ಫಲಿತಾಂಶದ ನಂತರ ಅಣಕು ಮತದಾನಕ್ಕೆ ಅವಕಾಶ

ನವದೆಹಲಿ: ಮತದಾನ ಪ್ರಾರಂಭವಾಗುವ ಮೊದಲು ನಡೆಸಲಾಗುವ ಅಣಕು ಮತದಾನದ ಜೊತೆಗೆ ಫಲಿತಾಂಶ ಘೋಷಿಸಿದ ೪೫ ದಿನಗಳಲ್ಲಿ ಮತದಾನಯಂತ್ರ (ಇವಿಎಂ)ಗಳ ಸಮಗ್ರತೆ ಪರಿಶೀಲಿಸಲು ಭಾರತೀಯ ಚುನಾವಣಾ ಆಯೋಗವು ತನ್ನ ಸ್ಟ್ಯಾಂಡರ್ಸ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಜ್ಯಾರಿಗೆ ತಂದಿದೆ. ಇದರಂತೆ ಮತದಾನದ ಬಳಿಕ ಅಣಕು ಮತದಾನಕ್ಕೆ ಅವಕಾಶ ನೀಡಲಾಗುವುದು. ಇವಿಎಂ ತಿರುಚಲ್ಪಟ್ಟಿರುವುದಾಗಿ ಕಂಡುಬಂದರೆ ಅದಕ್ಕೆ ಹೊಂದಿಕೊಂಡು ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ.

ಪುತ್ತಿಗೆ ಪಂ.ನಲ್ಲಿ ಮಾನದಂಡ ಪಾಲಿಸದೆ ವಾರ್ಡ್ ವಿಭಜನೆ : ಯುಡಿಎಫ್‌ನಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಪುತ್ತಿಗೆ: ಪುತ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಮಾನದಂಡಗಳನ್ನು ಪಾಲಿಸದೆ ಅವೈಜ್ಞಾನಿಕ ರೀತಿಯಲ್ಲಿ ವಾರ್ಡ್ ವಿಭಜನೆ ನಡೆಸಲಾಗಿದೆ ಯೆಂದು ಆರೋಪಿಸಿ ಯುಡಿಎಫ್ ಪುತ್ತಿಗೆ ಪಂಚಾಯತ್ ಸಮಿತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಡಿಲಿಮಿಟೇಶನ್ ಕಮಿಶನ್ ನಿರ್ದೇ ಶಿಸಿದ ಗಡಿಗಳು ಹಾಗೂ ಜನಸಂಖ್ಯೆ ಯನ್ನು ಅನುಸರಿಸಿ ಮಾನದಂಡಗಳನ್ನು ಪಾಲಿಸದೆ ಕೆಲವು ವ್ಯಕ್ತಿಗಳು ಹಾಗೂ ರಾಜಕೀಯ ಪಕ್ಷದ ಹಿತಾಸಕ್ತಿಯನು ಸಾರ ವಾರ್ಡ್ ವಿಭಜನೆ ಅಂತಿಮ ವಿಜ್ಞಾಪನೆಯಲ್ಲಿ ಪಕ್ಷಪಾತ ನೀತಿ ತೋರಿಸಲಾಗಿದೆಯೆಂದು  ತಿಳಿಸಿ ಯುಡಿಎಫ್ ಚೆಯರ್‌ಮೆನ್ ಸುಲೈಮಾನ್ ಊಜಂಪದವು ಹಾಗೂ ಕನ್ವೀನರ್ ಇ.ಕೆ. ಮುಹಮ್ಮದ್ ಕುಂಞಿ …

ಹೊಸಂಗಡಿ- ಆನೆಕಲ್ಲು ರಸ್ತೆಯಲ್ಲಿ ಅಪಾಯಕಾರಿ ಮರಗಳು: ವಾಹನ ಸವಾರರಿಗೆ ಆತಂಕ

ಮಂಜೇಶ್ವರ: ಮಳೆಗಾಲ ಆರಂಭ ಗೊಂಡ ಬಳಿಕ ವಿವಿಧ ಪ್ರದೇಶಗಳಲ್ಲಿ ಹಲವಾರು ಮರಗಳು ಮುರಿದು ಬಿದ್ದು ವ್ಯಾಪಕ ವಿದ್ಯುತ್ ಕಂಬಗಳು ಹಾನಿಗೊಂಡು ವಾಹನ ಸವಾರರಲ್ಲಿ ಆತಂಕವನ್ನುAಟು ಮಾಡಿದೆ. ಹೊಸಂಗಡಿ-ಆನೆಕಲ್ಲು ರಸ್ತೆಯಲ್ಲಿಯೂ ಹಲವು ಅಪಾಯಕಾರಿ ಮರಗಳು ಸವಾರರಲ್ಲಿ ಭೀತಿಯನ್ನುಂ ಟುಮಾಡುತ್ತಿದೆ. ಈ ರಸ್ತೆ ಉದ್ದಕ್ಕೂ ಇಕ್ಕೆಡೆಗಳಲ್ಲಿ ಬೃಹತ್ ಗಾತ್ರದ ಮರಗಳು, ಬೃಹತ್ ರೆಂಬೆಗಳು ರಸ್ತೆಗೆ ಬಾಗಿಕೊಂಡು ವಾಹನಗಳಿಗೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆ, ಗಾಳಿಗೆ ಅಲ್ಲಲ್ಲಿ ಮರಗಳು ಧರಾಶಾಯಿಗಿದ್ದು, ಕೆಲವು ವಾಹನಗಳಿಗೆ ಹಾನಿ ಹಾಗೂ ಇನ್ನೂ …

