ಬಾಲಕಿಗೆ ವಿವಿಧ ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯ : ಮೇಲ್ಪರಂಬ, ವಿದ್ಯಾನಗರ ಠಾಣೆಯಲ್ಲಿ 3 ಪೋಕ್ಸೋ ಕೇಸು ದಾಖಲು

ಕಾಸರಗೋಡು: 14 ವರ್ಷ ಪ್ರಾಯದ ಬಾಲಕಿಯನ್ನು ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕಿಯ ದೂರಿನಂತೆ ಕೇಸು ದಾಖಲಿಸಲಾಗಿದೆ. 4 ವರ್ಷದ ಹಿಂದೆ ಬಾಲಕಿ ಪ್ರಥಮವಾಗಿ ದೌರ್ಜನ್ಯಕ್ಕೆ ತುತ್ತಾಗಿದ್ದಳು. ಅಂದು ಸಹೋದರಿಯ ಪತಿ ದೇಹವನ್ನು ಅನಾವಶ್ಯಕವಾಗಿ ಸ್ಪರ್ಶಿಸಿರುವುದಾಗಿ ಬಾಲಕಿ ಹೇಳಿಕೆ ನೀಡಿದ್ದಳು. ಆದರೆ ಭಯದಿಂದಾಗಿ ಈ ಬಗ್ಗೆ ಯಾರಲ್ಲೂ ಹೇಳಿರಲಿಲ್ಲವೆನ್ನಲಾಗಿದೆ. ಈ ಹೇಳಿಕೆ ಪ್ರಕಾರ ಸಹೋದರಿಯ ಪತಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಈಗ …

ಶೂ ಧರಿಸಿ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಗೆ ಗಂಭೀರ ಹಲ್ಲೆ: ಪ್ಲಸ್‌ಟು ವಿದ್ಯಾರ್ಥಿಗಳಾದ 6 ಮಂದಿ ವಿರುದ್ಧ ರ‍್ಯಾಗಿಂಗ್ ಕಾಯ್ದೆ ಪ್ರಕಾರ ಕೇಸು

ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಶೂ ಧರಿಸಿ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಗೆ ಗಂಭೀರ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪ್ಲಸ್ ಟು ವಿದ್ಯಾರ್ಥಿಗಳಾದ 6 ಮಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರ‍್ಯಾಗಿಂಗ್ ವಿರುದ್ಧ ಕಾಯ್ದೆಗಳ ಪ್ರಕಾರ ಕೇಸು ದಾಖಲಿಸಲಾಗಿದೆ. ಜೂನ್ 20ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ತರಗತಿ ಕೊಠಡಿ ಹಾಗೂ ಬಸ್‌ಸ್ಟಾಪ್ ಪರಿಸರದಲ್ಲಿ  ಹಲ್ಲೆ ನಡೆದಿದ್ದು ಈ ಕುರಿತು ಪ್ಲಸ್ ವನ್ ವಿದ್ಯಾರ್ಥಿ ಭಯದಿಂದ ಯಾರಲ್ಲೂ …

ಹೋಟೆಲ್ ಕಾರ್ಮಿಕ, ಕಾಂಗ್ರೆಸ್ ಕಾರ್ಯಕರ್ತ ನಿಧನ

ಪೆರ್ಲ: ಹೋಟೆಲ್ ಕಾರ್ಮಿಕ, ಏಳ್ಕಾನ ಬಾಳೆಗುಳಿ ನಿವಾಸಿ ಗೋವಿಂದ ನಾಯ್ಕ (51) ನಿಧನಹೊಂದಿದರು. ಅಸೌಖ್ಯ ಸಾವಿಗೆ  ಕಾರಣವೆನ್ನಲಾಗಿದೆ. ಮೈಸೂರು ಸಮೀಪದ ಹೋಟೆಲ್‌ನಲ್ಲಿ ಅಡುಗೆ ಕಾರ್ಮಿಕರಾಗಿದ್ದರು. ಅಲ್ಲಿ ನಿಧನರಾದ ಬಗ್ಗೆ ಮನೆಮಂದಿಗೆ ಮಾಹಿತಿ ಲಭಿಸಿದೆ. ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಗೋವಿಂದ ನಾಯ್ಕರು ಕಳೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಿ.ಪಂ.ಗೆ ಸ್ಪರ್ಧಿಸಿದ್ದರು. ಎಣ್ಮಕಜೆ  ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ಯಾಗಿದ್ದಾರೆ.  ವಿವಿಧ ಧಾರ್ಮಿಕ ಸಮಿತಿಗಳಲ್ಲಿ ಸಕ್ರಿಯರಾಗಿದ್ದರು.  ಹವ್ಯಾಸಿ  ಮರಾಟಿ ರಂಗಕಲಾವಿದರಾಗಿದ್ದ ಇವರು ಬಾಲೆಸಾಂತು ಕಲಾ ಪ್ರಕಾರವನ್ನು ಪರಂಪರಾಗತವಾಗಿ ಪ್ರದರ್ಶಿಸುತ್ತಿದ್ದರು. ತಂದೆ ಶಿವನಾಯ್ಕ …

ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಪ್ರವಾಸೋದ್ಯಮ ವಿಶ್ರಾಂತಿ ಕೇಂದ್ರ ಸಮುದ್ರಪಾಲು ಭೀತಿ

ಮಂಜೇಶ್ವರ: ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ಮಂಜೇಶ್ವರ ಕಣ್ವತೀರ್ಥ ಕಡಲ ತೀರದಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿದ ವಿಶ್ರಾಂತಿ ಕೇಂದ್ರ ಸಮುದ್ರಪಾಲಾಗುವ ಸ್ಥಿತಿಯಲ್ಲಿದ್ದು, ಲಕ್ಷಾಂತರ ರೂ. ನೀರುಪಾಲಾಗಲಿದೆ. 2023 ರಲ್ಲಿ ವಿಶ್ರಾಂತಿ ಕೇಂದ್ರದ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಹಲವು ವಿಘ್ನಗಳಿಂದಾಗಿ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಈಗ ಸುಮಾರು 60 ಶೇಕಡಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇದಕ್ಕಾಗಿ 89 ಲಕ್ಷ ರೂ. ವೆಚ್ಚ ಮಾಡಲಾಗಿದೆ. 1 ಕೋಟಿ 15 ಲಕ್ಷ ರೂ.ಗಳ ಯೋಜನೆ ಟೂರಿಸಂ ಪ್ರಮೋಷನ್ ಕೌನ್ಸಿಲ್ ಹಾಕಿಕೊಂಡಿತ್ತು. ಕಡಲ್ಕೊರೆತದಿಂದಾಗಿ ಕಟ್ಟಡವಿರುವ …

ಆಸ್ಪತ್ರೆಯಲ್ಲಿ ದಾದಿಯನ್ನು ಇರಿದು ಬರ್ಭರ ಕೊಲೆ

ಭೋಪಾಲ್: ಆಸ್ಪತ್ರೆಗೆ  ನುಗ್ಗಿದ ದುಷ್ಕರ್ಮಿ ದಾದಿಯ ಕುತ್ತಿಗೆ ಕೊಯ್ದು ಕೊಲೆಗೈದ ಭೀಕರ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ್‌ನಲ್ಲಿ ನಡೆದಿದೆ. ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿರುವ ಸಂಧ್ಯಾ ಚೌದರಿ (18) ಕೊಲೆಗೈಯ್ಯಲ್ಪಟ್ಟ ದುರ್ದೈವಿ. ನಿನ್ನೆ ಸಂಜೆ 3 ಗಂಟೆಗೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಹಿತ ಹಲವರು ಇದ್ದಾಗಲೇ ಅಲ್ಲಿಗೆ ತಲುಪಿದ ಯುವಕ ಚಾಕುವಿನಿಂದ ಸಂಧ್ಯಾರ ಕುತ್ತಿಗೆಗೆ ಇರಿದಿದ್ದಾನೆ. ಅಲ್ಲಿದ್ದವರು ಬೊಬ್ಬಿಡುತ್ತಿದ್ದಂತೆ ದುಷ್ಕರ್ಮಿ ಓಡಿ ಪರಾರಿಯಾಗಿದ್ದಾನೆ.  ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕಲ್ಲಿಕೋಟೆ ವಾಹನ ಶೋರೂಂನಲ್ಲಿ ಬೆಂಕಿ ಆಕಸ್ಮಿಕ

