ಶಿರಿಯದಲ್ಲಿ ವ್ಯಾಪಕ ಕಡಲ್ಕೊರೆತ: ಮೀನು ಕಾರ್ಮಿಕರ 2 ಮನೆ ಅಪಾಯದಂಚಿನಲ್ಲಿ

ಉಪ್ಪಳ: ಕಡಲ್ಕೊರೆತದಿಂದ ಮನೆಗಳು ಅಪಾಯದಂಚಿಗೆ ತಲುಪಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ 15ನೇ ವಾರ್ಡ್ ಶಿರಿಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕಡಲ್ಕೊರೆತ ವ್ಯಾಪಕಗೊಂಡಿದೆ. ಇದರಿಂದ ಈ ಪ್ರದೇಶದ ಮೀನು ಕಾರ್ಮಿಕರಾದ ಅವ್ವಮ್ಮ, ಸುಮತಿ ಎಂಬವರ ಫಲಕೊಡುವ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಮನೆಗಳು ಅಪಾಯದಂಚಿನಲ್ಲಿದೆ. ಈ ಪ್ರದೇಶದಲ್ಲಿ ನಿರ್ಮಿಸಲಾದ ಕಗ್ಗಲ್ಲಿನ ತಡೆಗೋಡೆ ಕುಸಿದು ಬಿದ್ದು ಸಮುದ್ರ ಪಾಲಾಗಿದೆ. ಇದೀಗ ಕುಟುಂಬ ಆತಂಕಗೊA ಡಿದೆ. ಸ್ಥಳಕ್ಕೆ ಶಿರಿಯ ವಿಲೇಜ್ ಕಚೇರಿ, ತಾಲೂಕು, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ …

ರಾಜ್ಯದಲ್ಲಿ ಇನ್ನೂ ನಿಲ್ಲದ ಭಾರತಾಂಬೆಯ ವಿವಾದ

ತಿರುವನಂತಪುರ: ದಿನಗಳ ಹಿಂದೆ ರಾಜ್‌ಭವನದಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ಭಾರತಾಂಬೆಯ ಚಿತ್ರ ಇರಿಸಿದ ಹೆಸರಲ್ಲಿ ಸರಕಾರ ಮತ್ತು ರಾಜ್ಯಪಾಲರ ನಡುವೆ ತಲೆಯೆತ್ತಿದ್ದ ಭಿನ್ನಮತ ಹಾಗೂ ವಿವಾದಗಳು ಶಮನಗೊಳ್ಳದೆ  ಮುಂದುವರಿಯುತ್ತಿದೆ. ಇದರ ಬೆನ್ನಲ್ಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಪತ್ರ ಸಮರವೂ ಆರಂಭಗೊಂಡಿದೆ. ರಾಜ್ ಭವನದಲ್ಲಿ ದಿನಗಳ ಹಿಂದೆ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಶಿಷ್ಟಾಚಾರದ ಉಲ್ಲಂ ಘನೆ ನಡೆಸಿದ್ದಾರೆಂದೂ, ಇದು ಮಾತ್ರ ವಲ್ಲ ರಾಜ್ಯದ ಸಂವಿಧಾನದ ಮುಖ್ಯಸ್ಥ ರನ್ನು ಅಪಮಾನಗೈದಿದ್ದಾರೆಂದೂ ತೋ ರಿಸಿ …

ಕುಂಬಳೆಯಲ್ಲಿ ಗಾಳಿಗೆ ಹಾರಿಹೋಗಿ ರಸ್ತೆಯಲ್ಲಿ ಬಿದ್ದ ಗೂಡಂಗಡಿ, ತ್ಯಾಜ್ಯ ಪೆಟ್ಟಿಗೆ

ಕುಂಬಳೆ: ನಿನ್ನೆ ರಾತ್ರಿ 12.30ರ ವೇಳೆ ಬೀಸಿದ ಬಲವಾದ ಗಾಳಿಗೆ ಸಿಲುಕಿ ಕುಂಬಳೆಯಲ್ಲಿ ಗೂಡಂಗಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪೆಟ್ಟಿಗೆ ಹಾರಿ ಹೋಗಿ ರಸ್ತೆಗೆ ಬಿದ್ದ ಘಟನೆ ನಡೆದಿದೆ. ಬದಿಯಡ್ಕ- ಕುಂಬಳೆ ಕೆಎಸ್ ಟಿಪಿ ರಸ್ತೆಯಲ್ಲಿ ಕುಂಬಳೆ ಪೆಟ್ರೋಲ್ ಪಂಪ್ ಸಮೀಪ ಘಟನೆ ನಡೆದಿದೆ. ಮೊಯ್ದು ಎಂಬವರ ಗೂಡಂಗಡಿ ಹಾಗೂ ಹಸಿರು ಕ್ರಿಯಾ ಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಇರಿಸಲು ಕಬ್ಬಿಣದ ಸರಳು ಬಳಸಿ ನಿರ್ಮಿಸಿದ ಪೆಟ್ಟಿಗೆ ರಸ್ತೆ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ …

ನ್ಯಾಯಾಧೀಶರ ಮನೆಯಿಂದ 6 ಪವನ್ ಚಿನ್ನಾಭರಣ ಕಳವು

ಕೊಚ್ಚಿ: ಹೈಕೋರ್ಟ್‌ನ ನ್ಯಾಯಾಧೀಶ ಎ. ಬದರುದ್ದೀನ್‌ರ ಮನೆಯಲ್ಲಿ ಕಳವು ನಡೆಸಲಾಗಿದೆ. ಮಲಗುವ ಕೊಠಡಿಯಲ್ಲಿ ಕಪಾಟ್‌ನಲ್ಲಿರಿಸಿದ್ದ 6 ಪವನ್ ಚಿನ್ನಾಭರಣಗಳನ್ನು ಕಳವುಗೈಯ್ಯಲಾಗಿದೆ. ಇಂದು ಮುಂಜಾನೆ ಘಟನೆ ತಿಳಿದು ಬಂದಿದೆ. ಕೊಚ್ಚಿ ಪತ್ತಡಿಪಾಲ ಮನೆಯಲ್ಲಿ ಕಳವು ನಡೆದಿದೆ. ಈ ಮನೆಗೆ ಪೊಲೀಸ್ ಕಾವಲಿದೆ. ಮನೆ ಬಗ್ಗೆ ಪರಿಚಯವಿರುವ ಯಾರಾದರೂ ಆಗಿರಬಹುದು ಕಳವಿನ ಹಿಂದೆ ಎಂದು ಶಂಕಿಸಲಾಗಿದೆ. ಕಳಮಶ್ಶೇರಿ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕುಂಬಳೆ-ಬದಿಯಡ್ಕ ಕೆಎಸ್‌ಟಿಪಿ ರಸ್ತೆಯಲ್ಲಿ ಮತ್ತೆ ಅಪಘಾತ: ಸ್ಲ್ಯಾಬ್ ಕುಸಿದು ಚರಂಡಿಯಲ್ಲಿ ಸಿಲುಕಿದ ಪಿಕಪ್

ಕುಂಬಳೆ: ಕುಂಬಳೆ-ಬದಿಯಡ್ಕ ಕೆಎಸ್‌ಟಿಪಿ ರಸ್ತೆಯಲ್ಲಿ ಮತ್ತೆ ವಾಹನ ಅಪಘಾತವುಂಟಾಗಿದೆ. ರಸ್ತೆ ಬದಿ ಚರಂಡಿಯ ಸ್ಲ್ಯಾಬ್ ಕುಸಿದು ಪಿಕಪ್ ವಾಹನ ಸಿಲುಕಿಕೊಂಡಿದೆ. ನಿನ್ನೆ ಸಂಜೆ 7 ಗಂಟೆಗೆ ಕುಂಬಳೆ ಭಾಸ್ಕರನಗರದಲ್ಲಿ  ಅಪಘಾತವುಂಟಾಗಿದೆ. ಭಾಸ್ಕರನಗರದ ಕಟ್ಟಿಗೆ ಡಿಪ್ಪೋಗೆ ಕಟ್ಟಿಗೆ ಹೇರಿ ಪಿಕಪ್ ವಾಹನ ತಲುಪಿತ್ತು. ರಸ್ತೆಯಿಂದ ಡಿಪ್ಪೋದತ್ತ ಸಾಗುತ್ತಿದ್ದಂತೆ ಸ್ಲ್ಯಾಬ್ ಕುಸಿದು ಹಿಂಭಾಗದ ಚಕ್ರಗಳು ಸಿಲುಕಿಕೊಂಡಿದೆ. ಬಳಿಕ ಸೌದೆಯನ್ನು ತೆರವುಗೊಳಿಸಿ ಜೆಸಿಬಿ ಬಳಸಿ ವಾಹನವನ್ನು ಮೇಲಕ್ಕೆತ್ತಲಾಯಿತು. ಇತ್ತೀಚೆಗಷ್ಟೇ ಕುಂಬಳೆಯಲ್ಲಿ ಚರಂಡಿಯ ಸ್ಲ್ಯಾಬ್ ಕುಸಿದು  ಲಾರಿಯೊಂದು ಮಗುಚಿಬಿದ್ದು ಚಾಲಕ ಗಾಯಗೊಂಡ ಘಟನೆ …

ಮದುವೆಯಾಗಿ ನಗ-ನಗದು ಪಡೆದು ಅಪ್ರತ್ಯಕ್ಷಗೊಳ್ಳುತ್ತಿರುವ ಬಹುಪತ್ನಿ ವಲ್ಲಭ ಸೆರೆ

ಕಾಸರಗೋಡು: ಮದುವೆಯಾಗಿ ನಗ-ನಗದು ಪಡೆದ ಬಳಿಕ ಅಪ್ರತ್ಯಕ್ಷಗೊಳ್ಳುತ್ತಿರುವ ಬಹುಪತ್ನೀ ವಲ್ಲಭನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಕಣ್ಣಾಪುರಂ ಮುಳಪ್ಪಿಲಂಗಾಡ್ ಕಡಂಬೂರು ಮಮ್ಮುಕುನ್ನು ವಾಳೆಯಿಲ್ ಹೌಸ್‌ನ ವಿ.ಫಾಸಿಲ್ (51) ಬಂಧಿತ ಆರೋಪಿ. ನಕಲಿ ದಾಖಲುಪತ್ರ ಸೃಷ್ಟಿಸಿ ಚೆರುಕುನ್ನಿನ 54ರ ಹರೆಯದ ವಿಧವೆ ಮಹಿಳೆಯನ್ನು ಮದುವೆಯಾಗಿ ಆಕೆಯನ್ನು ಚೆರುಕುನ್ನಿನ ಅಪಾರ್ಟ್‌ಮೆಂಟ್‌ವೊಂದಕ್ಕೆ ಕರೆದೊಯ್ದು ಬಳಿಕ ಆಕೆಯ 23 ಪವನ್ ಚಿನ್ನದೊಡವೆ ಮತ್ತು ಆಸ್ತಿ ಮಾರಿ ಲಭಿಸಿದ್ದ 28 ಲಕ್ಷ ರೂ.ವನ್ನು ಆರೋಪಿ ಪಡೆದಿದ್ದನು. ಮಾತ್ರವಲ್ಲದೆ ಆ ಮಹಿಳಯ ಹೆಸರಲಿ ರುವ  ಬ್ಯಾಂಕ್ ಸಾಲದ …

ಮಕ್ಕಾಕ್ಕೆ ತೆರಳಿದ್ದ ಆಲಂಪಾಡಿ ನಿವಾಸಿ ನಿಧನ

ಕಾಸರಗೋಡು: ತಾಯಿಯೊಂದಿಗೆ ಹಜ್‌ಗೆ ತೆರಳಿದ ಆಲಂಪಾಡಿ ನಿವಾಸಿ ಮಕ್ಕಾದಲ್ಲಿ ಮೃತಪಟ್ಟರು. ಆಲಂಪಾಡಿ ಸರಕಾರಿ ಹೈಸ್ಕೂಲ್ ಸಮೀಪದ ನಿವಾಸಿ ಎ. ಸುಬೈರ್ (52) ಮೃತಪಟ್ಟವರು. ತಾಯಿ ಬೀಫಾತಿಮರೊಂದಿಗೆ ಹಜ್‌ಗೆ ತೆರಳಿದ್ದರು. ಅಲ್ಲಿನ ಕ್ರಿಯೆಗಳನ್ನು ಪೂರ್ತಿ ಗೊಳಿಸಿದ ಬಳಿಕ ಎರಡು ವಾರದ ಹಿಂದೆ ರಕ್ತದೊತ್ತಡದ ಹಿನ್ನೆಲೆಯಲ್ಲಿ ಮೆದುಳಿಗೆ ಆಘಾತವುಂಟಾಗಿ ಮಕ್ಕಾದ ಅಲ್ನೂರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಅಸೌಖ್ಯ ಗಂಭೀರವಾದ ಹಿನ್ನೆಲೆಯಲ್ಲಿ ಸಹೋದರ ರಶೀದ್ ಎರಡು ದಿನದ ಹಿಂದೆ ಮಕ್ಕಾಗೆ ತೆರಳಿದ್ದರು. ನಿನ್ನೆ ಸಂಜೆ ಸಂಬಂಧಿಕರಿಗೆ ಮರಣ ಮಾಹಿತಿ ಲಭಿಸಿದೆ. ಮೃತದೇಹದ …

