ಮಾರಾಟಕ್ಕಾಗಿ ಸಾಗಿಸುತ್ತಿದ್ದ ಗಾಂಜಾ ಸಹಿತ ಯುವಕ ಸೆರೆ

ಕಾಸರಗೋಡು: ಮಾರಾಟ ಕ್ಕೆಂದು  ಸಾಗಿಸುತ್ತಿದ್ದ ಗಾಂಜಾ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಮಾಂಙಾಡ್ ಆರ್ಯಡ್ಕ ನಿವಾಸಿ ಕಲಂದರ್ ಶಾಫಿ (32) ಎಂಬಾತನನ್ನು ಮೇಲ್ಪರಂಬ ಎಸ್‌ಐ ವಿ.ಕೆ. ಅನೀಶ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ. ಈತನ ಕೈಯಿಂದ 46.44 ಗ್ರಾಂ ಗಾಂಜಾ ವಶಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ  ಕಳನಾಡು-ಚಟ್ಟಂಚಾಲ್ ರಸ್ತೆಯಲ್ಲಿ  ನೀರಿನ ಟ್ಯಾಂಕ್ ಸಮೀಪದಿಂದ ಈತನನ್ನು ಬಂಧಿಸಲಾಗಿದೆ.  ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಈತನ ದೇಹ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆ ಯಾಗಿದೆ. ಆರೋಪಿಯ ಬಂಧನ ದಾಖಲಿಸಿ ಜಾಮೀನಿನಲ್ಲಿ  ಬಿಡುಗಡೆ ಗೊಳಿಸಿರುವುದಾಗಿ …

15ರ ಹರೆಯದ ಬಾಲಕ ನಾಪತ್ತೆ

ಉಪ್ಪಳ: ಮಂಗಲ್ಪಾಡಿ ಅಡ್ಕ ನಿವಾಸಿಯಾಗಿರುವ 15ರ ಹರೆಯದ ಬಾಲಕನೋರ್ವ ನಿನ್ನೆ ಬೆಳಿಗ್ಗೆ ಶಾಲೆಗೆಂದು ಹೋದ ಬಳಿಕ ನಾಪತ್ತೆಯಾಗಿರು ವುದಾಗಿ ಆತನ ತಾಯಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ ಆರಂಭಿಸಿದ್ದಾರೆ.

ಅಂಗಡಿಗೆ ನುಗ್ಗಿದ ಕಳ್ಳರು: ವಿವಿಧ ಸಾಮಗ್ರಿಗಳೊಂದಿಗೆ ಪರಾರಿ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ ಬಜಾರ್‌ನಲ್ಲಿರುವ ಜಿನಸು ಅಂಗಡಿಗೆ ಕಳ್ಳರು ನುಗ್ಗಿ ವಿವಿಧ ಸಾಮಗ್ರಿಗಳನ್ನು ದೋಚಿದ್ದಾರೆ. ಕೆ.ಎಂ. ಚಂದ್ರನ್ ಎಂಬವರ ಮಾಲಕತ್ವದಲ್ಲಿರುವ ಅಂಗಡಿಯ ಮುಂಭಾಗದ ಶಟರ್ ಮುರಿದು ಕಳ್ಳರು ನುಗ್ಗಿರುವುದಾಗಿ ತಿಳಿದುಬಂದಿದೆ.  2000 ರೂಪಾಯಿ ಮೌಲ್ಯದ ಸಿಗರೇಟು ಹಾಗೂ 2000 ರೂಪಾಯಿಗಳ ಬೇಕರಿ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆಯೆಂದು ವ್ಯಾಪಾರಿ ಚಂದ್ರನ್ ತಿಳಿಸಿದ್ದಾರೆ. ಇತರಸಾಮಗ್ರಿ ಗಳನ್ನು ಅಂಗಡಿಯೊಳಗೆ ಚಲ್ಲಾಪಿಲ್ಲಿಗೊ ಳಿಸಲಾಗಿದೆ. ಇಂದು ಬೆಳಿಗ್ಗೆ ಅಂಗಡಿ ತೆರೆಯಲು ತಲುಪಿದಾಗಲೇ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಬೇಕಲ  ಪೊಲೀಸರು …

ಪಿಟ್-ಎನ್‌ಡಿಪಿಎಸ್ ಕಾನೂನು ಪ್ರಕಾರ ಹಲವು ಮಾದಕದ್ರವ್ಯ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಸತತವಾಗಿ ಮಾದಕದ್ರವ್ಯ ಮಾರಾಟ ದಂಧೆಯಲ್ಲಿ ನಿರತರಾದವರನ್ನು ಸೆರೆಹಿಡಿಯಲೆಂದು ಹೊಸದಾಗಿ ರೂಪು ನೀಡಿದ ಪಿಟ್ ಎನ್ ಡಿಪಿಎಸ್  ಕಾನೂನು ಪ್ರಕಾರ ಹಲವು ಮಾದಕದ್ರವ್ಯ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಹೊಸದುರ್ಗ  ಕೊಳವಂiiಲ್ ಇಟ್ಟುಮ್ಮಲ್ ಪೊರೆಯಿಲ್ ಹೌಸ್‌ನ  ನಿಝಾಮುದ್ದೀನ್ ಪಿ.ಪಿ (35) ಬಂಧಿತ ಆರೋಪಿ. ನಿರಂತರವಾಗಿ ಮಾದಕದ್ರವ್ಯ ಪ್ರಕರಣಗಳಲ್ಲಿ ಆರೋಪಿಯಾಗಿರುವವರ ವಿರುದ್ದ ಪ್ರಿವೆನ್ಶನ್ ಆಫ್ ಇಲ್ಲಿಸಿಟ್ ಟ್ರಾಫಿಕ್  ಎನ್‌ಡಿಪಿಎಸ್  (ಪಿಟ್-ಎನ್‌ಡಿಪಿಎಸ) ಪ್ರಕಾರ ಬಂಧಿಸುವ ಹೊಸ ಕಾನೂನಿಗೆ ರಾಜ್ಯ ಸರಕಾರ ಇತ್ತೀಚೆಗೆ ರೂಪು ನೀಡಿತ್ತು. ಆ ಕಾನೂನಿನ ಪ್ರಕಾರ …

ನೀರು ತರಲು ಹೋದ ಮಹಿಳೆ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ನೀರು ತರಲು ಹೋದ ಮಹಿಳೆ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪೈಕ ಮಣವಾಟಿ  ಮಖಾಂ ಬಳಿ ನಿವಾಸಿ ಹಸೈನಾರ್ ಎಂಬವರ ಪತ್ನಿ ಮೈಮೂನ (43) ಸಾವನ್ನಪ್ಪಿದ ಮಹಿಳೆ. ಮನೆ ಪಕ್ಕದ ಬಾವಿಯ ನೀರು ಕಲುಷಿತವಾಗಿರುವ ಹಿನ್ನೆಲೆಯಲ್ಲಿ  ಮೈಮೂನ  ಅಲ್ಪ ದೂರದಲ್ಲಿರುವ ಬಾವಿಯಿಂದ ನೀರು ತರಲು ನಿನ್ನೆ ಬೆಳಿಗ್ಗೆ ಹೋಗಿದ್ದರು. ತಡವಾದರೂ  ಮನೆಗೆ ಹಿಂತಿರುಗದಾಗ ಮನೆಯವರು  ಶೋಧ ಆರಂಭಿಸಿದಾಗ ಬಾವಿ ಬಳಿ ನೀರಿನ ಪಾತ್ರ ಪತ್ತೆಯಾಗಿದೆ. ಇದರಿಂದ ಶಂಕೆಗೊಂಡು   ಬಾವಿಯಲ್ಲಿ ನೋಡಿದಾಗ ಅದರಲ್ಲಿ  ಮೈಮೂನ …

ಕಳ್ಳನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ದೆಹಲಿ: ಕಾಸರಗೋಡಿನ ವಿವಿಧ ಸ್ಥಳಗಳಿಂದ 2013ರಲ್ಲಿ ಕಳ್ಳನೋಟು ವಶಪಡಿಸಿಕೊಂಡ  ಪ್ರಕರಣದಲ್ಲಿ ಆರೋಪಿ ಸೆರೆಗೀಡಾಗಿ ದ್ದಾನೆ. 12 ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಉಡುಪಿ ನಿವಾಸಿ ಮೊಯ್ದಿನಬ್ಬ ಉಮ್ಮರ್ ಬಿಯಾರ್ ಎಂಬಾತನನ್ನು ಎನ್‌ಐಎ ಬಂಧಿಸಿದೆ. ದುಬಾಯಿ ಯಿಂದ ಇಂಟರ್‌ಪೋಲ್ ಹಾಗೂ ಸಿಬಿಐ ಸಹಾಯದೊಂದಿಗೆ ಈತನನ್ನು ಮುಂಬೈಗೆ ತಲುಪಿಸಿ ಬಂಧಿಸಲಾಗಿದೆ. ಕಳ್ಳನೋಟುಗಳನ್ನು ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಭಾರತಕ್ಕೆ ತಲುಪಿಸಿದ ಆರೋಪದಂತೆ ಎನ್‌ಐಎ ಕೊಚ್ಚಿ ಯೂನಿಟ್ ಮೊಯ್ದಿನಬ್ಬ ಉಮ್ಮರ್ ಬಿಯಾರ್ ವಿರುದ್ಧ 4 ಕೇಸುಗಳನ್ನು ದಾಖಲಿಸಿ ಕೊಂಡಿತ್ತು.  31 ಲಕ್ಷ …

