ನಗರಸಭೆಯ ಸಮಗ್ರ ಯೋಜನೆ: ವರದಿ ಸಲ್ಲಿಕೆ

ಕಾಸರಗೋಡು: ನಗರಸಭೆಯ ಸಮಗ್ರ ನಗರ ಯೋಜನೆಯ ಪರಿಷ್ಕ ರಿಸಿದ ವರದಿ ಹಾಗೂ ಪ್ಲಾನ್‌ನ್ನು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂರ ನೇತೃತ್ವದಲ್ಲಿ ಚೀಫ್ ಟೌನ್ ಪ್ಲಾನರ್‌ಗೆ ಹಸ್ತಂತರಿಸಲಾಯಿತು. ಖಾಲಿದ್ ಪಚ್ಚಕ್ಕಾಡ್, ಸಹೀರ್ ಆಸಿಫ್, ಕಾರ್ಯದರ್ಶಿ ಜಸ್ಟೀನ್ ಪಿ.ಎ, ಇಂಜಿನಿಯರ್ ದಿಲೀಶ್ ಎನ್.ಡಿ ಎಂಬಿವರು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು. ಕಾಸರಗೋಡು ಹೊಸ ಬಸ್ ನಿಲ್ದಾಣ ಸೆಂಟ್ರಲ್ ಏರಿಯಾ ಎಂಬಿವುಗಳ ಸಮಗ್ರ ಅಭಿವೃದ್ಧಿ ನಿರ್ದೇಶಗಳನ್ನು ವರದಿಯಲ್ಲಿ ಅಡಕಗೊಳಿಸಲಾಗಿದೆ. ೩೦ ವರ್ಷದ ಬಳಿಕ ಕಾಸರಗೋಡು ನಗರಸಭೆಯ ಸಮಗ್ರ ನಗರಾ ಯೋಜನೆ ಪರಿಷ್ಕರಿಸುತ್ತಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ಶಬರಿಮಲೆ, ಮಾಳಿಗಪುರಂ ಅರ್ಚಕ ನೇಮಕಾತಿ  ೨೭ರಂದು ತೀರ್ಪು

ಕೊಚ್ಚಿ: ಶಬರಿಮಲೆ, ಮಾಳಿಗ ಪುರಂ ಅರ್ಚಕರ ನೇಮಕಾತಿಗೆ ಮಲೆ ಯಾಳಿ ಬ್ರಾಹ್ಮಣರು ಮಾತ್ರವೇ ಅರ್ಜಿ ಸಲ್ಲಿಸಿದರೆ ಸಾಕೆಂಬ ವ್ಯವಸ್ಥೆ ಯನ್ನು ಪ್ರಶ್ನಿಸಿ ನೀಡಿದ ಅರ್ಜಿಯಲ್ಲಿ ತೀರ್ಪು ನೀಡುವುದನ್ನು ಹೈಕೋರ್ಟ್ ಈ ತಿಂಗಳ ೨೭ಕ್ಕೆ ಮುಂದೂಡಿದೆ.  ಜಸ್ಟೀಸ್ ಪಿ.ಜಿ. ಅಜಿತ್ ಕುಮಾರ್ ಎಂಬಿವರು ಸೇರಿದ ವಿಭಾಗೀಯ ಪೀಠ ಸಿ.ವಿ. ವಿಷ್ಣು ನಾರಾಯಣನ್,  ಟಿ.ಎಲ್. ಸಿಜಿತ್, ಪಿ.ಆರ್. ವಿಜೀಶ್ ಮೊದಲಾದವರು ನೀಡಿದ ಅರ್ಜಿಯನ್ನು ಪರಿಗಣಿಸಿತ್ತು. ಇದರಲ್ಲಿ ಇನ್ನೂ ಕೂಡಾ ಕೆಲವು ವಿಷಯಗಳಲ್ಲಿ ಸ್ಪಷ್ಟತೆ ಕಂಡುಕೊ ಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ತೀರ್ಪು ನೀಡುವುದನ್ನು …

ಕಾನತ್ತೂರಿನಲ್ಲಿ ಶ್ರೀ ವಯನಾಟು ಕುಲವನ್ ದೈವಂಕಟ್ಟು ಮಹೋತ್ಸವ ಮಾರ್ಚ್ ೮ರಿಂದ

ಮುಳಿಯಾರು: ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾರ್ಚ್ ೮ರಿಂದ ೧೨ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ೮ರಂದು ಬೆಳಿಗ್ಗೆ ಉಗ್ರಾಣ ತುಂಬಿ ಸುವ ಶೋಭಾಯಾತ್ರೆ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಪರಿಸರದಿಂದ ಆರಂಭಗೊಳ್ಳಲಿದೆ. ಸಂಜೆ ೬ ಗಂಟೆಗೆ ಬಂಡಾರ ಮೆರವಣಿಗೆ, ರಾತ್ರಿ ೮ರಿಂದ ದೈವಗಳ ಆರಂಭ, ೯ರಿಂದ ತಮ್ಮ ದೈವ, ಅಣ್ಣ ದೈವ, ಬಬ್ಬೇರಿಯನ್, ಮಾಣಿಚ್ಚಿ ದೈವಗಳು, ೯ರಂದು ಮುಂಜಾನೆ ೪ ಗಂಟೆಗೆ ಚಾಮುಂಡಿ ದೈವ, ೮ ಗಂಟೆಗೆ ಪಂಜುರ್ಲಿ, ರಾತ್ರಿ ೭ …

ಬಿಜೆಪಿ ಉಮೇದ್ವಾರ ಯಾದಿ ಫೆ. ೨೬ರ ಮೊದಲು ಪ್ರಕಟ

ತಿರುವನಂತಪುರ: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಉಮೇದ್ವಾರರ ಯಾದಿಯನ್ನು ಫೆಬ್ರವರಿ ೨೬ರೊಳಗಾಗಿ ಪ್ರಕಟಿಸಲಾಗುವುದು. ಫೆ. ೨೫ರಂದು ದೆಹಲಿಯಲ್ಲಿ ಬಿಜೆಪಿ ಉಮೇದ್ವಾರರ ಯಾದಿಗಳ ಪರಿಶೀಲನೆ ನಡೆಯಲಿದೆ. ಇದಕ್ಕಾಗಿ ಬಿಜೆಪಿ ಕೇಂದ್ರ ನೇತೃತ್ವದ ತುರ್ತು ಪಟ್ಟಿಯನ್ನು ಅಂದು ಕರೆಯಲಾಗಿದೆ. ಅದರಲ್ಲಿ ಪಾಲ್ಗೊಳ್ಳಲು ಬಿಜೆಪಿ ಕೇರಳ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂ ದ್ರನ್ ಈಗಾಗಲೇ ದಿಲ್ಲಿಗೆ ತೆರಳಿದ್ದಾರೆ. ಬಿಜೆಪಿ ಭಾರೀ ಸಾಧ್ಯತೆ ನಿರೀಕ್ಷಿ ಸುವ ತಿರುವನಂತಪುರದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್ ಮತ್ತು ಮಲಯಾಳ ಸಿನೆಮಾ ನಿರ್ಮಾ ಪಕ …

ಜಿಲ್ಲೆಯಲ್ಲಿ ನೈಪುಣ್ಯ ಅಭಿವೃದ್ಧಿ ಕೇಂದ್ರ ಸಿದ್ಧಪಡಿಸಲು ಲಿಂಕ್ ಗ್ರೂಪ್

ಕಾಸರಗೋಡು: ಜಿಲ್ಲಾ ನೈಪುಣ್ಯ ಅಭಿವೃದ್ಧಿ ಕೇಂದ್ರವಾಗಿ ಬದಲಿಸಲಿರುವ ಸಾಧ್ಯತೆಗಳ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿಯಾಗಿ ವಿದೇಶ ಠೇವಣಿ ಉದ್ಯಮಿಗಳ ಲಿಂಕ್ ಗ್ರೂಪ್‌ನೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲಾಯಿತು. ಉದ್ಯೋಗಾರ್ಥಿಗಳ ಕೈಗಳಿಗೆ ಕೆಲಸ ತಲುಪಿಸುವುದು ಎಂಬ ಉದ್ದೇಶದೊಂದಿಗೆ, ಗ್ರೂಪ್, ರಾಜ್ಯ, ಜಿಲ್ಲಾ, ಗ್ರಾಮ ಮಟ್ಟದಲ್ಲಿರುವ ಸರಕಾರಿ ವ್ಯವಸ್ಥೆಗಳ ಸಹಾಯದೊಂದಿಗೆ ನೈಪುಣ್ಯ ಅಭಿವೃದ್ಧಿ ಕೇಂದ್ರ ನಿರ್ಮಿಸಲಾಗುವುದು. ಜಿಲ್ಲೆಯ ಶಿಕ್ಷಣ ರಂಗ ಉತ್ತಮಪಡಿಸಿ ಶಿಕ್ಷಣ ಅರ್ಹತೆ ಉಳ್ಳವರಿಗೆ ಉದ್ಯೋಗ ಕೇಂದ್ರಗಳಲ್ಲಿ ಅಗತ್ಯವಾದ ತಜ್ಞ ತರಬೇತಿ ನೀಡಿ ಪ್ರಾಪ್ತರನ್ನಾಗಿ …

