ಕುಡಿಯುವ ನೀರು, ವಸತಿ ಸಮಸ್ಯೆಗೆ ಆದ್ಯತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ೧೦ ಲಕ್ಷ ರೂ. ಮೀಸಲಿಟ್ಟ ಬದಿಯಡ್ಕ ಪಂ. ಬಜೆಟ್
ಬದಿಯಡ್ಕ: ಪಂಚಾಯತ್‌ನ ೨೦೨೪-೨೫ನೇ ಆರ್ಥಿಕ ವರ್ಷದ ಬಜೆಟ್ ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್ ಮಂಡಿಸಿದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರ, ವಸತಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುವ ೨೫,೩೮,೬೯,೭೨೫ ರೂ. ಆದಾಯ, ೨೫,೩೨,೧೯,೭೨೫ ರೂ. ವೆಚ್ಚದ ೩೮,೬೫,೦೮೧ ರೂ. ಮೀಸಲು ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ. ಕಡು ಬಡತನ ಯಾದಿಯಲ್ಲಿರುವ ಎಲ್ಲಾ ವಸತಿ ರಹಿತರಿಗೂ ಮನೆ ನೀಡುವುದಕ್ಕೆ ಮೊತ್ತ ಮೀಸಲಿಡಲಾಗಿದೆ. ಬದಿಯಡ್ಕ ಪಂ. ಬಸ್ ನಿಲ್ದಾಣ ನಿರ್ಮಾಣಕ್ಕೆ ೧೦ ಲಕ್ಷ ರೂ., ಬೋಳುಕಟ್ಟೆ ಇಂಡೋರ್ ಸ್ಟೇಡಿಯಂ ದುರಸ್ತಿಗಾಗಿ ೧೦ …