ಪೆರಿಯ ವಾಹನ ಅಪಘಾತ: ಇಬ್ಬರ ನಿಧನದಿಂದ ನಾಡಿನಲ್ಲಿ ಶೋಕಸಾಗರ

ಹೊಸದುರ್ಗ: ಪೆರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ತಾಯನ್ನೂರು ಪೇರಳಪುದಿಯ ಪುರದ ಟಿ. ರಘುನಾಥ (೫೨), ಸ್ನೇಹಿತ ಚಪ್ಪಾರಪಡವಿನ ಸಿ. ರಾಜೇಶ್ (೩೭) ಎಂಬಿವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಗಂಭೀರ ಗಾಯಗೊಂಡ ತಾಯನ್ನೂರು ಪೇರಂಕಲ್ಲ್ ನಿವಾಸಿಗಳಾದ ಟಿ. ರಾಜೇಶ್ (೩೫), ರಾಹುಲ್ (೩೫) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೆರಿಯ ಚಾಣವಳಪ್ಪ್ ತರವಾಡಿನಲ್ಲಿ ನಡೆದ ವಯನಾಟ್ ಕುಲವನ್ ದೈವ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದವರು ಸಂಚರಿಸಿದ ಕಾರು …

ಅಪ್ರಾಪ್ತರ ವಾಹನ ಚಾಲನೆ ವ್ಯಾಪಕ ಮಂಜೇಶ್ವರ ಪೊಲೀಸರಿಂದ ವಾಹನ ತಪಾಸಣೆ ಬಿಗಿ

ಮಂಜೇಶ್ವರ: ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಕೆ.ರಾಜೀವ್ ಕುಮಾರ್ ನೇತೃತ್ವದಲ್ಲಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಬಿಗುಗೊಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಸುಮಾರು 20ಕ್ಕಿಂತ ಅಧಿಕ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಹೆಚು ದ್ವಿಚಕ್ರ ವಾಹನವಾಗಿದೆ. ನಿನ್ನೆ ಕೂಡಾ ವರ್ಕಾಡಿ ಬೇಕರಿ ಜಂಕ್ಷನ್ ನಿಂದ 17ರ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್‌ನ್ನು ಎಸ್.ಐ ರಮೇಶ್ ವಶಪಡಿಸಿ ಆರ್.ಸಿ ಮಾಲಕ ಸವಾರನ ತಂದೆ ವಿರುದ್ದ ಕೇಸು ದಾಖಲಿಸಿದ್ದಾರೆ. ಈ ರೀತಿ …

ಬಾವಿಗೆ ಬಿದ್ದ ಕಾಡುಕೋಣ ಜೀವಾಪಾಯದಿಂದ ಪಾರು

ಹೊಸದುರ್ಗ: ಹಲವು ದಿನಗಳಿಂದ ನಾಡಿನಲ್ಲಿ ತಿರುಗಾಡಿ ಜನರಿಗೆ ಆತಂಕ ಹುಟ್ಟಿಸಿದ್ದ ಕಾಡುಕೋಣ ಬಾವಿಗೆ ಬಿದ್ದ ಘಟನೆ ನಡೆದಿದೆ. ಮಡಿಕೈ ಮನ್ನುರೋಡ್ ನಾಂದಂಕುಳಿ ಎಂಬಲ್ಲಿ ನಿನ್ನೆ ಅಪರಾಹ್ನ ರಮಣ್ ಎಂಬವರ ಮನೆ ಹಿತ್ತಿಲಿನಲ್ಲಿರುವ ಬಾವಿಗೆ ಕಾಡು ಕೋಣ ಬಿದ್ದಿದೆ. ಮಧ್ಯಾಹ್ನ ವೇಳೆ ಮೇಲ್ಪಚ್ಚೇರಿ ಭಾಗದಲ್ಲಾಗಿ ಕಾಡುಕೋಣ ಓಡುತ್ತಿರುವುದನ್ನು ನಾಗರಿಕರು ಕಂಡಿದ್ದರು. ಇದರಿಂದ ನಾಗರಿಕರು ತೀವ್ರ ಆತಂಕಗೊಂಡಿದ್ದರು. ನೀಲೇಶ್ವರ ಪೊಲೀಸರು ಹಾಗೂ ನಾಗರಿಕರು ವ್ಯಾಪಕವಾಗಿ ಶೋಧ ನಡೆಸಿದರೂ ಪತ್ತೆಹಚ್ಚಲು  ಸಾಧ್ಯವಾಗಿರ ಲಿಲ್ಲ. ಈ ಮಧ್ಯೆ ಸಂಜೆ ಹೊತ್ತಿನಲ್ಲಿ ಕಾಡುಕೋಣ ಬಾವಿಯಲ್ಲಿರುವುದು …

