ಗಡಿ ಉಸ್ತುವಾರಿ ಸಚಿವರಾಗಿ ಎಚ್.ಕೆ. ಪಾಟೀಲ ನೇಮಕ: ಕನ್ನಡ ಪರ ಸಂಘಟನೆಗಳಿಂದ ಅಭಿನಂದನೆ

ಮಂಜೇಶ್ವರ: ಗಡಿ ಭಾಗದ ಕನ್ನಡ ಸಂಘಟನೆಗಳ ದೀರ್ಘಕಾಲದ ಬೇಡಿಕೆ ಯಾಗಿದ್ದ ಗಡಿ ಉಸ್ತುವಾರಿ ಸಚಿವರ ನೇಮಕಕ್ಕೆ ಪರಿಹಾರ ಉಂಟಾಗಿದೆ. ಹಿರಿಯ ಸಚಿವ ಎಚ್.ಕೆ. ಪಾಟೀಲರನ್ನು ಗಡಿ ಹಾಗೂ ಜಲ ವಿವಾದಗಳ ಉಸ್ತುವಾರಿ ಸಚಿವರಾಗಿ ನೇಮಕಗೊಳಿಸಲಾ ಗಿದೆ. ಇವರ ನೇಮಕ ಆದೇಶಕ್ಕೆ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಕೋಶಾಧಿಕಾರಿ ಶ್ರೀಕಾಂತ ನೆಟ್ಟಣಿಗೆ, ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪದಾಧಿಕಾರಿಗಳಾದ ಎನ್. ಚನಿಯಪ್ಪ ನಾಯ್ಕ, ಅಖಿಲೇಶ್ ನಗುಮುಗಂ, …

ಕುಂಬಳೆ ಪಂಚಾಯತ್‌ಗೆ ನಾಳೆ ಬಿಜೆಪಿ ಮಾರ್ಚ್

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ನಾಳೆ ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಿದೆ. ಪಂಚಾಯತ್‌ನಲ್ಲಿ ಕಳೆದ 50 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್‌ನ ಭ್ರಷ್ಟಾಚಾರ ಹಾಗೂ ದುರಾಡಳಿತ ವಿರುದ್ಧ ಮಾರ್ಚ್ ನಡೆಸುವುದಾಗಿ ಬಿಜೆಪಿ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಕಚೇರಿ ಬಳಿಯಿಂದ ಹೊರಡುವ ಮಾರ್ಚ್ ಕುಂಬಳೆ ಪೇಟೆ ಮೂಲಕ ಸಾಗಿ ಪಂಚಾಯತ್ ಕಚೇರಿಗೆ ತಲುಪಿ ಬೃಹತ್ ಪ್ರತಿಭಟನೆ ನಡೆಯಲಿದೆ ಯೆಂದು ತಿಳಿಸಲಾಗಿದೆ.

ಪೋಕ್ಸೋ ಪ್ರಕರಣ ಆರೋಪಿ ವಿರುದ್ಧ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ

ಮಂಜೇಶ್ವರ: ಕುಂಜತ್ತೂರು ಕುಚ್ಚಿಕ್ಕಾಡ್‌ನಲ್ಲಿ 11 ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಲೀಗ್ ಮುಖಂಡನ ವಿರುದ್ಧ ಮಂಜೇಶ್ವರ ಶಾಸಕ ಹಾಗೂ ಮುಸ್ಲಿಂ ಲೀಗ್ ಯಾವುದೇ ಹೇಳಿಕೆ ನೀಡದಿರುವುದು ಆರೋಪಿಯ ರಕ್ಷಣೆಗೆ ತೆರೆಮರೆಯಲ್ಲಿ ನಡೆಸುವ ತಂತ್ರವಾಗಿದ್ದು, ಇದು ಖಂಡನೀಯವೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ಈತನ ವಿರುದ್ಧ ಸಮಗ್ರ ತನಿಖೆ ನಡೆಸಿ ಅಂಗಡಿಗೆ ತಲುಪಿದ ಇತರ ಮಕ್ಕಳನ್ನು ಕೂಡಾ ಕೌನ್ಸಿಲಿಂಗ್‌ಗೆ ಒಳಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ವ್ಯಕ್ತಿಯನ್ನು ಧಾರ್ಮಿಕ ನೈತಿಕತೆಯಿಂದ ಲೀಗ್ …

ಕಾಸರಗೋಡಿನಲ್ಲಿ ಇಂದು ಕನ್ನಡ ಪತ್ರಿಕಾ ದಿನಾಚರಣೆ

ಕಾಸರಗೋಡು: ನಗರದ ಕೋಟೆಕಣಿ ರಾಮನಗರ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನೇತೃತ್ವದಲ್ಲಿ ಇಂದು ಕನ್ನಡ ಪತ್ರಿಕಾ ದಿನಾಚರಿಸಲಾಗುವುದು. ಸಂಜೆ 5 ಗಂಟೆಗೆ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ  ಕಾರ್ಯಕ್ರಮ ನಡೆಯಲಿದೆ. ಕ.ಸಾ.ಪ ಕೇರಳ ಗಡಿನಾಡು ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಶೋಕ ಕೆ ಕಾಸರಗೋಡು ಅವರಿಗೆ ಪತ್ರಿಕಾ ಗೌರವಾರ್ಪಣೆ ನಡೆಯಲಿದೆ. ಪತ್ರಕರ್ತ ರಾದ ಜಯ ಮಣಿಯಂಪಾರೆ, ವೀಜಿ ಕಾಸರಗೋಡು, ಜಯಶ್ರೀ ಆರ್ಯಾಪು ಮೊದಲಾದವರು ಉಪಸ್ಥಿತರಿರುವರು.

ನೀರು ಹರಿಯಲು ಚರಂಡಿ ಇಲ್ಲ: ಮನೆ ಪರಿಸರ ಜಲಾವೃತ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಮಣಿಮುಂಡ ಎಂಬಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ಹರಿದು ಸ್ಥಳೀಯರ ಮನೆ ಹಾಗೂ ಪರಿಸರ ಜಲಾವೃತ ಗೊಂಡಿದೆ. ಕೀಯೂರು ಮೊಹಮ್ಮದ್ ಹಾಗೂ ಹಮೀದ್ ಎಂಬವರ ಮನೆ ಪರಿಸರದಲ್ಲಿ ನೀರು ಕಟ್ಟಿ ನಿಂತಿದ್ದು, ಸತತ ಮಳೆಗೆ ಮನೆಯೊಳಗೂ ನೀರು ನುಗ್ಗುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಅಲ್ಲದೆ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗುತ್ತಿದೆ. ಮಳೆನೀರು ಚರಂಡಿಯಲ್ಲಿ ಹರಿದು ನೇರ ಸಮುದ್ರ ಸೇರಬೇಕಾಗಿದ್ದು, ಆದರೆ ಚರಂಡಿಯಲ್ಲಿ ಮಣ್ಣು, ಕಸ, ಕಡ್ಡಿಗಳು ತುಂಬಿಕೊಂಡು …

ಉಚಿತ ವಿದ್ಯುತ್ ಬಿಲ್ ಪಾವತಿಸದ ಪುತ್ತಿಗೆ ಕೃಷಿಭವನಕ್ಕೆ ಕೃಷಿಕರ ಮಾರ್ಚ್ 9ರಂದು

ಸೀತಾಂಗೋಳಿ: ಪುತ್ತಿಗೆ ಕೃಷಿ ಭವನದ ವ್ಯಾಪ್ತಿಯಲ್ಲಿರುವ 200ಕ್ಕೂ ಅಧಿಕ ಕೃಷಿಕರ ನೀರಾವರಿ ಮೋಟಾರು ಉಚಿತ ವಿದ್ಯುತ್ ಬಿಲ್ ಕೃಷಿ ಭವನ ಪಾವತಿಸದ ಹಿನ್ನೆಲೆಯಲ್ಲಿ ಬಾಕಿಯಾದ ಹಲವು ಕೃಷಿಕರಿಗೆ 3೦,೦೦೦ರಿಂದ 7೦,೦೦೦ರೂ.ವರೆಗೆ  ಬಿಲ್ ಪಾವತಿಸಲು ವಿದ್ಯುತ್ ಇಲಾಖೆ ನೋಟೀಸು ನೀಡಿದ್ದು, ಪಾವತಿಸದಿದ್ದರೆ ಸಂಪರ್ಕ ಕಡಿತ ಬೆದರಿಕೆ ಹಾಗೂ ಬಿಲ್ ಪಾವತಿಸಲು ಒತ್ತಡ ಹೇರುತ್ತಿರುವುದಾಗಿ ಕಿಸಾನ್ ಸೇನೆ ಪಂಚಾಯತ್ ಸಮಿತಿ ಆರೋಪಿಸಿದೆ. ಬೃಹತ್ ಮೊತ್ತವಾದ ಕಾರಣ ಪಾವತಿಸಲು ಸಾಧ್ಯವಾಗದೆ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಕಂಗು ಕೃಷಿಕರು ಕಂಗಿಗೆ ತಗಲಿದ ಅಜ್ಞಾತ ರೋಗದಿಂದಾಗಿ …

ಅಮೈ ಶ್ರೀಕೃಷ್ಣ ಭಜನಾಮಂದಿರ ಸಮಿತಿ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಅಮೈ ಶ್ರೀಕೃಷ್ಣ ಭಜನಾಮಂದಿರ ಸಮಿತಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಂದಿರದಲ್ಲಿ ಜರಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಭಜನಾ ಮಂದಿರ ಸಮಿತಿಗೆ ಗೌರವಾಧ್ಯಕ್ಷರಾಗಿ ಗಂಗಾಧರ, ಅಧ್ಯಕ್ಷರಾಗಿ ಗುಣಪಾಲ ಅಮೈ, ಉಪಾಧ್ಯಕ್ಷರಾಗಿ ಪುಷ್ಪಾವತಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ, ಜೊತೆ ಕಾರ್ಯದರ್ಶಿ ಯಾಗಿ ರಾಜೇಶ್ ಅಮೈ, ಕೋಶಾಧಿಕಾರಿಯಾಗಿ ಮನೋಹರ ಹಾಗೂ ಶ್ರೀಕೃಷ್ಣ ಗೆಳೆಯರ ಬಳಗ ಸಮಿತಿಗೆ ಅಧ್ಯಕ್ಷರಾಗಿ ಲತೇಶ್, ಉಪಾಧ್ಯಕ್ಷರಾಗಿ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ, ಜೊತೆ ಕಾರ್ಯದರ್ಶಿಯಾಗಿ ಯೋಗೇಶ್, ಕೋಶಾಧಿಕಾರಿಯಾಗಿ ಶೋಭಿತ್ ಆಯ್ಕೆಯಾದರು. ವಾರ್ಷಿಕ ಮಹಾಸಭೆಯಲ್ಲಿ ಪ್ರಧಾನ …

ರಾವಡ ಚಂದ್ರಶೇಖರ್ ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕ

ತಿರುವನಂತಪುರ: ದೀರ್ಘಕಾ ಲದ ಪೊಲೀಸ್ ಸೇವೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶೇಖ್ ದರ್ವೇಶ್ ಸಾಹಿಬ್ ಇಂದು ನಿವೃತ್ತರಾಗುವರು. ಆದ್ದರಿಂದ  ಆ ಸ್ಥಾನಕ್ಕೆ ಯಾರನ್ನು ಆರಿಸಲಾಗುವುದೆಂಬ ವಿಷಯದಲ್ಲಿ ವಾರಗಳಿಂದ ಉಂಟಾಗಿದ್ದ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ. ಹಿರಿಯ ಐಪಿಎಸ್ ಅಧಿಕಾರಿ  ಐಬಿಯ ಸ್ಪೆಷಲ್ ಡೈರೆಕ್ಟರ್ ಆಗಿ  ಸೇವೆ ಸಲ್ಲಿಸುತ್ತಿರುವ  ರಾವಡ ಚಂದ್ರಶೇಖರ್‌ರನ್ನು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ಇಂದು ಬೆಳಿಗ್ಗೆ ಸೇರಿದ ರಾಜ್ಯ ಸಚಿವಸಂಪುಟ ಸಭೆ ತೀರ್ಮಾನಿಸಿದೆ. ಇನ್ನೋರ್ವ ಹಿರಿಯ ಐಪಿಎಸ್ ಅಧಿಕಾರಿ ಈಗ ರಾಜ್ಯ ರಸ್ತೆ ಸುರಕ್ಷಾ …

