ಮಂಜೇಶ್ವರ ತಾಲೂಕು ಕಚೇರಿಯ ಕ್ಲರ್ಕ್ ಕುಸಿದು ಬಿದ್ದು ಮೃತ್ಯು

ಉಪ್ಪಳ: ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಯ ಕ್ಲರ್ಕ್ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೆರ್ಮುದೆ ಬಳಿಯ ಕಟ್ಟದ ಕಾಡು ನಿವಾಸಿ ಶಂಕರ ಗೌಡ ಕೆ. (೫೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ತಾಲೂಕು ಕಚೇರಿಯಿಂದ ಮೊನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಬಸ್‌ಗಾಗಿ ನಡೆದು ಹೋಗುತ್ತಿದ್ದಾಗ ಕಚೇರಿ ಸಮೀಪದ ರಸ್ತೆ ಬದಿಯಲ್ಲಿ ಕುಸಿದು ಬಿದ್ದಿದ್ದಾರೆ. ಮಾಹಿತಿ ತಿಳಿದು ತಲುಪಿದ ಸಹೋದ್ಯೋಗಿಗಳು ಕೂಡಲೇ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಪ ಹೊತ್ತಿನಲ್ಲಿ ಇವರು ಮೃತಪಟ್ಟರು.  ಮೇ …

ಇಸ್ಲಾಮಿಕ್ ಸ್ಟೇಟ್ ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು ಹೂಡಿದ ಪ್ರಕರಣದ ಆರೋಪಿಗೆ ಹತ್ತು ವರ್ಷ ಕಠಿಣ ಸಜೆ

ಕೊಚ್ಚಿ: ಜಾಗತಿಕ ಭಯೋತ್ಪಾದಕ ಸಂಘಟನೆ ಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು ಹೂಡಿದ ಪ್ರಕರಣದ  ಆರೋಪಿ ಪಾಲ್ಘಾಟ್ ಕೊಲ್ಲಂಕೋಡು ನಿವಾಸಿ ರಿಯಾಸ್ ಅಬೂಬಕರ್ (೩೫)ನಿಗೆ ಕೊಚ್ಚಿಯ ಎನ್‌ಐಎ ನ್ಯಾಯಾಲಯ ಹತ್ತು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಈ ತನಕ ವಿರುದ್ಧ ಯುಎ ಪಿಎ ಪ್ರಕಾರ ಹಾಗೂ ಇತರ ಹಲವು ಸೆಕ್ಷನ್‌ಗಳ (ಎನ್‌ಐಎ) ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿತ್ತು. ವಿವಿಧ ಸೆಕ್ಷನ್‌ಗಳಲ್ಲಾಗಿ ನ್ಯಾಯಾಲಯ ಆರೋಪಿಗೆ ಒಟ್ಟು ೨೫ ವರ್ಷ ಕಠಿಣ …

ಮೊಹಮ್ಮದ್ ರಿಯಾಸ್ ಮೌಲವಿ ಕೊಲೆ ಪ್ರಕರಣ: ವಿಚಾರಣೆ ಫೆ. ೧೬ಕ್ಕೆ ಮುಂದೂಡಿಕೆ; ತೀರ್ಪು

ದಿನಾಂಕ ಅಂದೇ ಘೋಷಿಸುವ ಸಾಧ್ಯತೆ ಕಾಸರಗೋಡು: ಜಿಲ್ಲೆಯನ್ನು ಭಾರೀ ಆತಂಕಕ್ಕೊಳಪಡಿಸಿದ್ದ, ಮೂಲತಃ ಕೊಡಗು ನಿವಾಸಿ ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೊಹಮ್ಮದ್ ರಿಯಾಸ್ (೨೮)ರನ್ನು ಕೊಲೆಗೈದ ಪ್ರಕರಣದ ವಿಚಾರಣೆಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಫೆಬ್ರವರಿ ೧೬ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳಿದ್ದು, ಅವರಿಂದ ತನಿಖಾ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿರುವ ಪುರಾವೆಗಳ ಕುರಿತಾದ ಶಂಕೆಗಳನ್ನು ದೂರೀಕರಿಸುವ ಸಲುವಾಗಿ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಮುಂದೂಡಿದೆ. ಇಂತಹ ಪುರಾವೆಗಳ ಮೇಲಿನ ಶಂಕೆಗಳನ್ನು …

ಕಾಂಗ್ರೆಸ್‌ನ ‘ಸಮರಾಗ್ನಿ’ ಆಂದೋಲನಕ್ಕೆ ಚಾಲನೆ: ಮುಖ್ಯಮಂತ್ರಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆಸಿದ್ದು

ರಾಜಕೀಯ ನಾಟಕ- ಕೆ.ಸಿ. ವೇಣುಗೋಪಾಲ್ ಕಾಸರಗೋಡು: ಕಾಂಗ್ರೆಸ್‌ನ ಕೇರಳ ಘಟಕದ ಅಧ್ಯಕ್ಷ ಕೆ. ಸುಧಾಕರನ್ ಮತ್ತು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಸಮರಾಗ್ನಿ ಆಂದೋಲನಕ್ಕೆ ನಿನ್ನೆ ಸಂಜೆ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು. ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದರು. ಹಿರಿಯ ನೇತಾರ ರಮೇಶ್ ಚೆನ್ನಿತ್ತಲ, ಯುಡಿಎಫ್ ಸಂಚಾಲಕ ಎಂ.ಎಂ. ಹಸ್ಸನ್, ಸಂಸದರಾದ …

ಎರಿಯಕೋಟ ಶ್ರೀಭಗವತೀ ಕ್ಷೇತ್ರಕ್ಕೆ ಹೊರೆಕಾಣಿಕೆ ಸಮರ್ಪಣೆ

ಮೊಗ್ರಾಲ್ ಪುತ್ತೂರು: ಕಾವುಗೋಳಿ ಚೌಕಿ ಎರಿಯಕೋಟ ಶ್ರೀ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವಕ್ಕಾಗಿ ಕೇರಳ ರಾಜ್ಯ ವ್ಯಾಪಾರ ವ್ಯವಸಾಯಿ ಸಮಿತಿ ಮೊಗ್ರಾಲ್ ಪುತ್ತೂರು ಘಟಕ ಹೊರೆಕಾಣಿಕೆ ಸಮರ್ಪಿಸಿದೆ. ರಿಯಾಸ್ ಚೌಕಿ, ಸುರೇಶ್ ಟಿ.ಕೆ, ಹಕೀಂ ಕಂಬಾರ್, ಅಬ್ದುಲ್ ರಹ್ಮಾನ್ ಆಸಾದ್, ಮೋಹನ್ ನಾಯ್ಕ್, ನೌಶಾದ್, ರಘುನಾಥ್, ಅಬ್ದುಲ್ಲ ಕಡವತ್, ವಾಸು, ಜಾನಕಿ, ಉಷ, ಗಣೇಶ್ ಮಧೂರು, ಕೆ.ಕೆ. ಅಬ್ದು ಕಾವುಗೋಳಿ, ಅಂಬಿಕ, ರವಿ, ಪ್ರಕಾಶ್ ಉಪಸ್ಥಿತರಿದ್ದರು.

ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಕಟ್ಟಡ ಉದ್ಘಾಟನೆ

ಉಪ್ಪಳ: ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ  ನಯಾ ಬಜಾರ್‌ನ ಅಂ ಬಾರು ಚೆರುಗೋಳಿ ರಸ್ತೆ ಸಮೀಪ ನಿರ್ಮಿಸಿದ ನೂತನ ಕಟ್ಟಡವನ್ನು  ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ. ಸತೀಶನ್ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸಾಬು ಅಬ್ರಹಾಂ, ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷೆ ಶಮೀನಾ ಟೀಚರ್, ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷೆ  ರುಬಿನಾ ನೌಫಲ್, ಜಿ.ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಕೋ-ಆಪರೇಟಿವ್ ಯೂನಿಯನ್ …

ರಾಜ್ಯದಲ್ಲಿ ನಿರುದ್ಯೋಗ ವೇತನ ಪಡೆಯುವವರು ಈಗ ಕೇವಲ ೨೦೮೦ ಮಂದಿ ಮಾತ್ರ

ಕಾಸರಗೋಡು: ಒಂದು ಕಾಲದಲ್ಲಿ ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗ ವೇತನ ಪಡೆಯುತ್ತಿದ್ದ ಜಾಗದಲ್ಲಿ ಈಗ ಅದಕ್ಕೆ ಅರ್ಹರಾಗಿರುವುದು ಕೇವಲ ೨೦೮೦ ಮಂದಿ ಮಾತ್ರ. ಅಂದರೆ ರಾಜ್ಯದಲ್ಲಿ ನಿರುದ್ಯೋಗ ಅಷ್ಟರ ಮಟ್ಟಿಗೆ ಇಳಿದಿದೆ ಎಂಬುದು ಇದರ ಅರ್ಥವಲ್ಲ. ನಿರುದ್ಯೋಗ ವೇತನವಾಗಿ ಕಳೆದ ೨೫ ವರ್ಷಗಳಿಂದ ತಿಂಗಳಿಗೆ ತಲಾ ೧೨೦ ರೂ. ಮಾತ್ರವೇ ವಿತರಿಸಲಾಗುತ್ತಿದೆ. ಇಷ್ಟು ವರ್ಷಗಳಾದರೂ ಅದನ್ನು ಇನ್ನೂ ಹೆಚ್ಚಿಸದೆ ಅದೇ ರೀತಿಯ ವಿತರಣೆ ಈಗಲೂ ಮುಂದುವರಿಯುತ್ತಿದೆ. ನಿರುದ್ಯೋಗ ವೇತನ ಹೆಚ್ಚಿಸಬೇಕೆಂಬ ವರ್ಷಗಳ ಬೇಡಿಕೆಯನ್ನು ಸರಕಾರ …

ಫೆ.೧೩ರಂದು ವ್ಯಾಪಾರಿಗಳ ಚಳವಳಿಗೆ ಐ.ಎಸ್.ಎಂ.ಎ ಬೆಂಬಲ

ಕಾಸರಗೋಡು:  ಸಂದಿಗ್ಧತೆ ಯಲ್ಲಿ ಸಿಲುಕಿದ ಕಿರು ವ್ಯಾಪಾರಿಗಳನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿ ರಾಜ್ಯವ್ಯಾಪಕವಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಈ ತಿಂಗಳ ೧೩ರಂದು ಅಂಗಡಿ ಮುಚ್ಚಿ ನಡೆಸುವ ಮುಷ್ಕರಕ್ಕೆ ಇಂಡಿಪೆಂಡೆನ್ಸ್ ಸ್ಕ್ರಾಪ್, ಮರ್ಚೆಂಟ್ಸ್ ಅಸೋಸಿಯೇಶನ್ (ಐಎಸ್‌ಎಂಎ) ರಾಜ್ಯ ಸೆಕ್ರೆಟರಿಯೇಟ್ ಸಭೆ ಬೆಂಬಲ ಸೂಚಿಸಿದೆ. ಸಂದಿಗ್ಧತೆಗೊಳಗಾದ ಕಿರು ವ್ಯಾಪಾರ ವಲಯವನ್ನು ಸಂರಕ್ಷಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದೂ ಸಭೆ ಒತ್ತಾಯಿಸಿದೆ. ೧೩ರಂದು ಸ್ಕ್ರಾಫ್ ವಲಯದ ಎಲ್ಲಾ ವ್ಯಾಪಾರಿ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಿ ತಿರುವನಂತಪುರದಲ್ಲಿ ನಡೆಯುವ ಪ್ರತಿಭಟನಾ ಸಂಗಮಕ್ಕೆ ಬೆಂಬಲ ಸೂಚಿಸಲು …

ಸರಕಾರದ ನಾಲ್ಕನೇ ಭೂ-ಹಕ್ಕು ವಿತರಣಾ ಮೇಳ ಫೆ.೨೨ರಂದು

ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಬಳಿಕದ ನಾಲ್ಕನೇ ಭೂ ಹಕ್ಕು ವಿತರಣಾ ಮೇಳದ ರಾಜ್ಯಮಟ್ಟದ ಉದ್ಘಾಟನೆ ಫೆ.೨೨ರಂದು ತೃಶೂರಿನಲ್ಲಿ ನಡೆಯಲಿದೆ. ಮುಖ್ಯಮಂತ್ರಿ  ಪಿಣರಾಯಿ ವಿಜಯನ್ ಇದರ ಉದ್ಘಾಟನೆ ನೆರವೇರಿಸುವರು. ಇದರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಾಗಿ ಒಟ್ಟು ೩೦,೦೦೦ ಮಂದಿಗೆ ಭೂ-ಹಕ್ಕು ಪತ್ರ ವಿತರಿಸಲಾಗುವುದು. ಆ ಮೂಲಕ ಕಳೆದ ಎರಡೂವರೆ ವರ್ಷದಲ್ಲಿ ಹೀಗೆ ಭೂ ಹಕ್ಕು ಪತ್ರಗಳು ಲಭಿಸುವವರ ಸಂಖ್ಯೆ ಇನ್ನು ೧.೫ ಲಕ್ಷಕ್ಕೇರಲಿದೆ. ತೃಶೂರಿನಲ್ಲಿ  ನಡೆಯುವ ಈ ರಾಜ್ಯ ಮಟ್ಟದ …

ಕಾಸರಗೋಡಿನಲ್ಲಿ ಕೇರಳ ವಿಜ್ಞಾನ ಕಾಂಗ್ರೆಸ್ ಮುಖ್ಯಮಂತ್ರಿ ಉದ್ಘಾಟನೆ

ಕಾಸರಗೋಡು: ಜಾನುವಾರು ಮತ್ತಿತರ ಜೀವಿಗಳಿಂದ ಹರಡುತ್ತಿರುವ ಸಾಂಕ್ರಾಮಿಕ ರೋಗಗಳು ಜನರ ಆರೋಗ್ಯದ ಮೇಲೆ ಮಾತ್ರವಲ್ಲ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಯೋ ಜನೆಯನ್ನು ೨೦೨೧ರಲ್ಲೇ ರೂಪು ನೀಡಲಾಗಿದೆ. ಅದರಂತೆ ಪ್ರಾಥಮಿಕ ಹಂತದಲ್ಲಿ ಇದನ್ನು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಾಗಿ ಜ್ಯಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ೩೬ನೇ ಕೇರಳ ವಿಜ್ಞಾನ ಕಾಂಗ್ರೆಸ್‌ನ್ನು ಉದ್ಘಾಟಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು.  ಐಸಿಸಿಎಸ್ ತಯಾರಿಸಿದ …