ನಿವೃತ್ತ ಅಂಚೆ ನೌಕರ ನಿಧನ

ಕುಂಬಳೆ: ನಿವೃತ್ತ ಅಂಚೆ ನೌಕರ ಕಟ್ಟತ್ತಡ್ಕ ನೂತಗುರಿ ನಿವಾಸಿ ಬಾಬು ಬಂಗೇರ (74) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನಹೊಂದಿದರು.  ಅಂಚೆ ಪೇದೆಯಾಗಿ ಸೇವೆ ಆರಂಭಿಸಿದ ಇವರು ಕುಂಬಳೆ ಅಂಚೆ ಕಚೇರಿಯಲ್ಲಿ ಸಹಾಯಕ ನೌಕರನಾಗಿ ಭಡ್ತಿಗೊಂಡು ನಿವೃತ್ತರಾದರು. ಮಯೂರ ಕಳತ್ತೂರು ಹಾಗೂ ಎಸ್‌ಕೆಎಸ್‌ಪುತ್ತಿಗೆ ಕ್ಲಬ್‌ಗಳ ಸ್ಥಾಪಿತ ಸದಸ್ಯರಾಗಿರುವ ಇವರು  ನಾಟಕ  ಕಲಾವಿದರಾಗಿ, ನಿರ್ದೇಶಕರಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಸುನಂದ, ಮಕ್ಕಳಾದ ವಿನಯ, ವಿಜಯ, ವಿನೋದ್, ಅಳಿಯಂದಿರಾದ ಪೂವಪ್ಪ, ದಾಮೋದರ, ಸಹೋದರಿಯರಾದ ಚಂದ್ರಾವತಿ, ಲೀಲಾವತಿ ಹಾಗೂ ಅಪಾರ …

ಆದೂರಿನಲ್ಲಿ ಶೂ ಧರಿಸಿ ತರಗತಿಗೆ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಗೆ ಹಲ್ಲೆ: 5ಪ್ಲಸ್ ಟು ವಿದ್ಯಾರ್ಥಿಗಳ ವಿರುದ್ಧ ಕೇಸು

ಮುಳ್ಳೇರಿಯ: ಶಾಲೆಗೆ ಶೂಸ್ ಧರಿಸಿ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಯನ್ನು ಕ್ರೂರವಾಗಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಪ್ಲಸ್‌ವನ್ ಕಾಮರ್ಸ್ ವಿದ್ಯಾರ್ಥಿ ನೀಡಿದ ದೂರಿನಂತೆ ಪ್ಲಸ್ ಟು ವಿದ್ಯಾರ್ಥಿಗಳಾದ ೫ ಮಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಶುಕ್ರವಾರ ಅಪರಾಹ್ನ 1.30ರ ವೇಳೆ ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಕರಣ ನಡೆದಿದೆ. ಶೂಸ್ ಧರಿಸಿ ತರಗತಿಗೆ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳಾದ ೫ ಮಂದಿ ತಡೆದು ನಿಲ್ಲಿಸಿ ಅಸಭ್ಯವಾಗಿ ನಿಂದಿಸಿರುವುದು ಪ್ರಕರಣಕ್ಕೆ ನಾಂದಿಯಾಗಿದೆ. …

ಸಮಾಂತರ ಲಾಟರಿ ಉಪ್ಪಳದಲ್ಲಿ ಓರ್ವ ಸೆರೆ

ಉಪ್ಪಳ: ಉಪ್ಪಳ ಪೇಟೆಯಲ್ಲಿ ಸಮಾಂತರ ಲಾಟರಿ ವ್ಯಾಪಾರ ದಲ್ಲಿ ತೊಡಗಿದ್ದ ಓರ್ವನನ್ನು ಪೊಲೀ ಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಬಳಿಯ ಬಂದ್ಯೋಡು ಅಡ್ಕದ ಶಬೀರ್ ಮಹಲ್‌ನ ಎಂ.ಕೆ. ಅಬ್ದುಲ್ ಹನೀಫ (57) ಎಂಬಾತನನ್ನು ಮಂಜೇಶ್ವರ ಎಸ್‌ಐ ರತೀಶ್ ಹಾಗೂ ತಂಡ ಬಂಧಿಸಿದೆ. ಆರೋಪಿಯ ಕೈಯಿಂದ ಸಮಾಂತರ ಲಾಟರಿ ಟಿಕೆಟ್‌ಗಿರುವ ಕಾಗದಗಳು ಹಾಗೂ 10460 ರೂ.ವನ್ನು ವಶಪಡಿಸಲಾ ಗಿದೆ. ಮೊನ್ನೆ ಬೆಳಿಗ್ಗೆ ಉಪ್ಪಳ-ಪತ್ವಾಡಿ ರಸ್ತೆ ಯಲ್ಲಿರುವ ಅಂಗಡಿ ಯೊಂದರ ಮುಂಭಾಗದಿಂದ ಆರೋಪಿ ಸೆರೆಗೀಡಾಗಿದ್ದಾನೆ. 

ನಾಪತ್ತೆಯಾದ ಯುವಕ ತೋಡಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಐದು ದಿನಗಳ ಹಿಂದೆ ನಾಪತ್ತೆಯಾದ ಯುವಕ ತೋಡಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ಹೊಸದುರ್ಗ ಅಂಬಲತ್ತರ ಚೆಮ್ಮಟಂವಯಲು ನಿವಾಸಿ ಹಾಗೂ ಈಗ ಬದಿಯಡ್ಕ ಸಮೀಪದ ಬಾಂಜತ್ತಡ್ಕ ಇಕ್ಕೇರಿಯಲಿ ರುವ  ಪತ್ನಿ ಊರ್ಮಿಳರ ಮನೆಯಲ್ಲಿ ವಾಸಿಸುತ್ತಿದ್ದ ಪ್ರಕಾಶನ್ ಪಿ ವಿ (41) ಸಾವನ್ನಪ್ಪಿದ ಯುವಕ. ಇವರು ಕಳೆದ ಬುಧವಾರ ತೆಂಗಿನಕಾಯಿ ಕೊಯ್ಯ ಲೆಂದು ಮನೆ ಪಕ್ಕದ ವ್ಯಕ್ತಿಯೋರ್ವ ತೆಂಗಿನ ತೋಟಕ್ಕೆ ಹೋಗಿದ್ದು ಬಳಿಕ ಮನೆಗೆ ಹಿಂತಿರುಗಲಿಲ್ಲವೆಂದು ತಿಳಿಸಿ ಪತ್ನಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು …

ಚರಂಡಿಯ ಸ್ಲ್ಯಾಬ್ ಕುಸಿತ: ಮಗುಚಿ ಬಿದ್ದ ಲಾರಿ ; ಚಾಲಕನಿಗೆ ಗಂಭೀರ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಚರಂಡಿಯ ಸ್ಲ್ಯಾಬ್‌ಗೆ ಹತ್ತಿದ ಲಾರಿ ಮಗುಚಿಬಿದ್ದಿದೆ. ಚಾಲಕ  ನಾಯ್ಕಾಪು ನಿವಾಸಿ ಮಧು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ಸಂಜೆ ೫ ಗಂಟೆ ವೇಳೆ ಕುಂಬಳೆ ಪೇಟೆ ಸಮೀಪದ ಬದಿಯಡ್ಕ ರಸ್ತೆಯಲ್ಲಿ ಅಪಘಾತವುಂಟಾಗಿದೆ.  ಲೋಡ್ ಹೇರಿಬಂದ ಲಾರಿ ಸ್ಲ್ಯಾಬ್‌ಗೆ ಹತ್ತಿದಾಗ ಸ್ಲ್ಯಾಬ್ ಕುಸಿದಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಘಟನೆ ತಿಳಿದು ತಲುಪಿದ ನಾಗರಿಕರು ಹಾಗೂ ಪೊಲೀಸರು ಸೇರಿ ವಾಹನದೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆದು  ಆಸ್ಪತ್ರೆಗೆ ತಲುಪಿಸಿದ್ದಾರೆ.  ನಾಲ್ಕು ತಿಂಗಳ ಹಿಂದೆಯೂ …

ಚೇಡಿಕ್ಕಾನ ನಿವಾಸಿ ಯುವತಿ ನಾಪತ್ತೆ

ಬದಿಯಡ್ಕ: ಬಸ್‌ನಲ್ಲಿ ತೆರಳಿದ ಯುವತಿ ಹಿಂತಿರುಗಿಲ್ಲ ಎಂಬ ದೂರಿನಲ್ಲಿ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ದ್ದಾರೆ. ಈ ಬಗ್ಗೆ ತನಿಖೆ ಆರಂಭಿ ಸಲಾಗಿದೆ. ನೆಕ್ರಾಜೆ ಚೇಡಿಕ್ಕಾನ ಹೌಸ್‌ನ ಮಂಜುಳ (34 ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ನಿನ್ನೆ ಅಪರಾಹ್ನ 2.30ಕ್ಕೆ ನೆಕ್ರಾಜೆಯಿಂದ ಬಸ್‌ನಲ್ಲಿ ತೆರಳಿರುವುದಾಗಿ ತಿಳಿದು ಬಂದಿದ್ದು, ಆದರೆ ಆ ಬಳಿಕ ಹಿಂತಿ ರುಗಿಲ್ಲವೆಂದು ಸಹೋದರಿಯ ಪತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳ ನೀಡಿದ್ದು ಕೈಗಾರಿಕಾ ಅಭಿವೃದ್ಧಿಗೆ: ತ್ಯಾಜ್ಯ ನಿಕ್ಷೇಪದಿಂದ ಸಂಕಷ್ಟ

ಕಾಸರಗೋಡು: ಕೈಗಾರಿಕೆಯ ಅಭಿವೃದ್ಧಿಗಾಗಿ ಸಿಡ್ಕೋದಿಂದ ವಹಿಸಿಕೊಂಡ ೨ ಎಕ್ರೆ ಭೂಮಿಯನ್ನು ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಕಾಸರ ಗೋಡು ನಗರಸಭೆ ಮಾರ್ಪಡಿಸಿದೆ. ವಿದ್ಯಾನಗರ ಸಿಡ್ಕೋ ಕೈಗಾರಿಕಾ ಎಸ್ಟೇಟ್‌ನ ‘ತಲೆ ತಿರುಗಿದ ಅಭಿವೃದ್ಧಿ’ಯಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ನಗರಸಭೆ ವ್ಯಾಪ್ತಿಯ ವ್ಯಾಪಾರ ಸಂಸ್ಥೆಗಳಿಂದ, ಮನೆಗಳಿಂದ ಹಣ ಪಡೆದು ವೈಜ್ಞಾನಿಕವಾಗಿ ಸಂಸ್ಕರಿಸಲು ಹಸಿರು ಕ್ರಿಯಾಸೇನೆಯ ನೇತೃತ್ವದಲ್ಲಿ ಸಂಗ್ರಹಿಸುವ ತ್ಯಾಜ್ಯಗಳನ್ನು ಗೋಣಿಗಳಲ್ಲಿ  ತುಂಬಿಸಿ ಕಟ್ಟಿ ಇಲ್ಲಿ ತಂದು ಉಪೇಕ್ಷಿಸಲಾಗುತ್ತಿದೆ. ಮಳೆಗಾಲದಲ್ಲಿ ಗೋಣಿಚೀಲಗಳಲ್ಲಿ ತುಂಬಿಸಿಟ್ಟ ತ್ಯಾಜ್ಯಗಳನ್ನು ಬೀದಿನಾಯಿ ಗಳು ಎಳೆದು ಬಿಸಾಡಿದ್ದು ಇದು ಸಮೀಪದ ಬಾವಿಗಳ …

ಸಿಪಿಐ ಮುಖಂಡ ಎಂ. ಕೃಷ್ಣ ಶೆಟ್ಟಿ ಸಂಸ್ಮರಣೆ

ಮಂಜೇಶ್ವರ: ಸಿಪಿಐ ಮಂಜೇಶ್ವರ ಮಂಡಲ ಮಾಜಿಕಾರ್ಯದರ್ಶಿ, ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಮೂಡಂಬೈಲು ಎಂ. ಕೃಷ್ಣ ಶೆಟ್ಟಿಯವರ ಸಂಸ್ಮರಣೆ ಕಾರ್ಯಕ್ರಮ ಅವರ ಸ್ಮೃತಿ ಮಂಟಪದಲ್ಲಿ ಜರಗಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಉದ್ಘಾಟಿಸಿದರು. ಸತೀಶ ಪಜಿಂಗಾರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ, ಮೀಂಜ ಪಂ. ಉಪಾದ್ಯಕ್ಷ ಜಯರಾಮ ಬಲ್ಲಂಗುಡೇಲು, ಮಜಿಬೈಲು ಬ್ಯಾಂಕ್ ಅಧ್ಯಕ್ಷ ಶಾಂತರಾಮ ಶೆಟ್ಟಿ, ಕಾರ್ಯದರ್ಶಿ ಉದಯಕುಮಾರ್ ಕರಿಬೈಲು, ಸಿಪಿಐ ಕಡಂಬಾರು ಲೋಕಲ್ ಕಾರ್ಯದರ್ಶಿ ಹರೀಶ್ ಕೆ.ಆರ್., ಮೂಡಂಬೈಲು ಬ್ರಾಂಚ್ …

16 ಗ್ರಾಂ ಗಾಂಜಾ ವಶ: ಓರ್ವ ಸೆರೆ

ಕಾಸರಗೋಡು:   ನೆಲ್ಲಿಕುಂಜೆ ಕಡಪ್ಪುರದಲ್ಲಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶೋಬ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 16 ಗ್ರಾಂ ಗಾಂಜಾ ಕೈವಶವಿರಿಸಿದ ಆರೋಪ ದಂತೆ ಓರ್ವನನ್ನು ಬಂಧಿಸಿದೆ. ನೆಲ್ಲಿಕುಂಜೆ ಕಡಪ್ಪುರ ನಿವಾಸಿ ಪ್ರಣವ್ ಎಚ್ (24) ಬಂಧಿತ ಆರೋಪಿಯಾಗಿದ್ದಾನೆ.

ಪೆರಿಯ ಅವಳಿ ಕೊಲೆ ಪ್ರಕರಣದ ಆರೋಪಿ ಕೆ. ಮಣಿಕಂಠನ್ ಬ್ಲೋಕ್ ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಹಾಗೂ ೫ ವರ್ಷ ಜೈಲು ಶಿಕ್ಷೆಲಭಿಸಿದ ಕೆ. ಮಣಿಕಂಠನ್ ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಬ್ಲೋಕ್ ಪಂ. ಕಾರ್ಯ ದರ್ಶಿಗೆ ಶನಿವಾರ ಹಸ್ತಾಂತರಿಸಿದ್ದಾರೆ. ಪ್ರಕರಣದಲ್ಲಿ ಮಣಿಕಂಠನ್ ಸಹಿತ ೪ ಮಂದಿಗೆ ಕೊಚ್ಚಿ ಸಿಬಿಐ ನ್ಯಾಯಾಲಯ ೫ ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಯನ್ನು ಹೈಕೋರ್ಟ್ ನಿಷ್ಕ್ರಿಯಗೊಳಿಸಿದ ಹಿನ್ನೆಲೆಯಲ್ಲಿ ಮಣಿಕಂಠನ್ ಜಾಮೀನಿನಲ್ಲಿ ಹೊರ ಬಂದಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿ ಯಾದ ಇವರನ್ನು …