ರಾಜ್ಯದಲ್ಲಿ ತೀವ್ರ ಮಳೆ ಮುಂದುವರಿಕೆ

ತಿರುವನಂತಪುರ: ರಾಜ್ಯದ ಕೆಲವೆಡೆ ತೀವ್ರ ಮಳೆ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಕೇರಳದಲ್ಲೂ, ಮಲೆನಾಡು ವಲಯ ದಲ್ಲೂ ತೀವ್ರ ಮಳೆಗೆ ಸಾಧ್ಯತೆ ಇದೆ. ಕಾಸರಗೋಡು ಜಿಲ್ಲೆಯ ರ‍್ಯಾಡರ್ ದೃಶ್ಯದ ಪ್ರಕಾರ ಮುಂದಿನ ಮೂರು ಗಂಟೆಗೆ ಆರೆಂಜ್ ಅಲರ್ಟ್ ಘೋಷಿಸ ಲಾಗಿದೆ. ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು ಕಾಸರಗೋಡಿ ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.

ಶಾಲೆ ಮುಂದೆ ಕಾರು-ಬೈಕ್ ಢಿಕ್ಕಿ ಹೊಡೆದು ಯುವಕ ಸಾವು: ಸ್ನೇಹಿತನಿಗೆ ಗಂಭೀರ

ಕಾಸರಗೋಡು: ಕಾರು ಮತ್ತು ಬೈಕ್ ಪರಸ್ಪರ ಢಿಕ್ಕಿ ಹೊಡೆದು ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ವಲಿಯಪರಂಬ ಪಂಚಾಯತ್ ಕನ್ನುವೀಡ್ ಕಡಪ್ಪುರ ಸ್ವಾಮಿ ಮಠ ಬಳಿಯ ಇ. ರಾಜೀವನ್-ಕೆ.ವಿ. ಪ್ರಜಿನ ದಂಪತಿ ಪುತ್ರ ಕೆ.ವಿ. ವಾಸುದೇವ್ (20) ಸಾವನ್ನಪ್ಪಿದ ಯುವಕ. ಈತ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದ ಕನ್ನುವೀಡ್ ಕಡಪ್ಪುರದ  ಆದಿತ್ಯನ್ (20) ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಚಂದೇರ ಜಿಯುಪಿ ಶಾಲೆಯ ಮುಂದಿನ ರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಕಾಲಿಕಡವಿನಿಂದ ತೃಕರಿಪುರದತ್ತ …

ರಾಷ್ಟ್ರೀಯ  ಸೋಫ್ಟ್‌ಬೇಸ್‌ಬಾಲ್ ತಂಡಕ್ಕೆ ಆಯ್ಕೆ:  ಶ್ರಾವ್ಯಳಿಗೆ ಕಾಂಗ್ರೆಸ್‌ನಿಂದ ಧನ ಸಹಾಯ

ಪೈವಳಿಕೆ: ನೇಪಾಳದ ಕಾಠ್ಮಂಡು ವಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸೋಫ್ಟ್ ಬೇಸ್‌ಬಾಲ್ ಚಾಂಪ್ಯನ್ ಶಿಪ್‌ನಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಆಯ್ಕೆಯಾದ ಪೈವಳಿಕೆ ಪಂಚಾಯತ್ ನಿವಾಸಿ ಕನಿಯಾಲ ಯದ ಶ್ರಾವ್ಯಗಳಿಗೆ ಮಂಡಲ ಕಾಂಗ್ರೆಸ್ ಪಕ್ಷದ ವತಿಯಿಂದ ಧನ ಸಹಾಯ ನೀಡಲಾಯಿತು. ಇಬ್ರಾಹಿಂ ಕಯ್ಯಾರು ಅವರ ನೇತೃತ್ವದಲ್ಲಿ ಇನ್ಕಾಸ್ ಖತ್ತರ್ ಸಮಿತಿ ವತಿಯಿಂದ ಪಕ್ಷದ ಹಿತೈಷಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಮಂಡಲ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಮನೆಗೆ ತೆರಳಿ ಶ್ರಾವ್ಯಳಿಗೆ ಹಸ್ತಾಂತರಿಸಿದರು. ಈ ವೇಳೆ ಸುದೆಂಬಳ ವಾರ್ಡ್ ಸದಸ್ಯ ಸುಂದರ ಸುದೆಂಬಳ, …

ಬ್ರಹ್ಮಕುಮಾರಿ ಈಶ್ವರೀಯ ವಿ.ವಿ.ಯಲ್ಲಿ ಯೋಗ ದಿನಾಚರಣೆ

ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಕಾಸರ ಗೋಡು ಇದರ ವತಿಯಿಂದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿನ್ನೆ ಜರಗಿತು. ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಮೋಹನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದರು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಕಾಸರಗೋಡು ಕೇಂದ್ರದ ಸಂಚಾಲಕಿ ರಾಜಯೋ ಗಿನಿ ಬಿ. ವಿಜಯಲಕ್ಷ್ಮಿ ಯೋಗದ ಬಗ್ಗೆ ಮಾಹಿತಿ ನೀಡಿದರು. ಡಾ. ಆಯಿಷಾ ಶಾನ್, ಭಾಗ್ಯಲಕ್ಷ್ಮಿ, ವಾಣಿ ಮಾತನಾಡಿದರು. ರಾಜಯೋಗಿನಿ ಬಿ.ಕೆ. ಮಂಗಳ ಅತಿಥಿಗಳನ್ನು ಗೌರವಿಸಿದರು. ಮುಕ್ತಿ, ಮೋಕ್ಷಾ ಇವರಿಂದ ಯೋಗ ಪ್ರದರ್ಶನ …

ರೈತ ಸಂಘದ ಮಂಜೇಶ್ವರ ವಿಲ್ಲೇಜ್ ಸಮ್ಮೇಳನ

ಮಂಜೇಶ್ವರ: ರೈತ ಸಂಘದ ಮಂಜೇಶ್ವರ ವಿಲ್ಲೇಜ್ ಸಮ್ಮೇಳನ ಇತ್ತೀಚೆಗೆ ಜರಗಿದ್ದು, ಜಿಲ್ಲಾ ಸಮಿತಿ ಸದಸ್ಯ ಭುಜಂಗ ಶೆಟ್ಟಿ ಉದ್ಘಾಟಿಸಿದರು. ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಭಾಸ್ಕರ ಮಜಲು ಧ್ವಜಾರೋಹಣಗೈದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ, ಏರಿಯಾ ಸಮಿತಿ ಸದಸ್ಯರಾದ ರಾಮಚಂದ್ರ ತೊಟ್ಟೆತ್ತೋಡಿ, ಪ್ರಭಾಕರ ಶೆಟ್ಟಿ ಭಾಗವಹಿಸಿದರು. ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹೇಮಚಂದ್ರ ಉಳ್ಳಾಲ್, ಉಪಾಧ್ಯಕ್ಷರಾಗಿ ಯತೀಶ್ ಕಾಜೂರು, ಕಾರ್ಯದರ್ಶಿಯಾಗಿ ವಿಜಯ ಕನಿಲ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಕುಮಾರ್, ಕೋಶಾಧಿಕಾರಿಯಾಗಿ ದಿನಕರ ಮಯ್ಯ, ಹಾಗೂ …

ಔಷಧಾಲಯದಿಂದ ಹಣ ಕಳವು ಆರೋಪಿ ಗಂಟೆಗಳೊಳಗೆ ಸೆರೆ

ಉಪ್ಪಳ: ಹೊಸಂಗಡಿಯಲ್ಲಿರುವ ಆಯುರ್ವೇದ ಔಷಧಾಲಯದಿಂದ ಹಣ ಕಳವು ನಡೆಸಿದ ಕುಖ್ಯಾತ ಆರೋಪಿಯನ್ನು ಪೊಲೀಸರು ಗಂಟೆಗಳೊಳಗೆ ಸೆರೆಹಿಡಿದಿದ್ದಾರೆ. ಕರ್ನಾಟಕದ ಪುತ್ತೂರು ನಿವಾಸಿಯೂ ಹೊಸಂಗಡಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುವ ಅಶ್ರಫ್ (45) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.ಬಂಗ್ರಮಂಜೇಶ್ವರ ಭಟ್ಟರಹಿತ್ತಿಲು ನಿವಾಸಿ ಡಾ| ಬಿ.ಎಂ. ಜಗದೀಶರ ಹೊಸಂಗಡಿಯಲ್ಲಿರುವ ಆಯುರ್ವೇದ ಔಷಧಾಲಯದಿಂದ 10 ಸಾವಿರ ರೂಪಾಯಿ ಕಳವು ನಡೆಸಿದ ಪ್ರಕರಣ ದಲ್ಲಿ ಅಶ್ರಫ್‌ನನ್ನು ಬಂಧಿಸಲಾಗಿದೆ. ನಿನ್ನೆ ಬೆಳಗ್ಗೆ ಡಾ| ಜಗದೀಶ್ ಔಷಧಾಲಯಕ್ಕೆ ತೆರಳಿದಾಗ ಅದರ ಶಟರ್ ಮುರಿದ ಸ್ಥಿತಿಯಲ್ಲಿತ್ತು. ಒಳಗೆ ನೋಡಿದಾಗ …

ಸಹೋದರ ಪುತ್ರನ ಆಕಸ್ಮಿಕ ಸಾವಿನ ಬೆನ್ನಲ್ಲೇ ನಿವೃತ್ತ ಬ್ಯಾಂಕ್ ನೌಕರ ಹೃದಯಾಘಾತದಿಂದ ನಿಧನ: ಪಾತನಡ್ಕ ದುಃಖತಪ್ತ

ಕಾಸರಗೋಡು: ಸಹೋದರ ಪುತ್ರ ಮೃತಪಟ್ಟ ಮರುದಿನ ನಿವೃತ್ತ ಬ್ಯಾಂಕ್ ನೌಕರ ಮೃತಪಟ್ಟರು. ಎರಡು ದಿನಗಳಲ್ಲಾಗಿ ಇಬ್ಬರು ನಿಧನ ಹೊಂದಿದ ಘಟನೆ ಸ್ಥಳೀಯರಲ್ಲಿ ಕಣ್ಣೀರಕೋಡಿಗೆ ಕಾರಣವಾಯಿತು. ಮುಳಿಯಾರು ಕೋಟೂರು ಸಮೀಪದ ಪಾತನಡ್ಕ ನಿವಾಸಿ ಬಾಲನ್ ನಾಯರ್‌ರ ಪುತ್ರ, ನಿರ್ಮಾಣ ಕಾರ್ಮಿಕನಾದ ಸುರೇಶ್ (42) ಗುರುವಾರ ಮೃತಪಟ್ಟಿದ್ದರು. ಮನೆಯಲ್ಲಿ ಮೆದುಳಿನ ಆಘಾತ ಉಂಟಾಗಿದ್ದು, ಕೂಡಲೇ ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ಆದರೆ ಅಲ್ಲಿಂದ ಮಂಗಳೂರಿಗೆ ಕೊಂಡೊಯ್ಯಲು ತಿಳಿಸಿದ್ದು, ಅಲ್ಲಿಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸುರೇಶ್‌ರ ಅಂತ್ಯ ಸಂಸ್ಕಾರ ಕಾರ್ಯಕ್ರಮಗಳು …

