ಮೂವರು ಮಕ್ಕಳು, ಪತ್ನಿಯನ್ನು ಕೊಲೆಗೈದ ಬಳಿಕ ಆತ್ಮಹತ್ಯೆಗೈದ  ಯಜಮಾನ

ಕೋಟ್ಟಯಂ: ಮೂವರು ಮಕ್ಕಳು ಮತ್ತು ಪತ್ನಿಯನ್ನು ಕೊಲೆಗೈದ ಬಳಿಕ ಮನೆ ಯಜಮಾನ ಆತ್ಮಹತ್ಯೆಗೈದ ಘಟನೆ ಪಾಲಾದಲ್ಲಿ ನಡೆದಿದೆ. ಪಾಲಾ ಪೂವರಣಿ ಕೊಚ್ಚುಕೊಟ್ಟಾರಂನ ಬಾಡಿಗೆ ಮನೆಯಲ್ಲಿ ವಾಸಿಸುವ  ಮೂಲತಃ ಅಗಲಕುನಂ ಞಂಡು ಪಾರ ನಿವಾಸಿ ಕುದಲಿಪರಂಬಿಲ್ ಜೈಸನ್ ಥೋಮಸ್ (೪೪), ಪತ್ನಿ ಮೇರಿನಾ (೨೯), ಮಕ್ಕಳಾದ ಜೆರಾಲ್ಡ್ (೪), ಜೆರಿ (೨) ಮತ್ತು ಜೆರಿನ್ (೭ ತಿಂಗಳು) ಎಂಬವರು ಸಾವನ್ನಪ್ಪಿದವರು  ಪತ್ನಿ ಮತ್ತು ಮಕ್ಕಳನ್ನು ಇರಿದು ಕೊಲೆಗೈದ ಬಳಿಕ ಜೈಸನ್  ಅದೇ ಮನೆಯಲ್ಲಿ ನೇಣುಬಿಗಿ ದು ಆತ್ಮಹತ್ಯೆಗೈದಿರುವುದಾಗಿ ಪ್ರಾಥಮಿಕ …

ಚಿನ್ನದ ಬೆಲೆ ಮತ್ತೆ ದಾಖಲೆಯತ್ತ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆ ಮತ್ತೆ ಸಾರ್ವಕಾಲಿಕ ದಾಖಲೆಯತ್ತ ನೆಗೆದಿದೆ. ಇಂದು  ಒಂದು ಪವನ್ ಚಿನ್ನಕ್ಕೆ ೫೬೦ ರೂ.ಗಳ ಹೆಚ್ಚಳವಾಗಿದೆ. ಇದರಿಂದ  ಒಂದು ಪವನ್ ಚಿನ್ನದ ಬೆಲೆ ೪೭,೫೬೦ ರೂ.ಗೇರಿದೆ. ಗ್ರಾಂಗೆ ೫,೯೪೫ ರೂಪಾಯಿಗಳಂತೆ ಇಂದಿನ ವ್ಯಾಪಾರ ನಡೆಯುತ್ತಿದೆ. ಈ ತಿಂಗಳ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಹೆಚ್ಚಳವನ್ನೇ ಕಾಣಲಾಗಿದೆ