ರಾಜ್ಯದಲ್ಲಿ ಏರಿದ ಬಿಸಿಲ ಅಬ್ಬರ: ೪ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಕಾಸರಗೋಡು: ರಾಜ್ಯದಲ್ಲಿ ಈ ತಿಂಗಳಲ್ಲೇ ಬಿಸಿಲ ಅಬ್ಬರ ಜೋರಾಗತೊಡಗಿದೆ. ಚಳಿಗಾಲದ ಅವಧಿ ಇನ್ನೂ ಮುಗಿಯದೇ ಇರುವ ವೇಳೆಯಲ್ಲೇ ಈ ದೇವರ ನಾಡಿನಲ್ಲಿ ಈಗಾಗಲೇ ತೀವ್ರ ಬಿಸಿಲ ಝಳ ಆರಂಭಗೊಂಡಿದೆ. ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ ಬಿಸಿಲ ಪ್ರಭಾವ ಹೆಚ್ಚಾ ಗಿರುವ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಣ್ಣೂರು, ಕಲ್ಲಿಕೋಟೆ, ಆಲಪ್ಪುಳ ಮತ್ತು ಕೋಟಯಂ ಜಿಲ್ಲೆಗಳಲ್ಲಿ ಈ ಅಲರ್ಟ್ ಘೋಷಿಸಲಾಗಿದೆ. ಇದರಂತೆ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ಜನರು ಮನೆಯಿಂದ ಹೊರಬಾರದಂತೆ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬಿಸಿಲ …

ಕಣಿಪುರ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ: ಕೊಂಡೆವೂರು ಸ್ವಾಮೀಜಿಯವರಿಂದ ಆಶೀರ್ವಚನ ಇಂದು

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಕಾರ್ಯಕ್ರಮಗಳು ಸಂಭ್ರಮ ದಿಂದ ಜರಗುತ್ತಿದ್ದು, ನಾಡಿನ ವಿವಿಧ ಭಾಗಗಳಿಂದ ಭಕ್ತ ಜನರು ಭಾರೀ ಸಂಖ್ಯೆ ಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿದಿನ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇದರಂತೆ  ಇಂದು ಬೆಳಿಗ್ಗೆ ಗಣಪತಿ ಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಒಳ ವೇದಿಕೆ ಯಲ್ಲಿ ಬೆಳಗ್ಗಿನಿಂದ ವಿವಿಧ ಭಜನಾ ಸಂಘಗಳಿಂದ ಭಜನಾ ಝೇಂಕಾರ್ ನಡೆಯುತ್ತಿದೆ. ಹೊರ ವೇದಿಕೆಯಲ್ಲಿ ಕೂಡಾ ವಿವಿಧ …

ನಗರಸೌಂದರ್ಯಕ್ಕೆ ಒತ್ತು: ಕಾಸರಗೋಡು ನಗರಸಭೆಗೆ ಮಿಗತೆ ಬಜೆಟ್

ಕಾಸರಗೋಡು: ನಗರಸೌಂದರ್ಯಕ್ಕೆ ಒತ್ತು ನೀಡುವ ಕಾಸರಗೋಡು ನಗರಸಭೆಯ ೨೦೨೪-೨೫ನೇ ವಿತ್ತೀಯ ವರ್ಷದ ಮುಂಗಡಪತ್ರ (ಬಜೆಟ್)ವನ್ನು ನಗರಸಭಾ ಬಜೆಟ್ ಅಧಿವೇಶನದಲ್ಲಿ ನಗರಸಭಾ ಉಪಾಧ್ಯಕ್ಷೆ ಸಂಶೀದಾ ಫಿರೋಸ್ ಮೊನ್ನೆ ಮಂಡಿಸಿದರು. ಈ ಹಿಂದೆ ಬಾಕಿ ಉಳಿದ ೭೨,೮೦,೪೪,೦೧೧ ರೂ. ಸೇರಿದಂತೆ ೬೮,೦೦,೮೫,೨೭೬ ರೂ.ಗಳ ತನಕ ಆದಾಯ ಹಾಗೂ ೬೩,೦೯,೦೬,೪೨೩ ರೂ. ವೆಚ್ಚ ನಿರೀಕ್ಷಿಸುವ ಮಿಗತೆ ಬಜೆಟ್ ನ್ನು ಮಂಡಿಸಲಾಯಿತು. ಕಾಸರಗೋಡು ನೆಲ್ಲಿಕುಂಜೆ ಸಮುದ್ರ ಕಿನಾರೆಯಲ್ಲಿ  ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ೪.೫ ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಕಾಸರಗೋಡು ನಗರಸಭೆ-ಮಧೂರು ಪಂಚಾಯತ್‌ನ್ನು …

ಪೆರ್ಲದಲ್ಲಿ ಯುವಮೋರ್ಛಾ ಸಮಾವೇಶ ೨೫ರಂದು ಸಂದೀಪ್ ವಾರ್ಯರ್ ಪ್ರಧಾನ ಭಾಷಣ

ಪೆರ್ಲ: ಭಾರತೀಯ ಜನತಾ ಯುವಮೋರ್ಛಾ ಎಣ್ಮಕಜೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಯುವಸಮಾವೇಶ ಫೆ. ೨೫ರಂದು ಅಪರಾಹ್ನ ೩ ಗಂಟೆಗೆ ಪೆರ್ಲ ಪೇಟೆಯಲ್ಲಿ ನಡೆಯಲಿದೆ. ಮೋದಿಯ ಗ್ಯಾರಂಟಿ-ನವಕೇರಳ ಘೋಷಣೆ ಯೊಂದಿಗೆ ಸಮಾವೇಶ ನಡೆಯಲಿದೆ. ಬಿಡಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸುವರು ಮುಖಂಡ ಸಂದೀಪ್ ವಾರ್ಯರ್ ಪ್ರಧಾನ ಭಾಷಣ ಮಾಡುವರು.   ಬಿಜೆಪಿ ಯುವಮೋರ್ಛಾ ಜಿಲ್ಲಾ ಸಮಿತಿ  ನೇತಾರರು ಭಾಗವಹಿಸುವರು.

ವ್ಯಾಪಾರಿ ಸಮಿತಿಯಿಂದ ಬಿ.ವಿ. ರಾಜನ್‌ರಿಗೆ ಶ್ರದ್ಧಾಂಜಲಿ

ಮಂಜೇಶ್ವರ: ಅಗಲಿದ ಸಿಪಿಐ ಮುಖಂಡ ಬಿ.ವಿ ರಾಜನ್‌ರಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕ ಹಾಗೂ ಮಂಜೇಶ್ವರ ಅಭಿವೃದ್ದಿ ಕ್ರಿಯಾ ಸಮಿತಿ ವತಿಯಿಂದ ಶ್ರದಾಂಜಲಿ ಸಭೆ ಮಂಜೇಶ್ವರ ರೈಲ್ವೇ ನಿಲ್ದಾಣ ಬಳಿಯಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಜೀನ್ ಲವಿನ ವೆÆಂತೇರೋ, ಡಾ.ಯು.ಎ ಖಾದರ್, ವಿವಿಧ ರಾಜಕೀಯ ನೇತಾರರಾದ ಕೆ.ಆರ್ ಜಯಾನಂದ, ಹರ್ಷಾದ್ ವರ್ಕಾಡಿ, ಯಾಕೂಬ್ ಕುಂಜತ್ತೂರು, ಬಶೀರ್, ಅಶ್ರಫ್ ಬಡಾಜೆ, ಹಮೀದ್ ಹೊಸಂಗಡಿ, ಹರಿಶ್ಚಂದ್ರ ಮಂಜೇಶ್ವರ, ಬಶೀರ್ ಕನಿಲ, ಮಜೀದ್ ಭಾಗವಹಿಸಿದರು.

ಮಂಜೇಶ್ವರ: ಓಲ್ಡ್ ಎಂಸಿಸಿ ರಸ್ತೆಯಲ್ಲಿ ಸಂಚಾರ ನಿಯಂತ್ರಣ

ಮಂಜೇಶ್ವರ: ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಓಲ್ಡ್ ಎಂಸಿಸಿ ಪಿಡಬ್ಲ್ಯುಡಿ ರಸ್ತೆಯಲ್ಲಿ ಆಂಶಿಕವಾಗಿ ಸಾರಿಗೆ ಸಂಚಾರ ನಿಯಂತ್ರಣ ಇಂದಿನಿಂದ ಈ ತಿಂಗಳ ೨೫ರವರೆಗೆ ಹೇರಲಾಗಿದೆ. ರಸ್ತೆ ಅಗಲಗೊಳಿಸುವ ಕಾಮಗಾರಿ ನಡೆ ಯುವ ಹಿನ್ನೆಲೆಯಲ್ಲಿ ಘನವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ ಎಂದು ಲೋಕೋಪಯೋಗಿ ವಿಭಾಗ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.

ಕೇಂದ್ರೀಯ ವಿ.ವಿ ಡಾ. ಬಿ.ಆರ್. ಅಂಬೇಡ್ಕರ್ ಭವನ್ ನಾಳೆ ಪ್ರಧಾನಮಂತ್ರಿಯಿಂದ ಉದ್ಘಾಟನೆ

ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ದಲ್ಲಿ ನಿರ್ಮಿಸಲಾದ ಹೊಸ ಆಡಳಿತ ನಿರ್ವಹಣಾ ಕೇಂದ್ರ ಮಂದಿರವಾದ  ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ನಾಳೆ ಪ್ರಧಾನಮಂತ್ರಿ ನರೇಂದ್ರಮೋದಿ ವರ್ಚುವಲ್ ಮೂಲಕ ಉದ್ಘಾಟಿಸು ವರೆಂದು ಕೇಂದ್ರೀಯ ವಿವಿ ಉಸ್ತುವಾರಿ ಉಪಕುಲಪತಿ ಪ್ರೊ. ಕೆ.ಸಿ. ಬೈಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭಾರತದ ೨೨ ರಾಜ್ಯಗಳಲ್ಲಾಗಿ ೩೭ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ರುವ ೧೨,೭೪೪ ಕೋಟಿ ರೂ.ಗಳ ಯೋಜನೆಗಳ ಶಿಲಾನ್ಯಾಸಗಳನ್ನು ಇದರ ಜೊತೆಗೆ ಪ್ರಧಾನಮಂತ್ರಿ  ನಿರ್ವಹಿಸುವರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ …