ಕನ್ನಡ ಭವನದಲ್ಲಿ ಕನ್ನಡ ಸಂಸ್ಕೃತಿ ಉತ್ಸವ 10ರಂದು
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಮಾರ್ಚ್ 10ರಂದು ಬೆಳಗ್ಗೆ 10ರಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಹಕಾರದಲ್ಲಿ ಕೇರಳ-ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ ಜರುಗಲಿದೆ.ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷ ಎಂ.ಕೆ ಪ್ರಾಣೇಶ್ ಉದ್ಘಾಟಿಸುವರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಕನ್ನಡ ಭವನ ಮತ್ತ ಗ್ರಂಥಾಲಯದ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್, ಪಿ …