ಬಿದ್ದು ಸಿಕ್ಕಿದ ಹಣ ಮರಳಿಸಿ ಆಟೋ ಚಾಲಕನ ಪ್ರಾಮಾಣಿಕತೆ: ಸರ್ವರಿಂದ ಮೆಚ್ಚುಗೆ

ಕುಂಬಳೆ: ಆಟೋ ರಿಕ್ಷಾದಲ್ಲಿ ಬಿದ್ದು ಸಿಕ್ಕಿದ ಹಣವನ್ನು ಮರಳಿ ನೀಡಿ ಚಾಲಕ ಮಾದರಿಯಾದ ಘಟನೆ ನಡೆದಿದೆ. ಕುಂಬಳೆ ಆಟೋ ಸ್ಟಾಂಡ್‌ನ ಚಾಲಕ ಕುಂಟಂಗೇರಡ್ಕದ ಯೂಸಫ್ ಮೊನ್ನೆ ರಾತ್ರಿ  ಬಾಡೂರಿಗೆ ಬಾಡಿಗೆಗೆ  ತೆರಳಿದ್ದಾರೆ. ಪ್ರಯಾಣಿಕರನ್ನು ಅಲ್ಲಿ ಇಳಿಸಿದ ಬಳಿಕ ಕುಂಬಳೆಗೆ ಮರಳಿ ಅಂಗಡಿಯಿಂದ ಹಾಲು ಖರೀದಿಸಿ ರಿಕ್ಷಾದೊಳಗೆ ಇರಿಸುತ್ತಿದ್ದಂತೆ ಅದರಲ್ಲಿ ೫೦೦ ರೂ.ಗಳ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಅದನ್ನು ಹೆಕ್ಕಿ ಎಣಿಸಿದಾಗ ೭೦೦೦ ರೂಪಾಯಿ ಇತ್ತೆನ್ನಲಾಗಿದೆ.  ಯೂಸಫ್ ಕೂಡಲೇ ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ಹಣವನ್ನು ಎಎಸ್‌ಐ …

ಹೊಸಂಗಡಿಯಲ್ಲಿ ನೂತನ ರಸ್ತೆಯಲ್ಲಿ ವಾಹನ ಸಂಚಾರ: ಪೇಟೆಯಲ್ಲಿ ಕಡಿಮೆಗೊಂಡ ವಾಹನಗಳ ದಟ್ಟಣೆ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಹೊಸಂಗಡಿಯಲ್ಲಿ ನಿರ್ಮಿಸಿದ ನೂತನ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದೆ. ಪೇಟೆಯಲ್ಲಿ ನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ಇದರಿಂದಾಗಿ ಕಡಿಮೆಗೊಂಡಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಹೊಸಂಗಡಿ ಪೇಟೆಯಲ್ಲಿ ಸುಮಾರು ಒಂದು ಕಿಲೋ ಮೀಟರ್ ಉದ್ದಕ್ಕೆ ಕೆಳಭಾಗದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಮಂಗಳೂರು ಭಾಗದಿಂದ ಕಾಸರಗೋಡು ಕಡೆಗಳಿಗೆ ವಾಹನಗಳು ಈಗ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿದೆ. ಇದೀಗ ಮೇಲ್ಭಾಗದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಗೊಂಡಿರುವುದು ಬಸ್‌ಗಳ ಸಂಚಾರ ಸುಗಮಗೊಂಡಿದೆ. ಎರಡು ಸರ್ವೀಸ್ ರಸ್ತೆ ಕಾಮಗಾರಿ …

ಚೆಂಗಳ ಕುಟುಂಬಾರೋಗ್ಯ ಕೇಂದ್ರ ಕಟ್ಟಡ  ಸಹಿತ ೮ ಆಸ್ಪತ್ರೆ ಕಟ್ಟಡ ಉದ್ಘಾಟನೆ

ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಸೇರಿಸಿ ಜಿಲ್ಲೆಯ ಎಂಟು ಆರೋಗ್ಯ ಸಂಸ್ಥೆಗಳಲ್ಲಿ ನಿರ್ಮಿ ಸಿದ ಆಧುನಿಕ ಸೌಕರ್ಯಗಳೊಂದಿಗಿನ ಹೊಸ ಕಟ್ಟಡಗಳನ್ನು ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಚೆಂಗಳ ೧.೭೦ ಕೋಟಿ ರೂ., ಅಂಗಡಿಮೊಗರು ೮೫ ಲಕ್ಷ ರೂ, ವಾಣಿನಗರ ೮೨.೫೦ ಲಕ್ಷ ರೂ. ಸಹಿತ ಇತರ ೫ ಆರೋಗ್ಯ ಕೇಂದ್ರಗಳಿಗೂ ಸೇರಿ ೧೧ ಕೋಟಿ ರೂ.ಗಳ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಹಣ ವೆಚ್ಚವಾಗಿದೆ. ವಾಣಿನಗರ, ಚೆಂಗಳ …

ಕನ್ನಡಬಲ್ಲ ಫಿಸಿಕಲ್ ಎಜುಕೇಶನ್ ಟೀಚರ್‌ರನ್ನು ನೇಮಿಸುವಂತೆ ಮನವಿ

ಕಾಸರಗೋಡು: ಕಾಸರಗೋಡು ಮತ್ತು ಮಂಜೇಶ್ವರ ತಾಲೂಕನ್ನು ಕನ್ನಡ ಭಾಷಾ ಪ್ರದೇಶವೆಂದು ಕೇರಳ ಸರಕಾರ ಘೋಷಿಸಿ ಕನ್ನಡಿಗರ ಹಿತರಕ್ಷಣೆಗಾಗಿ ಅನೇಕ ಆಜ್ಞೆ, ಆದೇಶಗಳನ್ನು  ಹೊರಡಿಸಿದೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಅನೇಕ ಕನ್ನಡ ಮಾಧ್ಯಮ ಹೈಸ್ಕೂಲ್‌ಗಳಾದ ಪೈವಳಿಕೆ ನಗರ,  ಬೇಕೂರು, ಮಂಗಲ್ಪಾಡಿ, ಬಂಗ್ರಮಂಜೇಶ್ವರ ಮುಂತಾದ ಕಡೆಗಳಲ್ಲಿ ಕನ್ನಡ ಬಲ್ಲ ಫಿಸಿಕಲ್ ಎಜುಕೇಶನ್ ಟೀಚರ್ ಹುದ್ದೆಗಳಿವೆ. ಈ ಹುದ್ದೆಗಳಿಗೆ ಪಿಎಸ್‌ಸಿ ಮುಖಾಂತರ ಆಯ್ಕೆ ಮಾಡಬೇಕಾಗಿದೆ. ಸುಮಾರು ೨೦ ವರ್ಷಗಳಿಂದ ಕನ್ನಡ ಬಲ್ಲ ಫಿಸಿಕಲ್ ಎಜ್ಯುಕೇಶನ್ ಟೀಚರ್ ನೇಮಕಾತಿ ನಡೆದಿರುವುದಿಲ್ಲ. ಕನ್ನಡ …

ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಉದಯಾಸ್ತಮಾನ ಭಜನೆ 8ರಂದು

ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈ ತಿಂಗಳ 8ರಂದು ಬೆಳಿಗ್ಗೆ ಶ್ರೀ ದೇವರ ಉಷಾ ಪೂಜೆಯ ನಂತರ ಕಾಸರಗೋಡು ನಗರ ಮತ್ತು ಸಮೀಪದ ವಿವಿಧ ಭಜನಾ ಸಂಘಗಳ ವತಿಯಿಂದ ಸಂಜೆ 7ರ ವರೆಗೆ ಉದ ಯಾಸ್ತ ಮಾನ ಭಜನಾ ಸೇವೆ ಜರಗಲಿದೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾಕ್ಟರ್ ಅನಂತ ಕಾಮತ್ ದೀಪ ಪ್ರಜ್ವಲನೆ ಗೈಯ್ಯುವರು. ಕಾರ್ಯದರ್ಶಿ ನ್ಯಾಯವಾದಿ ಮರಳಿದsರನ್, ಕಾಸರಗೋಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಭಟ್ ಲಕ್ಷ್ಮಿಕಾಂತ್ …

