ವ್ಯಾಪಾರಿಗಳ ಮುಷ್ಕರ ಜಿಲ್ಲೆಯಲ್ಲಿ ಪೂರ್ಣ

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ವ್ಯಾಪಾರಿಗಳು ನಿನ್ನೆ ನಡೆಸಿದ ಸೆಕ್ರೆಟರಿಯೇಟ್ ಮಾರ್ಚ್‌ನಂಗವಾಗಿ  ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕರೆ ನೀಡಿದ ಮುಷ್ಕರ ಪೂರ್ಣವಾಗಿತ್ತು.  ಹೋಟೆಲ್‌ಗಳ ಸಹಿತ ಜಿಲ್ಲೆಯ ಸಾವಿರಾರು ವ್ಯಾಪಾರಸಂಸ್ಥೆಗಳನ್ನು ನಿನ್ನೆ ಮುಚ್ಚುಗಡೆಗೊಳಿಸಿ ಸರಕಾರಕ್ಕೆ ತಮ್ಮ ಪ್ರತಿಭಟನೆಯನ್ನು ತಿಳಿಸಲಾಗಿದೆ. ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಕಾಸರಗೋಡಿನಿಂದ ಆರಂಭಿಸಿದ ಸಂರಕ್ಷಣಾ ಯಾತ್ರೆಯ ಸಮಾರೋಪ ದಂಗವಾಗಿ ಸೆಕ್ರೆಟರಿಯೇಟ್  ಮಾರ್ಚ್ ನಡೆಸಲಾಗಿದೆ. ೫ ಲಕ್ಷ ಮಂದಿಯ ಸಹಿ ಒಳಗೊಂಡ  ವ್ಯಾಪಾರಿಗಳ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಕಲ್ಲಕಟ್ಟದಲ್ಲಿ ಅಬಕಾರಿ ಕಾರ್ಯಾಚರಣೆ: ೭೫೦ ಬಾಟಲಿ ಗೋವಾ ಮದ್ಯ ವಶ

ಕಾಸರಗೋಡು: ಮಧೂರು ಕಲ್ಲಕಟ್ಟದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಎಂಎಲ್‌ನ ೭೫೦ ಬಾಟಲಿ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಕಲ್ಲಕಟ್ಟೆಯ ಗೋವಿಂದನ್  ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಷನರ್ ನೂರುದ್ದೀನ್ ಎಚ್.ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ರೇಂಜ್‌ನ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ. ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಪಿ.ಒ. ಉಣ್ಣಿಕೃಷ್ಣನ್, ರಾಮ, ಸಿಇಒಗಳಾದ ಶರತ್, ಕಣ್ಣನ್ ಕುಂಞಿ, ಫಸೀಲ ಎಂಬವರು …

ಕಾಸರಗೋಡು-ತಿರುವನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರಲಿದೆ ೧೧ ಹೊಸ ಟೋಲ್ ಕೇಂದ್ರಗಳು: ಟೋಲ್ ಶುಲ್ಕ ೯೧೭ ರೂ.

ಕಾಸರಗೋಡು: ಜಿಲ್ಲೆಯ ತಲಪಾಡಿಯಿಂದ  ಆರಂಭಗೊಂಡು ತಿರುವನಂತಪುರದ ಕಾರೋಟ್ ತನಕದ ೬೪೫ ಕಿಲೋ ಮೀಟರ್‌ನಷ್ಟಿರುವ ರಾಷ್ಟ್ರೀಯ ಹೆದ್ದಾರಿ ೬೬ ಅಭಿವೃದ್ಧಿ ಯೋಜನೆ ಪೂರ್ಣಗೊಳ್ಳುವ ವೇಳೆ ವಿವಿಧೆಡೆಗಳಲ್ಲಾಗಿ  ಒಟ್ಟು ೧೧ ಹೊಸ ಟೋಲ್ ಕೇಂದ್ರಗಳು ಸ್ಥಾಪಿಸಲ್ಪ ಡಲಿದೆ. ಇದರಂತೆ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ತೃಶೂರು, ಎರ್ನಾಕುಳಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ತಲಾ ಒಂದರಂ ತೆಯೂ, ಕೊಲ್ಲಂ ಮತ್ತು ತಿರುವನಂ ತಪುರ ಜಿಲ್ಲೆಗಳಲ್ಲಿ ತಲಾ ಎರಡರಂತೆ ಟೋಲ್ ಕೇಂದ್ರಗಳು ಆರಂಭಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಿರ್ಮಾಣ ಕೆಲಸ ಪೂರ್ಣಗೊಂಡ …

