ಆಟೋ ರಿಕ್ಷಾ ಮಗುಚಿ ಯುವಕ ಮೃತ್ಯು: ಮೂವರಿಗೆ ಗಾಯ
ಕಾಸರಗೋಡು: ಕ್ಷೇತ್ರ ಉತ್ಸವ ವೀಕ್ಷಿಸಲು ತೆರಳುತ್ತಿದ್ದವರು ಸಂಚರಿಸಿದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಇತರ ಮೂರು ಮಂದಿ ಗಾಯಗೊಂ ಡಿದ್ದಾರೆ. ಚೆರ್ವ ತ್ತೂರು ಬಳಿಯ ಅಮಿಞ್ಞಿಕೋಡ್ ನಿವಾಸಿ ಕೆ. ಅನುರಾಗ್ (೨೬) ಎಂಬವರು ಮೃತಪಟ್ಟ ದುರ್ದೈವಿ. ನಿನ್ನೆ ಅಪರಾಹ್ನ ೩ ಗಂಟೆಗೆ ಕೊಡಕ್ಕಾಡ್ ವೆಳ್ಳಚ್ಚಾಲ್‌ನಲ್ಲಿ ಅಪಘಾತ ವುಂಟಾಗಿದೆ. ಸ್ನೇಹಿತರೊಂದಿಗೆ ಮುಚ್ಚಿಲೋಟ್ ಉತ್ಸವಕ್ಕೆ ತೆರಳುತ್ತಿದ್ದಾಗ ಅಪಘಾತವುಂ ಟಾಗಿದೆ. ಸಂಚರಿಸುತ್ತಿದ್ದ ಆಟೋ ರಿಕ್ಷಾ ಮಗುಚಿಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಅನುರಾಗ್‌ರನ್ನು ಆಸ್ಪತ್ರೆಗೆ …