ಅಪ್ರಾಪ್ತನ ವಾಹನ ಚಲಾವಣೆ: ಆರ್.ಸಿ. ಮಾಲಕನ ವಿರುದ್ಧ ಕೇಸು

ಮಂಜೇಶ್ವರ: ಬಾಲಕರು ವಾಹನ ಚಲಾಸುತ್ತಿರುವುದು ವ್ಯಾಪಕಗೊಂಡಿದ್ದು, ಇದನ್ನು ತಡೆಗಟ್ಟಲು ಮಂಜೇಶ್ವರ ಪೊಲೀ ಸರು ವಾಹನ ತಪಾಸಣೆಯನ್ನು ಬಿಗುಗೊಳಿಸಿದ್ದಾರೆ.ಇದರಂತೆ ನಿನ್ನೆ ಮಧ್ಯಾಹ್ನ ಸೋಂಕಾಲು ಬಸ್ ನಿಲ್ದಾಣ ಬಳಿಯಲ್ಲಿ ಎಸ್.ಐ ಉಮೇಶ್.ಕೆ.ಆರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೈವಳಿಕೆ ಭಾಗದಿಂದ ಕೈಕಂಬ ಕಡೆಗೆ ಅಪ್ರಾಪ್ತ ಸಂಚರಿಸುತ್ತಿದ್ದ ಸ್ಕೂಟರ್‌ನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಈ ಸಂಬAಧ ಆರ್.ಸಿ ಮಾಲಕನ ವಿರುದ್ದ ಕೇಸು ದಾಖಲಿಸಲಾಗಿದೆ. ಒಂದು ತಿಂಗಳಲ್ಲಿ ಸುಮಾರು 15ರಷ್ಟು ಅಪ್ರಾಪ್ತರು ದ್ವಿಚಕ್ರ ಸಹಿತ ಇತರ ವಾಹನಗಳು ಚಲಾಯಿಸಿದ ಪ್ರಕರಣಗಳು ದಾಖಲಾಗಿದ್ದು, …

ಹೊಸ ಬಸ್ ನಿಲ್ದಾಣ ಪ್ರವೇಶಿಸದ ಕೆಎಸ್‌ಆರ್‌ಟಿಸಿ ಬಸ್‌ಗಳು: ಪ್ರಯಾಣಿಕರಿಗೆ ಸಮಸ್ಯೆ

ಕಾಸರಗೋಡು: ಬೇವಿಂಜೆಯಲ್ಲಿ ಸಾರಿಗೆ ಅಡಚಣೆ ಉಂಟಾದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಕಾಸರಗೋಡು ಹೊಸ ಬಸ್ ನಿಲ್ದಾಣಕ್ಕೆ ಪ್ರವೇಶಿಸುವು ದಿಲ್ಲವೆಂಬ ಆರೋಪವುಂಟಾಗಿದೆ. ಪ್ರೆಸ್‌ಕ್ಲಬ್  ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಹಳೆ ಬಸ್ ನಿಲ್ದಾಣ ಮೂಲಕ ಬಸ್‌ಗಳು ಡಿಪ್ಪೋಗೆ ತೆರಳುತ್ತವೆ. ಇದರಿಂದ ಹೊಸ ಬಸ್ ನಿಲ್ದಾಣ ಮೂಲಕ ಚೆರ್ಕಳ ಭಾಗಕ್ಕೆ ತೆರಳುವವರು ಸಮಸ್ಯೆ ಎದುರಿಸಬೇಕಾಗುತ್ತಿದೆ. ಕೆಎಸ್‌ಆರ್‌ಟಿಸಿಯಿಂದ 10 ರೂಪಾಯಿ ಹೆಚ್ಚುವರಿಯಾಗಿ ನೀಡಿ ಹೊಸ ಬಸ್ ನಿಲ್ದಾಣಕ್ಕೆ ತೆರಳಬೇಕಾದ ಸ್ಥಿತಿ ಉಂಟಾಗಲಿದೆಯೆಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಇದೇ ವೇಳೆ ರಾಷ್ಟ್ರೀಯ …