ಕಲ್ಲಿಕೋಟೆ: ಇಲ್ಲಿನ ಮಾವೂರು ಎಂಬಲ್ಲಿರುವ ವಾಹನ ಶೋರೂಂ ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಶೋರೂಂನಲ್ಲಿದ್ದ ವಾಹನಗಳು ಉರಿದು ನಾಶಗೊಂಡಿವೆ. ಮಾವೂರು ಪೊಲೀಸ್ ಠಾಣೆ ಸಮೀಪದಲ್ಲಿರುವ ದ್ವಿಚಕ್ರವಾಹನ ಶೋರೂಂನಲ್ಲಿ ಇಂದು ಬೆಳಿಗ್ಗೆ ದುರ್ಘಟನೆ ಸಂಭ ವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರು ವುದಾಗಿ ಅಂದಾಜಿಸಲಾಗಿದೆ.

ಕಾರನ್ನು ಹಿಂದಿಕ್ಕಿದ ದ್ವೇಷ: ಇಬ್ಬರು ಯುವಕರಿಗೆ ಹಲ್ಲೆ: 4 ಮಂದಿ ವಿರುದ್ಧ ನರಹತ್ಯಾಯತ್ನ ಕೇಸು

ಮಂಜೇಶ್ವರ: ಕಾರನ್ನು ಹಿಂದಿಕ್ಕ ಲಾಯಿತೆಂಬ ದ್ವೇಷದಿಂದ ಯುವಕರನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಪಾವೂರು ಕೋಡಿ ಹೌಸ್‌ನ ಅಬ್ದುಲ್ ಖಾದರ್ (39), ಮುಹಮ್ಮದ್ ಜೌಹಾರ್ (31) ಎಂಬಿವರು ಹಲ್ಲೆಗೀಡಾ ಗಿದ್ದಾರೆ. ಈ ಬಗ್ಗೆ ಅಬ್ದುಲ್ ಖಾದರ್ ನೀಡಿದ ದೂರಿನಂತೆ ಹೊಸಂಗಡಿಯ ಯಾಕೂಬ್, ಪಾವೂರಿನ ಮುಬಾರಕ್, ಮಚ್ಚಂಪಾಡಿಯ ಜಬ್ಬಾರ್, ಮಂಜೇಶ್ವರದ ಅಶ್ರಫ್ ಎಂಬಿವರ ವಿರುದ್ದ ಮಂಜೇಶ್ವರ ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಸಂಜೆ ವರ್ಕಾಡಿ ಮಚ್ಚಂಪಾಡಿ ಪಳ್ಳ ಎಂಬಲ್ಲಿ  ಘಟನೆ ನಡೆದಿದೆ. ಯುವಕರನ್ನು ತಡೆದು …

ಎಬಿವಿಪಿ ರಾಜ್ಯ ಅಧ್ಯಯನ ಶಿಬಿರ ಆರಂಭ

ಕಾಸರಗೋಡು: ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಜ್ಯ ಅಧ್ಯಯನ ಶಿಬಿರ ಕಾಸರಗೋಡು ಪಾಯಿಚ್ಚಾಲ್ ಚೈತನ್ಯ ವಿದ್ಯಾಲಯದ ಸಭಾಂಗಣದಲ್ಲಿ ಆರಂs ಗೊಂಡಿತು. ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ  ಎಸ್. ಬಾಲಕೃಷ್ಣ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ  ಡಾ. ವೈಶಾಖ್ ಸದಾಶಿವನ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಇ.ಯು. ಈಶ್ವರ ಪ್ರಸಾದ್  ರಾಜ್ಯ ಸಂಘಟನಾ ಕಾರ್ಯದರ್ಶಿ  ವಿಪಿನ್ ಕುಮಾರ್ ಮಾತನಾಡಿದರು. ಶಿಬಿರ ನಾಳೆ ಸಮಾಪ್ತಿಗೊಳ್ಳಲಿದೆ.

