ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಾಳೆಯಿಂದ

ಕಾಸರಗೋಡು: ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಾಳೆಯಿಂದ ೨೮ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ೮ಕ್ಕೆ ಗಣಪತಿ ಹೋಮ, ತಂಬಿಲ, ಸಂಜೆ ಆನೆಚಪ್ಪರ ಏರಿಸುವುದು, ಭಂಡಾರ ಮೆರವಣಿಗೆ, ಕಲಶ, ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ೮.೩೦ಕ್ಕೆ ಮರುಹುತ್ತರಿ ಮಹೋತ್ಸವ ನಡೆಯಲಿದೆ. ೨೪ರಂದು ಸಂಜೆ ೫ ಗಂಟೆಗೆ ವಿವಿಧ ದೈವಗಳ ವೆಳ್ಳಾಟ, ರಾತ್ರಿ ೯ಕ್ಕೆ ಬಿಂಬ ದರ್ಶನ, ಬಳಿಕ ವಿವಿಧ ದೈವನೇಮ, ೨೫ರಂದು ಬೆಳಿಗ್ಗೆ ೬ಕ್ಕೆ ಕಾಲಪುಳಿಯನ್ ದೈವ, ಬಳಿಕ ವಿವಿಧ ದೈವ …

ಕಣಿಪುರ ಕ್ಷೇತ್ರದಲ್ಲಿ ದೇವರುಗಳ ಪುನಃ ಪ್ರತಿಷ್ಠೆ ಇಂದು ಮಧ್ಯಾಹ್ನ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಂಭ್ರಮದಿಂದ ಜರಗುತ್ತಿದ್ದು, ಊರ-ಪರವೂರ ಸಾವಿರಾರು ಮಂದಿ ಭಾಗವಹಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕಾರ್ಯಕ್ರಮದಂಗವಾಗಿ ಇಂದು ಪ್ರಾತಃಕಾಲ ೧೦೮ ತೆಂಗಿನಕಾಯಿ ಗಣಹೋಮ ನಡೆಯಿತು. ಮಧ್ಯಾಹ್ನ ೧೨.೨೧ರಿಂದ ೧.೪೨ರ ತನಕ ಶ್ರೀ ಗೋಪಾಲಕೃಷ್ಣ, ಶ್ರೀ ಗಣಪತಿ, ಶ್ರೀ ವನಶಾಸ್ತಾರ ದೇವರ ಪುನಃ ಪ್ರತಿಷ್ಠೆ, ಉಪದೇವತೆಗಳ ಪ್ರತಿಷ್ಠೆ, ಶ್ರೀ ನಾಗದೇವರು, ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಗುಳಿಗ ದೈವಗಳ …

ನಕಲಿ ವಿಮಾನ ಟಿಕೆಟ್ ನೀಡಿ ವೈದ್ಯಕೀಯ ವಿದ್ಯಾರ್ಥಿಗಳ ೨೩ ಲಕ್ಷ ರೂಪಾಯಿ ವಂಚನೆ

ಮಂಜೇಶ್ವರ: ನಕಲಿ ವಿಮಾನ ಟಿಕೆಟ್ ನೀಡಿ ೨೩ ಲಕ್ಷ ರೂಪಾಯಿ ವಂಚಿಸಲಾಯಿತೆಂದು  ಆರೋಪಿಸಿ ವೈದ್ಯಕೀಯ ವಿದ್ಯಾರ್ಥಿ ನೀಡಿದ ದೂರಿ ನಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್‌ರ ನಿರ್ದೇಶ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆgಂಭಿಸಿದ್ದಾರೆ. ಯುರೋಪ್‌ನ ಮಾಲ್ಡೋವಾದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾದ ತಿರುವನಂತಪುರ ವಿವನ್ ನಗರ ನಿವಾಸಿ ಅಮಾನ್ ಅಪ್ಸಲ್ ಅಹಮ್ಮದ್‌ರ ದೂರಿನ ಪ್ರಕಾರ ಉಪ್ಪಳ ಕೋಡಿಬೈಲು ಕುರ್ಚಿಪಳ್ಳ ಜಾಸ್ಮಿನ್ ಮಂಜಿಲ್‌ನ ಅಬ್ದುಲ್ ಹಾಶಿಂ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುಗಾರನ ಸಹಿತ ೩೦ ಮಂದಿ …

೩ ಗ್ರಾಮ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ

ಕಾಸರಗೋಡು: ಜನರು ನೀಡುವ ಅರ್ಜಿಗಳನ್ನು ಪರಿಶೀಲಿಸದೆ ಅದನ್ನು ಮೂಲೆಗುಂಪಾಗಿ ಇರಿಸಲಾಗುತ್ತಿದೆ ಯೆಂಬ ಆರೋಪಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಗ್ರಾಮ ಕಚೇರಿಗಳಿಗೆ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ವಿ. ಉಣ್ಣಿಕೃಷ್ಣನ್ ನೇತೃತ್ವದ ವಿಜಿಲೆನ್ಸ್ ತಂಡ ದಾಳಿ ನಡೆಸಿ ಪರಿಶೀ ಲನೆ ನಡೆಸಿದೆ.  ಉಪ್ಪಳ, ಮುಳಿಯಾರು ಮತ್ತು ನೆಲ್ಲಿಕಟ್ಟೆಯಲ್ಲಿರುವ ಪಾಡಿ-ನೆಕ್ರಾಜೆ  ಗ್ರಾಮ ಕಚೇರಿಗಳಿಗೆ ಈ ದಾಳಿ ಮತ್ತು ಪರಿಶೀಲನೆ ನಡೆಸಲಾಗಿದೆ. ಕಾಸ ರಗೋಡು ಮಾತ್ರವಲ್ಲ ರಾಜ್ಯದಾದ್ಯಂತ ಹಲವು ಗ್ರಾಮ ಕಚೇರಿಗಳಲ್ಲಿ ನಿನ್ನೆ ಇಂ ತಹ ದಾಳಿ ನಡೆಸಲಾಗಿದೆ. ವಿಜಿಲೆನ್ಸ್ ಇನ್‌ಸ್ಪೆಕ್ಟರ್ …

ದರೋಡೆ ಪ್ರಕರಣದ ಆರೋಪಿಗಳನ್ನು ಸೆರೆಹಿಡಿಯಲು ಹೋದ ಕೇರಳ ಪೊಲೀಸರ ಮೇಲೆ ಗುಂಡು ಹಾರಾಟ

ಎರ್ನಾಕುಳಂ: ಕೇರಳದ ವಿವಿಧ ಜಿಲ್ಲೆಗಳಲ್ಲಿ ಚಿನ್ನ ದರೋಡೆಗೈದ ಪ್ರಕರಣದ ಆರೋಪಿಗಳನ್ನು ಸೆರೆಹಿಡಿಯಲು ರಾಜಸ್ಥಾನದ ಅಜ್ಮೀರಿಗೆ ಹೋದ ಎರ್ನಾಕುಳಂ ಪೊಲೀಸ್ ತಂಡದ ಮೇಲೆ ದುಷ್ಕರ್ಮಿಗಳು ಗುಂಡು ಹಾರಾಟ ನಡೆಸಿದ ಘಟನೆ ನಡೆದಿದೆ. ಆಲುವಾ  ಗ್ರಾಮೀಣ ಜಿಲ್ಲಾ ಪೊಲೀಸ್ ವ್ಯಾಪ್ತಿಗೊಳಪಟ್ಟ ಪೊಲೀಸರ ಸಹಿತ ಎರ್ನಾಕುಳಂ ಪೊಲೀಸರ ತಂಡ ಅಜ್ಮೀರಿಗೆ ತೆರಳಿ ಕಾರ್ಯಾಚರಣೆಯಲ್ಲಿ  ಇಳಿಯುತ್ತಿರುವಂತೆಯೇ ಅಲ್ಲಿ ಅಡಗಿನಿಂತು ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳ ತಂಡ ಪೊಲೀಸರ ಮೇಲೆ  ಗುಂಡು ಹಾರಾಟ ನಡೆಸಿದೆ. ಆದರೆ  ಯಾರೂ ಗಾಯಗೊಂಡಿಲ ವೆಂದು ಎಲ್ಲಾ ಪೊಲೀಸರು ಸಂಭಾವ್ಯ ಪ್ರಾಣಾಪಾಯದಿಂದ …