ಲೋಕಸಭೆ ಚುನಾವಣೆಗೆ ಮುಂಚಿತ ವರ್ಕಾಡಿ ಪಂ.ನಲ್ಲಿ ಸಹಕಾರಿ ಚುನಾವಣೆ ಕಾವು

ಮಂಜೇಶ್ವರ: ಪಾರ್ಲಿಮೆಂಟ್ ಚುನಾವಣೆಗಾಗಿ ರಾಜಕೀಯ ರಂಗ ಬಿಸಿಯಾಗುತ್ತಿರುವಂತೆ ರಾಜ್ಯದ ಉತ್ತರ ಭಾಗದಲ್ಲಿರುವ ಕೊಡ್ಲಮೊಗರು- ಪಾತೂರಿನಲ್ಲಿ ಚುನಾವಣೆಯ ಕಾವು ಇಮ್ಮಡಿಯಾಗಿದೆ. ೧೮ರಂದು ನಡೆಯುವ ವರ್ಕಾಡಿ ಪಂಚಾಯತ್‌ನ ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ ಈ ಪ್ರದೇಶದಲ್ಲಿ ಕಾವು ಏರಿಸಿದೆ. ಸೊಸೈಟಿಯಲ್ಲಿ ೧೧ ಮಂದಿ ನಿರ್ದೇಶಕರಿದ್ದಾರೆ. ಎಡರಂಗ ಒಗ್ಗಟ್ಟಿನಿಂದ ಇಲ್ಲಿ ಚುನಾವಣೆ ಎದುರಿಸಲಿದೆ ಎಂದು ದೀರ್ಘಕಾಲದಿಂದ ಆಡಳಿತ ನಡೆಸುವ ಸಿಪಿಎಂ ಹಕ್ಕು ಮಂಡಿಸುತ್ತಿದೆಯಾದರೂ ಆ ಪ್ಯಾನಲ್‌ನಲ್ಲಿ ೧೧ ಮಂದಿ ಕೂಡಾ ಸಿಪಿಎಂ ಕಾರ್ಯಕರ್ತರಾಗಿದ್ದಾರೆ. ನಷ್ಟದಲ್ಲಿ ಮುಂದೆ ಸಾಗುತ್ತಿರುವ ಬ್ಯಾಂಕ್‌ಗೆ …

ಮಾದಕ ಗುಂಡು ಹಾರಿಸಿ ಸೆರೆ ಹಿಡಿಯಲಾದ ಹುಲಿ ಸಾವು

ಕಣ್ಣೂರು: ಕಣ್ಣೂರು ಕೊಟ್ಟಿಯೂರಿನಲ್ಲಿ ಕಂಡು ಬಂದು ಬಳಿಕ ಮಾದಕ ಗುಂಡು ಹಾರಿಸಿ ಸೆರೆ ಹಿಡಿಯಲ್ಪಟ್ಟ ಹುಲಿ ಸಾವನ್ನಪ್ಪಿದೆ. ಇದು ಸುಮಾರು ಹತ್ತು ವರ್ಷ ಪ್ರಾಯಗ ಗಂಡು ಹುಲಿಯಾಗಿದೆ. ನಿನ್ನೆ ಮುಂಜಾನೆ ೪ ಗಂಟೆಗೆ ಸ್ಥಳೀಯ ಟಾಪಿಂಗ್ ಕಾರ್ಮಿಕ ರೋರ್ವರು ಟಾಪಿಂಗ್ ಕೆಲಸಕ್ಕಾಗಿ ಕೊಟ್ಟಿಯೂರು ಪನ್ನಿಯಾರಮಲೆ ಮಿಲ್‌ನ ರಬ್ಬರ್ ತೋಟಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ವೇಳೆ, ಅಲ್ಲೇ ಪಕ್ಕದ ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲ ಕಬ್ಬಿಣದ ಬೇಲಿಯಲ್ಲಿ ಸಿಲುಕಿ ಹುಲಿ ಪ್ರಾಣವೇದನೆಯಿಂದ ನರಳಾಡುತ್ತಿರುವುದನ್ನು ಕಂಡಿದ್ದಾರೆ. ಅದರಂತೆ ನೀಡಲಾದ ಮಾಹಿತಿಯಂತೆ ವಯನಾಡಿನಿಂದ ಆಗಮಿಸಿದ್ದ …

ಕಣಿಪುರ ಕ್ಷೇತ್ರ ಬ್ರಹ್ಮಕಲಶ: ಕುಂಬಳೆಯಲ್ಲಿ ‘ಪಿಲಿರಂಗ್’ ಸಂಭ್ರಮಕ್ಕೆ ಇಂದು ಚಾಲನೆ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂಭ್ರಮದಂಗವಾಗಿ ಜಿ.ಕೆ. ಟೈಗರ್ಸ್ ಕುಂಬಳೆ ಆಯೋಜಿಸಿರುವ ‘ಪಿಲಿರಂಗ್’ ಹುಲಿ ಕುಣಿತದ ಅಭಿಯಾನಕ್ಕೆ ಇಂದು ನಾಂದಿಯಾಗಲಿದೆ. ಇಂದು ರಾತ್ರಿ ೭.೩೦ಕ್ಕೆ ಜಯಮಾರುತಿ ವ್ಯಾಯಾಮಶಾಲೆಯಲ್ಲಿ ಊದು ಪೂಜೆ ನಡೆದು ಆರಂಭವಾಗುವ ಹುಲಿ ಕುಣಿತದ ವೈಭವದಲ್ಲಿ ೫೦ರಷ್ಟು ನುರಿತ, ಉದಯೋನ್ಮುಖ ಹುಲಿವೇಷಧಾರಿಗಳು ಪಾಲ್ಗೊಳ್ಳುವರು. ನಾಳೆ, ೧೬ರಂದು ಪೇಟೆ ಪರಿಸರದ ಆಯ್ದ ಕೇಂದ್ರ, ಮನೆಗಳಲ್ಲಿ ಹುಲಿ ಕುಣಿತ ಪ್ರದರ್ಶನದೊಂದಿಗೆ ಬ್ರಹ್ಮಕಲಶ ಪ್ರಚಾರ ನಡೆಯಲಿದೆ. ೧೬ರಂದು ಸಂಜೆ ಕೃಷ್ಣನಗರದಿಂದ ಆಗಮಿಸುವ ಬೃಹತ್ ಹೊರೆ ಕಾಣಿಕೆ ಮೆರವಣಿಗೆಯೊಂದಿಗೆ …

‘ಭಾರತ್ ಅಕ್ಕಿ’ ಈ ವಾರದಿಂದ ಎಲ್ಲಾ ಜಿಲ್ಲೆಗಳಲ್ಲೂ ವಿತರಣೆ ಆರಂಭ

ಕಾಸರಗೋಡು: ಬೆಲೆಯೇರಿಕೆ ಯಿಂದ ತತ್ತರಿಸುತ್ತಿರುವ ಜನತೆಗೆ ನೆಮ್ಮದಿ ನೀಡಲು ಕೇಂದ್ರ ಸರಕಾರ ಕಿಲೋ ಒಂದಕ್ಕೆ ೨೯ ರೂ. ದರದಲ್ಲಿ ಮಾರಾಟ ಮಾಡಲಾರಂಭಿಸಿರುವ ‘ಭಾರತ್ ಅಕ್ಕಿ’ಯ ವಿತರಣೆ ಈ ವಾರದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆರಂಭಗೊಳ್ಳಲಿದೆ. ಇದಕ್ಕಾಗಿ ಕಾಲಡಿಯಲ್ಲಿರುವ ನ್ಯಾಷನಲ್ ಕೋಪರೇಟಿವ್ ಕನ್ಸೂಮರ್ ಫೆಡರೇಶನ್ (ಎನ್‌ಸಿಪಿಎಫ್) ದಾಸ್ತಾನು ಕೇಂದ್ರಕ್ಕೆ ಈಗಾಗಲೇ ೧೦,೦೦೦ ಟನ್ ಅಕ್ಕಿ ಬಂದು ಸೇರಿದೆ. ಅಲ್ಲಿಂದ ಈ ಅಕ್ಕಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪೂರೈಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಭಾರತ್ ಬ್ರಾಂಡ್ ಅಕ್ಕಿಯ ರಾಜ್ಯ ಮಟ್ಟದ ವಿತರಣೆಯ …

ದಾರಿಮಧ್ಯೆ ಅಸ್ವಸ್ಥಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನ

ಉಪ್ಪಳ: ನಡೆದು ಹೋಗುತ್ತಿದ್ದಾಗ ದಾರಿ ಮಧ್ಯೆ ಅಸ್ವÀಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾದ ವ್ಯಕ್ತಿ ಮೃತಪಟ್ಟಿದ್ದಾರೆ. ತಲಪಾಡಿ ನಾರ್ಲಪಡೀಲ್ ನಿವಾಸಿ ಸಿಪಿಎಂ ಕಾರ್ಯಕರ್ತ ನಾರಾಯಣ [65] ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ಸುಮಾರು 9ಗಂಟೆ ವೇಳೆ ಐಲ ಮೈದಾನ ಬಳಿಯ ಸ್ನೇಹಿತರಾದ ವ್ಯಕ್ತಿಯೋರ್ವರ ಮನೆಗೆ ತೆರಳಿದ್ದರು. ಅಲ್ಲಿಂದ ಮನೆ ಕಡೆ ಬಸ್‌ಗೆ ತೆರಳಲು ಐಲ ಮೈದಾನ ದಾರಿಯಾಗಿ ನಯಬಜಾರ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಅಸ್ವಸ್ಥಗೆÆಂಡಿದ್ದಾರೆ. ಕೂಡಲೇ ಯುವಕನೋರ್ವ ಇವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ …

ಮುಹಿಮ್ಮಾತ್‌ನಲ್ಲಿ ತ್ವಾಹಿರ್ ತಂಙಳ್ ಉರೂಸ್ ನಾಳೆಯಿಂದ

ಕಾಸರಗೋಡು: ಮುಹಿಮ್ಮಾತ್ ಸ್ಥಾಪಕ ಹಾಗೂ ಖ್ಯಾತ ಆಧ್ಯಾತ್ಮಿಕ ವಿದ್ವಾಂಸರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್‌ರ ೧೮ನೇ ಉರೂಸ್ ಮುಬಾರಕ್ ಮತ್ತು ಮುಹಿಮ್ಮಾತ್ ಸನದ್ ದಾನ ಮಹಾ ಸಮ್ಮೇಳನ ಫೆ. ೧೫ರಿಂದ ೧೮ರವರೆಗೆ ಮುಹಿಮ್ಮಾತ್‌ನಲ್ಲಿ ನಡೆಯಲಿದೆ. ನಾಳೆ ಮುಹಿಮ್ಮಾತ್ ಸನದ್ ದಾನ ಸಮಾರಂಭ, ೧೮ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ. ಉರೂಸ್ ಅಂಗವಾಗಿ -ಝಿಯಾರತ್, ದೌರತುಲ್ ಕುರಾನ್, ಧಾರ್ಮಿಕ ಪ್ರವಚನ, ರಾತೀಬ್, ತಮಿಳು ಸಮ್ಮೇಳನ, ಸ್ವಲಾತ್ ಮಜ್ಲಿಸ್ ಮೊದಲಾದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಾಲ್ಕು ದಿನಗಳ ಕಾಲ ನಡೆಯುವ …

ಪೆರ್ಮುದೆ ಶಾಲಾ ವಾರ್ಷಿಕೋತ್ಸವ ನಾಳೆ

ಕುಂಬಳೆ: ಪೆರ್ಮುದೆ ಬಿಪಿಪಿ ಎಎಲ್‌ಪಿ ಶಾಲಾ ವಾರ್ಷಿಕೋತ್ಸವ ನಾಳೆ ಸಂಜೆ 5.30ಕ್ಕೆ ವಿವಿಧ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 5.30ಕ್ಕೆ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ರಾತ್ರಿ 7 ಗಂಟೆಗೆ ಸಭೆ ನಡೆಯಲಿದ್ದು ಶಾಸಕ ಎ. ಕೆ. ಎಂ. ಅಶ್ರಫ್ ಉದ್ಘಾಟಿಸುವರು. ಶಾಲಾ ಪ್ರಬಂಧಕ ಇ. ರವಿಶಂಕರ ಭಟ್ ಅಧ್ಯಕ್ಷತೆ ವಹಿಸುವರು. ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ ಕೆ., ಸದಸ್ಯೆ ಇರ್ಶಾನ ಇಸ್ಮಾಯಿಲ್, ಮಂಜೇಶ್ವರ ಉಪಜಿಲ್ಲಾ ವಿದ್ಯಾದಿsಕಾsರಿ ಕೃಷ್ಣಮೂರ್ತಿ ಎಂ. ಎಸ್., ಮಂಜೇಶ್ವರ ಬಿಆರ್‌ಸಿಯ ಬಿಪಿಸಿ ವಿಜಯ …