ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ೮೧ನೇ  ಸಹಾಯ ಯೋಜನೆ ಹಸ್ತಾಂತರ

ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ೮೧ನೇ ಯೋಜನೆ ಸಹಾಯ ಹಸ್ತಾಂತರ ಫಲಾನುಭವಿಗಳ ಮನೆಯಲ್ಲಿ ನಡೆಯಿತು. ಮಂಜೇಶ್ವರ ಪೊಯ್ಯಕಂಡ ನಿವಾಸಿ ರತ್ನಾಕರ, ಇವರಿಗೆ ಗಂಟಲಲ್ಲಿ ಕ್ಯಾನ್ಸರ್ ಸಮಸ್ಯೆ ಇದ್ದು ಇವರ ಕಷ್ಟಗಳನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಇವರಿಗೆ ನಿನ್ನೆ ನ್ಯಾಯವಾದಿ ನವೀನ್ ರಾಜ್ ಮೊತ್ತ ಹಸ್ತಾಂತರ ಮಾಡಿದರು. ಈ ವೇಳೆ ಸುಜಾತ ಮಂಜೇಶ್ವರ, ಪ್ರವೀಣ್ ಕನಿಲ,ಸುಕೇಶ್ ಬೆಜ್ಜ, ಅಂಕಿತ್ ಪಾವೂರು, ರೂಪೇಶ್ ಜೋಡುಕಲ್ಲು, ಪ್ರದೀಪ್ ಮೊರತ್ತಣೆ …

ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರ ಸಮಿತಿಯಿಂದ ಕೋಮು ಸೌಹಾರ್ದತೆಗೆ ಮಾದರಿ

ಮಂಜೇಶ್ವರ:  ಮತ ಸೌಹಾ ರ್ದತೆಯನ್ನು ಕಾಪಾಡಲು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರ ಹಾಗೂ ಪಟ್ಟತ್ತೂರು ಜುಮಾ ಮಸೀದಿ ಮಾದರಿಯಾಗಿದೆ. ಬಲ್ಲಂ ಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಈ ತಿಂಗಳ ೨೪ರಿಂದ ೨೬ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ  ಮಾ ರ್ಚ್ ೧ರಿಂದ ಮಾರ್ಚ್ ೮ ವರೆಗೆ ಕಳಿಯಾಟ ಮಹೋತ್ಸವ ಜರಗಲಿದೆ. ಇದರ ಪ್ರಯುಕ್ತ ಪಟ್ಟತ್ತೂರು ಜುಮಾ ಮಸೀದಿಯ ಅಧ್ಯಕ್ಷರು ಹಾಗೂ  ಪದಾಧಿಕಾರಿಗಳನ್ನು ಆಹ್ವಾನಿಸಲು ಶುಕ್ರವಾರದ …

ಮನೆಯೊಳಗೆ ಮೂರು ಮಂದಿಯ ಮೃತದೇಹ ಪತ್ತೆ : ಪತ್ನಿ, ತಾಯಿಯ ಕೊಂದು ನೇಣು ಬಿಗಿದ ಮಧ್ಯವಯಸ್ಕ

ಹೊಸದುರ್ಗ: ತಾಯಿ ಹಾಗೂ ಪತ್ನಿಯ ಕುತ್ತಿಗೆಯನ್ನು ಕೇಬಲ್‌ನಿಂದ ಬಿಗಿದು ಕೊಲೆಗೈದ ಬಳಿಕ ಮಧ್ಯವಯಸ್ಕ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಮೂವರ ಮೃತದೇಹ ಪತ್ತೆಯಾಗಿದೆ. ಕಾಞಂಗಾಡ್ ಬಸ್ ನಿಲ್ದಾಣ ಪರಿಸರದಲ್ಲಿ ವಾಚ್ ವರ್ಕ್ಸ್ ಅಂಗಡಿ ನಡೆಸುವ ಸೂರ್ಯಪ್ರಕಾಶ್ (೫೫), ಪತ್ನಿ ಗೀತಾ (೪೮), ತಾಯಿ ಲೀಲಾ (೯೩)ರ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ. ಈ ಕುಟುಂಬ ಇಲ್ಲಿನ ಮುತ್ತಪ್ಪನ್ ಕ್ಷೇತ್ರ ಸಮೀಪದ ಹಬೀಬ್ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದಾರೆ. ಇದೇ ಕ್ವಾರ್ಟರ್ಸ್‌ನ ಮಲಗುವ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಲೀಲಾ ಹಾಗೂ  …

ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ೩.೭೫೦ ಕಿಲೋ ಗಾಂಜಾ ವಶ: ಇಬ್ಬರ ಬಂಧನ

ಕುಂಬಳೆ: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ೩.೭೫೦ ಕಿಲೋ ಗಾಂಜಾ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಕುಕ್ಕಾರ್‌ನ ಅಬ್ದುಲ್ ಹಮೀದ್ ಯಾನೆ ಅಮ್ಮಿ(೪೫), ಶಿರಿಯಾದ ಅಬ್ದುಲ್ ಕಬೀರ್ (೩೦) ಎಂಬವರನ್ನು ಕುಂಬಳೆ ಎಸ್‌ಐ ಟಿ.ಎಂ. ವಿಪಿನ್ ಹಾಗೂ ತಂಡ ಬಂಧಿಸಿದೆ. ಎಸ್‌ಐ ನೇತೃತ್ವದಲ್ಲಿ ನಿನ್ನೆ  ರಾತ್ರಿ  ೭.೩೦ರ ವೇಳೆ ಕುಂಬಳೆ ಶಾಲಾ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಟೋ ರಿಕ್ಷಾ ತಲುಪಿದೆ. ಅದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ …

ಯುವಕನ ಕೊಲೆ ಪ್ರಕರಣ: ಮಾಹಿತಿ ಸಂಗ್ರಹ ಬಳಿಕ ಮುಖ್ಯ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ತಲೆಮರೆಸಿಕೊಂಡ ಆರೋಪಿಗಳಿಗೆ ತೀವ್ರ ಶೋಧ

ಉಪ್ಪಳ: ಯುವಕನ್ನು ಗಲ್ಫ್‌ನಿಂದ ಊರಿಗೆ ಕರೆಸಿದ ಬಳಿಕ ಕಾರಿನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣದ ಮುಖ್ಯ ಆರೋಪಿಯಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಮಂಜೇಶ್ವರ ಪೊಲೀಸರು ನಿನ್ನೆ ಮರಳಿ ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುವ ಅಬೂಬಕರ್ ಸಿದ್ದಿಕ್ ಯಾನೆ ನೂರ್‌ಶ (೩೩) ಎಂಬಾತನನ್ನು ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗಿದೆ. ೨೦೨೨ ಜೂನ್ ೨೬ರಂದು ಪುತ್ತಿಗೆ ಮುಗುವಿನ ನಿವಾಸಿಯೂ ಗಲ್ಫ್ ಉದ್ಯೋಗಿಯಾದ ಅಬೂಬಕರ್ ಸಿದ್ದಿಕ್ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ  ನೂರ್‌ಶ ಆರೋಪಿಯಾಗಿದ್ದಾನೆ.  ಇತ್ತೀಚೆಗೆ ಈತ ಹೈಕೋರ್ಟ್‌ನ …

ನೀರ್ಚಾಲು: ಬೈಕ್‌ನಲ್ಲಿ ತಲುಪಿದ ದುಷ್ಕರ್ಮಿ ಮಹಿಳೆಯ ಕುತ್ತಿಗೆಯಿಂದ ಎಗರಿಸಿದ್ದು ನಕಲಿ ಚಿನ್ನ!

ಬದಿಯಡ್ಕ: ಸ್ಕೂಟರ್‌ನಲ್ಲಿ ತಲುಪಿದ ವ್ಯಕ್ತಿಯೋರ್ವ ಪಾದಚಾರಿಯಾದ ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿದ್ದು, ಆದರೆ ಆ ಸರ ನಕಲಿ ಚಿನ್ನವಾಗಿದೆ! ನಿನ್ನೆ ಬೆಳಿಗ್ಗೆ ನೀರ್ಚಾಲು ಪೂವಾಳೆಯಲ್ಲಿ  ಘಟನೆ ನಡೆದಿದೆ.  ಪೂವಾಳೆಯ ಗಿರಿಜ (೬೮) ಎಂಬವರ ಕುತ್ತಿಗೆಯಿಂದ ಸರವನ್ನು ಎಗರಿಸಲಾಗಿದೆ. ಗಿರಿಜ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಹಿಂಭಾಗದಿಂದ ತಲುಪಿದ ದುಷ್ಕರ್ಮಿ ಮಾಲೆ ಎಗರಿಸಿ ಪರಾರಿಯಾಗಿದ್ದಾನೆ. ದುಷ್ಕರ್ಮಿ ಸರ ಎಗರಿಸುತ್ತಿದ್ದಾಗ ತಡೆದ ಗಿರಿಜರನ್ನು ದೂಡಿ ಹಾಕಿದ್ದು, ಇದರಿಂದ ಅವರ ಕಾಲಿಗೆ ಗಾಯಗಳಾಗಿವೆ. ಗಿರಿಜರ ಬೊಬ್ಬೆ ಕೇಳಿ …

ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಅಡ್ಯನಡ್ಕ: ಯುವತಿಯೋರ್ವೆ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೂಲತಃ ಪುತ್ತೂರು ಕಡಬ ನಿವಾಸಿ ಹಾಗೂ ಅಡ್ಯನಡ್ಕ ಚವರ್ಕಾಡ್‌ನಲ್ಲಿ ವಾಸಿಸುತ್ತಿರುವ ನರಸಿಂಹ ಭಟ್-ಸಾವಿತ್ರಿ ದಂಪತಿ ಪುತ್ರಿ ಹಾಗೂ ಭೀಮೇಶ್ ಎಂಬವರ ಪತ್ನಿ ವಿ. ವಿನುತ (೩೬) ಸಾವನ್ನಪ್ಪಿದ ಯುವತಿ. ಇವರು ನಿನ್ನೆ ಮಧ್ಯಾಹ್ನ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ.  ಮೃತರು ಮಕ್ಕಳಾದ ಸಿಂಚ ನಗಂಗಾ, ಸುಪ್ರಭಾ, ಸಹೋದರ ವಿನಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ತನಿಖೆ …

ಚಿನ್ನದೊಡವೆ ದರೋಡೆಗೈದ ಪ್ರಕರಣ: ಕುಖ್ಯಾತ ಆರೋಪಿಗೆ ೭ ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಗೃಹಿಣಿಯ ತಲೆಗೆ ಹೊಡೆದು ಪ್ರಜ್ಞಾಹೀನಗೊಳಿಸಿದ ಬಳಿಕ ಆಕೆಯ ದೇಹದಲ್ಲಿದ್ದ ಚಿನ್ನದೊಡವೆಗ ನ್ನು ದರೋಡೆಗೈದ ಪ್ರಕರಣದ ಕುಖ್ಯಾತ ಆರೋಪಿಗೆ ಹೊಸದುರ್ಗ ಅಸಿಸ್ಟೆಂಟ್ ಸೆಶನ್ಸ್ ನ್ಯಾಯಾಲಯ ೭ ವರ್ಷ ಸಜೆ ಮತ್ತು ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಹೊಸದುರ್ಗ ಮಡಿಕೈಯ ಕರುಕ್ಕವಳಪ್ಪಿನ್  ಅಶೋಕನ್ (೪೫) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ೨೦೨೨ ಮಾರ್ಚ್ ೯ರಂದು ಹಾಡಹಗಲೇ ಹೊಸದುರ್ಗ ಕಾಞರಪೊಯಿಲಿನ ಅನಿಲ್ ಕುಮಾರ್ ಎಂಬವರ ಮನೆಗೆ ನುಗ್ಗಿ ಅವರ ಪತ್ನಿ ಬಿಜಿತರ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿ, …

ವಯನಾಡಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ: ಅರಣ್ಯಪಾಲಕ ಬಲಿ; ಹರತಾಳ

ವಯನಾಡು: ವಯನಾಡಿನಲ್ಲಿ ಕಾಡಾನೆಗಳ ದಾಳಿ ಎಗ್ಗಿಲ್ಲದೆ ಈಗಲೂ ಮುಂದುವರಿಯುತ್ತಿದ್ದು, ಈ ಮಧ್ಯೆ ಕಾಡಾನೆಯೊಂದು ಅರಣ್ಯದ ವಾಚರ್ (ಕಾವಲುಗಾರ)ನನ್ನು ತುಳಿದು ಕೊಂದುಹಾಕಿದ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಕುರುವ ದ್ವೀಪ್ ಇಕೋ ಟೂರಿಸಂ ಕೇಂದ್ರದ ಗೈಡ್ ವಾಚರ್ ಪುಲ್‌ಪಳ್ಳಿ ಪಾಕಂ ವೆಳ್ಳಿಚ್ಚಾಲಿಲ್ ಪೋಲ್ (೫೨) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ಕಳೆದ ವಾರ ಕರ್ನಾಟಕ ಅರಣ್ಯ ದಿಂದ  ಕಾಡಾನೆಯೊಂದು ಜನವಾಸ ಕೇಂದ್ರಕ್ಕೆ ನುಗ್ಗಿ ವಯನಾಡು ಪಡಮಲ ಚಾಲಿಗದ್ದೆಯ ರೈತ ಅಜೀಶ್ ಎಂಬವರನ್ನು ತುಳಿದುಕೊಂದಿತ್ತು.  ಆ ಜಾಗದಿಂದ ಸುಮಾರು ೭ …

ಹೊಯ್ಗೆ ಸಾಗಾಟ: ಓರ್ವ ಸೆರೆ ; ಇನ್ನೋರ್ವ ಚಾಲಕ ವಾಹನ ಬಿಟ್ಟು ಪರಾರಿ

ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಾಟ ಮತ್ತೆ ತೀವ್ರಗೊಂ ಡಿದ್ದು, ಇದರ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ಬಿಗುಗೊಳಿಸಲಾಗಿದೆ. ನಿನ್ನೆ ಸಂಜೆ ಓಮ್ನಿ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಪತ್ವಾಡಿ ರಸ್ತೆಯಿಂದ ವಶಪಡಿಸ ಲಾಗಿದೆ. ಮಂಜೇಶ್ವರ ಎಸ್.ಐ  ಸುಮೇಶ್ ನೇತೃತ್ವದ ಪೊಲೀಸರು ಉಪ್ಪಳ ಪತ್ವಾಡಿ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ವಾಹನ ಆಗಮಿಸಿದೆ. ಆದರೆ ದೂರದಿಂದಲೇ ಪೊಲೀಸರನ್ನು ಕಂಡ ಚಾಲಕ ಓಮ್ನಿ ವ್ಯಾನ್ ಉಪೇಕ್ಷಿಸಿ ಓಡಿ ಪರಾರಿ ಯಾಗಿದ್ದಾನೆ. ವ್ಯಾನ್‌ನ್ನು ಪೊಲೀಸರು ಕಸ್ಟಡಿಗೆ ತೆಗೆದು ತಪಾಸಣೆ ನಡೆಸಿದಾಗ ಅದರೊಳಗೆ ೨೫ ಗೋಣಿ …