ಯುವ ವ್ಯಾಪಾರಿ ಅಸೌಖ್ಯದಿಂದ ನಿಧನ

ಕಾಸರಗೋಡು: ತಾಳಿಪಡ್ಪು ವಳಪ್ಪಿಲ್ ವೀಡ್ ನಿವಾಸಿ  ದಿ| ಶಿವ ಎಂಬವರ ಪುತ್ರ ಕಿರಣ್ ಕುಮಾರ್ (೪೬) ಅಸೌಖ್ಯದಿಂದ ನಿಧನಹೊಂದಿದರು. ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಈ ಹಿಂದೆ ಬಿ.ಎಂ.ಎಸ್ ಕಾರ್ಯಕರ್ತನಾಗಿದ್ದ ಇವರು ವ್ಯಾಪಾರಿಯೂ ಆಗಿದ್ದರು. ಮೃತರು ತಾಯಿ  ಬೇಬಿ, ಪತ್ನಿ ಸ್ವಾತಿ, ಮಕ್ಕಳಾದ ತನ್ವಿ, ಇಶಾನ್ವಿ, ಸಹೋದರರಾದ ಭಾಗ್ಯರಾಜ್, ದಿವಾಕರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯುವತಿ ನಾಪತ್ತೆ-ದೂರು

ಮುಳ್ಳೇರಿಯ: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ತಂದೆ ತಾಯಿ ಜೊತೆ ಕೋಪಿಸಿಕೊಂಡ ಯುವತಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಕರ್ಮಂತೋಡಿ ಕೊಟ್ಟಂಗುಳಿಯ ಅನಿತ (೨೮) ಎಂಬಾಕೆ ನಾಪತ್ತೆ ಯಾಗಿದ್ದಾಳೆ.  ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ.

ಕೇಂದ್ರೀಯ ವಿ.ವಿಯ ಆಡಳಿತ ನಿರ್ವಹಣ ಕೇಂದ್ರ ಪ್ರಧಾನಿಯಿಂದ ಆನ್‌ಲೈನ್ ಮೂಲಕ ಉದ್ಘಾಟನೆ

ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲ ಯಕ್ಕಾಗಿ ೩೮.೧೬ ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ಎಂಬ ಹೆಸರಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಪ್ರಧಾನ ಆಡಳಿತ ನಿರ್ವಹಣಾ ಕೇಂದ್ರ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಆನ್‌ಲೈನ್ ಮೂಲಕ ಇಂದು ಬೆಳಿಗ್ಗೆ ಉದ್ಘಾಟಿಸಿದರು. ೨೨ ರಾಜ್ಯಗಳಲ್ಲಾಗಿ ೧೨,೭೪೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾ ಗುವ ಉನ್ನತ ಶಿಕ್ಷಣ ಸಂಸ್ಥೆಗಳ ಶಿಲಾನ್ಯಾಸ ಕ್ರಮವನ್ನೂ ಇದೇ ವೇಳೆ ಪ್ರಧಾಮಂತ್ರಿ ನಿರ್ವಹಿಸಿದರು. ಕಾರ್ಯ ಕ್ರಮದಲ್ಲಿ ಸಂಸದ ರಾಜ್‌ಮೋಹನ್  ಉಣ್ಣಿತ್ತಾನ್ ಸೇರಿದಂತೆ  ಹಲವು ಜನ …

ಅಣಂಗೂರಿನ ವಸತಿಗೃಹಕ್ಕೆ ಅಕ್ರಮಿಗಳಿಂದ ಹಾನಿ

ಕಾಸರಗೋಡು: ಕಾಸರಗೋಡು ಅಣಂಗೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯವೆಸಗುತ್ತಿರುವ ಸೋಷ್ಯಲ್ ವೆಲ್‌ವಿಷನ್ ಎಂಬ ವಸತಿಗೃಹಕ್ಕೆ ನಿನ್ನೆ ರಾತ್ರಿ ಅಕ್ರಮಿಗಳ ತಂಡವೊಂದು ನುಗ್ಗಿ ಹಾನಿಗೊಳಿಸಿದೆ. ಈ ವಸತಿಗೃಹದ ಎದುರು ಗಡೆಯಿರುವ ಗಾಜುಗಳನ್ನು ಅಕ್ರಮಿಗಳು ಒಡೆದು ಹಾನಿಗೊಳಿ ಸಿದ್ದು ಇದರಿಂದ ಭಾರೀ ನಷ್ಟ ಅಂದಾ ಜಿಸಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅರಿಯಾಳದ ಸರಕಾರಿ ಬಾವಿಯಿಂದ ಅಪಾಯ ಆಹ್ವಾನ: ಸ್ಥಳೀಯರಲ್ಲಿ ಭೀತಿ

ಮೀಯಪದವು: ಸುಮಾರು ೪೦ ಕುಟುಂಬಗಳು ನೀರಿಗಾಗಿ ಆಶ್ರಯಿಸುತ್ತಿರುವ ಬಾವಿಯೊಂದು ಅಪಾಯ ಆಹ್ವಾನಿಸುತ್ತಿದೆ. ಮೀಂಜ ಪಂಚಾಯತ್‌ನ ಅರಿಯಾಳ ವಾರ್ಡ್‌ನ ನವೋದಯ ನಗರದಲ್ಲಿರುವ ಸರಕಾರಿ ಬಾವಿಯೇ ಅಪಾಯ ಆಹ್ವಾನಿಸುತ್ತಿರುವುದು. ವಿವಿಧ ಕಡೆಗಳಲ್ಲಿ ಬಾವಿಯಲ್ಲಿ ನೀರು ಆರುತ್ತಿರುವಾಗಲೇ ನೀರಿರುವ ಬಾವಿ ಹುಡುಕಿ ಜನರು ಸಾಗುತ್ತಿದ್ದಾರೆ. ಇದರಂತೆ ನವೋದಯನಗರ ಸರಕಾರಿ ಬಾವಿಯಿಂದ ನೀರು ಸಂಗ್ರಹಿಸಲು ಪರಿಸರದವರಲ್ಲದೆ ದೂರದಿಂದಲೂ ತಲುಪುವ ಸಾಧ್ಯತೆ ಇದೆ. ಈ ಬಾವಿಯ ಮೇಲ್ದಂಡೆಯ ಕಲ್ಲು ಕುಸಿದು ಬೀಳುವ ಸಿದ್ಧತೆಯಲ್ಲಿದೆ. ಕಟ್ಟೆಯ ಕಂಬಗಳು ಅಲುಗಾ ಡುತ್ತಿರುವುದು ನೀರು ಸೇದುವ ವೇಳೆ ಬೀಳುವ …

ಹೊಸಂಗಡಿ ಪರಿಸರದಲ್ಲಿ ಹೆಲ್ಮೆಟ್ ಕಳ್ಳರ ಅಟ್ಟಹಾಸ: ಸಮಸ್ಯೆಗೀಡಾಗುವ ದ್ವಿಚಕ್ರ ಸವಾರರು

ಮಂಜೇಶ್ವರ: ಕಳ್ಳರ ಕಾಟ ಜನಜೀವನದ ತಾಳ ತಪ್ಪಿಸುತ್ತಿದೆ. ವಿವಿಧ ರೀತಿಯಲ್ಲಿ ಹಗಲು ರಾತ್ರಿಯೆನ್ನದೆ ಕಳವು ಕೃತ್ಯ ಈಗ ವ್ಯಾಪಕಗೊಂಡಿದ್ದು, ಜನರು ಸಂPಷ್ಟಕ್ಕೀಡಾಗಿದ್ದಾರೆ. ವಿವಿಧ ರೀತಿಯಲ್ಲಿ  ಕಳ್ಳರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಮಂಜೇಶ್ವರ ಪರಿಸರದಲ್ಲಿ  ಹೆಲ್ಮೆಟ್ ಕಳ್ಳರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆಂದು ಸ್ಥಳೀಯರು ದೂರುತ್ತಾರೆ. ದ್ವಿಚಕ್ರ ವಾಹನವನ್ನು ನಿಲುಗಡೆಗೊಳಿಸಿ ಬೇರೆಡೆಗೆ ತೆರಳಿ ಬರುವಷ್ಟರಲ್ಲಿ ಹೆಲ್ಮೆಟ್ ಕದ್ದುಕೊಂಡು ಹೋಗಲಾಗಿರುತ್ತದೆ. ನಿನ್ನೆ ಬೆಳಿಗ್ಗೆ ಹೊಸಂಗಡಿಯಲ್ಲಿ ನಿಲ್ಲಿಸಿದ್ದ ಬೈಕ್ ಒಂದರಿಂದ ಹೆಲ್ಮೆಟ್ ಕಳವುಗೈಯ್ಯಲಾಗಿದೆ. ಇದೇ ರೀತಿ ಹೊಸಂಗಡಿಯಲ್ಲಿ ಈ ಮೊದಲು ಹಲವು ಬಾರಿ ಹಲವರ …

ಅಯೋಧ್ಯೆಗೆ ಕರಸೇವಕರ ಪ್ರಯಾಣ ರೈಲು ನಿಲ್ದಾಣದಲ್ಲಿ ಬೀಳ್ಕೊಡುಗೆ

ಕಾಸರಗೋಡು: ಅಯೋಧ್ಯೆಯ ಶ್ರೀ ರಾಮ ಕ್ಷೇತ್ರಕ್ಕೆ ತೆರಳುವ ಜಿಲ್ಲೆಯಿಂದ ಪ್ರಯಾಣ ಆರಂಭಿಸಿದ ೬೪ ಕರಸೇವಕರಿಗೆ ರೈಲ್ವೇ ನಿಲ್ದಾಣದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮವನ್ನು ಪರಿಷತ್ ಪ್ರಚಾರಕ್ ಸಿ.ಎಚ್. ರಮೇಶ್ ಉದ್ಘಾಟಿಸಿದರು. ನಗರಸಭಾ ವಿಪಕ್ಷ ಮುಖಂಡ ಪಿ. ರಮೇಶ್, ಜಿಲ್ಲಾ ಕಾರ್ಯವಾಹ್ ಅಕ್ಷಯ್ ಬಾಬು, ಉದುಮ ಖಂಡ್ ಕಾರ್ಯವಾಹ್ ನಾಗೇಶ್ ಭಾಗವಹಿಸಿದರು. ರಾಮಕ್ಷೇತ್ರ ನಿರ್ಮಾಣ ಸಂಬಂಧಿಸಿ ೧೯೮೯, ೯೦, ೯೨ರ ಕಾಲ ಘಟ್ಟಗಳಲ್ಲಿ ಕರಸೇವೆಯಲ್ಲಿ ಭಾಗವಹಿಸಿದ ಜಿಲ್ಲೆಯ ಕಾರ್ಯಕರ್ತರಾಗಿದ್ದಾರೆ ಪ್ರಯಾಣ ಹೊರಟವರು. ನಿನ್ನೆ ಪ್ರತ್ಯೇಕ ರೈಲಿನಲ್ಲಿ ಅವರು ಕಾಸರಗೋಡಿನಿಂದ ಪ್ರಯಾಣ …

ಬೆಂಗಳೂರಿನಲ್ಲಿ ಬೈಕ್ ಅಪಘಾತ: ಇಬ್ಬರು ಕೇರಳೀಯ ವಿದ್ಯಾರ್ಥಿಗಳು ಮೃತ್ಯು

ಬೆಂಗಳೂರು: ಬೆಂಗಳೂರಿನ ಕಮ್ಮನಹಳ್ಳಿ ಎಂಬಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಕೇರಳೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೊಲ್ಲಂ ನಿವಾಸಿಗಳಾದ ಆಲ್ಬಿಜಿ. ಜೇಕಬ್ (೨೧), ವಿಷ್ಣು ಕುಮಾರ್ ಎಸ್.(೨೫) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಅಪಘಾತ ಸಂಭವಿಸಿದೆ. ಬೈಕ್ ಡಿವೈಡರ್‌ಗೆ ಢಿಕ್ಕಿ  ಹೊಡೆದು ಮಗುಚಿ ಬಿದ್ದು ಅಪಘಾತ ಸಂಭವಿಸಿದೆ.

ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಪೂರ್ವಕ ಭೇಟಿ ನೀಡಿದ ಜಮಾಅತ್ ಪದಾಧಿಕಾರಿಗಳು

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಜುಮಾ ಮಸೀದಿ ಸಮಿತಿ ಪದಾಧಿಕಾರಿಗಳು ಸ್ನೇಹಪೂರ್ವಕ ಕಾಣಿಕೆಯೊಂದಿಗೆ ಭೇಟಿ ನೀಡಿದರು. ನಾಡಿನ ಮಹೋತ್ಸವವಾದ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಕುಂಬಳೆ ಬದರ್ ಜುಮಾ ಮಸೀದಿ ಹಾಗೂ ಕುಂಟಂಗೇರಡ್ಕ ತ್ವಾಹ ಮಸೀದಿಯಿಂದ ಕಾಣಿಕೆ ಸಮರ್ಪಿಸಲಾಯಿತು. ಬದರ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಕಾರ್ಯದರ್ಶಿ ಮಮ್ಮು ಮುಬಾರಕ್, ಕೋಶಾಧಿಕಾರಿಯೂ ತ್ವಾಹ ಮಸೀದಿ ಕಾರ್ಯದರ್ಶಿಯಾದ ಅಬ್ದುಲ್ಲ, ಮಾಜಿ ಸೆಕ್ರಟರಿ ಟಿ.ಕೆ. ಇಬ್ರಾಹಿಂ ಎಂಬಿವರ ನೇತೃತ್ವದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ …

ಕಣಿಪುರ ಕ್ಷೇತ್ರಕ್ಕೆ ತಲುಪುವ ಭಕ್ತಜನರಿಗೆ ವ್ಯಾಪಾರಿ ಒಕ್ಕೂಟದಿಂದ ಸಿಹಿ ಪಾನೀಯ ವಿತರಣೆ

ಕುಂಬಳೆ: ಕಣಿಪುರ ಶ್ರೀ ಗೋಪಾ ಲಕೃಷ್ಣ ದೇವಸ್ಥಾನದ ನವೀಕರಣೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಲುಪುವ ಭಕ್ತಜನರಿಗೆ ಕುಂಬಳೆ ಹೈಟೆಕ್ ಸ್ಟ್ರೀಟ್ ವ್ಯಾಪಾರಿ ಒಕ್ಕೂಟದ ವತಿಯಿಂದ ಪಾನೀಯ ವಿತರಿಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಇಲ್ಲಿದೆ ತಲುಪಿದ್ದಾರೆ. ಬದಿಯಡ್ಕ ರಸ್ತೆ ಮೂಲಕ ಸಾಗುವ ಶೋಭಾಯಾತ್ರೆಗೆ ವ್ಯಾಪಾರಿ ಒಕ್ಕೂಟದ ವತಿಯಿಂದ ಸಿಹಿ ಪಾನೀಯ ವಿತರಿಸಲಾಗಿದೆ. ಇಂದು ಕೂಡಾ ಇದು ಮುಂದುವರಿಯಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.