ಅಂಗನವಾಡಿಯ ಆವರಣಗೋಡೆ ಕುಸಿದು ಒಂದು ವರ್ಷ ಕಳೆದರೂ ಮರು ನಿರ್ಮಾಣಕ್ಕೆ ಕ್ರಮವಿಲ್ಲ: ಅಪಾಯಭೀತಿ; ಮಕ್ಕಳಿಗೆ  ಬಾಡಿಗೆ ಮನೆಯಲ್ಲಿ ಕಲಿಕೆ

ಪೈವಳಿಕೆ: ಮಳೆಗಾಲದಲ್ಲಿ ಅಂಗನವಾಡಿಯ ಆವರಣಗೋಡೆ ಕುಸಿದು ಬಿದ್ದು ವರ್ಷ ಕಳೆದರೂ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಊರವರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಪೈವಳಿಕೆ ಪಂಚಾಯತ್ ೬ನೇ ವಾರ್ಡ್‌ನ ನೆತ್ತರಗುಳಿ ಅಂಗನವಾಡಿಯ ಆವರಣಗೋಡೆ  ಒಂದು ವರ್ಷ ಹಿಂದೆ  ಕುಸಿದು ಬಿದ್ದಿದೆ.  ಕಲ್ಲುಕಟ್ಟಿದ ಒಂದು ಬದಿಯ ಅರ್ಧ ಭಾಗ ಆವರಣಗೋಡೆ ೨೦೨೨ ಜೂನ್ ತಿಂಗಳಲ್ಲಿ  ಭಾರೀ ಮಳೆಯ ಸಂದರ್ಭದಲ್ಲಿ ಕುಸಿದು ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕುಸಿದು ಬಿದ್ದ ಭಾಗದಲ್ಲಿ ಭಾರೀ ಆಳದ ಹೊಂಡವಿದ್ದು,  ಇದರಿಂದ ಮಕ್ಕಳಿಗೆ ಅಪಾಯ ಭೀತಿ …

ಅನಧಿಕೃತವಾಗಿ ಕಡಿದು ಸಾಗಿಸುತ್ತಿದ್ದ ೫ ಲಕ್ಷ ರೂ.ಮೌಲ್ಯದ ಮರ ವಶ

ಮುಳ್ಳೇರಿಯ: ಅನಧಿಕೃತವಾಗಿ ಕಡಿದು ಸಾಗಿಸುತ್ತಿದ್ದ ೫ ಲಕ್ಷ ರೂಪಾಯಿ ಮೌಲ್ಯದ ಮರಗಳನ್ನು ಆದೂರು ಪೊಲೀಸರು ವಶಪಡಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ವಶಪಡಿಸಿಕೊಂಡಿರುವವುಗಳಲ್ಲಿ ತೇಗು ಹಾಗೂ ಹಲಸು ಮರಗಳು ಒಳಗೊಂ ಡಿವೆ. ಮಲೆನಾಡು ಹೆದ್ದಾರಿಯಲ್ಲಿ ಪಡ್ಯತ್ತಡ್ಕದಲ್ಲಿರುವ ಮರಗಳನ್ನು ಕಡಿದು ಸಾಗಿಸಲಾಗುತ್ತಿತ್ತು. ನಾಲ್ಕು ದಿನಗಳ ಹಿಂದೆಯೇ ಈ ಮರಗಳನ್ನು  ಕಡಿದು ಹಾಕಲಾಗಿತ್ತು. ಅದನ್ನು ಸೀತಾಂ ಗೋಳಿಯ ತಂಡವೊಂದರ ಸಹಾಯದಿಂದ ನಿನ್ನೆ ರಾತ್ರಿ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವಿಷಯ ಆದೂರು ಎಸ್‌ಐ  ಅನುರೂಪ್‌ಗೆ ಲಭಿಸಿತ್ತು. ಕೂಡಲೇ ಅವರು ಕಾರ್ಯಾಚರಣೆ ನಡೆಸಿ ಮರ …