ಕುಂಬಳೆ ಶಾಲೆ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಘರ್ಷಣೆ

ಕುಂಬಳೆ: ಕುಂಬಳೆ   ಜಿಎಚ್‌ಎಸ್‌ಎಸ್‌ನ  ವಿದ್ಯಾರ್ಥಿಗಳ ಮಧ್ಯೆ ನಿನ್ನೆ ಮತ್ತೆ ಘರ್ಷಣೆ ನಡೆದಿರುವುದಾಗಿ   ದೂರಲಾಗಿದೆ. ನಿನ್ನೆ ಸಂಜೆ ಶಾಲೆಬಿಟ್ಟ ಬಳಿಕ ಮನೆಗೆ ತೆರಳುತ್ತಿದ್ದ ೯ನೇತರಗತಿ ವಿದ್ಯಾರ್ಥಿಯನ್ನು ಹತ್ತನೇ ತರಗತಿ ವಿದ್ಯಾರ್ಥಿಗಳು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಈ ಸಂಬಂಧ 14 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಸ್‌ಬಿಆರ್ ವರದಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇದೇ ಶಾಲೆಯ 10ನೇ ತರಗತಿ ಹಾಗೂ ಪ್ಲಸ್‌ವನ್ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿತ್ತು.

ರಸ್ತೆ ಕುಸಿದು ಬಿದ್ದು ತಿಂಗಳಾದರೂ ಅಧಿಕಾರಿಗಳು ಮೌನ: ಅಪಾಯ ಭೀತಿಯಲ್ಲಿ ವಾಹನ ಸಂಚಾರ

ಮಂಜೇಶ್ವರ: ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಸ್ತೆ ಕುಸಿದು ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದ್ದರೂ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾ ಗಿದೆ. ಮೀಂಜ ಪಂಚಾಯತ್ ವ್ಯಾಪ್ತಿಗೊಳಪಟ್ಟ ಹೊಸಂಗಡಿ-ಮೀಯಪದವು ರಸ್ತೆಯ ಮಜಿಬೈಲ್ ತಿರುವುನಲ್ಲಿ ರಸ್ತೆ ಕುಸಿದು ಆತಂಕದ ಸ್ಥಿತಿ ಉಂಟಾಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ ಇದಾಗಿದೆ. ಕಳೆದ ತಿಂಗಳು ಸುರಿದ ಮಳೆಗೆ ರಸ್ತೆಯ ಒಂದು ಬದಿ ಕುಸಿದು ಬಿದ್ದಿದ್ದು, ಬಳಿಕ ಕ್ರಮೇಣ ಅಡಿಭಾಗದ ಮಣ್ಣು ಕೊರೆದು ಈಗ ಅರ್ಧ ರಸ್ತೆ ಕುಸಿದು ಹೋಗಿದೆ. …

ಬದಿಯಡ್ಕ-ಏತಡ್ಕ- ಸುಳ್ಯಪದವು ರಸ್ತೆ ಮಧ್ಯೆ ಮಣ್ಣು ರಾಶಿ: ತೆರವಿಗೆ ಕ್ರಮವಿಲ್ಲ; ಸಂಚಾರ ಸಮಸ್ಯೆ

ಏತಡ್ಕ: 24 ವರ್ಷಗಳಿಂದ ದುರಸ್ತಿ ನಡೆಸದ, ಶೋಚನೀಯಗೊಂಡಿದ್ದ ಬದಿಯಡ್ಕ-ಏತಡ್ಕ- ಸುಳ್ಯಪದವು ರಸ್ತೆಗಾಗಿ ಗೋಗರೆದ ಸ್ಥಳೀಯರ ಚಳವಳಿಯಿಂದ 2022ರಲ್ಲಿ ರಸ್ತೆ ದುರಸ್ತಿಗೊಳಿಸಿ ಸುಗಮಗೊಳಿಸಿದಾಗ ಅದೇ ರಸ್ತೆಯಲ್ಲಿ ಈಗ ಬರೆ ಜರಿದು ಬಿದ್ದು ಸಂಚಾರ ಸಮಸ್ಯೆಯಾಗುತ್ತಿದೆ. ಬದಿಯಡ್ಕ- ಸುಳ್ಯಪದವು ರಸ್ತೆಯ ಏತಡ್ಕ ಹಾಗೂ ಬೀಜದಕಟ್ಟೆ ಮಧ್ಯೆ ವಿವಿಧ ಕಡೆ ಬರೆ ಕುಸಿದು ಮಣ್ಣು ರಸ್ತೆಗೆ ಬಿದ್ದು ತಿಂಗಳಾಗುತ್ತಾ ಬಂದರೂ ಮಣ್ಣನ್ನು ತೆರವುಗೊಳಿಸಲು ಕ್ರಮವುಂಟಾಗಿಲ್ಲ. ತಿರುವಿನಿಂದ ಕೂಡಿದ ರಸ್ತೆಯಲ್ಲಿ ಮಣ್ಣು ಬಿದ್ದು ವಾಹನಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ಇದು ಅಪಘಾತಕ್ಕೂ ಕಾರಣವಾಗಲಿದೆ. ಏತಡ್ಕ- …