ಸುಪ್ರಿಂಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್ ನರಿಮಾನ್ ನಿಧನ

ದೆಹಲಿ: ಸುಪ್ರಿಂಕೋರ್ಟ್‌ನ ಹಿರಿಯ ನ್ಯಾಯವಾದಿ ಸಂವಿಧಾನ ತಜ್ಞ ಫಾಲಿ ಎಸ್. ನರಿಮಾನ್ (೯೫) ನಿಧನ ಹೊಂದಿದರು. ನಿನ್ನೆ ರಾತ್ರಿ ದೆಹಲಿಯಲ್ಲಿ ನಿಧನ ಸಂಭವಿಸಿದೆ. ೧೯೭೧ರಿಂದ ಸುಪ್ರೀಂ ಕೋರ್ಟ್ ನ್ಯಾಯವಾದಿಯಾಗಿ ದ್ದಾರೆ. ೧೯೭೨-೭೫ರಲ್ಲಿ  ಅಡೀನಲ್ ಸೋಲಿಸಿಟರ್ ಜನರಲ್ ಆಗಿದ್ದರು. ೧೯೯೧ರಲ್ಲಿ ಪದ್ಮಭೂಷಣ, ೨೦೦೭ರಲ್ಲಿ ಪದ್ಮವಿಭೂಷಣ ನೀಡಿ ದೇಶ ಗೌರವಿಸಿತ್ತು. ೧೯೯೯-೨೦೦೫ರವರೆಗೆ ರಾಜ್ಯಸಭಾ ಸದಸ್ಯ ರಾಗಿದ್ದರು. ಕೇರಳದ ವಿವಿಧ ಕಾನೂನುಗಳ ಬಗ್ಗೆ ನರಿಮಾನ್ ರಿಂದ ಸಲಹೆ ಕೇಳಲಾಗಿತ್ತು.

ಇಚ್ಲಂಗೋಡು ಶಾಲೆಯ ಮುಖ್ಯೋಪಾಧ್ಯಾಯ ಹೃದಯಾಘಾತದಿಂದ ನಿಧನ

ಕುಂಬಳೆ: ಇಚ್ಲಂಗೋಡು ಇಸ್ಲಾಮಿಯ ಎಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯ ಪಿಲಿಕೋಡ್ ವರಕ್ಕೋಡ್ ವಯಲ್ ನಿವಾಸಿ ಎ. ರಂಜಿತ್ (೪೯) ಹೃದಯಾಘಾತ ದಿಂದ ನಿಧನ ಹೊಂದಿದರು. ಇಂದು ಮುಂಜಾನೆ ಮೂರು ಗಂಟೆ ವೇಳೆ ಚೆರ್ವತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಅಂತ್ಯ ಸಂಭವಿಸಿದೆ. ನಿಧನದ ಹಿನ್ನೆಲೆ ಯಲ್ಲಿ ಇಂದು ನಡೆಯಬೇಕಾಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಶನಿವಾರಕ್ಕೆ ಮುಂದೂಡಲಾಗಿದ್ದು, ಇಂದು ಶಾಲೆಗೆ ರಜೆ ಸಾರಲಾಗಿದೆ. ಮೃತರು ತಂದೆ ಕುಂಞಿಕಣ್ಣ, ತಾಯಿ ಯಶೋದಾ, ಪತ್ನಿ ಪ್ರಮೀಳಾ (ಅಧ್ಯಾಪಿಕೆ), ಮಕ್ಕಳಾದ ಪ್ರಿಯನಂದ, ಗೌರಿನಂದ, ಸಹೋದರಿಯರಾದ ಗೀತಾ, ರಜನಿ ಹಾಗೂ …