ಜ್ವರ: 2ನೇ ತರಗತಿ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಜ್ವರ ತಗಲಿ 7 ವರ್ಷದ ಬಾಲಕಿ ಮೃತಪಟ್ಟಳು. ಬೆದ್ರೆ ಪಿಟಿಎಂ ಎಯುಪಿ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಶಬಾನ (7) ಮೃತಪಟ್ಟ ಬಾಲಕಿ. ಜ್ವರ ಹಾಗೂ ತಲೆನೋವು ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಚಿಕಿತ್ಸೆಯಲ್ಲಿದ್ದಳು. ಶುಕ್ರವಾರ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಂಗಳೂರಿನಲ್ಲಿ ದಿನಸಿ ವ್ಯಾಪಾರಿ ಹಾಗೂ ಪಾಣಲಂ ನಿವಾಸಿಯಾದ ಉಮ್ಮರ್ ಹಾಗೂ ಸಿ.ಎ. ನಸೀಬ ದಂಪತಿ ಪುತ್ರಿಯಾಗಿದ್ದಾಳೆ. ಮೃತ ಬಾಲಕಿ ತಂದೆ, ತಾಯಿ, ಸಹೋದರರಾದ ಸೌಬಾನ್, ಮುಹಮ್ಮದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

3 ಲಕ್ಷ ಜನರೊಂದಿಗೆ ಯೋಗ ಮಾಡಿ ಹೊಸ ದಾಖಲೆ ಸೃಷ್ಟಿಸಿದ ಪ್ರಧಾನಿ: ಉದ್ವಿಗ್ನತೆ, ಅಶಾಂತಿಯ ಈ ಸಮಯದಲ್ಲಿ ಯೋಗ ಶಾಂತಿ ನೀಡುತ್ತದೆ-ಪ್ರಧಾನಿ ಮೋದಿ

ವಿಶಾಖಪಟ್ಟಣ: ಇಂದು ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಯಾಗಿದೆ. ಇದರ ಅಂಗವಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮುದ್ರ ತೀರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮೂರು ಲಕ್ಷ ಮಂದಿಯೊಂದಿಗೆ ಯೋಗ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿ ದ್ದಾರೆ. ಇಂದು ವಿಶ್ವದಾದ್ಯಂತವಾಗಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ವಿಶಾಖಪಟ್ಟಣ ಸಮುದ್ರದ ತೀರದಲ್ಲಿ  ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಂದು ಬೆಳಿಗ್ಗೆ 6.30ಕ್ಕೆ ಆರಂಭಗೊಂಡ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಮೋದಿಯವರ ಜೊತೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. …

ಕೌನ್ಸಿಲಿಂಗ್‌ಗೆ ತಲುಪಿದ ಬಾಲಕಿ ಮೇಲೆ ದೌರ್ಜನ್ಯ: ಬಿಗಿದಪ್ಪಿ ಮುತ್ತು ಕೊಟ್ಟ ವೈದ್ಯನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಶಿಕ್ಷಣದಲ್ಲಿ ಹಿಂದುಳಿದ ವಿದ್ಯಾರ್ಥಿನಿಯನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ ಆಕೆ ಮೇಲೆ ದೌರ್ಜನ್ಯಕ್ಕೆತ್ನಿಸಿದ ವೈದ್ಯನ ವಿರುದ್ಧ ಚಂದೇರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಕಾಞಂಗಾಡ್ ಸಮೀಪದ ಓರ್ವ ವೈದ್ಯನ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2023 ಸೆಪ್ಟಂಬರ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕಲಿಯಲು ಮುಂದಿದ್ದ ವಿದ್ಯಾರ್ಥಿನಿ ಬಳಿಕ ಉದಾಸೀನ ನಿಲುವು ಹೊಂದಿದ್ದಳೆನ್ನಲಾಗಿದೆ. ಅಧ್ಯಾಪಿಕೆಯರು ವಿಚಾರಿಸಿದರೂ ಬಾಲಕಿಯಿಂದ ಯಾವುದೇ ಪ್ರತಿಕ್ರಿಯೆ ಉಂಟಾಗಿಲ್ಲ. ಇದರಿಂದ ಬಾಲಕಿಯನ್ನು ವೈದ್ಯನ ಮನೆಯಲ್ಲಿ ನಡೆಯುವ ಕೌನ್ಸಿಲಿಂಗ್ ಕೇಂದ್ರಕ್ಕೆ …