ಮಾಲ್ಟದಲ್ಲಿ ಕಟ್ಟಡದಿಂದ ಬಿದ್ದು ಯುವಕ ಸಾವು

ಕಾಸರಗೋಡು: ಕುತ್ತಿಕ್ಕೋಲ್ ನಿವಾಸಿಯೊಬ್ಬರು ಯುರೋಪ್ಯನ್ ದೇಶವಾದ ಮಾಲ್ಟದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುತ್ತಿಕ್ಕೋಲ್ ಶಂಕರಂಪಾಡಿಯ ಅಜೇಶ್ ಕುಮಾರ್ ಮಂಞನಡ್ಕ (40) ಮೃತಪಟ್ಟ ವ್ಯಕ್ತಿ. ಇವರು ನಾಲ್ಕು ವರ್ಷಗಳಿಂದ ಮಾಲ್ಟದಲ್ಲಿ  ಕುಟುಂಬ ಸಮೇತ ವಾಸಿಸಿ ಉದ್ಯೋಗ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಊರಿಗೆ ತಲುಪಿಸಲಿರುವ ಕ್ರಮಗಳು ಆರಂಭಗೊಂಡಿದೆ. ಕುತ್ತಿಕ್ಕೋಲ್ ಶಂಕರಂಪಾಡಿಯ ರಾಮಚಂದ್ರನ್ ನಾಯರ್ (ಆರ್‌ಎಸ್‌ಪಿ ಉದುಮ ಮಂಡಲ ಕಾರ್ಯದರ್ಶಿ)-ದಾಕ್ಷಾಯಿಣಿ ದಂಪತಿಯ ಪುತ್ರನಾದ ಮೃತರು ಪತ್ನಿ ಪ್ರಿಯಾ, ಪುತ್ರಿ ದೇವಿಕ, ಸಹೋದರರಾದ ವಿಜೇಶ್ (ದುಬಾ), ಜಯೇಶ್(ಮಾಲ್ಟ) ಹಾಗೂ ಅಪಾರ …

ನಿಲ್ಲಿಸಿದ್ದ ಬಸ್‌ನ ಹಿಂಬದಿಗೆ ಲಾರಿ ಢಿಕ್ಕಿ: ಇಬ್ಬರು ಅಧ್ಯಾಪಿಕೆಯರಿಗೆ ಗಾಯ

ಕುಂಬಳೆ: ನಿಲ್ಲಿಸಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನ ಹಿಂಬದಿಗೆ ಲಾರಿ ಢಿಕ್ಕಿಹೊಡೆದ ಪರಿಣಾಮ ಇಬ್ಬರು ಅಧ್ಯಾಪಿಕೆಯರು ಗಾಯಗೊಂಡಿದ್ದಾರೆ. ಶಿರಿಯ ಜಿಎಚ್‌ಎಸ್‌ಎಸ್‌ನ ಅಧ್ಯಾಪಿಕೆಯರಾದ ಮಾಯಿಪ್ಪಾಡಿ ನಿವಾಸಿ ನಳಿನಾಕ್ಷರ ಪತ್ನಿ ಅಕ್ಷಿತಾ (28), ಕಲ್ಲಿಕೋಟೆ ನಿವಾಸಿ ಬೇಬಿ (32) ಎಂಬಿವರು ಗಾಯಗೊಂಡವ ರಾಗಿದ್ದಾರೆ. ಈ ಪೈಕಿ ಅಕ್ಷಿತಾರನ್ನು ಕುಂಬಳೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೇಬಿ ಪ್ರಥಮ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದಾರೆ. ನಿನ್ನೆ ಸಂಜೆ ಶಿರಿಯ ಬಸ್ ಸ್ಟಾಪ್‌ನಲ್ಲಿ  ಅಪಘಾತವುಂಟಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದು ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿ …