ಹೊಟೇಲ್ ಮಾಲಕನನ್ನು ಇರಿದು ಗಾಯಗೊಳಿಸಿದ ಪ್ರಕರಣ: ಆರೋಪಿಗೆ 7 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಹೊಟೇಲ್ ಮಾಲಕನ ಕುತ್ತಿಗೆ ಇರಿದು ಗಾಯಗೊಳಿಸಿದ  ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (3) 7 ವರ್ಷ ಕಠಿಣ ಸಜೆ, 45,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಪಯ್ಯನ್ನೂರು ಪೆರುಂದಟ್ಟ ಪೋರಕುನ್ನು ತವಿಡಿಶ್ಶೇರಿ ಶ್ರೀಜಿತ್ (ಶಾಜಿ) (4೦) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 1೦ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2021 ಜನವರಿ 23ರಂದು ಚಟ್ಟಂಚಾಲ್ ಪೇಟೆಯಲ್ಲಿರುವ ಹೊಟೇಲ್ ಮಾಲಕ ಕೆ.ಎಂ. ಗೋಪಾಲನ್ …

ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟದ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದು ಆರ್.ಎಸ್.ಎಸ್-ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ

ಕಾಸರಗೋಡು:  1975ರ ಕರಾಳ ಅಧ್ಯಾಯವಾದ ತುರ್ತು ಪರಿಸ್ಥಿತಿಯ ವಿರುದ್ಧ  ನಡೆದ ಹೋರಾಟದ ಮುಂ ಚೂಣಿಯಲ್ಲಿ  ನಿಂತು ಹೋರಾಡಿದ್ದು ಆರ್‌ಎಸ್‌ಎಸ್ ಆಗಿದೆಯೆಂದು ಗೋವಾ ರಾಜ್ಯಪಾಲ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆ ನುಡಿದರು. 1975ರ ತುರ್ತು ಪರಿಸ್ಥಿತಿ ವಿರುದ್ದ ಪ್ರಜಾಪ್ರಭುತ್ವ ಸಂರಕ್ಷಣಾ ಹೋರಾಟ ಸಮಿತಿಯ ಆಶ್ರಯದಲ್ಲಿ  ಕಾಸರ ಗೋಡು ಮುನಿಸಿಪಲ್ ಟೌನ್ ಹಾಲ್‌ನಲ್ಲಿ ನಿನ್ನೆ ನಡೆದ ತುರ್ತು ಪರಿಸ್ಥಿತಿಯ ೫೦ನೇ ವರ್ಷದ ಅಂಗವಾಗಿ ನಡೆದ ಸ್ಮೃತಿ ಸಂಗಮ ಕಾರ್ಯಕ್ರಮವನ್ನು  ಉದ್ಘಾಟಿಸಿ ಶ್ರೀಧರನ್ ಪಿಳ್ಳೆ ಮಾತನಾಡುತ್ತಿದ್ದರು. ತುರ್ತು ಪರಿಸ್ಥಿತಿ ವಿರುದ್ದ  ನಡೆದ …

ಶಿರಿಯ ಸಮುದ್ರದಲ್ಲಿ ಕೆಟ್ಟು ಉಳಿದುಕೊಂಡ ಟಗ್ಗ್ ಬೋಟ್: ದಡಕ್ಕೆ ತರುವ ಪ್ರಯತ್ನ ಮುಂದುವರಿಕೆ

ಉಪ್ಪಳ: ಶಿರಿಯ ಸಮುದ್ರದಲ್ಲಿ ಸಿಕ್ಕಿಹಾಕಿದ ಟಗ್ಗ್ ಬೋಟನ್ನು ದಡಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಕೊಲ್ಲಂನಿAದ ಮುಂಬೈಗೆ ತೆರಳುತ್ತಿದ್ದ ಟಗ್ಗ್ ಬೋಟ್ ಬಂದ್ಯೋಡು ಬಳಿಯ ಶಿರಿಯಾ ಕರಾವಳಿ ಪೋಲೀಸ್ ಠಾಣೆ ವ್ಯಾಪ್ತಿಯ ಸಮುದ್ರದ ಮಧ್ಯೆ ನಿನ್ನೆ ಬೆಳಗ್ಗೆ ಸಿಕ್ಕಿಹಾಕಿಕೊಂಡಿದೆ. ಬೋಟ್ ಶಿರಿಯಾದಿಂದ ಸುಮಾರು 5 ನಾಟಿಕಲ್ ಮೈಲು ದೂರದಲ್ಲಿ ತಾಂತ್ರಿಕ ದೋಷದಿಂದಾಗಿ ಸಮುದ್ರ ಮಧ್ಯೆ ಸಿಲುಕಿಕೊಂಡಿದೆ. ಬೋಟ್‌ನಲ್ಲಿ ಸುಮಾರು 10ರಷ್ಟು ಕಾರ್ಮಿಕರು ಇದ್ದಾರೆ. ಮಾಹಿತಿ ಅರಿತ ಕರಾವಳಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದ್ದು, ತನಿಖೆಯಲ್ಲಿ ಎಂಜಿನ್ ಕೆಟ್ಟು ಹೋಗಿರುವುದೇ …

ಕೆವಿವಿಇಎಸ್ ಮುಳ್ಳೇರಿಯ ಘಟಕ ಮಹಾಸಭೆ, ವೆಲ್ಫೇರ್ ಸೊಸೈಟಿ 25ನೇ ವಾರ್ಷಿಕ ಇಂದು

ಮುಳ್ಳೇರಿಯ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕ ಮಹಾಸಭೆ ಹಾಗೂ ಮುಳ್ಳೇರಿಯ ವ್ಯಾಪಾರಿ ವೆಲ್ಫೇರ್ ಸೊಸೈಟಿಯ ೨೫ನೇ ವಾರ್ಷಿಕದ ಉದ್ಘಾಟನೆ ಇಂದು ಅಪರಾಹ್ನ ೩ ಗಂಟೆಗೆ ಮುಳ್ಳೇರಿಯ ಗಣೇಶ್ ಕಲಾಮಂದಿರದಲ್ಲಿ ನಡೆಯಲಿದೆ. ಮುಳ್ಳೇರಿಯ ವ್ಯಾಪಾರಿ ವೆಲ್ಫೇರ್ ಸೊಸೈಟಿಯ ವಾರ್ಷಿಕ ಮಹಾಸಭೆ ಹಾಗೂ 25ನೇ ವಾರ್ಷಿಕವನ್ನು ಕೆವಿವಿಇಎಸ್ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾದ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸುವರು. ವೆಲ್ಫೇರ್ ಸೊಸೈಟಿ ಅಧ್ಯಕ್ಷ ಸಖಾರಾಂ ಶೆಣೈ ಅಧ್ಯಕ್ಷತೆ ವಹಿಸುವರು. ಘಟಕದ ಅಧ್ಯಕ್ಷ ಗಣೇಶ ವತ್ಸ ಉಪಸ್ಥಿತರಿರುವರು. …

ಆಶಾ ಕಾರ್ಯಕರ್ತೆಯರ ಸಂಘಟನೆಗಳೊಂದಿಗೆ ಜೂನ್ 30ರಂದು ಚರ್ಚೆ

ತಿರುವನಂತಪುರ: ಆಶಾ ಕಾರ್ಯಕರ್ತೆಯರು ಮುಂದಿರಿಸಿರುವ ಬೇಡಿಕೆಗಳ ಬಗ್ಗೆ  ಅಧ್ಯಯನ ನಡೆಸಲು ರಾಜ್ಯ ಸರಕಾರ ನಿಯೋಗಿಸಿದ ಸಮಿತಿ ಜೂನ್ ೩೦ರಂದು ಬೆಳಿಗ್ಗೆ 10.30ರಿಂದ ಆಶಾ ಕಾರ್ಯಕರ್ತರ ವಿವಿಧ ಸಂಘಟನೆಗಳು ಮತ್ತು ವಿವಿಧ ಟ್ರೇಡ್ ಯೂನಿಯನ್‌ಗಳ ಪ್ರತಿನಿಧಿಗಳಿಂದ ಪ್ರತ್ಯೇಕವಾಗಿ ಚರ್ಚೆ ನಡೆಸಿ, ಅವರ ಅಭಿಪ್ರಾಯ ಕ್ರೋಢೀಕರಿಸಲಿದೆ. ಕಳೆದ ಫೆಬ್ರವರಿ 10ರಿಂದ ತಿರುವನಂತಪುರದ ಸೆಕ್ರೆಟರಿಯೇಟ್ ಮುಂದೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಸತ್ಯಾಗ್ರಹ ಆರಂಭಿಸಿರುವ ಆಶಾ ಕಾರ್ಯಕರ್ತರ ಸಂಘಟನೆಗಳೊಂದಿಗೆ ರಾಜ್ಯ ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಹರಿತ ವಿ. ಕುಮಾರ್ ಅಧ್ಯಕ್ಷೆಯಾಗಿರುವ …

ಕಲ್ಲಿಕೋಟೆಯಲ್ಲಿ ವಾಯುದಾಳಿ ತಡೆ ಕೇಂದ್ರ ಸ್ಥಾಪಿಸಲು ತೀರ್ಮಾನ

ಕಲ್ಲಿಕೋಟೆ: ಕ್ಷಿಪಣಿ ದಾಳಿಯನ್ನು ತಡೆಯಲು ಸಾಮರ್ಥ್ಯ ಹೊಂದಿರುವ ಏರ್ ರಾಡರ್ ಡಿಫೆನ್ಸ್ ಒಳಗೊಂಡ ಭಾರತೀಯ ವಾಯುದಾಳಿ ತಡೆಯುವ ಕೇಂದ್ರವನ್ನು ಕಲ್ಲಿಕೋಟೆಯಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಕಲ್ಲಿಕೋಟೆ ಜಿಲ್ಲೆಯ ಕಡಲುಂಡಿ ಗ್ರಾಮದಲ್ಲಿ 40 ಎಕ್ರೆ ಭೂಮಿಯನ್ನು ಬಿಟ್ಟುಕೊಡಲು ರಾಜ್ಯ ಸರಕಾರ ಮುಂದಾಗಿದೆ. ಈ ಜಾಗವನ್ನು ಬಿಟ್ಟುಕೊಡುವಂತೆ ಏರ್‌ಫೋರ್ಸ್ ಕಮಾಂಡಿಂಗ್ ಆಫೀಸರ್ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಈ ಜಾಗವನ್ನು ವಾಯುಪಡೆಗಾಗಿ ಬಿಟ್ಟುಕೊಡುವ ಅಗತ್ಯದ ಕ್ರಮದಲ್ಲಿ ಕಲ್ಲಿಕೋಟೆ ಜಿಲ್ಲಾಧಿಕಾರಿ ತೊಡಗಿದ್ದಾರೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಆ ದೇಶದೊಂದಿಗೆ …

ಹೋಮ್‌ಸ್ಟೇಯಲ್ಲಿ ಮಧ್ಯರಾತ್ರಿ ಯುವತಿ ಮಾನಭಂಗಕ್ಕೆ ಯತ್ನ: ಕೊಲೆ ಪ್ರಕರಣ ಆರೋಪಿ ಸಹಿತ ಇಬ್ಬರ ಬಂಧನ

ಕಾಸರಗೋಡು: ಉದುಮ ಕಾಪಿಲ್‌ನ ಹೋಮ್‌ಸ್ಟೇಯಲ್ಲಿ ಯುವತಿಯನ್ನು ಬೆದರಿಸಿ ಮಾನಭಂಗ ಪಡಿಸಲು ಯತ್ನ ನಡೆದಿದೆ. ಘಟನೆಯಲ್ಲಿ ಕೇಸು ದಾಖಲಿಸಿದ ಬೇಕಲ ಪೊಲೀಸರು ಕೊಲೆ ಪ್ರಕರಣದ ಆರೋಪಿ ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಬಾರ, ಎರೋಳ್ ಕುನ್ನುಮಲ್‌ನ ಮೊಹಮ್ಮದ್ ಇರ್ಷಾದ್ (28), ಎರೋಲ್ ಹೌಸ್‌ನ ಎನ್.ಎಸ್. ಅಬ್ದುಲ್ಲ (29) ಎಂಬಿವರನ್ನು ಬೇಕಲ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್ ಹಾಗೂ ತಂಡ ಬಂಧಿಸಿದೆ. ಸೋಮವಾರ ರಾತ್ರಿ ಕೇಸಿಗೆ ಆಸ್ಪದವಾದ ಘಟನೆ ನಡೆದಿತ್ತು. ಉದ್ಯೋಗ ನಿಮಿತ್ತವಾಗಿ ತೆಂಕಣ ಜಿಲ್ಲೆಯಿಂದ ತಲುಪಿದ ಯುವತಿಯ ದೂರಿನಂತೆ ಇವರಿಬ್ಬರನ್ನು …

