ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಿಪಿಎಂಗೆ ಜಯ

ಕೊಡ್ಲಮೊಗರು: ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್‌ನ ೨೦೨೪-೨೦೨೯ನೇ ಸಾಲಿನ ಆಡಳಿತ ಮಂಡಳಿ  ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಎಲ್ಲಾ ಅಭ್ಯರ್ಥಿಗಳು ಅತ್ಯಧಿಕ ಮತಗಳನ್ನು ಗಳಿಸಿ ಜಯ ಸಾಧಿಸಿದ್ದಾರೆ.  ೧೧೦೦ಕ್ಕಿಂತಲೂ ಸದಸ್ಯರು ಮತದಾನ ದಲ್ಲಿ ಭಾಗವಹಿಸಿದ್ದರು. ಸಿಪಿಎಂನ ಮೋಹನ ಬಿ, ಇಸ್ಮಾಯಿಲ್, ಲೋ ಕೇಶ್ ಶೆಟ್ಟಿ,  ಜನಾರ್ದನ ನಾಯ್ಕ್, ಇಂದಿರಾ, ಶಶಿಕಲಾ, ಭಾಸ್ಕರ ಶೆಟ್ಟಿಗಾರ್, ವಸಂತರಾಜ್ ಸಾಮಾನಿ, ರಘುನಾಥ ರೈ ಕೆ, ಚಿತ್ರಶ್ರೀ, ಅಬ್ದುಲ್ ಖಾದರ್ ಇವರೆಲ್ಲರೂ ತಲಾ ೯೫೦ಕ್ಕಿಂತಲೂ ಅಧಿಕ ಮತಗಳನ್ನು ಗಳಿಸಿ ವಿಜಯ ಗಳಿಸಿದರೆ, ಎದುರಾಳಿಗಳಾಗಿ …

ಕೊಂಡೆವೂರಿನಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ಚಂಡಿಕಾಯಾಗ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗಾಯತ್ರೀ ದೇವಿ ಹಾಗೂ ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀಕಮಲಾದೇವೀ ಪ್ರಸಾದ ಆಸ್ರಣ್ಣರವರ ಪೌರೋಹಿತ್ಯದಲ್ಲಿ ಈ ತಿಂಗಳ ೨೨ರಂದು ಚಂಡಿಕಾ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಳೊಂದಿಗೆ ನಡೆಯಲಿದೆ. ಮಧ್ಯಾಹ್ನ ನಂತರ, ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರು, ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ‘ಮಹಿಷ ವಧೆ’ ಪ್ರದರ್ಶನಗೊಳ್ಳಲಿದೆ.

ಅಗ್ನಿದುರಂತ: ಅಗ್ನಿಶಾಮಕದಳದಿಂದ ಕಾರ್ಯಾಚರಣೆ

ಉಪ್ಪಳ: ನಾಲ್ಕು ಕಡೆಗಳಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಉಪ್ಪಳ ಅಗ್ನಿಶಾಮಕದಳ ನಡೆಸಿದ ಕಾರ್ಯಾ ಚರಣೆಯಲ್ಲಿ ಹೆಚ್ಚಿನ ಅಪಾಯ ತಪ್ಪಿದೆ. ನಿನ್ನೆ ಮಧ್ಯಾಹ್ನದಿಂದ ಸಂಜೆ ತನಕ ವಿವಿಧ ಕಡೆ ಅಗ್ನಿದುರಂತ ಉಂಟಾಗಿದೆ. ಪೈವಳಿಕೆ  ಸುಂಕದಕಟ್ಟೆಯ ಶಕೀರ್, ಪಾವೂರು ಗೇರುಕಟ್ಟೆಯ ಮುಬಾರಕ್ ಎಂಬವರ ಹಿತ್ತಿಲಿನ ಹುಲ್ಲು, ಕಾಡುಪೊದೆ, ಬಾಯಿಕಟ್ಟೆಯ ಅಬ್ದುಲ್ ಸಮದ್ ಎಂಬವರ ಬಯಲಿನಲ್ಲಿ ಹುಲ್ಲು ಬೆಂಕಿಗಾಹುತಿಯಾಗಿದೆ. ಉಪ್ಪಳ ಅಗ್ನಿಶಾಮಕದಳ ಸ್ಟೇಶನ್ ಆಫೀಸರ್ ರಾಜೇಶ್ ಹಾಗೂ ತಂಡ ಸ್ಥಳಕ್ಕೆ ತಲುಪಿ ನಡೆಸಿದ ಕಾರ್ಯಾಚ ರಣೆಯಲ್ಲಿ ಬೆಂಕಿ ಹರಡುವುದನ್ನು ತಪ್ಪಸಿದೆ. ಅಲ್ಲದೆ …

ಸವಾಕ್ ರಜತ ವಾರ್ಷಿಕ ಆಚರಣೆ: ಪ್ರಶಸ್ತಿ ಪ್ರದಾನ

ಕಾಸರಗೋಡು: ಸವಾಕ್ ಜಿಲ್ಲಾ ಸಮಿತಿಯ ಬೆಳ್ಳಿ ಹಬ್ಬ ವಾರ್ಷಿಕೋ ತ್ಸವವನ್ನು ಕೇರಳ ಜಾನಪದ ಅಕಾಡೆಮಿ ಕಾರ್ಯದರ್ಶಿ ಎ.ವಿ. ಅಜಯ್ ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಅಧ್ಯಕ್ಷತೆ ವಹಿಸಿದರು. ಸವಾಕ್ ರಾಜ್ಯ ಅಧ್ಯಕ್ಷ ಜಿ.ಕೆ. ಪಿಳ್ಳ ಪ್ರಧಾನ   ಭಾಷಣ ಮಾಡಿದರು. ಇದೇ ವೇಳೆ ಸುದರ್ಶನ್‌ರಿಗೆ ಕಲಾ ಶ್ರೇಷ್ಠ ಪುರಸ್ಕಾರ, ವಿನೋದ್‌ರಿಗೆ ನಾಟ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ನಾಟಕಗಾರ ಟಿ.ವಿ ಗಂಗಾಧರನ್, ನಾಟಕ ನಟಿ  ಮಂಜೇಶ್ವರ ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, …

ಹೊಸಂಗಡಿಯಲ್ಲಿ ಯುರೋಪಿಯನ್ ಮಾದರಿಯಲ್ಲಿ  ೩೦ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವಿಶ್ರಾಂತಿ ಸಮುಚ್ಛಯ ನಿರ್ಮಾಣ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಮೂಲಕದ ವಾಹನ ಪ್ರಯಾಣಿಕರಿಗೆ ಪ್ರಾಥಮಿಕ ಅಗತ್ಯಗಳನ್ನು ನಿರ್ವಹಿಸಲು ಹೊಸಂಗಡಿಯಲ್ಲಿ ಯು.ಎಸ್ ಯುರೋಪಿಯನ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೆಸ್ಟ್ ಸ್ಟೋಪ್   (ವಿಶ್ರಾಂತಿ ಸಮುಚ್ಚಯ)ನಿರ್ಮಿಸಲು ತೀರ್ಮಾ ನಿಸಲಾಗಿದೆ. ಇದು ೩೦ ಕೋಟಿ ರೂ. ಗಳವೆಚ್ಚ ನಿರೀಕ್ಷಿಸುವ ಯೋಜನೆ ಯಾಗಿದೆ. ಈ ವಿಶ್ರಾಂತಿ ಸಮುಚ್ಛಯ ನಿರ್ಮಿಸುವ ಸ್ಥಳ ಪರಿಶೀಲನೆ ಈಗಾಗಲೇ ಆರಂಭಗೊಂಡಿದೆ. ಈ ಕೇಂದ್ರ ಸ್ಥಾಪಿಸಲು ರಾಜ್ಯ ಸರಕಾರ ಹೊಸಂಗಡಿಯಲ್ಲಿ ಈಗಾಗಲೇ ಐದು ಎಕ್ರೆ ಸ್ಥಳ ಬಿಟ್ಟುಕೊಟ್ಟಿದೆ.  ಈ ಪ್ರದೇಶದ   ಮಣ್ಣು ಪರೀಕ್ಷೆ ೧೦ ದಿನಗಳಿಂದ ಆರಂಭಗೊಂಡಿದ್ದು, …

ಟೆಂಟ್‌ನೊಳಗೆ ಸಹೋದರರ ಜತೆ ನಿದ್ರಿಸುತ್ತಿದ್ದ ಎರಡು ವರ್ಷದ ಬಾಲಕಿಯ ಅಪಹರಣ

ತಿರುವನಂತಪುರ: ಟೆಂಟ್‌ನೊಳಗೆ ಸಹೋದರರ ಜತೆ ನಿದ್ರಿಸುತ್ತಿದ್ದ ಎರಡು ವರ್ಷದ ಬಾಲಕಿಯನ್ನು ಅಪರಿಚಿತರು ಅಪಹರಿಸಿದ ಘಟನೆ ರಾಜ್ಯ ರಾಜಧಾನಿಯಾದ ತಿರುವನಂತಪುರ ಪಟ್ಟಾದಲ್ಲಿ ನಡೆದಿದೆ. ಮೂಲತಃ ಬಿಹಾರ ನಿವಾಸಿ ಹಾಗೂ ನಂತರ ಹೈದರಾಬಾದ್‌ಗೆ ವಾಸ ಬದಲಾಯಿಸಿದ್ದ ಅಲೆಮಾರಿ ವಿಭಾಗಕ್ಕೆ ಸೇರಿದ ದಂಪತಿಯ ಪುತ್ರಿಯನ್ನು ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಅಪ ಹರಿಸಿದ್ದಾರೆ. ಪಟ್ಟಾದ ಅಲ್ ಸೈಂಟ್ ಕಾಲೇಜು ಬಳಿಯ  ರೈಲು ಹಳಿ ಬಳಿ   ನಿರ್ಮಿಸಲಾದ ಟೆಂಟ್‌ನೊಳಗಿನಿಂದ ಬಾಲಕಿಯನ್ನು ಅಪಹರಿಸಲಾಗಿದೆ. ಬಾಲಕಿಯ ಹೆತ್ತವರು ಹಿಂದಿ ಭಾಷೆ ಮಾತ್ರವೇ ಅರಿತವರಾಗಿದ್ದಾರೆ. ಇಂದು ಮುಂಜಾನೆ ಬಾಲಕಿ …

ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು: ಎರಡು ಕಾಣಿಕೆ ಹುಂಡಿಗಳಿಂದ ಹಣ ಕಳವು

ಕುಂಬಳೆ: ಆರಿಕ್ಕಾಡಿ ಕೋಟೆ ಶ್ರೀ ಹನುಮಾನ್ ಕ್ಷೇತ್ರಕ್ಕೆ ಕಳ್ಳರು ನುಗ್ಗಿ ಹಣ ದೋಚಿದ ಘಟನೆ ನಡೆದಿದೆ. ಕ್ಷೇತ್ರದ ಆವರಣಗೋಡೆ ದಾಟಿ ಒಳ ನುಗ್ಗಿದ ಕಳ್ಳರು ಗರ್ಭಗುಡಿಯ ಹೊರಗಿರುವ ಕಾಣಿಕೆ ಹುಂಡಿಯ ಬೀಗ ಮುರಿದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಅದರಲ್ಲಿ ಸುಮಾರು ೩೦,೦೦೦ ರೂಪಾಯಿಗಿಂತ ಹೆಚ್ಚು ಮೊತ್ತ ಇದ್ದಿರಬಹುದೆಂದು ಅಂದಾಜಿಸಲಾಗಿ ದೆಯೆಂದು ಕ್ಷೇತ್ರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಇದೇ ಕ್ಷೇತ್ರ ಸಮೀಪದಲ್ಲಿರುವ ಶ್ರೀ ಮಹಾಮಾಯಿ ದೇವಿಯ ಗುಡಿಯ ಕಾಣಿಕೆ ಹುಂಡಿಯಿಂ ದಲೂ ಕಳ್ಳರು ಹಣ ಕಳವುಗೈದಿದ್ದಾರೆ. ಅದರ ಬೀಗ …

ಆರ್‌ಎಂ.ಪಿ ನೇತಾರ ಟಿ.ಪಿ. ಚಂದ್ರಶೇಖರನ್ ಕೊಲೆ ಪ್ರಕರಣ: ಆರೋಪಿಗಳಿಗೆ ಕೆಳ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದು ಹೈಕೋರ್ಟು ತೀರ್ಪು

ಕೊಚ್ಚಿ: ಆರ್‌ಎಂಪಿ ನೇತಾರ ಟಿ.ಪಿ. ಚಂದ್ರಶೇಖರನ್ ಕೊಲೆ ಪ್ರಕರಣದ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಇಂದು ಬೆಳಿಗ್ಗೆ ಖಾಯಂಗೊಳಿಸಿ ತೀರ್ಪು ನೀಡಿದೆ. ಮಾತ್ರವಲ್ಲ ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಇಬ್ಬರನ್ನು ಖುಲಾಸೆ ಗೊಳಿಸಿದ  ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಪ್ರಕರಣದ ಆರೋಪಿಗಳಾದ ಎನ್.ಸಿ. ಅನೂಪ್, ಕೀರ್ತಿ ಮಾಣಿ ಮನೋಜ್, ಕೊಡಿ ಸುನಿ, ಟಿ.ಕೆ. ರಜೀಶ್, ಮೊಹಮ್ಮದ್ ಶಾಫಿ, ಅಣ್ಣನ್ ಸಿಜಿತ್, ಕೆ. ಸಿನೋಜ್, ಕೆ.ಸಿ. ರಾಮ ಚಂದ್ರನ್, ಟ್ರೌಸರ್ ಮನೋಜ್, ಸಿಪಿಎಂ ಪಾನೂರು …

ಎಂಡೋಸಲ್ಫಾನ್ ಸಂತ್ರಸ್ತೆ: ಯುವತಿ ಅಸೌಖ್ಯದಿಂದ ನಿಧನ

ನೀರ್ಚಾಲು: ಎಂಡೋಸಲ್ಫಾನ್ ಸಂತ್ರಸ್ತೆಯಾದ ಯುವತಿ ಅಸೌಖ್ಯದಿಂದ ಮೃತಪಟ್ಟ ಘಟನೆ ನಡೆದಿದೆ.  ಬೇಳ ವಿಷ್ಣುಮೂರ್ತಿ ನಗರ ನಿವಾಸಿ ನಾರಾಯಣ ಎಂಬವರ ಪುತ್ರಿ ಜ್ಯೋತಿ (೩೧) ಮೃತಪಟ್ಟ ದುರ್ದೈವಿ.  ಇವರಿಗೆ ಮೊನ್ನೆ ಜ್ವರ  ಬಾಧಿಸಿತ್ತೆನ್ನ ಲಾಗಿದೆ. ಇದರಿಂದ ಕುಂಬಳೆಯ  ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾ ಗದೆ ನಿನ್ನೆ ನಿಧನ ಸಂಭವಿಸಿದೆ. ಜ್ಯೋತಿ ಜನ್ಮತಃ ವಿಕಲಚೇತನರಾಗಿದ್ದರೆನ್ನಲಾಗಿದೆ. ಪ್ಲಸ್‌ಟು ವರೆಗೆ ಶಿಕ್ಷಣ ಪಡೆದಿದ್ದಾರೆ. ಆದರೆ ಅನಂತರ ಅಸೌಖ್ಯದ ಹಿನ್ನೆಲೆ ಯಲ್ಲಿ ಶಿಕ್ಷಣ ಮುಂದುವರಿ ಸಲಾಗದೆ ಮನೆಯಲ್ಲಿದ್ದರು. ಮೃತದೇಹವನ್ನು ಕಾಸರಗೋಡು …

ಸಂಚರಿಸುತ್ತಿದ್ದ ಬಸ್‌ನಲ್ಲಿ ಚಾಲಕ ಹೃದಯಾಘಾತದಿಂದ ನಿಧನ

ಉಪ್ಪಳ: ಬಸ್ ಚಲಾಯಿಸುತ್ತಿದ್ದಂತೆ ಚಾಲಕ ಹೃದಯÁಘಾತವುಂಟಾಗಿ ಮೃತಪಟ್ಟ ಘಟನೆ ನಡೆದಿದೆ. ಚೇವಾರು ಸಮೀಪದ ಕುಂಟAಗೇರಡ್ಕ ನಿವಾಸಿ ದಿ| ಮೊಯ್ದೀನ್ ಕುಂಞಯವರ ಪುತ್ರ ಅಬ್ದುಲ್ ರಹಿಮಾನ್ [42] ಮೃತಪm್ಟ ವ್ಯಕ್ತಿ. ಇವರು ಧರ್ಮತ್ತಡ್ಕ- ಬಂದ್ಯೋಡು-ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ಜಿಸ್ತಿಯಾ ಬಸ್‌ನ ಚಾಲಕರಾಗಿದ್ದಾರೆ. ನಿನ್ನೆ ಬೆಳಿಗ್ಗೆ ಧರ್ಮv್ತÀಡ್ಕದಿಂದ ಕಾಸರಗೋಡಿಗೆ ಬಸ್ ಹೊರಟಿದೆ. ಪೆರ್ಮುದ ತಲುಪಿದಾಗ ಎದೆನೋವು ಅನುಭವಗೊಡಿದೆತ್ತೆನ್ನಲಾಗಿದೆ.ಕುಂಟAಗೇರಡ್ಕ ತಲುಪುತ್ತಿದ್ದಂತೆ ಅಸ್ವಸ್ಥಗೊಂಡಿದ್ದರು. ಇದರಿಂದ ಬಸ್‌ನ್ನು ಬದಿಗೆ ಸರಿಸಿ ನಿಲ್ಲಿಸಿದ್ದು, ಅಷ್ಟರಲ್ಲಿ ಕುಸಿದುಬಿದ್ದರು. ಅವರನ್ನು ಕೂಡಲೇ ಸ್ಥಳೀಯರು ಸೇರಿ ಬಂ ದ್ಯೋಡಿನ ಖಾಸಗಿ …