ನಿಗೂಢ ಸ್ಥಿತಿಯಲ್ಲಿ ಹೋಟೆಲ್ ಕೊಠಡಿಯಲ್ಲಿ  ಯುವಕನ ಮೃತದೇಹ ಪತ್ತೆ

ಹೊಸದುರ್ಗ: ಹೋಟೆಲ್‌ನ ಕೊಠಡಿಯಲ್ಲಿ ಯುವಕ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಡಿಕೈ ಮೋಕೌಟ್ ನಿವಾಸಿ ಹಾಗೂ ಸೂರ್ಯವಂಶಿ ಹೋಟೆಲ್‌ನ ರಿಸೆಪ್ಶನಿಸ್ಟ್ ಅರೀಕರ ಅನೂಪ್ (೩೩)ರ ಮೃತದೇಹ ನಿನ್ನೆ ರಾತ್ರಿ ಹೋಟೆಲ್ ಕೊಠಡಿಯಲ್ಲಿ ಕಂಡು ಬಂದಿದೆ. ತಲೆಯಲ್ಲಿ ಆಳವಾದ ಗಾಯ ಕಂಡು ಬಂದಿದೆ. ರಕ್ತ ವಾಂತಿ ಮಾಡಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡುಹೋಗಲಾಗಿದ್ದು, ಪೋಸ್ಟ್ ಮಾರ್ಟಂ ಬಳಿಕ ಮರಣ ಕಾರಣ ತಿಳಿದು ಬರಬಹುದೆಂದು ಪೊಲೀಸಧಿ ಕಾರಿಗಳು ತಿಳಿಸಿದ್ದಾರೆ. ಫಾರೆನ್ಸಿಕ್ …

ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಸಹಪಾಠಿಗೆ ತಂಡದಿಂದ ಹಲ್ಲೆ

ಹೊಸದುರ್ಗ: ಸಹಪಾಠಿಯಾದ ವಿದ್ಯಾರ್ಥಿನಿಯೊಂದಿಗೆ ಕುಳಿತು ಮಾತ ನಾಡಿದ ವಿದ್ಯಾರ್ಥಿಗೆ ತಂಡ ಹಲ್ಲೆಗೈದ ಘಟನೆ ವೆಸ್ಟ್ ಎಳೇರಿಯಲ್ಲಿ ನಡೆದಿದೆ. ಪೆರಿಂಙೋ ನಿವಾಸಿಯೂ, ಇ.ಕೆ. ನಾಯನಾರ್ ಸರಕಾರಿ ಕಾಲೇಜು ವಿದ್ಯಾರ್ಥಿಯಾದ ಅಜೀರ್ ಮನೋಜ್ (೨೦)ಗೆ ತಂಡ ಹಲ್ಲೆಗೈದಿದೆ. ನಿನ್ನೆ ಸಂಜೆ ೩.೪೦ರ ವೇಳೆ ಕಾಲೇಜು ಗೇಟ್‌ನ ಸಮೀಪ ಸಹಪಾಠಿಯೊಂದಿಗೆ ಮಾತನಾಡುತ್ತಿದ್ದಾಗ ಗೋಕುಲ್, ಶ್ರೀನಾಥ್, ಅಭಿಜಿತ್, ಮಹೇಶ್ ಎಂಬಿವರನ್ನೊಳಗೊಂಡ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಮಾರಕಾಯುಧ ಹಾಗೂ ಮರದ ತುಂಡಿನಿಂದ ತಂಡ ಹಲ್ಲೆಗೈದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.

ರೋಯಲ್ ಟ್ರಾವಂಕೂರ್ ಕಂಪೆನಿ ವಿರುದ್ಧ ಬದಿಯಡ್ಕದಲ್ಲಿ ಮತ್ತೆ ಕೇಸು

ಬದಿಯಡ್ಕ: ಹೆಚ್ಚಿನ ಬಡ್ಡಿಯ ಭರವಸೆ ನೀಡಿ ೨.೮೦ ಲಕ್ಷ ರೂಪಾಯಿ  ಠೇವಣಿ ಪಡೆದು ವಂಚಿಸಲಾಯಿತೆಂಬ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕೊಲ್ಲಂಗಾನದ ಶ್ರೀಶರಾಜ ಶೆಟ್ಟಿ ನೀಡಿದ ದೂರಿನಂತೆ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ  ಮೆನೇಜಿಂಗ್ ಡೈರೆಕ್ಟರ್   ರಾಹುಲ್, ಡೈರೆಕ್ಟರ್‌ಗಳಾದ ಅನಿಲ್, ಸಿಂಧು,ಸಂಗೀತ, ಸಿಮಿ ಎಂಬಿವರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ೨೦೨೩ ಮಾರ್ಚ್ ೧೮ರಂದು  ೨.೮೦ ಲಕ್ಷರೂಪಾಯಿ ಕಂಪೆನಿಯಲ್ಲಿ ಠೇವಣಿ ಇರಿಸಿರುವುದಾಗಿ ಶ್ರೀಶರಾಜ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸ ಲಾಗಿದೆ. ಹಣ ಮರಳಿ …