ಶ್ರೀ ಚಂಡಿಕಾಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಗುಳಿಗನ ಕೋಲ

ಕಾಸರಗೋಡು: ನೆಲ್ಲಿಕುಂಜೆ ಶಾಂತದುರ್ಗಾಂಬಾ ರಸ್ತೆ ಬಳಿಯ ಶ್ರೀ ಚಂಡಿಕಾ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ನಾಳೆಯಿಂದ ಆರಂಭಗೊಂಡು ಫೆ.೧೭ರ ತನಕ ಮುಂದುವರಿಯುವ ವಾರ್ಷಿ ಕೋತ್ಸವ, ಮಂಗಲ ಮಹೋತ್ಸವ ಹಾಗೂ ಚೆಂಗುರುತಿ ಸಮರ್ಪಣಾ ಕಾರ್ಯಕ್ರಮ ದಂಗವಾಗಿ ಶ್ರೀ ಕ್ಷೇತ್ರದಲ್ಲಿ  ನಾಳೆ ಬೆಳಿಗ್ಗೆ ೧೧ ಗಂಟೆ ಯಿಂದ ಗುಳಿಗನ ಕೋಲ ನಡೆಯಲಿದೆ. ವಾರ್ಷಿಕೋತ್ಸವದಂಗವಾಗಿ ಶುಕ್ರವಾರ ಬೆಳಿಗ್ಗೆ ೯ಕ್ಕೆ ಸ್ವಯಂವರ ಹೋಮ, ಬಳಿಕ ಸಂಪತ್ ಸಂವೃದ್ಧಿಗಾಗಿ ಪ್ರಾರ್ಥಿಸಿ ನಡೆಸುವ ವಿಶೇಷ ಆಚರಣೆಯಾದ ಸುವರ್ಣ ಕುಂಕುಮಾರ್ಚನೆಯೂ ನಡೆಯಲಿದೆ. ಫೆ.೧೭ರಂದು ಬೆಳಿಗ್ಗೆ ೧೦ಕ್ಕೆ ಅಭೀಷ್ಠ ಕಾರ್ಯಸಿದ್ದಿಗಾಗಿ ಶ್ರೀ …

ಬದಿಯಡ್ಕದಲ್ಲಿ ಜೋಗಿ ಸಮಾಜ ಭವನ ಉದ್ಘಾಟನೆ

ಬದಿಯಡ್ಕ: ಕಾಸರಗೋಡು ಜೋಗಿ ಸಮಾಜ ಸುಧಾರಕ ಸಂಘದ ನೂತನ ಜೋಗಿ ಸಮಾಜಭವನದ ಉದ್ಘಾಟನೆ ಬದಿಯಡ್ಕ ಸಮೀಪದ ಮೂಕಂಪಾರೆಯಲ್ಲಿ ಜರಗಿತು. 1008 ಮಠಾದಿsÃಶ ಶ್ರೀ ರಾಜಗುರು ಶ್ರದ್ಧಾನಾಥ್ ಜೀ ಮಹಾರಾಜ್ ಶ್ರೀ ಯೋಗೀಶ್ವರ ಮಠ ವಿಟ್ಲ ಲೋಕಾ ರ್ಪಣೆಗೊಳಿಸಿದರು. ಸಭಾ ಕಾರ್ಯ ಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಂಘಟನೆಯ ಸ್ಮರಣಸಂಚಿಕೆಯನ್ನು ಅವÀರು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಗೋಪಾಲ ಕೆ. ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಭವಾನಿಶಂಕರ, ಡಾ| ಕೇಶವನಾಥ್ ಮಂಗಳೂರು, …

ವಿದ್ಯುತ್ ದೀಪ, ಅಲಂಕಾರಗಳಿಂದ ಕಂಗೊಳಿಸುತ್ತಿರುವ ಕುಂಬಳೆ ಪೇಟೆ

ಕುಂಬಳೆ: ಈ ತಿಂಗಳ ೧೬ರಿಂದ ೨೯ರವರೆಗೆ ನಡೆಯಲಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುನಃ ಪ್ರತಿಷ್ಠೆ ಮತ್ತು ವಾರ್ಷಿಕ ಜಾತ್ರೆಯ ಅಂಗವಾಗಿ ಕುಂಬಳೆ ಪೇಟೆಯನ್ನು ವಿದ್ಯುತ್ ದೀಪ, ಅಲಂಕಾರಗಳಿಂದ ಶೃಂಗರಿಸಲಾಗಿದೆ. ಕುಂಬಳೆ ಪೇಟೆಯಿಂದ ಭಾಸ್ಕರನಗರವರೆಗೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಿನಗರ ಹಾಗೂ ಆರಿಕ್ಕಾಡಿವರೆಗೂ, ಒಳ ಪ್ರದೇಶಗಳಲ್ಲೂ ಅಲಂಕರಿಸಲಾಗಿದೆ.

ಪಟಾಕಿ ತಯಾರಿ ಕೇಂದ್ರಕ್ಕೆ ಪೊಲೀಸ್ ದಾಳಿ

ಕುಂಬಳೆ: ಕಿದೂರು ಅರ್ತಿಲದಲ್ಲಿ ಕಾರ್ಯಾಚರಿಸುವ ಪಟಾಕಿ ತಯಾರಿ ಕೇಂದ್ರಕ್ಕೆ ನಿನ್ನೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿಂದ ಅನುಮತಿಗಿಂ ತಲೂ ಹೆಚ್ಚು ದಾಸ್ತಾನಿರಿಸಿದ್ದ ೧೦.೧೨ ಕಿಲೋ ಸ್ಪೋಟಕದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಟಾಕಿ ತಯಾರಿ ಕೇಂದ್ರದ ಮೂಲಕ ಆರಿಕ್ಕಾಡಿಯ ಅಬೂಬಕರ್ ಸಿದ್ದಿಕ್ (೪೩) ವಿರುದ್ಧ ಕೇಸು ದಾಖಲಿ ಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅನುಮತಿಗಿಂ ತಲೂ ಹೆಚ್ಚು ಸ್ಪೋಟಕವಸ್ತು ದಾಸ್ತಾನಿರಿಸಲಾ ಗಿದೆಯೆಂಬ ಗುಪ್ತ ಮಾಹಿತಿಯ ಆಧಾರದಲ್ಲಿ ಕುಂಬಳೆ ಎಸ್.ಐ ಟಿ.ಎಂ. ವಿಪಿನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ವಿದ್ಯುತ್ …

ಅಡ್ಯನಡ್ಕ ಬ್ಯಾಂಕ್ ಕಳವು:  ಕಾಸರಗೋಡು ಕೇಂದ್ರೀಕರಿಸಿ ತನಿಖೆ ತೀವ್ರ

ಕಾಸರಗೋಡು: ಪೆರ್ಲ ಸಮೀಪದ  ಅಡ್ಯನಡ್ಕದಲ್ಲಿರುವ  ಕರ್ಣಾಟಕ ಬ್ಯಾಂಕ್  ಶಾಖೆಯಿಂದ ಎರಡು ಕಿಲೋ ಚಿನ್ನ ಹಾಗೂ ೧೭ ಲಕ್ಷ ರೂಪಾಯಿ ಕಳವುಗೈದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ವಿಟ್ಲ ಪೊಲೀಸ್ ಇನ್‌ಸ್ಪೆಕ್ಟರ್‌ರ ನೇತೃತ್ವದಲ್ಲಿ ರೂಪೀಕರಿಸಿದ ಪ್ರತ್ಯೇಕ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ತಿಂಗಳ ೭ರಂದು ರಾತ್ರಿ ಬ್ಯಾಂಕ್‌ನಿಂದ ಕಳವು ನಡೆದಿದೆ. ಬ್ಯಾಂಕ್‌ನ ಕಟ್ಟಡದ ಹಿಂಭಾಗದ ಕಿಟಿಕಿ ಸರಳುಗಳನ್ನು ಮುರಿದು ತೆಗೆದು ಕಳವು ತಂಡ ಒಳಗೆ ಪ್ರವೇಶಿಸಿದೆ. ಅನಂತರ ಗ್ಯಾಸ್ ಕಟ್ಟರ್ ಉಪಯೋಗಿಸಿ ಲಾಕರ್ ತೆರೆದು …

ವೃದ್ಧೆಯರ ಕುತ್ತಿಗೆಯಿಂದ ಕಸಿದ ಆರೂವರೆಪವನ್ ಚಿನ್ನ ಪತ್ತೆ: ಆರೋಪಿಗೆ ರಿಮಾಂಡ್

ಹೊಸದುರ್ಗ: ವೃದ್ಧೆಯರ ಕುತ್ತಿಗೆಯಿಂದ ಕಸಿದೊಯ್ದ ಚಿನ್ನದ ಮಾಲೆಗಳನ್ನು ಪಯ್ಯನ್ನೂರಿನ ಜ್ಯುವೆಲ್ಲರಿಯಲ್ಲಿ  ಮಾರಾಟಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಳೆದದಿನ ಸೆರೆಗೀಡಾದ ಅಡೂರು ಪುದಿಯಪುರಯಿಲ್ ಹೌಸ್‌ನ ಲಿಜೇಶ್‌ನನ್ನು  ಪೊಲೀಸರು  ಕರೆದೊಯ್ದು ನಡೆಸಿದ ಮಾಹಿತಿ ಸಂಗ್ರಹದ ವೇಳೆ ಚಿನ್ನ ಪತ್ತೆಹಚ್ಚಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಳೆಯಂಗಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕುರುವಂಙಾಡ್ ಎಂಬಲ್ಲಿ  ೭೫ರ ಹರೆಯದ ವೃದ್ಧೆಯ ಕುತ್ತಿಗೆಯಿಂದ ಕಸಿದು ಅಪಹರಿಸಿದ ಚಿನ್ನದ ಸರ ಹಾಗೂ ಪರಶ್ಶಿನಿಯ ವೃದ್ಧೆಯ ಕುತ್ತಿಗೆಯಿಂದ ಕಸಿದ ಮೂರೂವರೆ ಪವನ್  ಚಿನ್ನದ ಸರವನ್ನು  ಪತ್ತೆಹಚ್ಚಲಾಗಿದೆ.  ಮಾಲೆಯನ್ನು ಅಪಹರಿಸಿದ ಘಟನೆಗೆ …

ಖತ್ತರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯ ನೌಕಾಪಡೆ ಸಿಬ್ಬಂದಿಗಳ ಬಿಡುಗಡೆ

ನವದೆಹಲಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದ್ದು, ಗಲ್ಲುಶಿಕ್ಷಗೆ ಗುರಿಯಾಗಿದ್ದ ಎಂಟು ಭಾರತೀಯ ನೌಕಾಪಡೆಯ ಸಿಬ್ಬಂದಿಗಳನ್ನು ಖತ್ತಾರ್ ಬಿಡುಗಡೆ ಮಾಡಿದೆ. ಭಾರತೀಯ ನೌಕಾಪಡೆಯ ಕ್ಯಾಪ್ಟನ್ ನವ್‌ತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ಶರ್ಮಾ, ಕ್ಯಾಪ್ಟನ್ ಸೌರಬ್ ವಸಿಷ್ಠ, ಕಮಾಂಡರ್ ಅಮಿತ್ ನಾಗ್‌ಪಾಲ್, ಕಮಾಂಡರ್ ಪೂರ್ಣೇಂದು, ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತ ಮತ್ತು ತಿರುವನಂತಪುರ ನಿವಾಸಿ  ನಾವಿಕ್ ರಾಖೇಶ್ ಗೋಪಕುಮಾರ್ ಎಂಬವರು ಬಿಡುಗಡೆಗೊಂಡ ಸಿಬ್ಬಂದಿಗಳಾಗಿದ್ದಾರೆ. ಖತ್ತಾರ್‌ನಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಂತೆ ಭಾರತೀಯ ನೌಕಾಪಡೆಯ …

ಕೆ.ವಿ.ವಿ.ಇ.ಎಸ್. ನೇತೃತ್ವದಲ್ಲಿ ನಾಳೆ ರಾಜ್ಯಾದ್ಯಂತ ವ್ಯಾಪಾರಿಗಳ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪಾರಿ ದ್ರೋಹ ನೀತಿ ಗೆದುರಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ನಾಳೆ ರಾಜ್ಯಾದ್ಯಂತ ಅಂಗಡಿ ಬಂದ್ ನಡೆಸಿ ವ್ಯಾಪಾರಿಗಳು ಪ್ರತಿಭಟನೆ ನಡೆಸುವರು. ಪ್ಲಾಸ್ಟಿಕ್ ತ್ಯಾಜ್ಯ ಹೆಸರಿನಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ಪೀಡಿಸುವ ಕಾನೂನು ಹಿಂತೆಗೆಯಬೇಕು, ಜಿಎಸ್‌ಟಿ, ನ್ಯೂನತೆಗಳ ಹೆಸರಿನಲ್ಲಿ ವ್ಯಾಪಾರಿಗಳಿಗೆ ದಂಡ ವಿಧಿಸುವ ನಿಯಮ ಹಿಂತೆಗೆಯ ಬೇಕು, ಆನ್‌ಲೈನ್ ಬಂಡವಾಳಶಾಯಿ ಗಳನ್ನು ನಿಯಂತ್ರಿಸಬೇಕು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಕಾರಣ ವ್ಯಾಪಾರ ನಷ್ಟಹೊಂದಿದ ವ್ಯಾಪಾರಿಗಳಿಗೆ ನಷ್ಟ ಪರಿಹಾರ ನೀಡಬೇಕು ಮೊದಲಾದ …

ವಾಹನಕ್ಕೆ ಸೈಡ್ ಕೊಡುವ ಹೆಸರಲ್ಲಿ ವಾಗ್ವಾದ: ಕಾರಿಗೆ ಹಾನಿ

ಕಾಸರಗೋಡು:   ಸೈಡ್ ಕೊಡುವ ಹೆಸರಲ್ಲಿ ಪಿಕಪ್ ವಾಹನ ಮತ್ತು ಕಾರು ಚಾಲಕ ಮಧ್ಯೆ  ವಾಗ್ವಾದ ನಡೆದು ಅದರ ಹೆಸರಲ್ಲಿ  ಕಾರಿನ ಗಾಜು ಒಡೆದು ಹಾನಿಗೊಳಿ ಸಿದ ಬಗ್ಗೆ ಕಾಸರಗೋಡು ಪೊಲೀ ಸರಿಗೆ ದೂರು ನೀಡಲಾಗಿದೆ. ವಿದ್ಯಾ ನಗರ ಬೆದಿರ ನಿವಾಸಿ ಅಹಮ್ಮದ್ ಸಿಯಾದ್ (೨೧) ಎಂಬಾತ ಈ ಬಗ್ಗೆ ದೂರು ನೀಡಿದ್ದು, ಅದರಂತೆ ೫ ಮಂದಿಯ ವಿರುದ್ಧ ಕಾಸರ ಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಡ್ಕತ್ತಬೈಲ್ ನಲ್ಲಿ ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. 

ಉಪ್ಪಳದಲ್ಲಿ ಫ್ಲೈಓವರ್ ನಿರ್ಮಾಣ: ಬಸ್ ನಿಲುಗಡೆ ಹೆದ್ದಾರಿಯಲ್ಲಿ; ಪ್ರಯಾಣಿಕರಿಗೆ ಸಂಕಷ್ಟ

ಉಪ್ಪಳ: ಉಪ್ಪಳ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳು ರಸ್ತೆಯಲ್ಲಿ ನಿಲ್ಲಿಸುತ್ತಿದ್ದು, ಇದು ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡುತ್ತಿರುವುದಾಗಿ ದೂರಿದ್ದಾರೆ. ಪೇಟೆಯಲ್ಲಿ ಪಂಚಾಯತ್ ಬಸ್ ನಿಲ್ದಾಣದ ಬಳಿ ಉಪ್ಪಳ ಪೇಟೆವರೆಗೆ ಫ್ಲೈಓವರ್ ಕೆಲಸ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಮಂಗಳೂರು- ಕಾಸರಗೋಡು ಭಾಗಕ್ಕೆ ತೆರಳುವ ಕೇರಳ- ಕರ್ನಾಟಕ ಸಾರಿಗೆ ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸದೆ ಪ್ರಯಾಣಿಕರು ಹೆದ್ದಾರಿ ಬದಿಯಲ್ಲೇ ಇಳಿಸಿ, ಹತ್ತಿಸಿ ಸಾಗುತ್ತಿವೆ. ಇದರಿಂದ ಬಿಸಿಲಿಗೆ ರಸ್ತೆ ಮಧ್ಯೆ ಬಸ್‌ಗೆ ಕಾಯ ಬೇಕಾದ ಸ್ಥಿತಿ ಪ್ರಯಣಿಕರಲ್ಲಿದೆ. ವೃದ್ದರು, ಮಕ್ಕಳು, ಮಹಿಳೆಯರು …