ಅಚ್ಯುತಾನಂದನ್‌ರಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ತಿರುವನಂತಪುರ: ಕಮ್ಯೂನಿಸ್ಟ್ ಪಕ್ಷದ ಭೀಷ್ಮಾಚಾರ್ಯರೆಂದೇ ಕರೆಯಲಾಗುತ್ತಿರುವ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ (101)ರಿಗೆ  ಹೃದಯಾಘಾತವಾಗಿದ್ದು, ಅವರನ್ನು ತಿರುವನಂತಪುರದ ಪಟ್ಟಂನ ಎಸ್‌ಯುಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಹೃದ್ರೋಗ ತಜ್ಞರ ತಂಡ ಅಚ್ಯುತಾನಂದನ್‌ರ ಆರೋಗ್ಯದ ಬಗ್ಗೆ ತೀವ್ರ ನಿಗಾ ಇರಿಸಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಚ್ಯುತಾನಂದನ್‌ರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ …

ರೈಲು ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾವು

ಕಾಸರಗೋಡು: ರೈಲು ಢಿಕ್ಕಿಹೊಡೆದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ತಳಿಪರಂಬ ಉದಯಗಿರಿ ನಿವಾಸಿ ಅಭಿ ಕೆ ಬಿನು (25) ಸಾವನ್ನಪ್ಪಿದ ಯುವಕ. ಈತ ಖಾಸಗಿ ಸಂಸ್ಥೆಯ ಪಾರಾ ಮೆಡಿಕಲ್   ವಿದ್ಯಾರ್ಥಿ ಯಾಗಿದ್ದಾನೆ ಹೊಸದುರ್ಗ ಕುಶಾಲ್ ನಗರದ ರೈಲು ಹಳಿಯಲ್ಲಿ ನಿನ್ನೆ  ಈತ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾನೆ.  ಮೃತನು ತಂದೆ ಬಿನು, ತಾಯಿ ಅಜಿತ, ಸಹೋದರ ಜಿಬಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಹೊಸದುರ್ಗ ಪೊಲೀಸರು ತನಿಖೆ ನಡೆಸಿದರು. 

ಕಾಸರಗೋಡು ಜನರಲ್ ಆಸ್ಪತ್ರೆ ಇನ್ನು ಮೆಡಿಕಲ್ ಕಾಲೇಜು ಆಸ್ಪತ್ರೆ: ನಾಮಫಲಕ ಸ್ಥಾಪನೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಇನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯಾಗಿ ಬದಲಾಗಲಿದೆ. ಅದಕ್ಕೆ ಹೊಂದಿಕೊಂಡು  ಜನರಲ್ ಆಸ್ಪತ್ರೆಯಲ್ಲಿ ‘ಕಾಸರಗೋಡು ಮೆಡಿಕಲ್ ಕಾಲೇಜು ಹಾಸ್ಪಿಟಲ್’ ಎಂಬ ನಾಮ ಫಲಕವನ್ನು  ಸ್ಥಾಪಿಸಲಾಗಿದೆ. ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜ ನ್ನಾಗಿ, ರಾಜ್ಯ ಸರಕಾರ ಈಗಾಗಲೇ ವಿದ್ಯುಕ್ತವಾಗಿ ಅಧಿಸೂಚನೆ ಜ್ಯಾರಿಗೊಳಿ ಸಿದ್ದು, ಅದರ ಬೆನ್ನಲ್ಲೇ ಈಗ ಆರೋಗ್ಯ ಇಲಾಖೆ ಈ ನಾಮಫಲಕ ಸ್ಥಾಪಿಸಿದೆ. ಇದರಂತೆ ಜನರಲ್ ಆಸ್ಪತ್ರೆಯಲ್ಲಿ ಶೀಘ್ರ ಎಂಬಿಬಿಎಸ್ ಕೋರ್ಸ್ ಆರಂಭಗೊಳ್ಳಲಿದೆ. ಅದಕ್ಕಿರುವ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಇದರಂತೆ …

ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯಿಂದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಗಾರರಿಗೆ ಅಭಿನಂದನೆ

ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ  ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಜೈಲು ವಾಸ ಅನುಭವಿಸಿದ ಹಿರಿಯ ಕಾರ್ಯಕರ್ತ ಕೈಲಂಕಜೆ ಗಣಪತಿ ಭಟ್,  ಹಿರಿಯ ಮುಖಂಡ, ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ ದಂಪತಿಯನ್ನು ಗೌರವಿಸಲಾಯಿತು. ಕೈಲಂಕಜೆ ಗಣಪತಿ ಭಟ್‌ರನ್ನು ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ ಇವರ ನೇತೃತ್ವದಲ್ಲಿ ಗೌರವಿಸಿದರೆ, ಮೊಟ್ಟೆಕುಂಜ ದಂಪತಿಯನ್ನು  ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಭಿನಂದಿಸಿದರು. ಈ ವೇಳೆ ಮಂಡಲ …

ವಿವಿಧ ಕಡೆಗಳಲ್ಲಿ ಬಿಜೆಪಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ

ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸಮಿತಿ ಆಶ್ರಯದಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನಾಚರಣೆ ನಡೆಯಿತು. ಪಕ್ಷದ ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ರಾಧಾಕೃಷ್ಣರೈ ಮಡ್ವ, ಉಪಾಧ್ಯಕ್ಷೆ ಪ್ರೇಮಾವತಿ, ಕಾರ್ಯದರ್ಶಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಪೆರ್ಲ: ಬಿಜೆಪಿ ಎಣ್ಮಕಜೆ ಪಂ. ಸಮಿತಿ ವತಿಯಿಂದ ನಡೆದ ಡಾ. …

ವಿಮಾನ ದುರಂತ: ರಂಜಿತಾರ ಮೃತದೇಹ ಊರಿಗೆ

ಪತ್ತನಂತಿಟ್ಟ: ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಪತ್ತನಂತಿಟ್ಟ ನಿವಾಸಿ ರಂಜಿತಾರ ಮೃತದೇಹವನ್ನು ಊರಿಗೆ ತಲುಪಿಸಲಾ ಯಿತು. ಇಂದು ಬೆಳಿಗ್ಗೆ 10 ಗಂಟೆಗೆ ಪತ್ತನಂತಿಟ್ಟಕ್ಕೆ ತಲುಪಿಸಿದ ಮೃತದೇಹ ವನ್ನು ಪುಲ್ಲಾಡ್ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಯಿತು. ಸಂಜೆ 4.30ಕ್ಕೆ ಮನೆ ಹಿತ್ತಿಲಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಎಂಟು ತಿಂಗಳಿಂದ ಬ್ರಿಟನ್‌ನಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದ ರಂಜಿತಾರಿಗೆ ಕೇರಳದಲ್ಲಿ ಸರಕಾರಿ ಉದ್ಯೋಗ ಲಭಿಸಿತ್ತು. ಜುಲೈಯಲ್ಲಿ ಸೇವೆಗೆ ಸೇರ್ಪಡೆಗೊಳ್ಳ ಲಿದ್ದರು. ಇದರಂತೆ ಲಂಡನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯಿಂದ ದಾಖಲೆ ಪತ್ರಗಳನ್ನು …

ಪುತ್ತಿಗೆ: ಎಲ್ಲಾ ಕೃಷಿಕರ ವಿದ್ಯುತ್ ಬಿಲ್ ಕೃಷಿ ಭವನ ಪಾವತಿಸಬೇಕು-ಕಿಸಾನ್ ಸೇನೆ

ಸೀತಾಂಗೋಳಿ: ಪುತ್ತಿಗೆ ಕೃಷಿ ಭವನ ವ್ಯಾಪ್ತಿಯಲ್ಲಿರುವ 300ಕ್ಕೂ ಹೆಚ್ಚು ಕೃಷಿಕರ ನೀರಾವರಿ ಮೋಟಾರ್ ಬಿಲ್ ಕೃಷಿ ಭವನ ಪಾವತಿಸದಿರುವುದರಿಂದ ನಾಲ್ಕು ವರ್ಷದ ಮೊತ್ತವಾಗಿ 30 ಸಾವಿರ ದಿಂದ 70 ಸಾವಿರ ರೂಪಾಯವರೆಗೆ ಉಳಿದುಕೊಂಡಿದೆ. ಈ ಕಾರಣದಿಂದ ವಿದ್ಯುತ್ ಬಿಲ್ ಪಾವತಿಸಲಿರುವ ಕೃಷಿಕರ ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸುವುದಾಗಿ ಕೆಎಸ್‌ಇಬಿ ಬೆದರಿಕೆಯೊಡ್ಡುತ್ತಿದೆ ಯೆಂದು ಪುತ್ತಿಗೆ ಪಂಚಾಯತ್ ಕಿಸಾನ್ ಸೇನೆ  ಆರೋಪಿಸಿದೆ. ಭಾರೀ ಹೆಚ್ಚಿನ ಮೊತ್ತವಾದು ದರಿಂದ ಅದನ್ನು ಪಾವತಿಸಲಾಗದೆ ಕೃಷಿಕರು ಸಂದಿಗ್ಧತೆಯನ್ನು ಎದುರಿಸುತ್ತಿದ್ದಾರೆ.  ಕಂಗು ಕೃಷಿಗೆ ಬಾಧಿಸಿದ ಅಜ್ಞಾತ ರೋಗದಿಂದಾಗಿ …