ಶತಾಯುಷಿ ನಿಧನ

ಕುಂಬಳೆ: ಕಿದೂರು ಪೊಸಒಕ್ಕೆಲ್ ನಿವಾಸಿ ಶತಾಯುಷಿ ಮಹಾಲಿಂಗ ರೈ (೧೦೦) ನಿಧನ ಹೊಂದಿದರು. ಮೈಸೂರು ಎರಡನೇ ಮಹಾಯುದ್ಧದ ಕಾಲದಲ್ಲಿ ಅಲ್ಪ ಕಾಲ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಮುಂಬೈಯಲ್ಲಿ  ಉದ್ಯೋಗದಲ್ಲಿದ್ದ ಇವರು ಬಳಿಕ ಪೊಸ ಒಕ್ಕೆಲ್‌ನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದರು. ಮೃತರು ಪತ್ನಿ ವಿಜಯ ರೈ, ಮಕ್ಕಳಾದ ಕಬಿರ್ ರೈ, ಭರತ್ ರೈ, ರಾಮಕೃಷ್ಣ ರೈ, ಈಶ್ವರಿ ರೈ, ಅನ್ನಪೂರ್ಣೇಶ್ವರಿ ರೈ, ತನುಜಾ, ಪ್ರಕಾಶ್ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗಲ್ಫ್ ಉದ್ಯೋಗಿ ಅಸೌಖ್ಯ ಬಾಧಿಸಿ ಮೃತ್ಯು

ಬದಿಯಡ್ಕ: ರಜೆಯಲ್ಲಿ ಊರಿಗೆ ಬಂದಿದ್ದ ಗಲ್ಫ್ ಉದ್ಯೋಗಿ ಅಸೌಖ್ಯ ಬಾಧಿಸಿ ಮೃತಪಟ್ಟರು. ನೆಕ್ರಾಜೆ ಕೇಳಾರಿಯ ದಿ| ಅಬ್ದುಲ್ಲ- ಮರಿಯಮ್ಮ ದಂಪತಿಯ ಪುತ್ರ ಇಬ್ರಾಹಿಂ (೫೦) ಮೃತಪಟ್ಟ ವ್ಯಕ್ತಿ. ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಇಬ್ರಾಹಿಂ ರಜೆಯಲ್ಲಿ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಅನಂತರ ಅಸೌಖ್ಯ ಬಾಧಿಸಿತ್ತೆನ್ನಲಾ ಗಿದೆ. ಮೃತರು ಪತ್ನಿ ರಶೀದ, ಮಕ್ಕಳಾದ ಸಬ್ನು, ಮುಶೀದ, ಮನಾಫ್, ಸಹೋದರ- ಸಹೋ ದರಿಯರಾದ ಮುಹಮ್ಮದ್, ಮೈಮೂನ, ಅಬ್ದುಲ್ ಖಾದರ್, ಹಮೀದ್, ಬಶೀರ್, ಲತೀಫ್, ಸುಬೈದ್, ಫರಿದ, ಶಿಹಾಬ್ ಹಾಗೂ ಅಪಾರ …

ಅಂಗೀಕೃತ ಪಾಸ್ ಬಳಸಿ ಅನಧಿಕೃತವಾಗಿ ಹೊಯ್ಗೆ ಸಾಗಾಟ: ಲಾರಿ ವಶ; ಇಬ್ಬರ ವಿರುದ್ಧ ಕೇಸು

ಕುಂಬಳೆ: ಅಂಗೀಕೃತ ಕಡವಿನ ಪಾಸ್ ಬಳಸಿ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳ ಎಸ್‌ಐ ಉಮೇಶ್ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಲಾರಿಯ ಮಾಲಕ ವಳ ಯಂ ಕೆ.ಕೆ.ಹೌಸ್‌ನ ಅಲಿಕುಂಞಿ (೩೬), ಚಾಲಕ ಕರ್ನಾಟಕ ನಿವಾಸಿಯೂ ಬಾಯಾರಿನಲ್ಲಿ ವಾಸಿಸುವ ಅಬ್ದುಲ್ ಮುನೀರ್ (೨೩) ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ವಳಯಂ ಕಡವಿನಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ವೇಳೆ ಲಾರಿಯನ್ನು ವಶಪಡಿಸಲಾಗಿದೆ. ನಿನ್ನೆ ಬೆಳಿಗ್ಗೆ ಅಂಗೀಕೃತ ಕಡವಿನ ಪಾಸ್ ಮೂಲಕ ಈ ಲಾರಿಯಲ್ಲಿ ಹೊಯ್ಗೆ  ಸಾಗಿಸಲಾಗಿದೆ. ಅನಂತರವೂ ಇದೇ ಪಾಸ್ …

ಮಂಜೇಶ್ವರದ ಸಮಸ್ಯೆಗಳಿಗೆ ಸ್ಪಂದಿಸದೆ ವಿದೇಶ ಪ್ರಯಾಣಗೈಯ್ಯುವ ಶಾಸಕರ ಉದ್ದೇಶ ಬಹಿರಂಗಪಡಿಸಬೇಕು- ಬಿಜೆಪಿ

ಮಂಜೇಶ್ವರ: ಮಂಜೇಶ್ವರದ ಜನತೆ ಅಗತ್ಯ ಬೇಡಿಕೆಗಳಿಗೆ ಶಾಸಕರನ್ನು ಭೇಟಿಯಾಗಲು ವಿದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಬಿಜೆಪಿ ಆರೋಪಿಸಿದೆ. ಪ್ರತೀ ತಿಂಗಳು ಕನಿಷ್ಠ ೧೦ ದಿನಗಳ ಕಾಲ ಮಂಜೇಶ್ವರ ಶಾಸಕರು ವಿದೇಶದಲ್ಲಿದ್ದು, ಇದು ಯಾವ ಉದ್ದೇಶಕ್ಕಾಗಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪ್ರಶ್ನಿಸಿದೆ. ಮಂಡಲದಲ್ಲಿ ಅನೇಕ ಸಮಸ್ಯೆಗಳಿದ್ದರೂ ಅದರ ಪರಿಹಾರಕ್ಕೆ ಗಮನ ನೀಡದೆ ವಿದೇಶಕ್ಕೆ ಸಂಚರಿಸುತ್ತಿರುವ ಶಾಸಕರ ಪ್ರಯಾಣದ ಉದ್ದೇಶ ಸ್ಪಷ್ಟಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಮಂಜೇಶ್ವರ ಮಂಡಲ ಪ್ರಮುಖರ ಸಭೆ ಪ್ರೇರಣಾದಲ್ಲಿ ಜರಗಿತು. ಮಂಡಲ ಅಧ್ಯಕ್ಷ …

ಉಪ್ಪಳ ಗೇಟ್‌ನಲ್ಲಿ ನೂತನ ರೈಲ್ವೇ ಪ್ಲೈ ಓವರ್ ನಿರ್ಮಾಣಕ್ಕೆ ಶಂಕುಸ್ಥಾಪನೆ

ಉಪ್ಪಳ: ಕೇಂದ್ರ ರೈಲ್ವೇ ಇಲಾಖೆಯ “ಅಮೃತ್ ಭಾರತ್ ಸ್ಟೇಶನ್ ಸ್ಕೀಂ” ನ ಅಂಗವಾಗಿ ಉಪ್ಪಳ ರೈಲ್ವೇ ಗೇಟಿನ (ಉಪ್ಪಳ ಗೇಟ್) ಸಮೀಪದಲ್ಲಿ ನೂತನ ರೈಲ್ವೇ ಫ್ಲೈ ಓವರ್ ಕಾಮಗಾರಿಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಮಧ್ಯಾಹ್ನ ಆಲ್‌ಲೈನ್ ಮೂಲಕ ನೆರವೇರಿಸಿದರು. ಉಪ್ಪಳ ರೈಲ್ವೇ ಗೇಟ್ ಪರಿಸರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಪಾಲಕ್ಕಾಡ್ ಡಿವಿಶನ್ ರೈಲ್ವೇ ಅಧಿಕಾರಿಗಳು, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್, ಉಪಾಧ್ಯಾಕ್ಷ ಹನೀಫ್.ಪಿ.ಕೆ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಬಿಜೆಪಿ ಜಿಲ್ಲಾ …

ರಾಜ್ಯಪಾಲ ಸೇವಾ ಅವಧಿ ಸೆಪ್ಟಂಬರ್‌ನಲ್ಲಿ ಮುಕ್ತಾಯ: ಆರೀಫ್ ಮೊಹಮ್ಮದ್ ಖಾನ್ ಲೋಕಸಭೆಗೆ ಸ್ಪರ್ಧೆ ಸಾಧ್ಯತೆ

ತಿರುವನಂತಪುರ: ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ತಮ್ಮ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಉತ್ತರ ಪ್ರದೇಶದ ಬುಲಂದ್ ಶಹರ್ ನಿವಾಸಿಯಾಗಿರುವ ಆರೀಫ್ ಮೊಹಮ್ಮದ್ ಖಾನ್ ಅವರು ಕೇರಳದ ೨೨ನೇ ರಾಜ್ಯಪಾಲರಾಗಿ ೨೦೧೯ ಸೆಪ್ಟಂಬರ್ ತಿಂಗಳಲ್ಲಿ ಅಧಿಕಾರ ವಹಿಸಿ ಕೊಂಡಿದ್ದರು. ಐದು ವರ್ಷಗಳ ಸೇವಾ ಅವಧಿ ಸೆಪ್ಟಂಬರ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಅದರೊಳಗಾಗಿ ಅವರು ತಮ್ಮ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ …

ಪ್ರತಾಪನಗರ ಮಹಿಳಾ ಸಂಘದಿಂದ ಭಜನೋತ್ಸವ

ಮಂಗಲ್ಪಾಡಿ: ಶ್ರೀ ಗೌರೀ ಗಣೇಶ ಮಹಿಳಾ ಸಂಘ ಪ್ರತಾಪ ನಗರ ಇದರ 15ನೇ ವಾರ್ಷಿಕೋತ್ಸವ ಪ್ರತಾಪನಗರದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ನಡೆಯಿತು. ಮುಂಜಾನೆ ಮಹಿಳಾ ಸಂಘದಲ್ಲಿ ಗಣ ಹೋಮ ಬಳಿಕ ಶೇಖರ ಪೂಜಾರಿ ಮಂಗಲ್ಪಾಡಿ ಇವರು ದೀಪ ಪ್ರಜ್ವಲನೆಗೊಳಿಸಿ ಭಜನೋತ್ಸÈ್ಣಔ್ರಕಿ ಚಾಲನೆ ನೀಡಿದರು. ಸೂರ್ಯೋದಯದಿಂದ ಸೂರ್ಯಾಹಸ್ತದ ತನಕ ವಿವಿಧ ತಂಡದಿAದ ಭಜನೆ ನಡೆಯಿತು. ಗಣೇಶ ಮಂದಿರದ ಕಾರ್ಯಕರ್ತರು ಸಹಕರಿಸಿದರು.

ಸಹಕಾರಿ ವಲಯದ ನೌಕರರಿಗೆ ತುಟ್ಟಿ ಭತ್ತೆ ಘೋಷಿಸಲು ಟೌನ್ ಬ್ಯಾಂಕ್ ಎಂಪ್ಲೋಯೀಸ್ ಸಂಘ್ ಆಗ್ರಹ

ಕಾಸರಗೋಡು: ಕೇರಳ ಸಹಕಾರಿ ವಲಯದ ನೌಕರರ ೨೦೨೧ರ ಬಳಿಕದ ತುಟ್ಟಿ ಭತ್ತೆ ಶೀಘ್ರ ಘೋಷಿಸಬೇಕೆಂದು ಕೇರಳ ಕೋ ಆಪರೇಟಿವ್ ಎಂಪ್ಲೋ ಯೀಸ್ ಸಂಘ್ (ಬಿಎಂಎಸ್) ಕಾಸರ ಗೋಡು ಟೌನ್ ಬ್ಯಾಂಕ್ ಎಂಪ್ಲೋ ಯೀಸ್ ವಾರ್ಷಿಕ ಸಮಾವೇಶ ಠರಾವುನಲ್ಲಿ ಆಗ್ರಹಿಸಿದೆ. ಬಿ.ಎಂ.ಎಸ್. ರಾಜ್ಯ ಉಪಾಧ್ಯಕ್ಷ, ಟೌನ್ ಬ್ಯಾಂಕ್ ಎಂಪ್ಲೋಯೀಸ್ ಸಂಘ್‌ನ ಅಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಉಪೇಂ ದ್ರನ್ ಕೋಟೆಕಣಿ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಉಪಾಧ್ಯಕ್ಷ ಕೆ.ಎ. …

ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಈ ಬಾರಿ ತ್ರಿಕೋನ ಸ್ಪಧ-ಎಂ.ವಿ. ಗೋವಿಂದನ್

ಕಣ್ಣೂರು: ಮುಂದಿನ ಲೋಕಸಭಾ ಚುನಾವಣೆಯ ಕೇರಳದಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಈಬಾರಿ ತ್ರಿಕೋನ ಸ್ಪಧೆ  ನಡೆಯಲಿದೆಯೆಂದೂ ಅದರಲ್ಲಿ ಎಲ್ಲಾ ೨೦ ಲೋಕಸಭಾ ಕ್ಷೇತ್ರಗಳಲ್ಲಿ ಎಡರಂಗವೇ ಗೆಲುವು ಸಾಧಿಸಲಿದೆಯೆಂಬ ನಿರೀಕ್ಷೆಯನ್ನು ಗೋವಿಂದನ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ  ಲೋಕಸಭಾ ಚುನಾವಣೆ ನಡೆದ ವೇಳಗಳಲ್ಲೆಲ್ಲಾ ಎಡರಂಗ ಮತ್ತು ಐಕ್ಯರಂಗದ ನಡುವೆ ಮಾತ್ರವೇ ನೇರ ಸ್ಪರ್ಧೆ ನಡೆಯಲಿದೆಯೆಂದು ಎಡರಂಗ ಮತ್ತು ಐಕ್ಯರಂಗ ಹೇಳುತ್ತಾ ಬಂದಿತ್ತು. ಆದರೆ ಈ ಬಾರಿಯ …

ಸಾರ್ವತ್ರಿಕ ಚುನಾವಣೆ: ಅಧಿಕಾರಿಗಳಿಗೆ ತರಬೇತಿ

ಕಾಸರಗೋಡು: ಸಾರ್ವತ್ರಿಕ ಚುನಾವಣೆಯಂಗವಾಗಿ ಉಪ ಚುನಾವಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತ್ತು ಚುನಾವಣೆ ಸಂಬಂಧ ವ್ಯವಹಾರ ನಡೆಸುವ ನೌಕರರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಯಿತು. ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ತರಬೇತಿಯಲ್ಲಿ ಜಿಲ್ಲಾ ಚುನಾವಣಾಧಿ ಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇಂಬಶೇಖರ್, ತರಬೇತುದಾರ ನೋಡಲ್ ಆಫೀಸರ್ ಸೂಫಿಯಾನ್ ಅಹಮ್ಮದ್ ಮಾತನಾಡಿದರು. ರಾಜ್ಯ, ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಾದ ಸಜಿತ್ ಪಲೇರಿ, ನಾರಾಯಣ ಗೋಸಾಡ, ಸುರೇಶ್ ಬಾಬು ಜಿ, ಕೆ.ಪಿ. ಗಂಗಾಧರನ್, ಅಜಿತ್ ಕುಮಾರ್, ಗೋಪಾಲಕೃಷ್ಣ ಮೊದಲಾದವರು ವಿವಿಧ …