ರೈಲಿನಲ್ಲಿ ಸಾಗಿಸಲಾಗುತ್ತಿದ್ದ ೨.೬ ಕೆಜಿ ಗಾಂಜಾ, ೧ ಲೀಟರ್ ಹ್ಯಾಶಿಸ್ ಆಯಿಲ್ ವಶ: ಇಬ್ಬರ ಸೆರೆ

ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ ೨.೬ ಕಿಲೋ ಗಾಂಜಾ ಹಾಗೂ ಭಾರೀ ಮಾದಕ ದ್ರವ್ಯವಾದ ಒಂದು ಲೀಟರ್ ಹ್ಯಾಶಿಸ್ ಆಯಿಲ್‌ನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಕಣ್ಣೂರು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಕೆ.ವಿ. ವೇಣುಗೋಪಾಲ್‌ರ ನೇತೃತ್ವದ ಪೊಲೀಸರ ತಂಡ ಕಣ್ಣೂರಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ತಲಶ್ಶೇರಿ ಕದಿರೂರು ನಂದಿಯತ್ ಹೌಸ್‌ನ ಕಾಂಚಿ ಬಾವ (೩೮)ನನ್ನು ಕಣ್ಣೂರು ತಾಣದ ಕಸನಕೋಟದ ಸಲ್ಮಾನ್ ಫಾರೀಸ್ (೨೩) ಎಂಬವರನ್ನು ಬಂಧಿಸಲಾಗಿದೆ. ಇವರು ರೈಲಿನಲ್ಲಿ ಈ ಮಾಲು ಸಾಗಿಸುತ್ತಿದ್ದರು. ಆ …

ಜನವಾಸ ಕೇಂದ್ರದಲ್ಲಿದ್ದ ಕಾಡುಕೋಣಕ್ಕೆ ಮಾದಕಗುಂಡಿಕ್ಕಿ ಕಾಡಿಗೆ ಬಿಟ್ಟ ಅರಣ್ಯಪಾಲಕರು

ಹೊಸದುರ್ಗ: ಮಡಿಕೈ ಸಮೀಪ ಪತ್ತೆಯಾಗಿದ್ದ ಕಾಡುಕೋಣಕ್ಕೆ ಮಾದಕ ಗುಂಡಿಕ್ಕಿದ ಬಳಿಕ ಅದನ್ನು ಅರಣ್ಯಪಾಲಕರು ಕಾಡಿಗೆ ಬಿಟ್ಟಿದ್ದಾರೆ. ರವಿವಾರ ಮಡಿಕೈ ಕಾರ್ಯಳದಲ್ಲಿನ ಪಾಳು ಬಾವಿಗೆ ಕಾಡುಕೋಣ ಬಿದ್ದಿತ್ತು. ಅದನ್ನು ಮೊನ್ನೆ ಅರಣ್ಯಪಾಲಕರು ಹಾಗೂ ಊರವರು ಸೇರಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಆದರೆ ಕಾಡುಕೋಣ ಕಾಡಿಗೆ ಹೋಗದೆ ಆ ಪರಿಸರದಲ್ಲೇ ಠಿಕಾಣಿ ಹೂಡಿತ್ತು. ಇದರಿಂದಾಗಿ ತೃಶೂರಿನಿಂದ ಅರಣ್ಯ ಇಲಾಖೆಯ ತಜ್ಞರ ತಂಡ ನಿನ್ನೆ ಮಡಿಕೈಗೆ ಆಗಮಿಸಿ ಕಾಡುಕೋಣಕ್ಕೆ ಮಾದಕ ಗುಂಡಿಕ್ಕಿ ಅದನ್ನು ಪ್ರಜ್ಞಾಹೀನಗೊಳಿಸಲಾಯಿತು.  ನಂತರ ಕ್ರೈನ್ ಸಹಾಯದಿಂದ ಅದನ್ನು ಲಾರಿಗೇರಿಸಿ ಕಾಡಿಗೆ …

ಬಿ.ಪಿ.ಎಲ್. ಎ.ಎ.ವೈ ರೇಶನ್‌ಕಾರ್ಡ್: ಮಾರ್ಚ್ ೩೧ರೊಳಗೆ ಮಸ್ಟರಿಂಗ್ ಮಾಡಿ, ಇಲ್ಲವಾದಲ್ಲಿ ಎ.೧ರಿಂದ ರೇಶನ್ ಸಾಮಗ್ರಿ ಲಭಿಸದು

ಕಾಸರಗೋಡು: ಬಿಪಿಎಲ್ ಮತ್ತು ಎಎವೈ ಕಾರ್ಡ್ ಹೊಂದಿ ದವರು ಮಾರ್ಚ್ ೩೧ರೊಳಗೆ ಮಸ್ಟರಿಂಗ್ (ಈಗಲೂ ಜೀವಂತ ವಾಗಿದ್ದಾರೆ ಹಾಗೂ ರೇಶನ್ ಸಾಮಗ್ರಿ ಪಡೆಯಲು ಅರ್ಹರು ಎಂಬು ವುದನ್ನು ಖಾತರಿ ಪಡಿಸುವಿಕೆ) ನಡೆಸಬೇಕೆಂದೂ, ಇಲ್ಲವಾದಲ್ಲಿ ಮುಂದಿನ ಎಪ್ರಿಲ್ ೧ರಿಂದ ರೇಶನ್ ಸಾಮಗ್ರಿ ಲಭಿಸದೆಂಬ ಸೂಚನೆ ಸರಕಾರ ನೀಡಿದೆ. ೨೦೨೪ ಜನವರಿ ತಿಂಗಳೊಳಗಾಗಿ ಮಸ್ಟರಿಂಗ್ ನಡೆಸಬೇಕೆಂದು ಕೇಂದ್ರ ಸರಕಾರ ಈ ಹಿಂದೆ ನಿರ್ದೇಶ ನೀಡಿತ್ತು. ಬಳಿಕ ರಾಜ್ಯ ಸರಕಾರ ಮಾಡಿದ ಮನವಿಯಂತೆ ಆ ದಿನಾಂಕವನ್ನು ಮಾರ್ಚ್ ೩೧ರ ತನಕ ಕೇಂದ್ರ …

ಪಾನ್ ಮಸಾಲೆ ಸಹಿತ ಓರ್ವ ಸೆರೆ

ಕುಂಬಳೆ: ೧೨೮ ಪ್ಯಾಕೆಟ್ ನಿಷೇಧಿತ ಪಾನ್ ಮಸಾಲೆ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕೋಟೆಕಾರ್ ನಿವಾಸಿ ಶ್ರೀನಿವಾಸ್ (೩೭) ಬಂಧಿತ ವ್ಯಕ್ತಿ. ನಿನ್ನೆ ಸಂಜೆ ಕುಂಬಳೆ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಕೋಟೆಕಾರ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಪಾನ್ ಮಸಾಲೆ ವಶಪಡಿಸಲಾಗಿದೆ.

ಇರಿತ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಬಿಜೆಪಿ ಕೌನ್ಸಿಲರ್, ನ್ಯಾಯಾಂಗ ಬಂಧನ

ಕಾಸರಗೋಡು: ಕಳೆದ ಜನವರಿ ೩೧ರಂದು ಕಾಸರಗೋಡು ನೆಲ್ಲಿಕುಂಜೆ ಕಡಪುರದ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಬಳಿ ನಿವಾಸಿ ಜಿಜು ಸುರೇಶ್ (೩೬) ನನ್ನು ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿ, ಕಾಸರಗೋಡು ನಗರಸಭೆಯ ೩೬ನೇ ವಾರ್ಡ್‌ನ ಬಿಜೆಪಿ ಕೌನ್ಸಿಲರ್ ಅಜಿತ್ ಕುಮಾರ್ (೩೯) ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೧)ರನ್ನು ಶರಣಾಗಿದ್ದಾನೆ. ನ್ಯಾಯಾಲಯದ ನಿರ್ದೇಶದ ಬಳಿಕ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇರಿತಕ್ಕೊಳ ಗಾದ ಜಿಜುಸುರೇಶ್ ನನ್ನು ಬಳಿಕ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖ ಲಿಸಿ ಚಿಕಿತ್ಸೆ ನೀಡಲಾಗಿದೆ. …

ಆಡನ್ನು ರಕ್ಷಿಸಲು ಬಾವಿಗಿಳಿದು ಸಿಲುಕಿದ ಯುವಕನ ರಕ್ಷಣೆ

ಕಾಸರಗೋಡು: ಬಾವಿಗೆ ಬಿದ್ದ ಆಡನ್ನು ರಕ್ಷಿಸಲು ಬಾವಿಗಿಳಿದ ಯುವಕ ಬಳಿಕ ಮೇಲಕ್ಕೇರಲಾಗದೆ ಅಲ್ಲೇ ಸಿಲುಕಿಕೊಂಡಿದ್ದು, ಬಳಿಕ ಅಗ್ನಿಶಾಮಕದಳ ಆಗಮಿಸಿ ಆತನನ್ನು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಚೆಂಗಳದಲ್ಲಿ ನಡೆದಿದೆ. ಚೆಂಗಳ ಅರ್ತಿಪಳ್ಳದ ಸಾಧಿಕ್ (೨೧) ಬಾವಿಯಲ್ಲಿ ಸಿಲುಕಿಕೊಂಡ ಯುವಕ. ಅವರ ಹಿತ್ತಿಲಿನ ಸುಮಾರು ೧೮ ಅಡಿ ಆಳದ ಬಾವಿಗೆ ನಿನ್ನೆ ಸಂಜೆ ಆಡು ಬಿದ್ದಿತ್ತು. ಅದನ್ನು ರಕ್ಷಿಸಲು ಸಾಧಿಕ್ ಬಾವಿಗಿಳಿದಿದ್ದ. ಬಳಿಕ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಆ ಬಗ್ಗೆ ನೀಡಿದ ಮಾ ಹಿತಿಯಂತೆ  ಅಗ್ನಿಶಾಮಕ ದಳ ಸಾದಿಕ್‌ನನ್ನು ಸುರಕ್ಷಿತವಾಗಿ …

ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಕಳವುಗೈಯ್ಯಲ್ಪಟ್ಟ ಕಾಣಿಕೆ ಹುಂಡಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಕಳವುಗೈಯ್ಯಲಾದ ಕಾಣಿಕೆ ಹುಂಡಿಯನ್ನು ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಅಂದಾಜು ಒಂದು ಲಕ್ಷ ರೂ. ತನಕ ಈ ಹುಂಡಿಯಲ್ಲಿ ಇದ್ದಿರಬಹುದೆಂದೂ ಲೆಕ್ಕಹಾಕಲಾಗಿದ್ದು, ಅದನ್ನು ಕಳ್ಳರು ಹುಂಡಿ ಒಡೆದು ಅಪಹರಿಸಿದ್ದಾರೆ. ಮೊನ್ನೆ ರಾತ್ರಿ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಆವರಣದೊಳಗೆ ಮುಖವಾಡ ಧರಿಸಿ ನುಗ್ಗಿದ ಕಳ್ಳರು ಶ್ರೀ ಕ್ಷೇತ್ರದ ಆವರಣದ ಒಳಗೆ ಇರುವ ಶ್ರೀ ಶಾಸ್ತಾ ದೇವರ ಗುಡಿಯ ಎದುರುಗಡೆ ಸ್ಥಾಪಿಸಲಾಗಿದ್ದ ಕಬ್ಬಿಣದಿಂದ ನಿರ್ಮಿಸಲಾದ ಹುಂಡಿಯನ್ನು …

ಕೇರಳದ ಕಿರೀಟವಾಗಿ ಕಾಸರಗೋಡು ಬದಲಾಗಬೇಕು- ಸುರೇಶ್‌ಗೋಪಿ

ಕಾಸರಗೋಡು: ಕೇರಳದ ಕಿರೀಟವಾಗಿ ಕಾಸರಗೋಡು ಬದಲಾಗಬೇಕೆಂದು ಮಾಜಿ ರಾಜ್ಯಸಭಾ ಸದಸ್ಯ ಸುರೇಶ್‌ಗೋಪಿ ನುಡಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪರವನಡ್ಕ ಪಾಂಚಜನ್ಯ ಸಭಾಂಗಣದಲ್ಲಿ ನಡೆದ ಬಿಜೆಪಿ ಬೂತ್ ಅಧ್ಯಕ್ಷರ ನಾಯಕತ್ವ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಓಟಿಗೆ ಬದಲಾಗಿ ವಿಶ್ವದ ಹೃದಯವನ್ನೇ ನರೇಂದ್ರ ಮೋದಿ ಶರಣಾಗಿಸಿದ್ದಾರೆ. ಕೊಲ್ಲಿ ದೇಶಗಳಿಂದ ಲಭಿಸುವ ಸ್ವಾಗ ತವೇ ಇದಕ್ಕೆ ಉದಾಹರಣೆಯಾಗಿದೆ ಎಂದು ಸುರೇಶ್‌ಗೋಪಿ ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ …

ನಾಲ್ಕು ತಿಂಗಳ ಗರ್ಭಿಣಿಯಾದ ನವವಧು ನ್ಯುಮೋನಿಯ ಬಾಧಿಸಿ ಮೃತ್ಯು

ಕುಂಬಳೆ: ನಾಲ್ಕು ತಿಂಗಳ ಗರ್ಭಿಣಿ ಯಾದ ನವವಧು ನ್ಯುಮೋನಿಯಾ ಬಾಧಿಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಶಿರಿಯ ಕಡಪ್ಪುರದ ನಾರಾಯಣ- ಲಕ್ಷ್ಮಿ ದಂಪತಿಯ ಪುತ್ರಿಯೂ, ಚೌಕಿ ನಿವಾಸಿ ಸತೀಶ್ ಎಂಬವರ ಪತ್ನಿ ನಿಶಾ (೨೪) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಒಂದು ವಾರದಿಂದ ಇವರಿಗೆ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ೮ ತಿಂಗಳ ಹಿಂದೆಯಷ್ಟೇ ನಿಶಾರ ಮದುವೆ ನಡೆದಿದ್ದು, ಇದೀಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೆನ್ನಲಾಗಿದೆ. …

ಸಾರ್ವಜನಿಕ ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ

ಹೊಸದುರ್ಗ: ಕಾಞಂಗಾಡ್ ನಗರಸಭೆಯ ಅಧೀನದಲ್ಲಿರುವ ಸಾರ್ವಜನಿಕ ಬಾವಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಅತ್ತಿಕ್ಕೋತ್ ಎಸಿ ನಗರದ ಬೀರನ್- ಕಾರ್ತ್ಯಾಯಿನಿ ದಂಪತಿ ಪುತ್ರ ಬೈಜು (೩೫)ರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಬಾವಿಯ ಬದಿಯಲ್ಲಿ ಲಭಿಸಿದ ಮೊಬೈಲ್ ಫೋನ್ ರಿಂಗುಣಿಸಿದ್ದು ಈ ಹಿನ್ನೆಲೆಯಲ್ಲಿ ನೋಡಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.  ಬಾವಿ ಬಳಿಯಲ್ಲೇ ಚಪ್ಪಲಿ ಕೂಡಾ ಪತ್ತೆಹಚ್ಚಲಾಗಿದೆ. ಮೃತದೇಹವನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ತಲುಪಿಸಿದ್ದಾರೆ. ನಿನ್ನೆ ರಾತ್ರಿ ೭ ಗಂಟೆಗೆ ಬೈಜು ಹಾಗೂ ಗೆಳೆಯರು ಈ ಬಾವಿ ಬಳಿ ಮಾತನಾ …