ಎಲ್ಲೆಲ್ಲೂ ಸ್ಮಾರ್ಟ್ ಆಗುತ್ತಿದೆ: ಆದರೆ ಚಿಪ್ಪಾರಿನಲ್ಲಿ ಅಂಗನವಾಡಿಯಲ್ಲಿ ಅವ್ಯವಸ್ಥೆ; ನೂತನ ಕಟ್ಟಡಕ್ಕೆ ಮೀನ-ಮೇಷ

ಪೈವಳಿಕೆ: ಜಿಲ್ಲೆಯ ಅಂಗನವಾಡಿ ಗಳು ಸ್ಮಾರ್ಟ್ ಆಗುತ್ತಿರುವ ಮಧ್ಯೆ ಪೈವಳಿಕೆ ಪಂಚಾಯತ್‌ನ 19ನೇ ವಾರ್ಡ್ ಚಿಪ್ಪಾರುನಲ್ಲಿರುವ ಅಂಗನವಾಡಿ ಕಟ್ಟಡ ಬಿರುಕು ಬಿಟ್ಟು ಯೋಗ್ಯವಲ್ಲವೆಂದು ಅಧಿಕಾರಿಗಳು ತಿಳಿಸಿ ಹಲವು ವರ್ಷ ಕಳೆದರೂ ನೂತನ ಕಟ್ಟಡ ನಿರ್ಮಾಣಕ್ಕೆ ಮೀನ-ಮೇಷ ಎಣಿಸುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಇದೀಗ ಅವ್ಯವಸ್ಥೆಹೊಂದಿರುವ ಅಮ್ಮೇರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ಕಾರ್ಯಾಚರಿಸುತ್ತಿದೆ. ಆದರೆ ಸರಿಯಾದ ದಾರಿಯ ಸೌಕರ್ಯ ಇಲ್ಲದಿರುವುದ ರಿಂದ ಮಕ್ಕಳ ಸಂಖ್ಯೆ ಕಡಿಮೆಗೊಂ ಡಿರುವುದಾಗಿ ಊರವರು ತಿಳಿಸಿದ್ದಾರೆ. ಈ ಹಿಂದೆ ಅಧಿಕಾರಿಗಳು ಅಂಗನವಾ ಡಿಗೆ ಭೇಟಿ …

ದೇಶದಲ್ಲಿಯೇ ಮೊದಲಾಗಿ ಆನ್‌ಲೈನ್ ಭೂಮಿ ಹಸ್ತಾಂತರ ಮಾದರಿಯಾದ ಉಜಾರು ಉಳುವಾರು ವಿಲ್ಲೇಜ್ ಕಚೇರಿ

ಕುಂಬಳೆ: ದೇಶದಲ್ಲೇ ಪ್ರಥಮವಾಗಿ ಭೂಮಿ ಹಸ್ತಾಂತರ ಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಸಿದ ಜಿಲ್ಲೆಯ ಮೊದಲ ವಿಲ್ಲೇಜ್ ಕಚೇರಿಯಾಗಿದೆ ಉಜಾರು ಉಳುವಾರು. ಆನ್‌ಲೈನ್‌ನಲ್ಲಿ ಮೊದಲ ಆಧಾರ ದಾಖಲಾತಿ ನಡೆಸಲಾಯಿತು. ಕಂದಾಯ, ಸರ್ವೆ, ನೋಂದಾವಣೆ ಇಲಾಖೆಗಳು ಜಂಟಿಯಾಗಿ ಸಿದ್ಧಪಡಿಸಿದ ‘ಎಂಡೆ ಭೂಮಿ’ ಪೋರ್ಟಲ್ ಮೂಲಕ ಭೂಮಿ ಹಸ್ತಾಂತರ ಆನ್‌ಲೈನ್ ಆಗಿ ನಡೆಸಲಾಗಿದೆ. ಸಂಪೂರ್ಣ ಡಿಜಿಟಲ್ ಸರ್ವೆ ದೇಶದಲ್ಲಿಯೇ ಮೊದಲಾಗಿ ಪೂರ್ತಿಗೊಳಿಸಿದ ವಿಲ್ಲೇಜ್ ಆಗಿದೆ ಉಜಾರು ಉಳುವಾರು. ಆನ್‌ಲೈನ್‌ನಲ್ಲಿ ಅರ್ಜಿ ನೀಡಿದರೆ ಎಲ್ಲವೂ ಆನ್‌ಲೈನ್‌ನಲ್ಲೇ ಲಭಿಸುವ ದೇಶದ ಪ್ರಥಮ ವಿಲ್ಲೇಜ್ ಆಗಿ ಈ …