ಕೌನ್ಸಿಲಿಂಗ್‌ಗೆ ತಲುಪಿದ ಬಾಲಕಿಗೆ ಕಿರುಕುಳ : ವೈದ್ಯ ಪೋಕ್ಸೋ ಪ್ರಕಾರ ಬಂಧನ

ಕಾಸರಗೋಡು: ಕೌನ್ಸಿಲಿಂಗ್‌ಗೆ ಬಂದ 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾದ ವೈದ್ಯನನ್ನು ಬಂಧಿಸಲಾಗಿದೆ.  ಕಾಞಂಗಾಡ್ ಕುಶಾಲ್‌ನಗರ ರೈಲ್ವೇ ಗೇಟ್ ಬಳಿಯ ಡಾ| ವಿಶಾಖ್ ಕುಮಾರ್‌ನನ್ನು  ಹೊಸದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ತಪಾಸಣೆ ಬಳಿಕ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. 2023 ಸೆಪ್ಟಂಬರ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಶಿಕ್ಷಣದಲ್ಲಿ ಹಿಂದುಳಿದ ಹಿನ್ನೆಲೆಯಲ್ಲಿ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು …

ತುರ್ತು ಪರಿಸ್ಥಿತಿ ಘೋಷಣೆಗೆ ಇಂದು 50 ವರ್ಷ: ದೇಶಾದ್ಯಂತ ಸಂವಿಧಾನ ಹತ್ಯಾ ದಿವಸ್ ಆಚರಣೆ

ಕಾಸರಗೋಡು: ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವೆಂದೇ ಕರೆಯಲಾಗುತ್ತಿರುವ ತುರ್ತು ಪರಿಸ್ಥಿತಿಯ ಘೋಷಣೆಗೆ ಇಂದು ೫೦ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದು ದೇಶವ್ಯಾಪಿಯಾಗಿ ಸಂವಿಧಾನ ಹತ್ಯಾ ದಿವನವನ್ನಾಗಿ ಆಚರಿಸುತ್ತಿದೆ. ಇದರ ಪ್ರಯುಕ್ತ ಒಂದು ವರ್ಷವಿಡೀ ತುರ್ತು ಪರಿಸ್ಥಿತಿಯಲ್ಲಿದ್ದ  ಪ್ರಜಾಪ್ರಭುತ್ವ ಧ್ವಂಸನಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮಗಳಿಗೂ ಇಂದು ಚಾಲನೆ ನೀಡಲಾಯಿತು. 1975ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಪತನಗೊಳ್ಳುತ್ತಿದ್ದಂತೆಯೇ ಅಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದರು.1977ರಲ್ಲಿ ಜನತಾ ಪಕ್ಷ ಅಭೂತಪೂರ್ವ ಜಯಸಾಧಿಸುವುದರೊಂದಿಗೆ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಲಾಗಿತ್ತು. …

ಮನೆಗೆ ನುಗ್ಗಿ ಯುವತಿಗೆ ದೌರ್ಜನ್ಯ: ಯುವಕನ ವಿರುದ್ಧ ಕೇಸು

ಕಾಸರಗೋಡು: ಮನೆಗೆ ಅತಿಕ್ರಮಿಸಿ ನುಗ್ಗಿ 20ರ ಹರೆಯದ ವಿವಾಹಿತ ಯುವತಿಗೆ ದೌರ್ಜನ್ಯಗೈದ ಆರೋಪದಂತೆ ಯುವಕನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪಡನ್ನಕ್ಕಾಡ್ ಅನಂತನ್‌ಪಳ್ಳದ ಅಭಿಲಾಶ್ (25) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಮೇ 17ರಂದು ಬೆಳಿಗ್ಗೆ 10 ಗಂಟೆಗೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿ ಮಾತ್ರವೇ ಮನೆಯಲ್ಲಿದ್ದ ವೇಳೆ ಅಲ್ಲಿಗೆ ಅತಿಕ್ರಮಿಸಿ ನುಗ್ಗಿದ ಆರೋಪಿ ದೌರ್ಜನ್ಯಗೈದುದಾಗಿ ದೂರಲಾಗಿದೆ.