ಮೀಂಜ- ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ

ಮಂಜೇಶ್ವರ: ಮೀಂಜ-ಮAಗ ಲ್ಪಾಡಿ ಪಬ್ಲಿಕ್ ವೆಲ್ಪೇರ್ ಸಹಕಾರಿ ಸಂಘ ಇದರ ನೂತನ ಕಚೇರಿ ಉದ್ಘಾ ಟನಾ ಸಮಾರಂಭ ಚಿಗುರುಪಾದೆಯಲ್ಲಿ ನಡೆಯಿತು. ಲೀಲಾವತಿ.ಪಿ ಶೆಟ್ಟಿ ಕುಳೂರು ಕನ್ಯಾನ ದೀಪ ಪ್ರಜ್ವಲನೆ ಗೊಳಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿದರು. ಕಾಸರ ಗೋಡು ಸರ್ಕಲ್ ಕೋಪರೇಟಿವ್ ಯೂನಿಯನ್ ಚಯರ್‌ಮೆನ್ ಕೆ.ಆರ್ ಜಯಾನಂದ ಕೌಂಟರ್, ಮಂಜೇಶ್ವರ ಕೋಪರೇಟಿವ್ ಸೊಸೈಟಿಯ ಅಸಿಸ್ಟೆಂಟ್ ರಿಜಿಸ್ಟಾçರ್ ನಾಗೇಶ.ಕೆ, ಭದ್ರತಾ ಕೊಠಡಿ, ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ …

ಡಿ ನವೀನ್ ಸ್ಟೋರ್ ಮಾಲಕ ನಿಧನ

ಮಂಜೇಶ್ವರ: ಹೊಸಂಗಡಿ ಪೇಟೆಯಲ್ಲಿ ಕಳೆದ 48 ವರ್ಷ ಗಳಿಂದ ವ್ಯಾಪಾರಿಯಾಗಿದ್ದ ನವೀನ್ ಸ್ಟೋರ್ ಮಾಲಕ, ಸಿಪಿಎಂ ಹಿರಿಯ ನೇತಾರ ದುರ್ಗಿಪಳ್ಳ ನಿವಾಸಿ ಕೃಷ್ಣ ಶೆಟ್ಟಿಗಾರ್ [78] ನಿನ್ನೆ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎರಡು ದಿನಗಳ ಹಿಂದೆ ಮನೆ ಯಲ್ಲಿ ಹೃದಯಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಟೇಷನರಿ ಸಾಮಾಗ್ರಿ ಹಾಗೂ ಕಾರವಲ್ ಸಹಿತ ವಿವಿಧ ಪತ್ರಿಕೆಯ ಏಜಂಟ್‌ರಾಗಿದ್ದರು. ಸಮಾಜಸೇ ವಕರೂ ಆಗಿದ್ದಾರೆ. ಹೊಸಂಗಡಿ ರಾಮತ್ತ ಮಜಲ್ ಸಾರ್ವಜನಿಕ ರುದ್ರಭೂಮಿ ಸಮಿತಿಯ ಕಾರ್ಯದರ್ಶಿ, ಕೇರಳ ವ್ಯಾಪಾರಿ ವ್ಯವಸಾಯಿ …

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಕಾಸರಗೋಡು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ಬೆಳಿಗ್ಗೆ ಆರಂಭಗೊಂ ಡಿದ್ದು ಮಾರ್ಚ್ ೨೫ರ ತನಕ ಮುಂದುವರಿಯಲಿದೆ.ಜಿಲ್ಲೆಯ ಎರಡು ಶಿಕ್ಷಣ ಜಿಲ್ಲೆಗಳಲ್ಲಾಗಿ ಒಟ್ಟು ೨೦,೬೬೭ ವಿದ್ಯಾರ್ಥಿಗಳು ಇಂದು ಪರೀಕ್ಷೆಗೆ ಬರೆಯುತ್ತಿದ್ದಾರೆ. ಒಟ್ಟು ೧೫೭ ಕೇಂದ್ರಗಳಲ್ಲಾಗಿ ಪರೀಕ್ಷೆ ನಡೆಯುತ್ತಿದೆ. ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ ಒಟ್ಟು ೧೧,೫೨೯ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಿದ್ದು, ಇದರಲ್ಲಿ ೬೦೫೦ ಹುಡುಗರು ಮತ್ತು ೫೪೭೯ ಹುಡುಗಿಯರು ಒಳಗೊಂಡಿದ್ದಾರೆ. ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ ೪೬೮೫ ಹುಡುಗರು ಮತ್ತು ೪೩೫೯ ಹುಡುಗಿಯರು ಸೇರಿದಂತೆ ಒಟ್ಟು ೯೦೪೪ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಿದ್ದಾರೆ.ಕಾಸರಗೋಡು ಶಿಕ್ಷಣ …