ಗೊಂಬೆ ವ್ಯಾಪಾರಿಯ ೬೫ ಸಾವಿರ ರೂಪಾಯಿ ಕಳವು

ಕುಂಬಳೆ: ಸಂತೆಯಲ್ಲಿ ಗೊಂಬೆ ವ್ಯಾಪಾರಿಯ ೬೫ ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಕುಂಬಳೆ ಪೇಟೆಯಲ್ಲಿ ಗೊಂಬೆಗಳ ಮಾರಾಟ ನಡೆಸುತ್ತಿದ್ದ ಕಾಞಂಗಾಡ್ ಬಲ್ಲಾ ಕಡಪ್ಪುರದ ಅನ್ವರ್ ಎಂಬವರ ಹಣ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಇಂದು ಮುಂಜಾನೆ ೧ ಗಂಟೆ ವೇಳೆ ಅಂಗಡಿಯೊಳಗೆ ಅನ್ವರ್ ನಿದ್ರಿಸಿದ್ದರೆನ್ನಲಾಗಿದೆ. ಬೆಳಿಗ್ಗೆ ೬ ಗಂಟೆಗೆ ಎದ್ದು ನೋಡಿದಾಗ ಹಣ, ಬಟ್ಟೆಬರೆ, ಮೊಬೈಲ್ ಇದ್ದ ಬ್ಯಾಗ್ ಕಳವಿಗೀಡಾದ ವಿಷಯ ತಿಳಿದುಬಂ ದಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …

ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸಿಪಿಎಂ ನೇತಾರನ ಕೊಲೆ

ಕಲ್ಲಿಕೋಟೆ: ಕ್ಷೇತ್ರೋತ್ಸವದಂಗ ವಾಗಿ ಏರ್ಪಡಿಸಲಾಗಿದ್ದ   ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ  ಅಕ್ರಮಿಯೋರ್ವ ಸಿಪಿಎಂ ನೇತಾರ ರನ್ನು ಇರಿದು ಕೊಲೆಗೈದ ಘಟನೆ ಕಲ್ಲಿಕೋಟೆ ಜಿಲ್ಲೆಯ ಕೊಲಾಂಡಿಯಲ್ಲಿ ನಡೆದಿದೆ. ಸಿಪಿಎಂನ ಕೊಲಾಂಡಿ ಸೆಂಟ್ರಲ್ ಲೋಕಲ್ ಸಮಿತಿ ಕಾರ್ಯದರ್ಶಿ ಪೆರುವಟ್ಟೂರು ಪುಳಿಯೋರವಯಲ್ ಪಿ.ಎ. ಸತ್ಯನಾಥನ್ (೬೬) ಕೊಲೆಗೀ ಡಾದ ನೇತಾರ. ಕೊಲಾಂಡಿ ಪೆರು ವಟ್ಟೂರು ಮುತ್ತಾಂಬಿ ಚೆರಿಯಪ್ಪುರಂ ಪರದೇವತಾ ಪೆರಿಲ್ಲಾತ್ತನ್ ದೇವಸ್ಥಾನದ ಉತ್ಸವದಂಗವಾಗಿ ಅಲ್ಲಿ ನಿನ್ನೆ ರಾತ್ರಿ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸತ್ಯನಾಥನ್ ಕೂಡಾ ಭಾಗವಹಿಸಿದ್ದರು. ಕಾರ್ಯಕ್ರಮ …

ಹೆರಿಗೆ ಬಳಿಕ ತೀವ್ರ ರಕ್ತಸ್ರಾವ: ಯುವತಿ ಮೃತ್ಯು

ಕಾಸರಗೋಡು: ಹೆರಿಗೆ ಬಳಿಕ ತೀವ್ರ ರಕ್ತಸ್ರಾವವುಂಟಾಗಿ ಯುವತಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಜಮಾಲ್ ಎಂಬವರ ಪತ್ನಿ ಫಾತಿಮತ್ ತಸ್ಲೀಮ (೨೮) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ನಿನ್ನೆ ಬೆಳಿಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ಬಳಿಕ ಅಪರಿಮಿತವಾಗಿ ರಕ್ತಸ್ರಾವವುಂ ಟಾಗಿತ್ತೆನ್ನಲಾಗಿದೆ. ಇದರಿಂದ ಅಸ್ವಸ್ಥಗೊಂಡ ಯುವತಿಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಅಲ್ಲಿ ಮೃತಪಟ್ಟಿದ್ದಾರೆ. ಉದುಮ  ಪಡಿಂಞಾರ್ ಬೇವೂರ್‌ನ ಟಿ.ಕೆ. ಅಬ್ದುಲ್ಲ …