ಅನಧಿಕೃತ ಸೊತ್ತು ಖರೀದಿ ದೂರಿನಲ್ಲಿ ಕ್ರಮ: ಸಿಪಿಎಂ ಚೆರ್ವತ್ತೂರು ಏರಿಯಾ ಕಾರ್ಯದರ್ಶಿ ಮಾಧವನ್ ಮಣಿಯರ ತೆರವು

ಕಾಸರಗೋಡು: ಸಿಪಿಎಂ ಚೆರ್ವ ತ್ತೂರು ಏರಿಯಾ ಕಾರ್ಯದರ್ಶಿ ಹುದ್ದೆ ಯಿಂದ ಮಾಧವನ್ ಮಣಿಯರನನ್ನು ತೆರವುಗೊಳಿಸಲಾಗಿದೆ. ಕೆ. ಬಾಲಕೃಷ್ಣನ್ ಕಾರಕ್ಕಾಡ್ ಹೊಸ ಏರಿಯಾ ಕಾರ್ಯ ದರ್ಶಿಯಾಗಿದ್ದಾರೆ. ಸೊತ್ತು ಖರೀದಿಗೆ ಸಂಬಂಧಿಸಿ ಆರೋಪ ಮೂಡಿಬಂದ ಹಿನ್ನೆಲೆಯಲ್ಲಿ  ಈ ಕ್ರಮ ಕೈಗೊಳ್ಳಲಾ ಗಿದೆ. ಜಿಲ್ಲಾ ಸಮಿತಿ ಸಭೆಯಲ್ಲಿ ಮಾಧವನ್ ಮಣಿಯರ ವಿರುದ್ಧ ದೂರು ಮೂಡಿಬಂದಿತ್ತು. ನಿನ್ನೆ ನಡೆದ ಏರಿಯಾ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಿಪಿಎಂ ರಾಜ್ಯ ಸೆಕ್ರೆಟ ರಿಯೇಟ್ ಸದಸ್ಯ ಎಂ.ವಿ. ಜಯ ರಾಜ್‌ರ ಉಪಸ್ಥಿತಿಯಲ್ಲಿ ಸಭೆ …

ಗೆಳೆಯರೊಂದಿಗೆ ಕೊಳದಲ್ಲಿ ಈಜುತ್ತಿದ್ದಾಗ ಮುಳುಗಿ ಯುವಕ ಮೃತ್ಯು

ಹೊಸದುರ್ಗ: ಗೆಳೆಯರೊಂದಿಗೆ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಯುವಕ ಮುಳುಗಿ ಮೃತಪಟ್ಟರು. ಇಡುಕ್ಕಿ ಚೆರುತೋಣಿ ನಿವಾಸಿ ರೆಜಿ ಎಂಬವರ ಪುತ್ರ ಅಖಿಲ್ ಅಗಸ್ಟಿನ್ (22) ಮೃತಪಟ್ಟ ಯುವಕ. ನಿನ್ನೆ ಸಂಜೆ 5.30ರ ವೇಳೆ ಕರಿವೆಳ್ಳೂರು ವಡಕ್ಕೇ ಮಣಕ್ಕಾಟ್‌ನ ಗೆಳೆಯನ ಮನೆಗೆ ಈತ ತಲುಪಿದ್ದರು. ನಾಲ್ಕು ಮಂದಿ ಗೆಳೆಯರೊಂದಿಗೆ ಕೊಳದಲ್ಲಿ ಈಜುತ್ತಿದ್ದ ಮಧ್ಯೆ ಅಖಿಲ್ ಮುಳುಗಿದ್ದಾರೆ. ಈ ವೇಳೆ ಪರಿಸರದಲ್ಲಿದ್ದವರು ರಕ್ಷಣಾ ಚಟುವಟಿಕೆ ನಡೆಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಾಹಿತಿ …

ಸೂರಂಬೈಲು ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ 28ರಂದು

ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿ ಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಕನ್ನಡ ಸಾಹಿತ್ಯ ಅಭಿಯಾನವಾದ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಶೈಕ್ಷಣಿಕ ಶಿಬಿರದ 2ನೇ ಕಾರ್ಯಕ್ರಮ ಜೂನ್ 28ರಂದು ಬೆಳಗ್ಗೆ 10ರಿಂದ ಕುಂಬಳೆ ಸಮೀಪದ ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಆರಿಕ್ಕಾಡಿ ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಪುರೋಹಿತ ಕೆ. ರಾಮಕೃಷ್ಣ ಆಚಾರ್ಯ ಉದ್ಘಾಟಿಸುವರು. …

ಶಾಲೆಗಳಲ್ಲಿ ಮಕ್ಕಳ ಹಾಜರು: ಸ್ಥಳೀಯಾಡಳಿತ ಸಂಸ್ಥೆಗಳಿಂದ ಪರಿಶೀಲನೆ

ತಿರುವನಂತಪುರ: ಶಾಲೆಗಳಲ್ಲಿ ಮಕ್ಕಳ ಹಾಜರಿ ಇನ್ನು ಮುಂದೆ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಪರಿಶೀಲಿಸಲಾಗುವುದು. ಈ ವರ್ಷದ ಮಾದಕ ವಿರುದ್ಧ ಅಭಿಯಾನದಂ ಗವಾಗಿ ಪ್ರತೀ ಸ್ಥಳೀಯಾಡಳಿತ ಸಂಸ್ಥೆಗಳು ಅವುಗಳ ವ್ಯಾಪ್ತಿಯಲ್ಲಿರುವ ಶಾಲಾ ಮಕ್ಕಳ ರಿಜಿಸ್ಟರ್‌ನ ಹೊಣೆಗಾರಿಕೆ ವಹಿ ಸುವಂತೆ ಸರಕಾರ ನಿರ್ದೇಶ ನೀಡಿದೆ. ಇದರ ಜೊತೆಗೆ ಪ್ರತೀ ದಿನದ ಮಕ್ಕಳ ಹಾಜರಿಯನ್ನು ಲೆಕ್ಕಹಾಕಿ ಅಗತ್ಯದ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.  ಪಂಚಾಯತ್ ಮಟ್ಟದ ಜಾಗ್ರತಾ ಸಮಿತಿಗಳು ಜನಜಾಗ್ರತಾ ಸಮಿತಿ ಸಭೆ ಕರೆದು ಆಯಾ ಪ್ರದೇಶದ ಮಾದಕ ವಿರುದ್ಧ ಚಟುವಟಿಕೆಗಳಿಗೆ ನೇತೃತ್ವ …

ಸಂತಡ್ಕ: ಶ್ರೀ ವರಮಹಾಲಕ್ಷ್ಮಿ ಪೂಜೆ ಪೂರ್ವಭಾವಿ ಸಭೆ

ಉಪ್ಪಳ: ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪರಿಸರದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಸಂತಡ್ಕದ ವತಿಯಿಂದ ಆ. 8ರಂದು ನಡೆಯುವ 22ನೇ ವರ್ಷದ ಶ್ರೀ ವರಮಹಾಲಕ್ಷಿ÷್ಮÃ ಪೂಜೆಯ ಪೂರ್ವಭಾವಿ ಸಭೆ ಇತ್ತೀಚೆಗೆ ಶ್ರೀ ಕ್ಷೇತ್ರ ಪರಿಸರದಲ್ಲಿ ಜರಗಿತು. ಸಂಘಟನೆಯ ಪ್ರಮುಖರು ಹಾಗೂ ಊರವರು ಭಾಗವಹಿಸಿ ತಯಾರಿ ಬಗ್ಗೆ ಚರ್ಚಿಸಿದರು.

ವಿಷ ಸೇವಿಸಿ ಆಸ್ಪತ್ರೆಯಲ್ಲಿದ್ದ ಯುವತಿ ಮೃತ್ಯು

ಕುಂಬಳೆ: ಮಂಗಳೂರಿನ ಪತಿ ಮನೆಯಿಂದ ಕುಂಬಳೆ ಪೆರು ವಾಡಿನಲ್ಲಿರುವ ತಾಯಿ ಮನೆಗೆ ಬಂದು ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಳು. ಪೆರುವಾಡ್ ನಿವಾಸಿ ಅಬ್ದುಲ್ ರಹ್ಮಾನ್-ನಫೀಸ ದಂಪತಿಯ ಪುತ್ರಿಯೂ ಮಂಗಳೂರು ನಿವಾಸಿ ನಸೀಫ್ ಎಂಬವರ ಪತ್ನಿಯಾದ ಸಾಜಿದ ಬಾನು (32) ಮೃತಪಟ್ಟ ಯುವತಿ. ಸಾಜಿದಬಾನು ಕಳೆದ ಗುರುವಾರ ಪತಿ ಮನೆಯಿಂದ ಮಕ್ಕ ಳೊಂದಿಗೆ ಪೆರುವಾಡ್‌ಗೆ ಬಂದಿದ್ದರು. ಈ ವೇಳೆ  ಮನೆಯಲ್ಲಿ ಸಹೋದರನ ಪತ್ನಿ ಮಾತ್ರವೇ ಇದ್ದರು. ಇತರರು ಸಂಬಂಧಿಕರೋರ್ವರ ಮದುವೆಗೆ ತೆರಳಿದ್ದರೆನ್ನಲಾಗಿದೆ. ಈ …

ತೆಂಗಿನೆತ್ತರಕ್ಕೆ ಬೆಳೆದ ತೆಂಗಿನಕಾಯಿ ದರ: ಕಳವುಗೈದ ಆರೋಪಿ ಸೆರೆ

ಕಾಸರಗೋಡು: ತೆಂಗಿನ ಕಾಯಿಯ ಬೆಲೆ ಸಾರ್ವಕಾಲಿಕ ದಾಖಲೆಯಲ್ಲಿ. 1 ಕಿಲೋ ಕಾಯಿಗೆ ನಿನ್ನೆ 72 ರೂ.ನಿಂದ 74 ರೂ.ವರೆಗೆ ಕೃಷಿಕರಿಗೆ ಲಭಿಸಿದೆ. ಉತ್ತಮ ತೆಂಗಿನಕಾಯಿಗೆ 74 ರೂ.ನಂತೆ ಖರೀದಿಸಿರುವುದಾಗಿ ಪೆರಿಯದ ಓರ್ವ ವ್ಯಾಪಾರಿ ತಿಳಿಸಿದ್ದಾರೆ. ತೆಂಗಿನೆಣ್ಣೆಯ ಬೆಲೆಯೂ ಗಗನಕ್ಕೇರುತ್ತಿದೆ. ಈಗ 400 ರೂ. ದರದಲ್ಲಿ ಲೀಟರ್ ತೆಂಗಿನೆಣ್ಣೆ ಮಾರಾಟವಾಗುತ್ತಿದೆ. ಇದು ಇನ್ನೂ ಹೆಚ್ಚಲು ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.  ತೆಂಗಿನಕಾಯಿ ಬೆಲೆ ಹೆಚ್ಚಳವಾಗುತ್ತಿರುವಾಗಲೇ ತೆಂಗಿನಕಾಯಿ ಕಳವು ಕೂಡಾ ಹೆಚ್ಚಾಗುತ್ತಿರುವುದಾಗಿ ಕೃಷಿಕರು ದೂರುತ್ತಾರೆ. 20ರಷ್ಟು ತೆಂಗಿನಕಾಯಿ …

ರಾಷ್ಟ್ರೀಯ ಹೆದ್ದಾರಿ ಬೇವಿಂಜೆ ಮೂಲಕ ಐದು ದಿನಗಳೊಳಗೆ ಸಾರಿಗೆ ಪುನರಾರಂಭ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವೇಳೆ  ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾದ ಬೇವಿಂಜೆಗೆ ಜಿಲ್ಲಾಧಿಕಾರಿ  ಕೆ.ಇಂಭಶೇಖರ್ ಭೇಟಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಅಥೋರಿಟಿಯ ವರದಿ ಲಭಿಸಿದರೆ 5 ದಿನಗಳೊಳಗೆ ಸಾರಿಗೆ ಪುನ ರಾರಂಭಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಸ್ತೆಯ ಗೋಡೆ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ನಿರ್ಮಾಣದ ಗುತ್ತಿಗೆ ಕಂಪೆನಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಗೋಡೆ ನಿರ್ಮಾಣ ಪೂರ್ಣಗೊಳ್ಳಲು ಇನ್ನೂ ನಾಲ್ಕು ದಿನ  ಬೇಕಾಗಿ ಬರಲಿ ದೆಯೆಂದು ಹೆದ್ದಾರಿ ನಿರ್ಮಾಣ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಧಾರಾಕಾರ …

ಕಾರಿನಲ್ಲಿ ಸಾಗಿಸುತ್ತಿದ್ದ 10,125 ಪ್ಯಾಕೆಟ್ ತಂಬಾಕು ಉತ್ಪನ್ನ ವಶ: ಇಬ್ಬರ ಬಂಧನ

ಕಾಸರಗೋಡು: ಬಂದಡ್ಕದಲ್ಲಿ ಅಬ ಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾ ಚರಣೆಯಲ್ಲಿ 10,125 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾ ಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸ ಲಾಗಿದೆ. ಅಡೂರು ಚಾಮೆಕೊಚ್ಚಿ ಮಾರಿ ಪಡ್ಪು ಹೌಸ್‌ನ ಅಬ್ದುಲ್ ರಹ್ಮಾನ್ (60), ಬಂದಡ್ಕದ ಪಿ.ಕೆ. ಅಶ್ರಫ್ (42) ಎಂಬಿವರನ್ನು ಬಂದಡ್ಕ ಅಬಕಾರಿ ಇನ್ಸ್‌ಪೆಕ್ಟರ್ ಎ.ಪಿ. ಶಹಬಾಸ್ ಅಹ ಮ್ಮದ್ ನೇತೃತ್ವದ ತಂಡ ಬಂಧಿಸಿದೆ. ಕರ್ನಾಟಕದಿಂದ ಮಾದಕವಸ್ತು ಗಳನ್ನು ಸಾಗಾಟ ನಡೆಸಲಾಗುತ್ತಿದೆಯೆಂಬ ಗುಪ್ತ ಮಾಹಿತಿಯ ಆಧಾರದಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಕಣ್ಣಾಡಿತೋಡ್ …

ಇಸ್ರೇಲ್ ವಿರುದ್ಧ ಕದನ ವಿರಾಮ ಘೋಷಿಸಿದ ಇರಾನ್

ನವದೆಹಲಿ: ಇಸ್ರೇಲ್ ವಿರುದ್ಧ ಇರಾನ್ ಕದನ ವಿರಾಮ ಘೋಷಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ನಡುವೆ ಯುದ್ಧ ವಿರಾಮ ಘೋಷಿಸಿದ ಬೆನ್ನಲ್ಲೇ ಅದಕ್ಕೆ ಪೂರಕವಾಗಿ ಇರಾನ್ ಕೂಡಾ ಕದನ ವಿರಾಮ ಘೋಷಿಸಿದೆಯೆಂದು ಇರಾನ್  ಮಾಧ್ಯಮಗಳು ವರದಿಮಾಡಿವೆ. ೧೨ ದಿನಗಳ ಯುದ್ಧ ಮುಗಿದಿದ್ದು, ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆಯೆಂದು ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ. ತನ್ನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಮತ್ತು ಅಸ್ತಿರ ಪ್ರದೇಶದಲ್ಲಿ  ಉದ್ವಿಗ್ನತೆಯನ್ನು …