ಶಿರಿಯ ಶಾಲೆಯಲ್ಲಿ ಜಿಲ್ಲಾ ಮಟ್ಟದ ಚುನಾವಣಾ ಗ್ರಾಮಸಭೆ

ಉಪ್ಪಳ: ಲೋಕಸಭಾ ಚುನಾವ ಣೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಚುನಾವಣಾ ಗ್ರಾಮಸಭಾ ಕಾರ್ಯಾಕ್ರಮ ಶನಿವಾರ ಶಿರಿಯ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆ ಯಿತು. ಜಿಲ್ಲಾಧಿಕಾರಿ ಕೆ.ಇಂಬಶೇಖರ್ ಉದ್ಘಾಟಿಸಿದರು. ಬಿ.ಎಲ್.ಒ ರೇವತಿ ಟೀಚರ್ ಅಧ್ಯಕ್ಷತೆಯನ್ನು ವಹಿಸಿದರು. ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡುವ ಅವಕಾಶ ಈ ಚುನಾವಣಾ ಗ್ರಾಮಸಭೆಯಲ್ಲಿ ನಡೆಸಲಾಗುತ್ತಿದೆ. ಮಂಜೇಶ್ವರ ತಹಶೀಲ್ದಾರ್ ಶಿಬು.ಪಿ ಸ್ವಾಗತಿಸಿದರು.ಪಂಚಾಯತ್ ಸದಸ್ಯರಾದ ಬೀಬಿ, ಕೈರುನ್ನೀಸ, ಬಿ.ಎಲ್.ಒಗಳಾದ ಅಬ್ದುಲ್ಲ, ಅಬ್ದುಲ್ ನಾಸಿರ್, ಪ್ರಮೀಳ ಟೀಚರ್ ಉಪಸ್ಥಿತರಿದ್ದರು.

ಕೇರಳದ 12  ಕ್ಷೇತ್ರಗಳಲ್ಲಿ ಎನ್‌ಡಿಎ ಉಮೇದ್ವಾರರು

ತಿರುವನಂತಪುರ: ಕೇರಳದ ಒಟ್ಟು ೨೦ ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಉಮೇದ್ವಾರರನ್ನಾಗಿ ೧೨ ಮಂದಿಯನ್ನು ಬಿಜೆಪಿ ಘೋಷಿಸಿದೆ. ಇದರಂತೆ ಕಾಸರಗೋಡಿನಲ್ಲಿ ಎಂ.ಎಲ್. ಅಶ್ವಿನಿ, ತಿರುವನಂತಪುರ- ಕೇಂದ್ರಸಚಿವ ರಾಜೀವ್ ಚಂದ್ರಶೇಖರನ್, ಅಟ್ಟಿಂಗಾಲ್- ಕೇಂದ್ರ ಸಚಿವ ವಿ. ಮುರಳೀಧರನ್, ಆಲಪ್ಪುಳ- ಶೋಭಾ ಸುರೇಂದ್ರನ್, ಪತ್ತನಂತಿಟ್ಟ- ಕಾಂಗ್ರೆಸ್‌ನ ಹಿರಿಯ ನೇತಾರ ಎ.ಕೆ. ಆಂಟನಿ ಅವರ ಮಗ ಅನಿಲ್ ಆಂಟನಿ ಮತ್ತು ತೃಶೂರಿನಲ್ಲಿ ಎಲ್ಲರೂ ನಿರೀಕ್ಷಿಸದಂತೆ ಮಲಯಾಳಂ ಸಿನೆಮಾ ಸೂಪರ್ ಸ್ಟಾರ್ ಸುರೇಶ್ ಗೋಪಿಯವರನ್ನು ತಮ್ಮ ಉಮೇದ್ವಾರರನ್ನಾಗಿ ಬಿಜೆಪಿ ಕಣಕ್ಕಿಳಿಸಿದೆ. ಇದರ ಹೊರತಾಗಿ ಪಾಲ್ಘಾಟ್‌ನಲ್ಲಿ …

ಜಿಲ್ಲೆಯಲ್ಲಿ ನಿನ್ನೆ 91,335  ಮಕ್ಕಳಿಗೆ  ಪೋಲಿಯೋ ಬಿಂದು ಔಷಧಿ ವಿತರಣೆ

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ 1173 ಬೂತ್‌ಗಳಲ್ಲಾಗಿ 91335 ಮಕ್ಕಳಿಗೆ ಪೋಲಿಯೋ ಬಿಂದು ಔಷಧಿ ನೀಡಲಾಗಿದೆ. ಪಲ್ಸ್ ಪೋಲಿಯೋ ಇಮ್ಯುನೈಸೇ ಶನ್‌ನಂಗವಾಗಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾಲಿಕಡವ್‌ನಲ್ಲಿ ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸಿದರು. ಪಿಲಿಕೋಡ್ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ವಿ.ವಿ. ಸುಲೋಚನ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮ ದಾಸ್ ಪ್ರಧಾನ ಭಾಷಣ ಮಾಡಿದರು.  ನಿನ್ನೆ ಪೋಲಿಯೋ ಬಿಂದು ಔಷ ಧಿ ಸ್ವೀಕರಿಸದ ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ಇಂದು, ನಾಳೆ …

ಮತೀಯ ಉಗ್ರಗಾಮಿಗಳಿಂದ ಕೇರಳವನ್ನು ಮುಕ್ತಗೊಳಿಸಲು ಬಿಜೆಪಿ ಸರಕಾರಕ್ಕೆ ಮಾತ್ರ ಸಾಧ್ಯ-ಕೆ. ಸುರೇಂದ್ರನ್

ತಿರುವನಂತಪುರ: ಕೇರಳವನ್ನು ಮಹಾ ಉಗ್ರಗಾಮಿಗಳ ಕೈಯಿಂದ ಮುಕ್ತಗೊಳಿಸಲು ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರದಿಂದ ಮಾತ್ರವೇ ಸಾಧ್ಯವಾಗಲಿದೆಯೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂ ದ್ರನ್ ಹೇಳಿದ್ದಾರೆ. ಪೂಂಞಂನಲ್ಲಿ ಕ್ರೈಸ್ತ ಧರ್ಮ ಗುರುವಿನ ಮೇಲೆ ಇತ್ತೀಚೆಗೆ ನಡೆಸ ಲಾದ ದಾಳಿ ಮತ್ತು ಆಟ್ಟುಕ್ಕಾಲ್ ಪೊಂಗಾಲ ಮಹೋತ್ಸವದ ವಿರುದ್ಧ ನಡೆದ  ಹೇಟ್ ಕ್ಯಾಂಪೈನ್ (ದ್ವೇಷ ಅಭಿಯಾನ)ದ ಹಿಂದೆ ಮತೀಯ ಉಗ್ರಗಾಮಿಗಳ ಕೈವಾಡ ಅಡಗಿದೆ. ಕೇರಳದ ಎಡರಂಗ ಮತ್ತು ಐಕ್ಯರಂ ಗಗಳು ಮತೀಯ ಉಗ್ರಗಾಮಿ ಸಂಘ ಟನೆಗಳ ಬೆಂಬಲ ಹೊಂದಿದೆಯೆಂದೂ ಸುರೇಂದ್ರನ್ …

ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯುವುದೇ ಸಿಪಿಎಂನ ಪ್ರಧಾನ ಉದ್ದೇಶ

ತಿರುವನಂತಪುರ: ಕೇಂದ್ರದಲ್ಲಿ  ಬಿಜೆಪಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೇರುವುದನ್ನು ತಡೆಯುವುದೇ ಎಡರಂಗದ ಪ್ರಧಾನ ಚುನಾವಣಾ ಉದ್ದೇಶವಾಗಿದೆಯೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಗೆದ್ದು ಅಧಿಕಾರಕ್ಕೇರುವದನ್ನು ತಡೆಯು ವುದಕ್ಕೆ  ಸಿಪಿಎಂ ಅಗ್ರ ಪ್ರಾಶಸ್ತ್ಯ ನೀಡಲಿದೆ. ದೇಶದ ಹೆಚ್ಚಿನ ಎಲ್ಲಾ  ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಈಗಾ ಗಲೇ ಹಲವು ರಾಜಕೀಯ ಪಕ್ಷಗಳು ಒಂದಾಗಿ ಹೊಸ ಒಕ್ಕೂಟಗಳಿಗೆ ರೂಪು ನೀಡಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡ್ ರಾಜ್ಯಗಳಿಗೆ ಇತ್ತೀಚೆಗೆ ನಡೆದ  ಚುನಾವಣೆಯಲ್ಲಿ  ಬಿಜೆಪಿ ಗೆದ್ದುಕೊಂಡಿದೆಯಾದರೂ …

ಡಾ| ಜನಾರ್ದನ ನಾಯ್ಕ್‌ರಿಗೆ ಸನ್ಮಾನ

ಕಾಸರಗೋಡು: ವೈದ್ಯಕೀಯ ಕ್ಷೇತ್ರದಲ್ಲಿ ಅನರ್ಘ್ಯ ಸೇವೆ ಸಲ್ಲಿಸಿ ಜನಪ್ರಿಯರಾಗಿ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಡಾ. ಎನ್.ಎನ್. ಅಶೋಕನ್ ಸ್ಮಾರಕ ಉಪನ್ಯಾಸ ಪ್ರಶಸ್ತಿ ಪಡೆದ ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರಾದ   ನುಳ್ಳಿಪ್ಪಾಡಿ ನಿವಾಸಿ ಡಾ| ಸಿ.ಎಚ್. ಜನಾರ್ದನ ನಾಯ್ಕ್‌ರಿಗೆ ಕಾಸರಗೋಡು  ಚೆಸ್ಟ್ ಸೊಸೈಟಿಯ ವತಿಯಿಂದ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾಸರಗೋಡು ಸಿ.ಟಿ. ಟವರ್‌ನಲ್ಲಿ ನಡೆದ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ಸತ್ತಾರ್ ಅಧ್ಯಕ್ಷತೆ ವಹಿಸಿದರು. ಹಿರಿಯ ವೈದ್ಯರಾದ ಡಾ| ಯತೀಶ್, ಡಾ| ನಾರಾಯಣ ನಾಯ್ಕ್, …

ಮಗುವನ್ನು ಕೊಂದು ತ್ಯಾಜ್ಯ ರಾಶಿಗೆಸೆದ ಘಟನೆ: ೪ ಮಂದಿ ಸೆರೆ

ತಿರೂರು: ಗೃಹಿಣಿಯಾದ ಯುವತಿ ಹಾಗೂ ಪ್ರಿಯತಮ ಮತ್ತು ಪ್ರಿಯತಮನ ತಂದೆ, ತಾಯಿ ಸೇರಿ ಹನ್ನೊಂದು ತಿಂಗಳು ಪ್ರಾಯದ ಮಗುವನ್ನು ಕ್ರೂರವಾಗಿ  ಹಲ್ಲೆನಡೆಸಿ ಕೊಲೆಗೈದು ಮೃತದೇಹವನ್ನು ಉಪೇಕ್ಷಿಸಿದ ಘಟನೆ ನಡೆದಿದೆ.  ಯುವತಿ ನೀಡಿ ಹೇಳಿಕೆ ಪ್ರಕಾರ ನಡೆಸಿದ ತನಿಖೆ ಯಲ್ಲಿ ಮಗುವಿನ ಮೃತದೇಹವನ್ನು ತೃಶೂ ರು ರೈಲ್ವೇ ನಿಲ್ದಾಣದ ತ್ಯಾಜ್ಯಕೊಪ್ಪೆಯಿಂದ ಪತ್ತೆಹಚ್ಚಲಾಗಿದೆ.  ಘಟನೆಯಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಾಯಿ ತಮಿಳುನಾಡು ಕಡಲೂರು ನೈವೇಲಿ ನಿವಾಸಿ ಶ್ರೀಪ್ರಿಯಾ (೧೯), ಪ್ರಿಯತಮ ಜಯಸೂರ್ಯನ್ (೨೩), ಈತನ ತಂದೆ ಕುಮಾರ್ …

ಶುಚೀಕರಣ ಯಜ್ಞಕ್ಕೆ ಜಿಲ್ಲಾಧಿಕಾರಿ ಚಾಲನೆ

ಕಾಸರಗೋಡು: ಜಿಲ್ಲಾಡಳಿತ, ಸಾಮಾಜಿಕ ಸಂಘ ಸಂಸ್ಥೆಗಳ ನಿರ್ದೇಶಕರು ಜಂಟಿಯಾಗಿ ಆಯೋಜಿಸಿದ ಶುಚೀಕರಣ ಯಜ್ಞವಾದ ‘ಅಳಗೇರುಂ ಕೇರಳಂ’ವನ್ನು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಸಿವಿಲ್ ಸ್ಟೇಷನ್ ಪರಿಸರದಲ್ಲಿ ಉದ್ಘಾಟಿಸಿದರು. ಬಳಿಕ ಸಿವಿಲ್ ಸ್ಟೇಷನ್ ಪರಿಸರ ಹಾಗೂ ಕೈಗಾರಿಕಾ ಪ್ರಾಂಗಣವನ್ನು ಶುಚೀಕರಿಸಲಾಯಿತು. ಅಸಿಸ್ಟೆಂಟ್ ಕಲೆಕ್ಟರ್ ದಿಲೀಪ್ ಕೈನಿಕ್ಕರ, ಎಡಿಎಂ ಕೆ.ವಿ. ಶ್ರುತಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾಮಾಜಿಕ ಸಂಘಸಂಸ್ಥೆಗಳ ಕಾರ್ಯಕರ್ತರು, ಕಾಸರಗೋಡು ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕರ್ತರು, ಚೆಂಗಳ ಪಂಚಾಯತ್‌ನ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು, ಸಿವಿಲ್ …

ಬೆಂಗಳೂರು ಬಾಂಬ್ ಸ್ಫೋಟ: ತನಿಖೆಗೆ ಎಂಟು ತಂಡ ರಚನೆ, ನಾಲ್ವರ ವಶ; ತನಿಖೆ ಕೇರಳಕ್ಕೂ ವಿಸ್ತರಣೆ

ಬೆಂಗಳೂರು: ಬೆಂಗಳೂರು ರಾಜಾಜಿನಗರದ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ನಿನ್ನೆ ಮಧ್ಯಾಹ್ನ ೧೨.೫೫ರ ಸುಮಾರಿಗೆ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಯುಎಪಿಎ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸ್ಫೋಟದಲ್ಲಿ ೧೦ ಮಂದಿ ಗಾಯಗೊಂಡಿದ್ದು ಅದರಲ್ಲಿ ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸ್ಪೋಟಕ್ಕೆ ಎರಡು ಟೈಮರ್‌ಗಳನ್ನು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ತನಿಖೆಗಾಗಿ ಕರ್ನಾಟಕ ಸರಕಾರ ಎಂಟು ತಂಡಗಳನ್ನು ರಚಿಸಿದೆ. ಆರೋಪಿಗಳು ಕೇರಳ, ತಮಿಳುನಾಡು ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಿರುವ ಶಂಕೆಯನ್ನು …

ವಯನಾಡ್‌ನಲ್ಲಿ ವಿದ್ಯಾರ್ಥಿಯ ಸಾವು : ನಾಲ್ಕು ಆರೋಪಿಗಳಿಗಾಗಿ ಲುಕೌಟ್ ನೋಟೀಸ್

ಕಲ್ಪೆಟ್ಟ: ವಯನಾಡ್ ಪೂಕೋಡ್ ವೆಟರ್ನರಿ ಕಾಲೇಜಿನ ದ್ವಿತೀಯ ವರ್ಷ ಬಿವಿಎಸ್‌ಸಿ ವಿದ್ಯಾರ್ಥಿಯೂ ನೆಡುಮಂಗಾಡ್ ನಿವಾಸಿ ವಿನೋದ್ ನಗರ ನಿವಾಸಿಯಾದ ಸಿದ್ಧಾರ್ಥ್ (೨೧)ನ  ಸಾವಿಗೆ ಸಂಬಂಧಿಸಿ ಆರೋಪಿಗಳಾದ ನಾಲ್ಕು ಮಂದಿಗಾಗಿ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನು ೧೨ ಮಂದಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ೧೦ ವಿದ್ಯಾರ್ಥಿಗಳನ್ನು ಒಂದು ವರ್ಷಕ್ಕೆ  ನಿರ್ಬಂಧ ಹೇರಲಾಗಿದೆ. ಇವರಿಗೆ ತರಗತಿಯಲ್ಲಿ ಹಾಜರಾಗಲೋ, ಪರೀಕ್ಷೆ ಬರೆಯಲೋ ಸಾಧ್ಯವಿಲ್ಲ. ಇವರು ಸಿದ್ಧಾರ್ಥ್‌ಗೆ ಹಲ್ಲೆ ಗೈದವರಾಗಿದ್ದಾರೆಂದು ಹೇಳಲಾಗುತ್ತಿದೆ. ಇತರ ಇಬ್ಬರಿಗೆ ಒಂದು ವರ್ಷಕ್ಕೆ …