ಮದ್ಯದ ಅಮಲಿನಲ್ಲಿ ಸಹೋದರರ ಮಧ್ಯೆ ಜಗಳ: ತಮ್ಮನನ್ನು ಗುಂಡಿಕ್ಕಿ ಕೊಲೆಗೈದ ಅಣ್ಣ ಆರೋಪಿ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಮದ್ಯದ ಅಮಲಿನಲ್ಲಿ ತಮ್ಮನನ್ನು ಅಣ್ಣ ಗುಂಡಿಕ್ಕಿ ಕೊಲೆಗೈದ ಭೀಕರ ಘಟನೆ ಕುಟ್ಟಿಕೋಲ್ ಸಮೀಪ ನಡೆದಿದೆ. ಕುಟ್ಟಿಕೋಲ್ ನೂಂಞಂಗಾನಂ ಎಂಬಲ್ಲಿನ ನಾರಾಯಣನ್ ನಾಯರ್ ಎಂಬವರ ಪುತ್ರ ಅಶೋಕನ್ ನಾಯರ್ (೪೫) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಇವರ  ಸಹೋದರ ಬಾಲಕೃಷ್ಣನ್ ನಾಯರ್ (೫೦) ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಘಟನೆ ನಡೆದಿದೆ. ನಿನ್ನೆ ಸಂಜೆ  ಯಿಂದಲೇ ಅಶೋಕನ್ ನಾಯರ್ ಹಾಗೂ ಬಾಲಕೃಷ್ಣನ್ ನಾಯರ್ ಮಧ್ಯೆ ಮದ್ಯದಮಲಿನಲ್ಲಿ  ಜಗಳ ಆರಂಭಗೊಂಡಿತ್ತೆನ್ನಲಾಗಿದೆ. ರಾತ್ರಿವರೆಗೂ …

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಕನ್ನಡತಿ ಎಂ.ಎಲ್. ಅಶ್ವಿನಿ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ಯಾರೂ ಕನಿಷ್ಠ ನಿರೀಕ್ಷಿಸದ ಅಚ್ಚರಿಯ ಆಯ್ಕೆ ಎಂಬಂತೆ ಬಿಜೆಪಿ ಈ ಬಾರಿ ಕಾಸರಗೋಡು ಲೋ ಕಸಭಾ ಕ್ಷೇತ್ರದಲ್ಲಿ ಕಾಸರಗೋಡು ಮಣ್ಣಿನ ಕನ್ನಡತಿ ಎಂ.ಎಲ್. ಅಶ್ವಿನಿ ಯವರನ್ನು ಎನ್‌ಡಿಎ ಉಮೇದ್ವಾ ರರಾಗಿ ಘೋಷಿಸಿದೆ. ಇದರಿಂದ ಕಾಸರಗೋಡಿನಲ್ಲಿ ಎನ್‌ಡಿಎ, ಯುಡಿಎಫ್ ಮತ್ತು  ಎಡರಂಗದ ನಡುವೆ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಡುವಂತಾಗಿದೆ. ಭಾಷಾ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತ್‌ನ ಪಜ್ವ ನಿವಾಸಿಯಾಗಿರುವ  ಶಶಿಧರ …

ಕಳವಿಗೀಡಾದ ೧೩ ಕ್ವಿಂಟಾಲ್ ಅಡಿಕೆ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮನೆಗೆ ಹೊಂದಿಕೊಂಡಿರುವ ಶೆಡ್‌ನಿಂದ ಕಳವಿಗೀಡಾದ ೧೩ ಕ್ವಿಂಟಾಲ್ ಅಡಿಕೆ ಹಿತ್ತಿಲಿನಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೆಮ್ನಾಡ್ ಬಳಿಯ ಕಾಡಾಂಬಳ್ಳಿ ಎಂಬಲ್ಲಿನ ಕೆ. ನಾರಾಯಣನ್ ನಾಯರ್‌ರ ಮನೆಗೆ ಹೊಂದಿಕೊಂ ಡಿರುವ ಶೆಡ್‌ನಿಂದ ಕಳೆದ ಗುರುವಾರ ರಾತ್ರಿ ಕಳವಿಗೀಡಾಗಿತ್ತು. ಸುಲಿದ ಅಡಿಕೆಯನ್ನು ೨೦ ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿತ್ತು. ಗುರುವಾರ ರಾತ್ರಿ ೯.೩೦ರಿಂದ ಶುಕ್ರವಾರ ಬೆಳಿಗ್ಗೆ ೫.೩೦ರ ಮಧ್ಯೆ ಅಡಿಕೆ ಕಳವಿಗೀಡಾಗಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಮೇಲ್ಪರಂಬ ಪೊಲೀಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ …

೧೦ ಲಕ್ಷ ರೂ. ಮೌಲ್ಯದ ಸಿಗರೇಟ್ ಉತ್ಪನ್ನಗಳು ಪತ್ತೆ ಕಾಸರಗೋಡು ನಿವಾಸಿ ಕಸ್ಟಡಿಗೆ

ಮಂಜೇಶ್ವರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದುಬಾಯಿಯಿಂದ ಸಾಗಿಸಲಾಗಿದ್ದ ೯,೯೨,೨೪೦ ರೂ. ಮೌಲ್ಯದ ಸಿಗರೇಟ್ ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಧಿಸಿ  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ  ಕಾಸರ ಗೋಡು ನಿವಾಸಿಯೋರ್ವನನ್ನು ಕಸ್ಟಮ್ಸ್ ತಂಡ ಕಸ್ಟಡಿಗೆ ತೆಗೆದುಕೊಂಡಿದೆ. ವಶಪಡಿಸಲಾದ ಮಾಲಿನಲ್ಲಿ ೨೪೦ ಪ್ಯಾಕೆಟ್ ಅಮೆರಿಕನ್ ನ್ಯಾಚುರಲ್ ಸಿಗರೇಟ್‌ಗಳು ೨೦ ಪ್ಯಾಕೆಟ್ ಕಾಲಿ ಬನ್ ಫೋಡ್, ೨೦ ಪ್ಯಾಕೆಟ್ ಕಾಲಿಬನ್-೩ ರಿಫಿಲ್ಲೆಬಲ್ ಪೋಡ್, ೧೨೦ ಪ್ಯಾಕೆಟ್ ಕಾಲಿಬನ್- ಎ-೨ ಸೈಸ್ ರೀಫಿಲ್ಲಿಂಗ್ …

ಪಿಕಪ್ ಚಾಲಕ ಹೃದಯಾಘಾತದಿಂದ ನಿಧನ

ಕುಂಬ್ಡಾಜೆ: ಪಿಕಪ್ ಚಾಲಕರೊ ಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಕುಂಬ್ಡಾಜೆ ಬಳ್ಳಂದೂರು ನಿವಾಸಿ ಅಂದಚ್ಚ ಎಂಬವರ ಪುತ್ರ ಬಷೀರ್ (೪೫) ಎಂಬವರು ಮೃತಪಟ್ಟ ವ್ಯಕ್ತಿ. ಇವರಿಗೆ ಇಂದು ಬೆಳಿಗ್ಗೆ ಎದೆನೋವು ಉಂಟಾಗಿತ್ತೆನ್ನಲಾಗಿದೆ. ಕೂಡಲೇ ಬದಿಯಡ್ಕದ ಆಸ್ಪತ್ರೆಗೂ ಬಳಿಕ ಕಾಸರಗೋಡಿಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರೊಳಗೆ ನಿಧನ ಸಂಭವಿಸಿದೆ. ಮೃತರು ತಾಯಿ ಬೀವಿಂಞಿ, ಪತ್ನಿ ಸುಹರಾ, ಮಕ್ಕಳಾದ ಅಪ್ಸಲ್, ಅನಸ್, ಅಫೀಸ್, ಸಹೋದರರಾದ ಇಕ್ಭಾಲ್, ಹಕೀಂ, ಅಶ್ರಫ್, ಸಹೋದರಿ ಹಾಜಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಿದ್ಯಾಲಯಗಳನ್ನು ಗೂಂಡಾ ಕೇಂದ್ರವನ್ನಾಗಿ ಮಾಡಿದ ಎಸ್‌ಎಫ್‌ಐ- ಡಿಎಂಕೆ ಮೊಹಮ್ಮದ್ ಆರೋಪ

ಮಂಜೇಶ್ವರ: ಪೂಕೋಡ್ ವೆಟರ್ನರಿ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್ನ ಕೊಲೆಯನ್ನು ಖಂಡಿಸಿ ರಾಜ್ಯದಾದ್ಯಂತ ಕಾಂಗ್ರೆಸ್ ನಡೆಸುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯನ್ನು ಉಪ್ಪಳದಲ್ಲಿ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎಂ ಕೆ ಮೊಹ ಮ್ಮದ್ ಉದ್ಘಾಟಿಸಿ ಮಾತನಾಡಿದರು. ಸಹಪಾಠಿಯನ್ನು ಅನ್ನ, ನೀರು ನೀಡದೆ ನಿರಂತರ ಚಿತ್ರಹಿಂಸೆ ನೀಡಿ ನೇತು ಹಾಕಿ ಕೊಂದ ಎಡರಂಗ ವಿದ್ಯಾರ್ಥಿ ಸಂಘಟನೆಯಾದ ಎಸ್ ಎಫ್ ಐ ಯು ಈ ದೇಶಕ್ಕೆ ಶಾಪವಾಗಿದೆ …

ಮಜಿಬೈಲ್‌ನಲ್ಲಿ ಬಿ.ವಿ. ರಾಜನ್ ಸಂಸ್ಮರಣೆ

ಮಂಜೇಶ್ವರ: ಸಿಪಿಐ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಬಿ.ವಿ ರಾಜನ್ ಸಂಸ್ಮರಣಾ ಸಮ್ಮೇಳನವು ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಿನ್ನೆ ನಡೆಯಿತು. ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಸಿಪಿಐ ರಾಜ್ಯ ಸಹ ಕಾರ್ಯದರ್ಶಿ, ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ರಾಜ್ಯ ಸಮಿತಿ ಸದಸ್ಯ ಟಿ.ಕೃಷ್ಣನ್, ಗೋವಿಂದನ್ ಪಳ್ಳಿಕಾಪ್ಪಿಲ್, ಜಿಲ್ಲಾ ಸಮಿತಿ ಸದಸ್ಯ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್ ಮೊದಲಾದವರು ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ರಾಮಚಂದ್ರ …

ಶಬರಿಮಲೆ ಉತ್ಸವ 16ರಿಂದ

ಶಬರಿಮಲೆ: ಮೀನಮಾಸ ಪೂಜೆ ಹಾಗೂ ಉತ್ಸವದ ಅಂಗವಾಗಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರ ಬಾಗಿಲು ಈ ತಿಂಗಳ ೧೩ರಂದು ತೆರೆಯಲಾಗುವುದು. ಉತ್ಸವಕ್ಕಾಗಿ ೧೬ರಂದು ಧ್ವಜಾರೋಹಣ ನಡೆಯಲಿದೆ. ಪೈಂಗನಿ ಉತ್ಸವವಾದ ೨೫ರಂದು ಪಂಪಾದಲ್ಲಿ ಆರಾಟ್ ನಡೆಯಲಿರುವುದು. ತಂತ್ರಿ ಕಂಠರರ್ ಮಹೇಶ್ ಮೋಹನನ್, ಮುಖ್ಯ ಅರ್ಚಕ ವಿ.ಎನ್. ಮಹೇಶ್ ನಂಬೂದಿರಿ ಎಂಬಿವರ ಕಾರ್ಮಿಕತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ.

ಕಾಡಾನೆ ದಾಳಿ: ರಾಜ್ಯದಲ್ಲಿ ಇನ್ನೋರ್ವ ಬಲಿ

ಕೊಚ್ಚಿ:? ಕಾಡಾನೆ ದಾಳಿಯಿಂದ ರಾಜ್ಯದಲ್ಲಿ ಇನ್ನೊಬ್ಬರು ಸಾವಿಗೀಡಾಗಿದ್ದಾರೆ. ಇಡುಕ್ಕಿ ನೇರ್ಯಮಂಗಲಂ ಕಾಂಞಿರವೇಲಿ ನಿವಾಸಿ ಇಂದಿರ (೭೦) ಎಂಬವರು ಸಾವಿಗೀಡಾದ ದುರ್ದೈವಿಯಾ ಗಿದ್ದಾರೆ.  ಮನೆ ಬಳಿಯ ತೋಟಕ್ಕೆ ತಲುಪಿದ  ಕಾಡಾನೆ ಇಂದಿರರ ಮೇಲೆ ದಾಳಿ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೋದಮಂಗಲ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಪಣಂಬೂರು ಸಮುದ್ರದಲ್ಲಿ 3 ಮಂದಿ ನೀರುಪಾಲು

ಮಂಗಳೂರು: ವಿಹಾರಕ್ಕೆಂದು ಬಂದಿದ್ದ ಮೂವರು ಯುವಕರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಘಟನೆ ನಿನ್ನೆ ಸಂಜೆ ಪಣಂಬೂರು ಬೀಚ್‌ನಲ್ಲಿ ನಡೆದಿದೆ. ಕೈಕಂಬ ರೋಸಾ ಮಿಸ್ತೀಕ ಕಾಲೇಜಿನ ಪ್ರಥಮ ವರ್ಷ ಪಿಯುಸಿ ವಿದ್ಯಾರ್ಥಿ ಲಿಖಿತ್ (೧೮) ಬೈಕಂಪಾಡಿ ಎಂಎಂಆರ್ ಕಂಪೆನಿಯ ಮೇಲ್ವಿಚಾರಕ ನಾಗರಾಜ್ (೨೪), ಇನ್ನೊಂದು ಕಂಪೆನಿಯ ಡೆಲಿವರಿ ಬಾಯ್ ಮಿಲನ್ (೨೦) ನಾಪತ್ತೆಯಾದವರೆಂದು ತಿಳಿದು ಬಂದಿದೆ. ನಿನ್ನೆ ಸಂಜೆ ೬ ಗಂಟೆ ವೇಳೆಗೆ ಪಣಂಬೂರು ಸಮುದ್ರ ಕಿನಾರೆಯಲ್ಲಿ ಸಮುದ್ರದ ಅಲೆಗಳ ಜೊತೆ ಆಟವಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಅಲೆಯ ರಭಸಕ್ಕೆ …