ನಿಲಂಬೂರು ಗೆಲುವು: ವಿವಿಧೆಡೆ ಯುಡಿಎಫ್ ವಿಜಯೋತ್ಸವ

ಪೈವಳಿಕೆ: ನಿಲಂಬೂರು ವಿಧಾನಸಭಾ ಮಂಡಲದಲ್ಲಿ ನಡೆದ ಉಪಚುನಾವಣೆಯಲ್ಲಿ ಐಕ್ಯಪ್ರಜಾಪ್ರಭುತ್ವ ರಂಗದ ಅಭ್ಯರ್ಥಿ ಆರ್ಯಾಡನ್ ಶೌಕತ್‌ರ ಗೆಲುವಿನ ಬಗ್ಗೆ ಪೈವಳಿಕೆ ನಗರದಲ್ಲಿ ಯು.ಡಿ.ಎಫ್. ಪಂಚಾಯತ್ ಸಮಿತಿಯ ನೇತ್ವತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮೆರವಣಿಗೆಯಲ್ಲಿ ಯು.ಡಿ.ಎಫ್. ಪಂಚಾಯತ್ ಸಮಿತಿ ಅಧ್ಯಕ್ಷ ವಸಂತಕುಮಾರ್, ಸಂಚಾಲಕ ಝೆಡ್ ಎ. ಕಯ್ಯಾರ್, ಸೈಫುಲ್ಲಾ ತಂಙಳ್, ನಾರಾಯಣ ಏದಾರ್, ರಾಘವೇಂದ್ರ ಭಟ್, ಅಸೀಸ್ ಕಳಾಯಿ ನೇತೃತ್ವ ನೀಡಿದರು. ಅಸೀಸ್ ಚೇವಾರ್, ಎಡ್ವರ್ಡ್ ಡಿ ಸೋಜ, ಶಿವರಾಮ ಶೆಟ್ಟಿ, ಝಾಕಿರ್, ಇಬ್ರಾಹಿಂ ಪದವು, ಗಂಗಾಧರ ನಾಯಕ್, ಮುಸ್ತಫ ಪದವು, …

ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ವಾರ್ಷಿಕ ಸಮಾವೇಶ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ವಾರ್ಷಿಕ ಸಮಾವೇಶ ಪೇಟೆ ಶ್ರೀ ವೆಂಕಟ್ರಮಣ ಕ್ಷೇತ್ರದಲ್ಲಿ ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿ.ಹಿಂ.ಪ ಕಣ್ಣೂರು ವಿಭಾಗ ಕಾರ್ಯದರ್ಶಿ ಚಂದ್ರಶೇಖರನ್ ಉದ್ಘಾಟಿಸಿ ಮಾತನಾಡಿದರು. ವಿ.ಹಿಂ.ಪ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಜಿಲ್ಲಾ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಪ್ರಖಂಡ ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಗಣೇಶ್ ಬೀರಂತಬೈಲು, ನವೀನ್ ಕೊರಕ್ಕೋಡು ಉಪಸ್ಥಿತರಿದ್ದರು. ಇದೇ …

ಯುಡಿಎಫ್‌ಗೆ ಹೊಸ ಚೈತನ್ಯನೀಡಿದ ನಿಲಂಬೂರು ಚುನಾವಣೆ ಫಲಿತಾಂಶ

ತಿರುವನಂತಪುರ: ಮಲಪ್ಪುರಂ ಜಿಲ್ಲೆಯ ನಿಲಂಬೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವ ಣೆಯಲ್ಲಿ ನಿರೀಕ್ಷೆಗೂ ಮೀರಿದ ಬಹುಮತದ ಅಂತರದಲ್ಲಿ ಗೆದ್ದಿರುವುದು ಯುಡಿಎಫ್ಗೆ ಹೊಸ ಚೈತನ್ಯ ನೀಡಿದೆ. ಇದು ಮುಂದೆ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಯುಡಿಎಫ್ನ ಗೆಲುವಿನ ಮುನ್ನುಡಿಯಾಗಿದೆಯೆಂದು ಯುಡಿಎಫ್ ನೇತಾರರು ಅಭಿಪ್ರಾ ಯಪಡತೊಡಗಿದೆ.ನಿಲಂಬೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,38,057 ಮತದಾರರಿದ್ದು, ಅದರಲ್ಲಿ 1,75,077 (ಶೇ. 75.87) ಮತದಾರರು ಮತ ಚಲಾಯಿಸಿದ್ದರು. ಇದರಲ್ಲಿ ಯುಡಿಎಫ್ (ಕಾಂಗ್ರೆಸ್) ನ ಆರಯಾ ದಡ ಶೌಕತ್ 77,737 ಮತ …

ಹ್ಯಾಶಿಶ್ ಆಯಿಲ್ ಸಹಿತ ಬದಿಯಡ್ಕ ನಿವಾಸಿ ಸೆರೆ

ಕಾಸರಗೋಡು: 100 ಗ್ರಾಂ ಹ್ಯಾಶಿಶ್ ಆಯಿಲ್ ಸಹಿತ ಬದಿಯಡ್ಕ ವಿದ್ಯಾಗಿರಿ ನಿವಾಸಿ ಸೆರೆಯಾಗಿದ್ದಾನೆ. ವಿದ್ಯಾಗಿರಿಯ ಎಂ. ಹಕೀಂ (28)ನನ್ನು ಹೊಸದುರ್ಗ ಎಸ್‌ಐ ಟಿ. ಅಖಿಲ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ಬೆಳಿಗ್ಗೆ 10.30ಕ್ಕೆ ಕಾಞಂಗಾಡ್ ರೈಲು ನಿಲ್ದಾಣದ ಪಾರ್ಕಿಂಗ್ ಮೈದಾನದಿಂದ ಹಕೀಂನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಹ್ಯಾಶಿಶ್ ಆಯಿಲ್ ಈತನಿಂದ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿ ಯನ್ನು ಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಮದುವೆ ಭರವಸೆಯೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ: ಪತ್ವಾಡಿ ನಿವಾಸಿ ವಿರುದ್ಧ ಕೇಸು

ಉಪ್ಪಳ: ಮದುವೆಯಾಗು ವುದುದಾಗಿ ಭರವಸೆಯೊಡ್ಡಿ 32ರ ಹರೆಯದ ಯುವತಿಯನ್ನು ವಿವಿಧೆಡೆಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿ ನೀಡಿದ ದೂರಿನ ಮೇರೆಗೆ ಪತ್ವಾಡಿಯ ವಿನೋದ್ ಕುಮಾರ್ ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸರು  ತನಿಖೆ ತೀವ್ರಗೊಳಿಸಿದ್ದಾರೆ. ಮೇ, ಜೂನ್ ತಿಂಗಳುಗಳಲ್ಲಿ  ಯುವತಿಗೆ ಆರೋಪಿ ಕಿರುಕುಳ ನೀಡಿರುವುದಾಗಿ ತಿಳಿಸಲಾಗಿದೆ. ಬಳಿಕ ಯುವಕ ಮದುವೆ ಭರವಸೆಯಿಂದ  ಹಿಂಜರಿದಿ ರುವುದರಿಂದ ಯುವತಿ ಪೊಲೀಸರಿಗೆ ದೂರು …

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ: ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿ ಬಂಧನ

ಕಾಸರಗೋಡು: ಯುವತಿಯನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಬಳಿಕ ಮದುವೆಯಿಂದ ಹಿಂಜರಿದು ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.  ಉಪ್ಪಳ ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಮುಹಮ್ಮದ್ ಅಶ್ರಫ್ (24) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ.  ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿಯನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಈತ ಲೈಂಗಿಕ ಕಿರುಕುಳ ನೀಡಿದ್ದನೆನ್ನ ಲಾಗಿದೆ. ಅನಂತರ ಮದುವೆಯಿಂದ ಹಿಂಜರಿದ ಈತ ಗಲ್ಫ್‌ಗೆ  ತೆರಳಿದ್ದನು. ಕಿರುಕುಳ ಬಗ್ಗೆ ಯುವತಿ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು  …

ಆಟೋ ಚಾಲಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ:  ಆಟೋ ಚಾಲಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಾರ್ಪನಡ್ಕ ಬಳಿ ಸಂಭವಿಸಿದೆ.  ಮಾರ್ಪನಡ್ಕ ಬೆದ್ರುಕೂಡ್ಲು ಮಹಾಬಲತೊಟ್ಟಿ ಎಂಬಲ್ಲಿನ ದಿ| ಬಾಲಕೃಷ್ಣ ಮಣಿಯಾಣಿಯವರ ಪುತ್ರ ಮನೋಹರ (25) ಮೃತಪಟ್ಟ ಯುವಕ. ಇವರು ಮಾರ್ಪನಡ್ಕದಲ್ಲಿ ಆಟೋ ರಿಕ್ಷಾ ಚಾಲಕನಾಗಿದ್ದರು.  ನಿನ್ನೆ ರಾತ್ರಿ 10ಗಂಟೆ ವೇಳೆ ಮನೆ ಸಮೀಪದ ರಬ್ಬರ್ ತೋಟದಲ್ಲಿ ಮನೋಹರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.  ಮೃತರು ತಾಯಿ ಶಾರದಾ, ಪತ್ನಿ ಅಂಜಲಿ, …

