ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ತಲಪಾಡಿ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಸೋಮೇಶ್ವರ ನಿವಾಸಿ ಎಂ. ಗೌತಂ (೩೦) ಎಂಬವರ ಮೃತದೇಹ ನೇತ್ರಾವತಿ ಹೊಳೆಯ ತೊಕ್ಕೋಟು ಭಾಗದಲ್ಲಿ ಪತ್ತೆಯಾಗಿ ದೆ. ಗೌತಂ ಈ ತಿಂಗಳ ೧೯ರಿಂದ ನಾಪತ್ತೆಯಾಗಿದ್ದಾರೆನ್ನಲಾಗಿದೆ. ಇವರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿ ದ್ದರು. ಸೋಮವಾರ ಸಂಜೆ  ತೊಕ್ಕೋಟು ಸಮೀಪ ದೈವಕ್ಷೇತ್ರ ದಲ್ಲಿ ನಡೆದ ಕಾರಯಕ್ರಮದಲ್ಲಿ ಭಾಗವಹಿಸಿದ್ದ ಗೌತಂ ರಾತ್ರಿ ತಡವಾಗಿ ಮನೆಗೆ ಮರಳಿದ್ದರೆನ್ನ ಲಾಗಿದೆ. ಅನಂತರ ಅವರು ನಾಪತ್ತೆ ಯಾಗಿರುವುದಾಗಿ …

ಮಾದಕ ಗುಂಡಿಕ್ಕಿ ಕಾಡಿಗಟ್ಟಿದ ಕಾಡುಕೋಣ ಸಾವು

ಕಾಸರಗೋಡು: ಹೊಸದುರ್ಗ ಮಡಿಕೈ ಮೂನುರೋಡ್ ಜಂಕ್ಷನ್‌ನ ಬಳಿಯ ಪಿ. ಶೈಜು ಎಂಬವರ ಹಿತ್ತಿಲ ೨೦ ಅಡಿ ಆಳದ ಕಳೆದ ರವಿವಾರದಂದು ಬಾವಿಗೆ ಬಿದ್ದು  ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ೧೨ ತಾಸುಗಳ ಬಳಿಕ ಅರಣ್ಯ ಪಾಲಕರು, ಪೊಲೀಸರು ಮತ್ತು ಊರವರು ಸೇರಿ ಮೇಲಕ್ಕೆತ್ತಿ ನಂತರ ಮಾದಕ  ಗುಂಡಿಕ್ಕಿ ಕಾಡಿಗೆ ಅಟ್ಟಲಾದ ಕಾಡುಕೋಣ ಸಾವನ್ನಪ್ಪಿದೆ. ಈ ಕಾಡುಕೋಣವನ್ನು ಬೇತೂರುಪಾರಕ್ಕೆ ಸಮೀಪದ ಪಳ್ಳಂಜಿಯ ಅರಣ್ಯದಲ್ಲಿ ಅರಣ್ಯಪಾಲಕರು ಬಿಟ್ಟಿದ್ದರು. ನಿನ್ನೆ  ಬೆಳಿಗ್ಗೆ ಅದು ಪಳ್ಳಂಜಿ ಮಹಾಗನಿ ತೋಟದ ರಸ್ತೆ ಬಳಿ ತೀವ್ರ …

ವರದಕ್ಷಿಣೆಗಾಗಿ ಯುವತಿಗೆ ಕಿರುಕುಳ : ಪತಿ ಸಹಿತ ಮೂವರ ವಿರುದ್ಧ ಕೇಸು

ಕುಂಬಳೆ: ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಮಾನಸಿಕ, ಶಾರೀರಿಕ ಕಿರುಕುಳ ನೀಡಿದ ಆರೋಪದಂತೆ ಪತಿ ಸಹಿತ ಮೂರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಬಂಗ್ರಮಂಜೇಶ್ವರ ಕಾಡಿಯಾರ್ ನಿವಾಸಿ, ಆಯಿಶತ್ ಹನೀಶ್ (೨೬) ನೀಡಿದ ದೂರಿನಂತೆ ಪತಿ ಕೊಯಿಪ್ಪಾಡಿ ಕಡಪ್ಪುರದ ನೌಶಾದ್, ಈತನ ತಾಯಿ ಅಸ್ಮ, ಸಹೋದರಿ ಮುಂತಾಸ್ ಎಂಬಿವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆಯಿಶತ್ ಹನೀಶ್ ಹಾಗೂ ನೌಶಾದ್‌ರ ಮದುವೆ ೨೦೨೦ ಆಗಸ್ಟ್‌ನಲ್ಲಿ ನಡೆದಿತ್ತು. ಈ ವೇಳೆ ೨ ಲಕ್ಷ ರೂಪಾಯಿ …

ಬೀಗ ಜಡಿದ ಮನೆಯಿಂದ ೨ ಲಕ್ಷ ರೂ. ಕಳವು: ಬೆರಳಚ್ಚು ತಜ್ಞರಿಂದ ತನಿಖೆ

ಮಂಜೇಶ್ವರ: ಬೀಗ ಜಡಿದ ಮನೆಯ ಕಪಾಟಿನಲ್ಲಿರಿಸಿದ್ದ ೨ ಲಕ್ಷ ರೂಪಾಯಿ ಕಳವಿಗೀಡಾದ ಘಟನೆ ನಡೆದಿದೆ. ಮೊರತ್ತಣೆ ಬಳಿಯ ಅರಿಂಗಳ ನಿವಾಸಿ ನಾರಾಯಣ ಎಂಬವರ ಮನೆ ಯಿಂದ ಹಣ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ನಾರಾಯಣ ಹೊಸಂಗಡಿಯಲ್ಲಿ ಟೈಲರ್ ಆಗಿದ್ದು, ಪತ್ನಿ ಖಾಸಗಿ ಸಂಸ್ಥೆ ಯೊಂದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವಾರ ಹಿಂದೆ ಇವರು ಮನೆಯ ಕಪಾಟಿನಲ್ಲಿ ೨ ಲಕ್ಷ ರೂಪಾಯಿ ಇರಿಸಿದ್ದರೆನ್ನಲಾಗಿದೆ. ಇತ್ತೀಚೆಗೆ ನಾರಾಯಣ ಹಾಗೂ ಪತ್ನಿ ಕೆಲಸಕ್ಕೂ, ಮಕ್ಕಳು ಶಾಲೆಗೆ ತೆರಳುವಾಗ ಮನೆಯ ಬಾಗಿಲಿಗೆ ಬೀಗ ಜಡಿದಿದ್ದರು. ಅಂದು …

ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿ

ಆಲಪ್ಪುಳ: ಕಾಯಂಕುಳಂನಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿಯಾಗಿದೆ. ಅಲ್ಲಿನ ಎಂಎಸ್‌ಎಂ ಕಾಲೇಜು ಮುಂಭಾ ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ. ಬಸ್ ಪೂರ್ಣ ವಾಗಿ ಉರಿದು ನಾಶಗೊಂಡಿದೆ. ಕಾಯಂಕು ಳಂನಿಂದ ಆಲಪ್ಪುಳಕ್ಕೆ  ತೆರಳುತ್ತಿದ್ದ ಬಸ್‌ಗೆ ಬೆಂಕಿ ತಗಲಿದೆ. ಬಸ್‌ನಿಂದ ಹೊಗೆ ಕಾಣಿಸುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿ ಕರನ್ನು  ಕೆಳಗಿಳಿಸಿ ದ್ದನು. ಇದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ತಲಶ್ಶೇರಿ- ಮಾಹಿ ಬೈಪಾಸ್ ದಾಟಲು ಟೋಲ್ ದರ ನಿಗದಿ

ಕಣ್ಣೂರು: ತಲಶ್ಶೇರಿ- ಮಾಹಿ ಬೈಪಾಸ್ ಮೂಲಕದ ಸಂಚಾರಕ್ಕೆ ವಾಹನಗಳು ನೀಡಬೇಕಾದ ಟೋಲ್ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿದೆ. ಬೈಪಾಸ್ ದಾಟಲು ಕಾರು, ಜೀಪು, ವ್ಯಾನ್ ಮೊದಲಾದ ಖಾಸಗಿ ವಾಹನಗಳಿಗೆ ೬೫ ರೂ. ನಿಗದಿಪಡಿಸಲಾಗಿದೆ. ಇಕ್ಕಡೆಗೂ ಒಂದೇ ದಿನ ಸಂಚರಿಸುವುದಾಗಿದ್ದಲ್ಲಿ ೧೦೦ ರೂ. ನೀಡಬೇಕಾಗಿದೆ. ೫೦ ಪ್ರಯಾಣಿಕರಿಗೆ ೨೧೯೫ ರೂ. ಎಂಬ ರೀತಿಯಲ್ಲಿ ಪ್ರತೀ ತಿಂಗಳ ದರವನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ನೋಂದಾಯಿಸಿದ ಟ್ಯಾಕ್ಸಿ ವಾಹನಗಳಿಗೆ ೩೫ ರೂ. ಒಮ್ಮೆ ಸಂಚರಿಸಲಿರುವ ದರವಾಗಿದೆ. ಮಿನಿ ಬಸ್, ಸಣ್ಣ ವಾಣಿಜ್ಯ …

ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ನಾಳೆ ೧೦೦೮ ಬ್ರಹ್ಮಕಲಶಾಭಿಷೇಕ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ದಂಗವಾಗಿ ನಾಳೆ ಬೆಳಿಗ್ಗೆ ೧೦೦೮ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು. ನಾಳೆ ಬೆಳಿಗ್ಗೆ ೬ಕ್ಕೆ ಗಣಪತಿ ಹೋಮದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದೆ. ರಾತ್ರಿ ೭ರಿಂದ ಮಂತ್ರಾಕ್ಷತೆ, ಮಹಾ ಅನ್ನ ಸಂತರ್ಪಣೆ, ಶ್ರೀ ದೇವರ ಉತ್ಸವ ಬಲಿ ನಡೆಯಲಿದೆ. ಇಂದು ಸಂಜೆ ೪ಕ್ಕೆ ಮಾತೃಸಂಗಮ ನಡೆಯಲಿದೆ. ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡವರು. ಡಾ| ಶಾಂಭವಿ ಕಿಶೋರ್ ಕುಮಾರ್ ಕುಂಬಳೆ ಅಧ್ಯಕ್ಷತೆ  ವಹಿಸುವರು. ಹಿಂದೂ …

ರಸ್ತೆತಡೆ ಚಳವಳಿ: ಬಿಜೆಪಿ ನೇತಾರ ಸೆರೆ, ಬಿಡುಗಡೆ; ಬಂಧನ ರಾಜಕೀಯಪ್ರೇರಿತ- ಬಿಜೆಪಿ

ಕಾಸರಗೋಡು: ರಸ್ತೆತಡೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ವಿಜಯ್ ಕುಮಾರ್ ರೈಯವರನ್ನು ಕಾಸರಗೋಡು ಪೊಲೀಸರು ನಿನ್ನೆ ಬಿಜೆಪಿ ಜಿಲ್ಲಾ ಕಚೇರಿ ಬಳಿಯಿಂದ ಬಂಧಿಸಿದ್ದಾರೆ. ವಿಜಯ್ ಕುಮಾರ್‌ರನ್ನು ಬಳಿಕ ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ದಂಡ ಪಾವತಿಸಿದ ಬಳಿಕ ಅವರನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ. ವಿಜಯ್ ಕುಮಾರ್‌ರ ಬಂಧನ ರಾಜಕೀಯ ಪ್ರೇರಿತಕ್ರಮ ವಾದುದೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದ್ದಾರೆ. ರಾಜಕೀಯ ಹೋರಾಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಸರಲ್ಲಿ …

ಬಿದ್ದು ಸಿಕ್ಕಿದ ಪರ್ಸ್ ವಾರೀಸುದಾರರಿಗೆ ನೀಡಿ ಮಾನವೀಯತೆ ಮೆರೆದ ಯುವಕ

ಉಪ್ಪಳ: ಬಿದ್ದು ಸಿಕ್ಕಿದ 7500 ರೂ ಹಣವಿದ್ದ ಪರ್ಸ್ನ್ನು ಅದರ ವಾರೀಸುದಾರರಿಗೆ ನೀಡಿ ಮಾನವೀಯತೆ ಮೆರೆದ ಯುವಕನನ್ನು ಸ್ಥಳೀಯರು ಅಭಿನಂದಿಸಿದ್ದಾರೆ. ಬಂದ್ಯೋಡಿನಲ್ಲಿ ಅಲ್ಯುಮೀನಿಯಂ ಫೆಬ್ರಿಕ್ಸ್ ಅಂಗಡಿ ನಡೆಸುತ್ತಿರುವ ಕುಡಾಲು ಮೇರ್ಕಳ ಪದ್ಮಗದ್ದೆ ನಿವಾಸಿ ಜೋಗಿ ಮೂಲ್ಯರ ಪುತ್ರ ಮಧು ಕಿರಣ್ ಹಣಹೊಂದಿದ ಪರ್ಸ್ನ್ನು ವಾರೀಸುದಾರ ಕುಡಾಲು ನಿವಾಸಿ ಬಶೀರ್.ಬಿ.ಎ ರವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರ ಪರ್ಸ್ ಮೊನ್ನೆ ಸಂಜೆ ಕಳೆದು ಹೋಗಿತ್ತು. ಅಂದು ರಾತ್ರಿ ಮಧುಕಿರಣ್ ಕೆಲಸ ಮುಗಿಸಿ ಮನೆ ಕಡೆಗೆ ಹೋಗುವ ವೇಳೆ ಸುಬ್ಬಯ್ಯ …

ಜಿಲ್ಲೆಯಲ್ಲಿ ನಿನ್ನೆ ೧೧೪೪ ಭೂಮಿ ಹಕ್ಕುಪತ್ರ ವಿತರಣೆ

ಕಾಸರಗೋಡು: ರಾಜ್ಯ ಸರಕಾರ  ಭರವಸೆಯನ್ನು ಒಂದೊಂದಾಗಿ ಜ್ಯಾರಿಗೊಳಿಸುವುದರಂಗವಾಗಿ ಭೂಮಿ ರಹಿತರಿಗೆ ಭೂಮಿ ನೀಡುತ್ತಿರುವುದಾಗಿ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ನುಡಿದರು. ಸರಕಾರದ ಮೂರನೇ  ಭೂಮಿ ಹಕ್ಕು ಪತ್ರ ಮೇಳದ ಅಂಗವಾಗಿ ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡು ತ್ತಿದ್ದರು. ಕಳೆದ ಎರಡು ಬಾರಿಯಾಗಿ ಜಿಲ್ಲೆಯಲ್ಲಿ ೨೬೭೧ ಪಟ್ಟಾವನ್ನು ವಿತರಿಸಲಾಗಿದೆ. ಮೂರನೇ ಬಾರಿಯಾಗಿ ಈಗ ೧೧೪೪ ಹಕ್ಕುಪತ್ರಗಳನ್ನು ವಿತರಿಸುತ್ತಿ ರುವುದಾಗಿ ಸಚಿವರು ನುಡಿದರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಜಿಲ್ಲಾ ಪಂಚಾ ಯತ್ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ …