ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಕುಂಬಳೆ:  ಕಣಿಪುರ ಶ್ರೀ ಗೋ ಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ, ಶ್ರೀ ಮಹಾಗಣಪತಿ ಹಾಗೂ  ಶ್ರೀ ವನಶಾಸ್ತಾರ ದೇವರುಗಳ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋ ತ್ಸವಕ್ಕೆ ಇಂದು ಸಂಭ್ರಮದ ಚಾಲನೆ ದೊರಕಿದೆ. ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಉಗ್ರಾಣ ಮುಹೂರ್ತ ನಡೆಯಿತು. ಮಧ್ಯಾಹ್ನ ೧೨.೩೦ಕ್ಕೆ ಅನ್ನದಾಸೋಹಂ, ಸಂಜೆ ೫.೩೦ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರಿಗೆ ಪೂರ್ಣಕುಂ ಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ೬ಕ್ಕೆ ಹಸಿರು ಹೊರೆಕಾಣಿಕೆಯ ಶೋ ಭಾಯಾತ್ರೆ ಕುಂಬಳೆ ಕೃಷ್ಣ ನಗರದಿಂದ ಹೊರಡಲಿದೆ. ೬.೧೫ರಿಂದ …

‘ಮನೆಯಲ್ಲೇ ಕುಳಿತು ಸಂಪಾದಿಸಿ’ ಹೆಸರಲ್ಲಿ ಹಣ ಲಪಟಾವಣೆವ್ಯಾಪಕ: ಯುವತಿಯ ೧.೭೮ ಲಕ್ಷ ರೂ. ನಷ್ಟ

ಕಾಸರಗೋಡು: ಮನೆಯಲ್ಲೇ ಕುಳಿತು ಹಣ ಸಂಪಾದಿಸಿ  ಎಂಬ ರೀತಿಯ ಮೋಹಕ ವಾಗ್ದಾನಗಳನ್ನು ಸಾಮಾಜಿಕ ತಾಣಗಳಲ್ಲಿ ನೀಡಿ ಹಣ ಲಪಟಾಯಿಸುವ ಅಗೋಚರ ವಂಚನಾ ಜಾಲ ರಾಜ್ಯದಲ್ಲಿ ಇತ್ತೀಚೆಗಿನಿಂದ ಹೆಚ್ಚಾಗತೊಡಗಿದೆ. ಇಂತಹ ಮೋಹನ ವಾಗ್ದಾನಕ್ಕೆ ಬಿದ್ದು ಯುವತಿಯೋರ್ವೆ ೧.೭೮ ಲಕ್ಷ ರೂ.ವನ್ನು ಈ ವಂಚನಾ ಜಾಲದವರು ಲಪಟಾಯಿಸಿದ್ದಾರೆ. ಆ ಬಗ್ಗೆ ಆಕೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯಲ್ಲಿ ಕುಳಿತುಕೊಂಡೇ ದುಡ್ಡು ಸಂಪಾದಿಸಿರಿ ಎಂಬ ಆನ್‌ಲೈನ್ ಸಂದೇಶವೊ ಅಂದು ನನ್ನ ಮೊಬೈಲ್ ಫೋನ್‌ಗೆ ಮೊದಲು ಬಂದಿದೆ. ಇದಕ್ಕೆ ಮೊದಲು …

ಲೋಕಸಭಾ ಚುನಾವಣೆ: ಸಿಪಿಎಂ ಉಮೇದ್ವಾರರ ಯಾದಿ ಅಂತಿಮ ಹಂತದಲ್ಲಿ ಕಾಸರಗೋಡಿನಲ್ಲಿ  ಎಂ.ವಿ. ಬಾಲಕೃಷ್ಣನ್, ?ಟಿ.ವಿ. ರಾಜೇಶ್ ಪರಿಗಣನೆಯಲ್ಲಿ

ಕಾಸರಗೋಡು:   ಲೋಕಸಭಾ ಚುನಾವಣೆ ಎಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಲಿರುವಂ ತೆಯೇ ಅದರಲ್ಲಿ ಸ್ಪರ್ಧಿಸುವ ಸಿಪಿಎಂ ಉಮೇದ್ವಾರರ ಯಾದಿ ಈಗ ಅಂತಿಮ ಹಂತದಲ್ಲಿದೆ. ಇದರಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್ ಮತ್ತು  ಶಾಸಕ ಟಿ.ವಿ. ರಾಜೇಶ್ ಅವರ ಹೆಸರು ಪರಿಗಣನೆಯಲ್ಲಿದೆ. ಉಳಿದಂತೆ  ವಡಗರೆಯಲ್ಲಿ  ಮಾಜಿ ಸಚಿವೆ ಕೆ.ಕೆ. ಶೈಲಜಾ ಅವರನ್ನು ಕಣಕ್ಕಿಳಿಸುವುದು  ಬಹುತೇಕ ಈಗಾಗಲೇ ಖಚಿತಗೊಂಡಂತಾಗಿದೆ.  ಕೇರಳದ  ಒಟ್ಟು ೨೦ ಲೋಕಸಭಾ ಕ್ಷೇತ್ರಗಳ ಪೈಕಿ ೧೫ರಲ್ಲಿ ಸಿಪಿಎಂ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳನ್ನು ಎಡರಂಗದ …

ಕುಂಬ್ಡಾಜೆ ಪಂ.ನಲ್ಲಿ ಬಿಜೆಪಿ ಪ್ರತಿಭಟನೆ

ಕುಂಬ್ಡಾಜೆ: ಪಂಚಾಯತ್ ದುರಾಡಳಿತ ಹಾಗೂ ಅಂಗನವಾಡಿ ಸಹಾಯಕ ನೇಮಕಾತಿಯಲ್ಲಿ ಬಿಜೆಪಿಯನ್ನು ಅವಗಣಿಸುವ ಐಕ್ಯರಂಗ, ಸಿಪಿಐ ಆಡಳಿತ ಸಮಿತಿ ವಿರುದ್ಧ ಪಂಚಾಯತ್‌ನಲ್ಲಿ ಇಂದು ಬೆಳಿಗ್ಗೆ ತುರ್ತು ಪ್ರತಿಭಟನೆ ನಡೆಸ ಲಾಯಿತು. ಬಿಜೆಪಿ ಪಂ. ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಮಂಡಲ ಕಾರ್ಯ ದರ್ಶಿ ರವೀಂದ್ರ ರೈ ಗೋಸಾಡ, ಜಿ.ಪಂ. ಸದಸ್ಯೆ ಶೈಲಜಾ ಭಟ್,ಕೃಷ್ಣ ಶರ್ಮಾ ಜಿ, ಬ್ಲಾಕ್ ಪಂ. ಸದಸ್ಯೆ ಯಶೋದಾ ಎನ್, ನಳಿನಿಕೃಷ್ಣ, ವಾರ್ಡ್  ಪ್ರತಿನಿಧಿಗಳಾದ ಸುಂದರ ಮವ್ವಾರು,ಸುನಿತಾ ಜಿ. ರೈ, …

ಯುವಕ ಮನೆಯೊಳಗೆ ನೇಣು ಬಿಗಿದು ಸಾವು

ಮುಳ್ಳೇರಿಯ: ಯುವಕನೋ ರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ನೆಟ್ಟಣಿಗೆ ಬಳಿಯ ಪಾದೆಗದ್ದೆ ನಿವಾಸಿ ರಾಮ ನಾಯ್ಕ ಎಂಬವರ ಪುತ್ರ ಬಾಲಕೃಷ್ಣ (೪೪) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ೪ ಗಂಟೆ ವೇಳೆ ಬಾಲಕೃಷ್ಣ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆನ್ನಲಾಗಿದೆ. ಅವಿವಾಹಿತನಾದ ಇವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕನಾಗಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಮೃತರು ತಂದೆ, ತಾಯಿ ಸರೋಜಿನಿ, ಸಹೋದರ- ಸಹೋದರಿಯರಾದ ಜನಾರ್ದನ, ಜಯಂತಿ, …

ಹಾನಿಗೀಡಾದ ಕೊಳವೆಬಾವಿ ದುರಸ್ತಿಗೆ ಕ್ರಮವಿಲ್ಲ : ಮಂಗಲ್ಪಾಡಿ ಪ್ರತಾಪನಗರದಲ್ಲಿ ನೀರಿನ ಸಮಸ್ಯೆ

ಉಪ್ಪಳ: ಬೇಸಿಗೆ ಕಾಲದ ಉಷ್ಣತೆ ಎಂದಿನಂತೆ ಈ ವರ್ಷವೂ ಹೆಚ್ಚತೊಡಗಿದೆ. ಇದರ ಪರಿಣಾಮ ಜಲಮೂಲಗಳೆಲ್ಲಾ ಬತ್ತತೊಡಗಿದೆ. ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಬತ್ತಲಾರಂಭಿಸುವು ದರೊಂದಿಗೆ ನೀರಿನ ಕ್ಷಾಮ ಎಲ್ಲೆಡೆ ಕಾಣಿಸತೊಡಗಿದೆ. ಇದೇ ವೇಳೆ ಕೆಲವೆಡೆ ಧಾರಾಳ ನೀರು ಲಭಿಸುತ್ತಿದ್ದು ಸಾರ್ವಜನಿಕ ಬಾವಿ, ಕೊಳವೆ ಬಾವಿಗಳಿದ್ದರೂ ಅವುಗಳು ಹಾನಿಗೀಡಾಗಿದೆ. ಆದರೆ ಅವುಗಳನ್ನು  ದುರಸ್ತಿಗೊಳಿಸದ ಕಾರಣ ನೀರಿನ ಸಮಸ್ಯೆ ತೀವ್ರಗೊಂಡಿದೆ. ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ ೭ನೇ ವಾರ್ಡ್ ವ್ಯಾಪ್ತಿಯ ಶಿವಶಕ್ತಿ ಮೈದಾನ ಬಳಿ ಸಾರ್ವಜನಿಕ ಕೊಳವೆ ಬಾವಿಯೊಂದಿದೆ. ಆರಂಭದಲ್ಲಿ …

ಹತ್ತನೇ ತರಗತಿ ವಿದ್ಯಾರ್ಥಿಯನ್ನು ದೂಡಿ ಹಾಕಿದ ಘಟನೆ: ಆರು ಮಂದಿ ಸಹಪಾಠಿಗಳ ವಿರುದ್ಧ ಕೇಸು

ಕಾಸರಗೋಡು: ಶಾಲೆ ಬಿಟ್ಟು ಮನೆಗೆ ನಡೆದು ಹೋಗುತ್ತಿದ್ದ ಹತ್ತನೇ  ತರಗತಿ ವಿದ್ಯಾರ್ಥಿಯನ್ನು ದೂಡಿ ಹಾಕಿ ಗಂಭೀರ ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಸಹಪಾಠಿಗಳಾದ ಆರು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿ ಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರ ವಿದ್ಯಾರ್ಥಿಯನ್ನು ದೂಡಿ ಹಾಕಿ ಗಾಯಗೊಳಿಸಲಾಗಿದೆ. ಬಾಲಕ ತರಗತಿ ಮುಗಿದು ಮನೆಗೆ ನಡೆದು ಹೋಗುತ್ತಿದ್ದನು. ಈ ವೇಳೆ ಆತನನ್ನು ಹಿಂಬಾಲಿಸಿ ಬಂದ ವಿದ್ಯಾ ರ್ಥಿ ದೂಡಿ ಹಾಕಿರುವುದಾಗಿ ದೂರಲಾ ಗಿದೆ. ಆದರೆ ಈ …

ಪೈಂಟ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ: ೧೧ ಮಂದಿ ಸಜೀವದಹನ

ನವದೆಹಲಿ: ದೆಹಲಿಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿ ದ್ದು, ೧೧ ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ದೆಹಲಿ ಆಲಿಪುರ ಮುಖ್ಯ ಮಾರುಕಟ್ಟೆಯಲ್ಲಿರುವ ಪೈಂಟ್ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ. ಇದರಲ್ಲಿ ೧೧ ಮಂದಿ ಸಜೀವ ದಹನಗೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ಕು ಮಂದಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ.  ಈ ಫ್ಯಾಕ್ಟರಿಯಲ್ಲಿ ಮೊದಲು  ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡು, ಬಳಿಕ ಅದು ಇಡೀ ಫ್ಯಾಕ್ಟರಿಗೆ ಆವರಿಸಿದೆ. ಪೈಂಟ್‌ಗೆ ಬಳಸುವ ಯಾವುದೋ ಕೆಮಿಕಲ್‌ನಿಂದ ಬೆಂಕಿ ಎದ್ದಿರಬಹುದೆಂದು ಶಂಕಿಸಲಾಗುತ್ತಿದೆ. ತಕ್ಷಣ ಅದು ಇಡೀ …

೪೩.೩೮ ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ನಗರದ ನುಳ್ಳಿಪ್ಪಾಡಿಯಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೪೩.೩೮ ಲೀಟರ್ (೧೮೦ ಎಂಎಲ್‌ನ ೨೪೧ ಬಾಟಲಿ) ಮದ್ಯ ವಶಪಡಿಸಲಾಗಿದೆ. ಈ ಸಂಬಂಧ ನುಳ್ಳಿಪ್ಪಾಡಿಯ ಬಾಬು ಪೂಜಾರಿ (೫೮) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬಂಧಿತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ ಶಿಜು ಇ.ಟಿ.ಯವರ ನೇತೃತ್ವದಲ್ಲಿ ಸಿಇಒಗಳಾದ ರಾಜೇಶ್ ಪಿ, ಮುರಳೀಧರನ್ ಮತ್ತು ಪ್ರಸೀಲಾ ಎಂಬವರನ್ನೊಳಗೊಂಡ ತಂಡ ಈ ಅಬಕಾರಿ ಕಾರ್ಯಾಚರಣೆ ನಡೆಸಿ ಮಾಲು ಸಹಿತ …

ಬದಿಯಡ್ಕ ಪೇಟೆಯಲ್ಲಿ ಆಟೋ ನಿಲ್ದಾಣ, ಸಾರ್ವಜನಿಕ ಸಭೆ ನಡೆಯುವ ಸ್ಥಳದಲ್ಲಿ ಬಸ್ ಶೆಲ್ಟರ್ ನಿರ್ಮಾಣ: ಸಿಐಟಿಯು ಕಾರ್ಮಿಕರಿಂದ ತಡೆ

ಬದಿಯಡ್ಕ: ಪೇಟೆಯಲ್ಲಿ ಆಟೋ ನಿಲ್ದಾಣ, ಸಾರ್ವಜನಿಕ ಸಭೆಗಳು ನಡೆಯುವ ಸ್ಥಳವನ್ನು ಇಲ್ಲದಂತೆ ಮಾಡಿ ಬಸ್ ತಂಗುದಾಣ ನಿರ್ಮಿಸುವ ಕ್ರಮವನ್ನು ಸಿಐಟಿಯು ಆಟೋ ಕಾರ್ಮಿಕರು ಹಾಗೂ ಸ್ಥಳೀಯರು ತಡೆದರು. ಪೇಟೆಯ ಅಭಿವೃದ್ಧಿಗೆ ಸಂಬಂಧಿಸಿ ಸರ್ವಪಕ್ಷ ಮುಖಂಡರು, ಸಂಬಂಧಪಟ್ಟ ಅಧಿಕಾರಿಗಳು ಸೇರಿ ಈ ಮೊದಲು ಕುಂಬಳೆ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಬಸ್ ಕಾಯುವಿಕೆಗಾಗಿ ಕೇಂದ್ರ ನಿರ್ಮಿ ಸಲು ಕಂಡುಕೊಂಡ ಸ್ಥಳವನ್ನು ತಿರಸ್ಕರಿಸಿ ಪಂಚಾಯತ್ ಆಡಳಿತ  ಸಮಿತಿಯ ಕೆಲವರ ಸ್ವ-ಹಿತಾಸಕ್ತಿ ಕಾರ್ಯಗತಗೊಳಿಸಲು ನಡೆಸಿದ ಯತ್ನ ಪ್ರತಿಭಟನೆಗೆ ಹೇತುವಾಗಿದೆ. ನವೀಕರಿಸಿದ ಕುಂಬಳೆ-ಬದಿಯಡ್ಕ- ಮುಳ್ಳೇರಿಯ …