ಹಲವು ಪ್ರಕರಣಗಳ ಆರೋಪಿ ಪಾಂಬ್ ನೌಮಾನ್ ಕಳ್ಳಕೋವಿ, ಮದ್ದುಗುಂಡುಗಳೊಂದಿಗೆ ಸೆರೆ

ಕುಂಬಳೆ: ಕಳ್ಳಕೋವಿ ಹಾಗೂ ಮದ್ದು ಗುಂಡುಗಳ ಸಹಿತ ಹಲವಾರು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಪೊಲೀಸರು ಬಂಧಿಸಿ ದ್ದಾರೆ. ಮಂಗಲ್ಪಾಡಿ ಚೆರುಗೋಳಿಯ ನೌಮಾನ್ ಯಾನೆ ಪಾಂಬ್ ನೌಮಾನ್ (26) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಬಂಧಿಸಿದೆ. ಶನಿವಾರ ರಾತ್ರಿ ೮.೩೦ರ ವೇಳೆ ಕುಂಬಳೆಯಲ್ಲಿ ಈತನನ್ನು ಬಂಧಿಸಲಾಗಿದೆ.  ಎಸ್‌ಸಿಪಿಒಗಳಾದ ಕೃಪೇಶ್, ಅಬ್ದುಲ್ ಸಲಾಂ, ಸಿಪಿಒ ಸುಜಿತ್ ಎಂಬಿವರನ್ನು ಸೇರಿಸಿಕೊಂಡು ರಾತ್ರಿ ಹೊತ್ತಿನಲ್ಲಿ  ಎಸ್‌ಐ ವಾಹನ ತಪಾಸಣೆ ನಡೆಸುತ್ತಿದ್ದರು. ಕುಂಬಳೆಗೆ ತಲುಪಿದಾಗ ಕುಂಬಳೆ-ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಹಲವು …

ಕೋಳಿ ಅಂಕಕ್ಕೆ ಪೊಲೀಸ್ ದಾಳಿ

ವರ್ಕಾಡಿ: ಇಲ್ಲಿನ ತೌಡುಗೋಳಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸರು  ದಾಳಿ ನಡೆಸಿ ಒಂದು ಕೋಳಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮೊನ್ನೆ ಸಂಜೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲಿದ್ದವರು ಓಡಿ ಪರಾರಿಯಾಗಿದ್ದಾರೆ.ಈ ಸಂಬಂಧ ಕಂಡರೆ ಪತ್ತೆಹಚ್ಚಬಹು ದಾದ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕಟ್ಟಿ ಹಾಕಲಾಗಿದ್ದ ಕೋಳಿಯನ್ನು ಕಸ್ಟಡಿಗೆ ತೆಗೆದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರು, ರಿಕ್ಷಾದಲ್ಲಿ ಸಾಗಿಸುತ್ತಿದ್ದ 453 ಲೀಟರ್ ಮದ್ಯ ವಶ: ಓರ್ವಸೆರೆ; ಇನ್ನೋರ್ವ ಪರಾರಿ

ಕಾಸರಗೋಡು: ನಗರದ ಅಡ್ಕತ್ತಬೈಲ್‌ನಲ್ಲಿ  ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರ ಣೆಯಲ್ಲಿ ಮಾರುತಿ ಸ್ವಿಫ್ಟ್ ಕಾರು ಮತ್ತು ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೪೫೩.೬ ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಜೇಶ್ವರ ಸಮೀಪದ ಕುಂಜತ್ತೂರಿನ ಅಣ್ಣು ಅಲಿಯಾಸ್ ಅರವಿಂದಾಕ್ಷನ್ (48) ಮತ್ತು ಕೂಡ್ಲು ರಾಮದಾಸನಗರದ ಪುರುಷೋತ್ತಮನ್ (31) ಎಂಬಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ …