ಪತಿ ಮನೆಯಲ್ಲಿ ಕಿರುಕುಳ ಸಹಿಸಲಾಗದೆ ತಾಯಿ ಮನೆಗೆ ಹೋದ ಯುವತಿಗೆ ತಂದೆಯಿಂದಲೂ ಹಲ್ಲೆ: ಆತ್ಮಹತ್ಯೆಗೈಯ್ಯಲು ನಿರ್ಧರಿಸಿದ ಯುವತಿಯನ್ನು ರಕ್ಷಿಸಿದ ಯುವಕರು
ಕುಂಬಳೆ: ನಾಲ್ಕು ತಿಂಗಳು ಪ್ರಾಯದ ಮಗುವಿನ ತಾಯಿಯಾದ ಯುವತಿಗೆ ಪೈಶಾಚಿಕ ರೀತಿಯಲ್ಲಿ ಹಲ್ಲೆ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಕುಂಬಳೆ ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ. ಕೊಯಿಪ್ಪಾಡಿ, ಪೆರುವಾಡ್ ಕಡಪ್ಪುರದ ೨೦ರ ಹರೆಯದ ಯುವತಿ ನೀಡಿದ ದೂರಿ ನಂತೆ ಕೇಸು ದಾಖಲಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪತಿ ಪೆರುವಾಡ್ ಕಡಪ್ಪುರದ ಫಿರೋಸ್, ಮನೆಯವರಾದ ಅಬ್ದುಲ್ ರಹ್ಮಾನ್, ನಬೀಸ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ. 2024 ಎಪ್ರಿಲ್ 21ರಂದು ಯುವತಿ ಹಾಗೂ ಒಂದನೇ ಆರೋಪಿಯಾದ ಫಿರೋಸ್ ಮಧ್ಯೆ …