಲಕ ಸಂಚಾರ ತಡೆ ಉಂಟಾಗಿದೆ. ಇದು ಇಲ್ಲಿನ ಮೀನುಕಾರ್ಮಿಕರಿಗೆ ಸಮಸ್ಯೆ ಸೃಷ್ಟಿಸಿದೆ. …

ಕುಂಬಳೆಯಲ್ಲಿ ಬಸ್ ವೈಟಿಂಗ್ ಶೆಡ್ ನಿರ್ಮಾಣ : ಚುನಾವಣೆಯನ್ನು ಗಮನದಲ್ಲಿರಿಸಿ ವಿವಾದ ಸೃಷ್ಟಿ-ಮುಸ್ಲಿಂ ಲೀಗ್

ಕುಂಬಳೆ: ಕುಂಬಳೆ ಪೇಟೆಯಲ್ಲಿ ಬಸ್ ವೈಟಿಂಗ್ ಶೆಡ್ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿ ವಿವಾದ ಸೃಷ್ಟಿಸುತ್ತಿರುವುದು ಪಂಚಾಯತ್ ಚುನಾವಣೆಯನ್ನು ಗಮನದಲ್ಲಿರಿಸಿಯಾಗಿದೆಯೆಂದು ಮುಸ್ಲಿಂ ಲೀಗ್ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ಬಿ.ಎನ್. ಮುಹಮ್ಮದಲಿ, ಪ್ರಧಾನ ಕಾರ್ಯದರ್ಶಿ ಯೂಸುಫ್ ಉಳುವಾರು ತಿಳಿಸಿದ್ದಾರೆ. ಎಲ್ಲಾ ಕ್ರಮಗಳನ್ನು ಪೂರ್ತಿಗೊಳಿಸಿ ಬಸ್ ವೈಟಿಂಗ್ ಶೆಡ್ ನಿರ್ಮಾಣದ ಹೊಣೆಗಾರಿಕೆಯನ್ನು ಅಕ್ರಡಿಟ್ ಏಜೆನ್ಸಿಯಾದ ಹ್ಯಾಬಿಟಾಟ್‌ಗೆ ವಹಿಸಿಕೊಡಲಾಗಿದೆ. ಇದಕ್ಕೆ ಗ್ರಾಮ ಪಂಚಾಯತ್‌ನ  13 ಸದಸ್ಯರ ಅಂಗೀಕಾರವಿದೆ. ಸಮಾನ ರೀತಿಯಲ್ಲಿ  ಜಿಲ್ಲೆಯಲ್ಲೂ ರಾಜ್ಯದಲ್ಲೂ ಹಲವು ಸ್ಥಳೀಯಾಡಳಿತ ಸಂಸ್ಥೆಗಳು   ಯೋಜನೆ ಜ್ಯಾರಿಗೊಳಿಸುತ್ತಿವೆ.  …

ಮಳೆಗಾಲದಲ್ಲಿ ತಲೆಯೆತ್ತಿದ ಕಳ್ಳರ ಕಾಟಬ್ಯಾಂಕ್, ಹೋಟೆಲ್‌ನಲ್ಲಿ ಕಳವಿಗೆತ್ನ

ಕಾಸರಗೋಡು: ಬ್ಯಾಂಕ್ ಮತ್ತು ಹೋಟೆಲ್‌ನಲ್ಲಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ. ಇಸಾಫ್ ಬ್ಯಾಂಕ್‌ನ ಚೆರ್ವತ್ತೂರು ಶಾಖೆ ಮತ್ತು ಅದೇ ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಹೋಟೆಲ್ ನಲ್ಲಿ ರಾತ್ರಿ ವೇಳೆ ಈ ಕಳವು ಯತ್ನ ನಡೆದಿದೆ. ಕೋಟು ಹಾಗೂ ಮಾಸ್ಕ್ ಧರಿಸಿದ ಕಳ್ಳನೋರ್ವ ಈ ಯತ್ನ ನಡೆಸಿದ್ದಾನೆ. ಅದರ ಸಿಸಿ ಟಿವಿ ದೃಶ್ಯ ಪೊಲೀಸರಿಗೆ ಲಭಿಸಿದೆ.  ಇದರಂತೆ ಪ್ರಸ್ತುತ ಬ್ಯಾಂಕ್‌ನ  ಮೆನೇಜರ್ ಬಿಪಿನ್ ಸೆಬಾಸ್ಟಿನ್ ನೀಡಿದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್‌ನವರು  ಬೆಳಗ್ಗೆ ಬ್ಯಾಂಕ್ …

302 ಗ್ರಾಂ ಗಾಂಜಾ ವಶ: ಆರೋಪಿ ಪರಾರಿ

ಕುಂಬಳೆ: ಕುಂಬಳೆ ರೇಂಜ್ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಬೈಕ್‌ನಲ್ಲಿ ಸಾಗಿಸುತ್ತಿದ್ದ 302 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಈ ಸಂಬಂಧ ಕಯ್ಯಾರು ಗ್ರಾಮದ ಕರೋಳಿ ಎಂಬಲ್ಲಿನ  ಅಬ್ದುಲ್ ರಹ್ಮಾನ್ ಅಫ್ಸಲ್ ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಕೇಸುದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿ ಓಡಿ ಪರಾರಿಯಾಗಿ ದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.  ಕುಂಬಳೆ ಅಬಕಾರಿ ಇನ್‌ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದಲ್ಲಿ ಮೊನ್ನೆ ಸಂಜೆ ಕುಬಣೂರು ಸಫಾ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸಿಇಒಗಳಾದ ಅಖಿಲೇಶ್ ಎಂ.ಎಂ, ಜಿತಿನ್ ವಿ, …

ಲಾಲ್‌ಭಾಗ್- ಕುರುಡಪದವು ರಸ್ತೆ ಶೋಚನೀಯಾವಸ್ಥೆ ಪ್ರತಿಭಟಿಸಿ ಸ್ಥಳೀಯರಿಂದ ಲೋಕೋಪಯೋಗಿ ಇಲಾಖೆ ಕಚೇರಿ ಪ್ರತಿಭಟನೆ

ಪೈವಳಿಕೆ: ಪಂಚಾಯತ್‌ನ ಲಾಲ್‌ಭಾಗ್‌ನಿಂದ ಕುರುಡಪದವುವರೆಗೆ ಸಾಗುವ ಲೋಕೋಪಯೋಗಿ ಇಲಾಖೆಯ ರಸ್ತೆ ಹಲವು ವರ್ಷಗಳಿಂದ ಶೋಚನೀಯಾವಸ್ಥೆಯಲ್ಲಿದ್ದು, ವಾಹನ ಸಂಚಾರಕ್ಕೆ ಸಂಕಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ದುರಸ್ತಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ನಿನ್ನೆ ಮಂಜೇಶ್ವರ ಲೋಕೋಪಯೋಗಿ ಇಲಾಖೆ ಕಚೇರಿಗೆ ಮಾರ್ಚ್ ನಡೆಸಿದರು. ಬಳಿಕ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವ ಭರವಸೆ ನೀಡಿದ್ದು, ಹೊಂಡಗಳಿಗೆ ಜಲ್ಲಿ ಹುಡಿ ಹಾಕಿ ತಾತ್ಕಾಲಿಕ ದುರಸ್ತಿ ಹಾಗೂ ಮತ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಪ್ರತಿಭಟನೆ …