ಸ್ನೇಹಿತನೊಂದಿಗೆ ಹೊಳೆಗೆ ಹಾರಿದ ಪೊಲೀಸ್ ಪತ್ನಿ ಯುವತಿ ಅಪಾಯದಿಂದ ಪಾರು; ಯುವಕನಿಗಾಗಿ ಶೋಧ

ಕಾಸರಗೋಡು: ಬೇಕಲ ಪೆರಿಯಾಟಡ್ಕದಿಂದ ನಾಪತ್ತೆಯಾದ ಪೊಲೀಸನ ಪತ್ನಿ ಹಾಗೂ ಸ್ನೇಹಿತ ವಳಪಟ್ಟಣಂನ ಹೊಳೆಗೆ ಹಾರಿದ್ದು, ಬಳಿಕ ಯುವತಿ ಈಜಿ ದಡಸೇರಿ ಅಪಾಯದಿಂದ ಪಾರಾಗಿದ್ದಾಳೆ. ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ನಡೆಸ ಲಾಗುತ್ತಿದೆ. ಪೊಲೀಸ್ ಹುದ್ದೆಯಲ್ಲಿರುವ ಅಜಯ್ ವಿನ್ಸನ್‌ರ ಪತ್ನಿ ಆನಿಮೋಳ್ (38) ನಿನ್ನೆ ಬೆಳಿಗ್ಗೆ 8 ಗಂಟೆಗೆ ಪೆರಿಯಾಟಡ್ಕದ ಮನೆಯಿಂದ ನಾಪತ್ತೆಯಾಗಿರುವುದಾಗಿ ಬೇಕಲ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ವೇಳೆ ಆನಿಮೋಳ್ ಹಾಗೂ ಅಜಯ್ ವಿನ್ಸನ್‌ರ  ಸ್ನೇಹಿತನೂ ಪೆರಿಯಾಟಡ್ಕ ಸೀನಿಯರ್ …

ಯುವಕನಿಗೆ ಹಲ್ಲೆ: ನರಹತ್ಯಾಯತ್ನ ಪ್ರಕರಣದ ಆರೋಪಿ ಸೆರೆ

ಮಂಜೇಶ್ವರ: ಇಬ್ಬರು ಯುವಕರಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಗಳ ಪೈಕಿ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಮಚ್ಚಂಪಾಡಿ ನಿವಾಸಿ ಅಬ್ದುಲ್ ಜಬ್ಬಾರ್ (37) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಪಾವೂರು ಕೋಡಿ ಹೌಸ್‌ನ ಅಬ್ದುಲ್ ಖಾದರ್ (39), ಮುಹಮ್ಮದ್ ಜಾಹಾರ್ (31) ಎಂಬಿವರಿಗೆ ಹಲ್ಲೆಗೈದ ಪ್ರಕರಣದಲ್ಲಿ ಅಬ್ದುಲ್ ಜಬ್ಬಾರ್ ಆರೋಪಿಯಾಗಿ ದ್ದಾನೆ. ಇತ್ತೀಚೆಗೆ ಮಚ್ಚಂಪಾಡಿ ಪಳ್ಳದಲ್ಲಿ ಕಾರನ್ನು ಹಿಂದಿಕ್ಕಲಾಯಿತೆಂಬ ದ್ವೇಷದಿಂದ ಈ ಇಬ್ಬರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಸಂಬಂಧ ಅಬ್ದುಲ್ ಖಾದರ್ ನೀಡಿದ ದೂರಿನಂತೆ ಅಬ್ದುಲ್ ಜಬ್ಬಾರ್ …