ಮುಸ್ಲಿಂಲೀಗ್ ಜಿಲ್ಲಾ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

ಕಾಸರಗೋಡು: ಮುಸ್ಲಿಂಲೀಗ್ ಜಿಲ್ಲಾ ಕಚೇರಿ ಕಟ್ಟಡದ ಶಿಲಾನ್ಯಾಸವನ್ನು ಮುಸ್ಲಿಂಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಾದಿಖಲಿ ಶಿಹಾಬ್ ತಂಙಳ್ ನಿರ್ವಹಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್‌ಮಾನ್ ಸ್ವಾಗತಿಸಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಪಿ.ಎಂ.ಎ. ಸಲಾಂ, ಸಿ.ಟಿ. ಅಹಮ್ಮದಾಲಿ ಸಹಿತ ಹಲವು ಮುಖಂಡರು ಭಾಗವಹಿಸಿದರು.

ವೇ|ಮೂ| ಗಣೇಶ ನಾವಡರಿಗೆ ಗೌರವಾರ್ಪಣೆ ೧೧ರಂದು

ಮೀಯಪದವು : ಚಿಗುರುಪಾದೆ ಶ್ರೀ ಮಹಾಲಿಂ ಗೇಶ್ವರ ದೇವ ಸ್ಥಾನ ಜಾತ್ರಾ ಮಹೋತ್ಸವ ಫೆ. 11ರಂದು ಜರಗಲಿದ್ದು, ಆ ಸಂದರ್ಭ ವೈದಿಕ ವಿದ್ವಾಂಸ ವೇದಮೂರ್ತಿ ಗಣೇಶ ನಾವಡ ಮೀಯಪದವು ಅವರಿಗೆ ಗೌರವಾರ್ಪಣೆ ಜರಗಲಿದೆ. ಗಣೇಶ ನಾವಡರು ವೈದಿಕ, ಯಕ್ಷಗಾನ, ತಾಳಮದ್ದಳೆ , ಭಜನೆ, ಕ್ರೀಡೆ ಹೀಗೆ ಹಲವು ರಂಗಗಳಲ್ಲಿ ತನನ್ನು ತಾನು ಸಕ್ರಿಯರಾಗಿ ತೊಡಗಿಸಿಕೊಂಡವರು. ಇದನ್ನು ಗುರುತಿಸಿ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಕ್ಷೇತ್ರ ತಂತ್ರಿವರ್ಯ ವರ್ಕಾಡಿ ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿ, ವೇದಮೂರ್ತಿ ಬೋಳಂತಕೋಡಿ ರಾಮಭಟ್ ಹಾಗೂ …

ಕಾಸರಗೋಡಿನಲ್ಲಿ ಸಂಗೀತ ಆರಾಧನೋತ್ಸವ ನಾಳೆಯಿಂದ

ಕಾಸರಗೋಡು: ಶ್ರೀ ಪುರಂದರದಾಸ ಸಂಗೀತ ಕಲಾಮಂದಿರ ಕಾಸರಗೋಡು ಎಸ್.ವಿ.ಟಿ.ರಸ್ತೆ, ಇದರ 20 ನೇ ಸಂಗೀತ ಆರಾಧನೋತ್ಸವ ನಾಳೆ ಹಾಗೂ 11 ರಂದು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರಗಲಿದೆ. ನಾಳೆ ಬೆಳಿಗ್ಗೆ 8.30 ಕ್ಕೆ ಉದ್ಘಾಟನೆ, ಬಳಿಕ ಸರಸ್ವತಿ ಕೃಷ್ಣನ್ ಮತ್ತು ಬಳಗದಿಂದ ಸಂಗೀತ ಕಛೆsÃರಿ, ಕೆರೆಮನೆ ಮನಮೋಹನ ಮತ್ತು ಬಳಗ ಇವರಿಂದ ಕೊಳಲು ವಾದನ, ಯೋಗೀಶ್ ಶರ್ಮ ಬಳ್ಳಪದವು ಮತ್ತು ಬಳಗ, ಉಷಾ ಈಶ್ವರ ಭಟ್ ಮತ್ತು ಬಳಗ, ಗಣೇಶ್ ಕಣ್ಣನ್ ಮತ್ತು …

ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ೧೪ರಂದು ಪ್ರಧಾನಿಯಿಂದ ಉದ್ಘಾಟನೆ

ಅಬುದಾಬಿ: ಅಬುದಾಬಿಯಲ್ಲಿ ನಿರ್ಮಿಸಲಾದ  ಹಿಂದೂ ದೇವಾಲಯ ವನ್ನು ಫೆ.೧೪ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿ ಸಲಿದ್ದಾರೆ. ಈ ದೇವಾಲಯವನ್ನು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ನಿರ್ಮಿಸಿದ್ದು, ಇದು ಯುಎಇಯ ಮೊದಲ ಸಾಂಪ್ರದಾ ಯಿಕ ಕಲ್ಲಿನ ಹಿಂದೂ ದೇವಾಲಯ ವಾಗಿದೆ. ಅಬು ಮುರೇಖಾ ಜಿಲ್ಲೆಯಲ್ಲಿ ೨೭ ಎಕ್ರೆ ಜಾಗದಲ್ಲಿ ಈ ದೇವಾಲಯ ತಲೆಯೆತ್ತಿದೆ. ಈ ದೇವಾಲಯದ ಉದ್ಘಾಟನೆಯನ್ನು ಸೌಹಾರ್ದತೆಯ ಹಬ್ಬದಂತೆ ಆಚರಿಸ ಲಾಗುತ್ತದೆ. ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ …

ದಸ್ತಾವೇಜು ಬರಹಗಾರರ ಜಿಲ್ಲಾ ಸಮ್ಮೇಳನ, ಮೆರವಣಿಗೆ

ಬದಿಯಡ್ಕ: ಆಲ್ ಕೇರಳ ಡೋಕ್ಯುಮೆಂಟ್ ರೈರ‍್ಸ್ ಹಾಗೂ ಸ್ಕೆçöÊಬ್ಸ್ ಅಸೋಸಿಯೇಶನ್‌ನ ದಸ್ತಾ ವೇಜು ಬರಹಗಾರರ ಅಸೋಸಿಯೇ ಶನ್‌ನ ಕಾಸರಗೋಡು ಜಿಲ್ಲಾ ಸಮ್ಮೇ ಳನ ಬದಿಯಡ್ಕ ಶ್ರೀ ಗಣೇಶ ಮಂದಿ ರದಲ್ಲಿ ಜರಗಿತು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಲಕ್ಷö್ಮಣ ಪ್ರಭು ಬದಿಯಡ್ಕ ಧ್ವಜಾರೋಹಣಗೈದರು. ನಂತರ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ನಂತರ ನಡೆದ ಪ್ರತಿನಿಧಿ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷ ಕೆ.ಜಿ.ಇಂಧುಕಲಾಧರನ್ ದೀಪಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಪಿ.ಪಿ.ಕುಂಞÂಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷೆ ಎ.ವಿ.ಸೀಮ ಅಗಲಿದ ಹಿರಿಯರ …

ಬೃಹತ್ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ ವಶ: ಕಾರು ಸಹಿತ ಇಬ್ಬರ ಸೆರೆ

ಕಾಸರಗೋಡು: ನಗರದ ಅಡ್ಕತ್ತಬೈಲು ರಾಷ್ಟ್ರೀಯ ಹೆದ್ದಾರಿ ಬಳಿ ಕಾಸರಗೋಡು ಪೊಲೀಸ್ ಠಾಣೆ ಎಸ್‌ಐ ಅಖಿಲ್ ಪಿ.ಪಿ. ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾದ ಕೇರಳದಲ್ಲಿ ನಿಷೇಧ ಹೇರಲಾಗಿರುವ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲಿದ್ದ ಪಳ್ಳಿಕ್ಕೆರೆ  ಕೊಹಿನೂರು ಶೋಮಿಲ್ ಬಳಿಯ ಈಗ ವಾಸಿಸುತ್ತಿರುವ ಮೂಲತಃ ಉತ್ತರ ಪ್ರದೇಶ ಮವ್ವ ಕಸ್ಬಾಕರ್  ನಿವಾಸಿ ಸುನಿಲ್ ಚೌಹಾಣ್ (೨೬) ಮತ್ತು  ಪಳ್ಳಿಕೆರೆ ಕರುವಕೋಡು ಝೋಯಾಲ್ ಮಂಜಿಲ್‌ನ ಮೊಹಮ್ಮದ್ …

ದೈವವನ್ನು ಕಂಡು ಓಡಿದ ಬಾಲಕ ಬಿದ್ದು ಗಾಯ: ದೈವಕಲಾವಿದನಿಗೆ ತಂಡದಿಂದ ಹಲ್ಲೆ

ಕಣ್ಣೂರು: ಉತ್ಸವ ವೇಳೆ ಆವೇಷಗೊಂಡ ದೈವವನ್ನು ಕಂಡು ಭಯಗೊಂಡು ಓಡಿದ ಬಾಲಕ ಬಿದ್ದು  ಗಾಯಗೊಂಡಿದ್ದು, ಇದರಿಂದ ರೋಷಗೊಂಡ ತಂಡ ವೊಂದು ದೈವವೇಷ ಧರಿಸಿದ ಕಲಾವಿದನಿಗೆ ಹಲ್ಲೆಗೈದ ಘಟನೆ ಕಣ್ಣೂರು ಬಳಿ ತಿಲ್ಲಂಗೇರಿ ಎಂಬಲ್ಲಿ ನಡೆದಿದೆ. ಪೆರಿಂಗಾನಂ ಉದಯಂಕುನ್ನು ಮಡಪ್ಪುರ ಉತ್ಸವದಂ ಗವಾಗಿ ನಿನ್ನೆ ಸಂಜೆ  ಕೈದ ಚಾಮುಂಡಿ ದೈವಕೋಲ ನಡೆದಿತ್ತು. ಮಡಪ್ಪುರಕ್ಕೆ ಆಗಮಿಸುತ್ತಿ ದ್ದಂತೆ ದೈವ ಆವೇಷಗೊಂಡಿದ್ದು, ಇದರಿಂದ ಹೆದರಿ ಬಾಲಕ ಓಡುತ್ತಿ ದ್ದಾಗ ಬಿದ್ದು ಗಾಯಗೊಂಡಿದ್ದ್ದಾ ನೆನ್ನಲಾಗಿದೆ. ಇದರಿಂದ ರೋಷ ಗೊಂಡ ಒಂದು ತಂಡ ದೈವ …

ಮನೆಗೆ ನುಗ್ಗಿ ಮಹಿಳೆ, ಪುತ್ರನಿಗೆ ತಂಡದಿಂದ ಹಲ್ಲೆ: ಐದು ಮಂದಿ ವಿರುದ್ಧ ಕೇಸು

ಕುಂಬಳೆ: ಮನೆಗೆ ನುಗ್ಗಿದ ತಂಡವೊಂದು ಮಹಿಳೆ ಹಾಗೂ ಪುತ್ರನಿಗೆ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಬಳಿಯ ಮಾವಿನ ಕಟ್ಟೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮೊಹಮ್ಮದ್ ಅಶ್ರಫ್‌ರ ಪತ್ನಿ ಸಫಿಯ ಪಿ.ಎ ಹಾಗೂ ಪುತ್ರ ಅಸೀಸ್‌ಗೆ ತಂಡ ಹಲ್ಲೆಗೈದಿರುವು ದಾಗಿ  ದೂರಲಾಗಿದೆ. ಸಫಿಯಾರ ಇನ್ನೋರ್ವ ಪುತ್ರ ಅನ್ಸೀಪ್‌ರ ಕೈಯಲ್ಲಿ ಅಬುದಾಬಿಯಿಂದ ಚಿನ್ನ ಕಳುಹಿಸಿ ಕೆಟ್ಟಿರುವುದಾಗಿಯೂ ಅದು ವಾರೀಸುದಾರರಿಗೆ ಲಭಿಸಿಲ್ಲ ವೆಂದು ಆರೋಪಿಸಿ ಮೊನ್ನೆ ಸಂಜೆ ಐದು …

ಕಾರಿನಲ್ಲಿ ಸಾಗಿಸುತ್ತಿದ್ದ ೧೧೨ ಲೀಟರ್  ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಬಂದ್ಯೋಡು: ಬಂದ್ಯೋಡ್‌ನಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೧೧೨.೩೨ ಲೀಟರ್ ಕರ್ನಾ ಟಕ ಮದ್ಯ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಮಾಲು ಸಾಗಿಸುತ್ತಿದ್ದ ಕಾರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ತೆಕ್ಕಿಲ್ ಗ್ರಾಮದ ಕುಚ್ಚುಂಙಾಟು ವೀಟಿಲ್‌ನ ಮೈಲಾಟಿಯ ಅಶೋಕ್ ಕುಮಾರ್ (೪೦)ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಸಾಜನ್ ಅಪ್ಯಾಲ್‌ರ ನೇತೃತ್ವದಲ್ಲಿ ಈ ಕಾರ್ಯಾಚರಣೆ …

ಕಣ್ಣೂರು ವಿ.ವಿ. ಕಲೋತ್ಸವ ಬ್ರೆನ್ನನ್ ಕಾಲೇಜು ಮುನ್ನಡೆಯಲ್ಲಿ

ಮುನ್ನಾಡ್: ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ ನಿನ್ನೆ ಆರಂಭಗೊಂಡ ಕಣ್ಣೂರು ವಿಶ್ವವಿದ್ಯಾಲಯದ ಯೂನಿಯನ್ ಕಲೋತ್ಸವ ಮೊದಲನೆ ದಿನದ ಸ್ಪರ್ಧೆಗಳಲ್ಲಿ ತಲಶ್ಶೇರಿ ಬ್ರೆನ್ನನ್ ಕಾಲೇಜು ಮುನ್ನಡೆ ಸಾಧಿಸಿದೆ. ಕಾಸರಗೋಡು ಸರಕಾರಿ ಕಾಲೇಜು  ಹಾಗೂ ಪಯ್ಯನ್ನೂರು ಕಾಲೇಜು ನಂತರದ ಸ್ಥಾನದಲ್ಲಿವೆ. ನಿನ್ನೆ ಆರಂಭಗೊಂಡ ವೇದಿಕೇತರ ಸ್ಪರ್ಧೆಗಳನ್ನು ನಿರೂಪಕರಾದ ಇ.ಪಿ. ರಾಜಗೋಪಾಲನ್ ಉದ್ಘಾಟಿಸಿದರು.  ಸಾಹಿತಿ ಪಿ.ವಿ ಶಾಜಿ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಯೂನಿಯನ್  ಅದಕ್ಕೆ ಟಿ.ಪಿ. ಅಖಿಲ ಅಧ್ಯಕ್ಷತೆ ವಹಿಸಿದರು. ಈ ಕಲೋತ್ಸವವನ್ನು ರಾಜ್ಯ ವಿಧಾನಸಭಾ ಅಧ್ಯಕ್ಷ ಎ.ಎನ್. ಶಂಶೀರ್ ಇಂದು …